ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಪೈಲಟ್-ಗೆಹ್ಲೋಟ್ ಕಾಳಗ

ರಾಜಸ್ಥಾನ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ಸಾಕಷ್ಟು ತಿಕ್ಕಾಟ ನಡೆದಿದ್ದು ನಿಮಗೆ ಗೊತ್ತೇ ಇದೆ. ಅವರಿಬ್ಬರ ನಡುವೆ ಘರ್ಷಣೆಯ ಕಿಡಿ ಹೊತ್ತಿಕೊಂಡು ಜುಲೈಗೆ ಐದು ವರ್ಷಗಳು ತುಂಬುತ್ತವೆ. ಇಷ್ಟಾಗಿಯೂ ಅಶೋಕ್ ಗೆಹ್ಲೋಟ್ ಅವರು ಈ ಚರ್ಚಾವಿಷಯವನ್ನು ಕೈಬಿಡಲು ಸಿದ್ಧರಿಲ್ಲವಂತೆ.

ಪೈಲಟ್-ಗೆಹ್ಲೋಟ್ ಕಾಳಗ

ನಾರದ ಸಂಚಾರ

ಕಲಹ ಪ್ರಿಯ

ರಾಜಸ್ಥಾನ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ಸಾಕಷ್ಟು ತಿಕ್ಕಾಟ ನಡೆದಿದ್ದು ನಿಮಗೆ ಗೊತ್ತೇ ಇದೆ. ಅವರಿಬ್ಬರ ನಡುವೆ ಘರ್ಷಣೆಯ ಕಿಡಿ ಹೊತ್ತಿಕೊಂಡು ಜುಲೈಗೆ ಐದು ವರ್ಷಗಳು ತುಂಬುತ್ತವೆ. ಇಷ್ಟಾಗಿಯೂ ಅಶೋಕ್ ಗೆಹ್ಲೋಟ್ ಅವರು ಈ ಚರ್ಚಾವಿಷಯವನ್ನು ಕೈಬಿಡಲು ಸಿದ್ಧರಿಲ್ಲವಂತೆ. ಬಿಜೆಪಿಯ ಚಿತಾವಣೆಯನ್ನು ಒಳಗೊಂಡಿದ್ದ, ಅಪಾರ ಪ್ರಮಾಣದ ಹಣದ ಬಲವನ್ನು ಹೊಂದಿದ್ದ ಈ ಪಿತೂರಿಯಿಂದ ತಮ್ಮ ಕಾಂಗ್ರೆಸ್ ಸರಕಾರವನ್ನು ತಾವು ರಕ್ಷಿಸಿಕೊಂಡಿದ್ದು ಹೇಗೆ ಎಂಬುದನ್ನು ಅಶೋಕ್ ಗೆಹ್ಲೋಟ್ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದೂ ಉಂಟಂತೆ.

ತಮ್ಮ ಮಾತಿನ ವರಸೆಯನ್ನು ಅಷ್ಟಕ್ಕೇ ಸೀಮಿತಗೊಳಿಸದ ಗೆಹ್ಲೋಟ್ ಮಹಾಶಯರು, ರಾಜ ಸ್ಥಾನದ ಈಗಿನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರ ಮೇಲೂ ವಾಗ್ದಾಳಿ ನಡೆಸಿದರಂತೆ! “ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರನ್ನು ಬಿಜೆಪಿಯು ಇಲ್ಲಿ ಮುಖ್ಯಮಂತ್ರಿ ಯನ್ನಾಗಿಸಿದೆ, ಆದರೆ ಅವರು ಜನರೊಂದಿಗೆ ಮತ್ತು ಕಾರ್ಮಿಕರೊಂದಿಗೆ ಒಡನಾಟವನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆಯಿದೆ" ಎಂದು ಅಶೋಕ್ ಗೆಹ್ಲೋಟ್ ಅವರು ಲಘುವಾಗಿ ಟಾಂಗ್ ಕೊಟ್ಟಿದ್ದು ಇದಕ್ಕೆ ಸಾಕ್ಷಿ.

ಇದನ್ನೂ ಓದಿ : Yagati Raghu Naadig Column: ಕಳ್ಳಬೆಕ್ಕಿನ ಕಥನದಲ್ಲಿದೆಯೇ ಕಾವಿಯ ಕರಾಮತ್ತು ?!

ಹಾಗಂತ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ಅಶೋಕ್ ಗೆಹ್ಲೋಟರ ಇಷ್ಟೂ ಮಾತನ್ನು ಕೇಳಿಸಿಕೊಂಡು ಬಾಯಲ್ಲೇನೂ ಕಡುಬು ಕಚ್ಚಿಕೊಂಡು ಸುಮ್ಮನೆ ಕೂರಲಿಲ್ಲವಂತೆ; ಸರಿಯಾಗೇ ತಿರುಗೇಟು ನೀಡಿ ಹುಬ್ಬು ಕುಣಿಸಿದರಂತೆ. “ರೀ ಸ್ವಾಮೀ, ನನ್ನ 18 ತಿಂಗಳ ಆಡಳಿತ ವೈಖರಿಯು ನಿಮ್ಮ ಕಾಲಘಟ್ಟದ ಆಡಳಿತವನ್ನು ನೀವಾಳಿಸಿ ಒಗೆದಿದೆ ಕಣ್ರೀ... ಇನ್ನೂ ಮೂರೇ ತಿಂಗಳಲ್ಲಿ ಬರೋಬ್ಬರಿ 5000 ಹಳ್ಳಿಗಳು ಬಡತನದ ಕುಣಿಕೆಯಿಂದ ಮುಕ್ತವಾಗಲಿವೆ.

ನಿಮ್ಮ ಕಾಂಗ್ರೆಸ್ ಪಕ್ಷವು ‘ಗರೀಬಿ ಹಟಾವೊ’ ಅಂತ ಬರೀ ಬಾಯಿಮಾತಿಗೆ ಹೇಳಿಕೊಂಡು ಬಂದಿತ್ತು ಅಷ್ಟೇ. ಆದರೆ ನಮ್ ಮೋದಿ ಸಾಹೇಬರು ಬಡತನವನ್ನೇ ಅಳಿಸಿಹಾಕ್ತಾರೆ ಗೊತ್ತಾ?" ಎಂದು ಹೇಳಿ ಮೀಸೆ ತಿರುವುದರಂತೆ. ತಮ್ಮ ‘ಸ್ವಪಕ್ಷೀಯ ರಾಜಕೀಯ ಎದುರಾಳಿ’ ಅಶೋಕ್ ಗೆಹ್ಲೋಟರಿಗೆ ಹೀಗೊಂದು ಮಾತಿನ ತಪರಾಕಿ ಬಿದ್ದಿದ್ದು ನೋಡಿ ಪ್ರಾಯಶಃ ಸಚಿನ್ ಪೈಲಟ್ ಅವರು ರೇಷ್ಮೆ ಶಾಲಿನ ಮರೆಯಲ್ಲೇ ಮುಸಿಮುಸಿ ನಗುತ್ತಿರಬೇಕು...!

ನಾರಾಯಣ ನಾರಾಯಣ! ಸಾ ಮಾಜಿಕ ಜಾಲತಾಣ ‘ಎಕ್ಸ್’ನ (ಟ್ವಿಟರ್‌ನ) ಸಿಇಒ ಹುದ್ದೆಗೆ ಲಿಂಡಾ ಯಾಕಾರಿನೋ ರಾಜೀನಾಮೆ ಸಲ್ಲಿಸಿದ್ದಾರಂತೆ. ತಮಾಷೆಯೆಂದರೆ, ತರುವಾಯದಲ್ಲೂ ಅವರನ್ನು ‘ಎಕ್ಸ್ ಸಿಇಒ’ ಎಂದು ಕರೆಯಲು ಅಡ್ಡಿಯಿಲ್ಲ. ‘ಅದು ಹೇಗೆ?’ ಎಂದು ನೀವು ಪ್ರಶ್ನಿಸಬಹುದು. ಅವರು ಸದರಿ ಕಂಪನಿಯಲ್ಲಿ ಆ ಹುದ್ದೆಯಲ್ಲಿ ಇರುವಷ್ಟು ದಿವಸವೂ ‘ X-CEO ’ ಎನಿಸಿಕೊಂಡಿ ದ್ದರು. ಈಗ ರಾಜೀನಾಮೆ ನೀಡಿದ ನಂತರ "EX- CEO' (ಮಾಜಿ ಸಿಇಒ) ಅನ್ನಿಸಿಕೊಳ್ತಾರೆ, ಇಂಗ್ಲಿಷ್‌ ನಲ್ಲಿ ಕಾಗುಣಿತದ ವ್ಯತ್ಯಾಸವಾಗಿರಬಹುದು, ಆದರೆ ಕನ್ನಡ ಲಿಪಿಯಲ್ಲಿ ಅದರ ಉಚ್ಚಾರಣೆ ಒಂದೇ ಅಲ್ಲವೇ! ಹೆಂಗಿದೆ ನಾರದರ ‘ಪನ್ನು’ ಮತ್ತು ‘ಫನ್ನು’?!!