ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Union Budget 2026-07: ಫಂಡ್‌ ಅಲೋಕೇಶನ್‌ ಬಜೆಟ್‌ ಮಂಡನೆ

ಬಯೋ ಫಾರ್ಮ ವಲಯದಲ್ಲಿ ಮಾತ್ರ ಒಂದಷ್ಟು ಸಂಚಲನ ಉಂಟಾಗಬಹುದು, ಉಳಿದಂತೆ ಇದೊಂದು ಫಂಡ್ ಅಲೋಕೇಷನ್ ಬಜೆಟ್ ಆಗಿದೆ. ಅಂದರೆ ಪ್ರತಿವರ್ಷವೂ ಹಣವನ್ನು ವಲಯಗಳಿಗೆ ಇಷ್ಟಿಷ್ಟು ಎಂದು ಹಂಚುವುದು ವಾಡಿಕೆ. ಅದರ ಜತೆಗೆ ಹೊಸ ಅಂಶಗಳ ಸೇರ್ಪಡೆ ಇದ್ದೇ ಇರುತ್ತದೆ. ಈ ಬಾರಿ ಹಣವನ್ನು ವಲಯವಾರು ಹಂಚಿಕೆ ಮಾಡುವುದಷ್ಟೇ ಬಜೆಟ್ ಉದ್ದೇಶವಾಗಿತ್ತು

ಫಂಡ್‌ ಅಲೋಕೇಶನ್‌ ಬಜೆಟ್‌ ಮಂಡನೆ

-

ರಂಗಸ್ವಾಮಿ ಮೂಕನಹಳ್ಳಿ, ಆರ್ಥಿಕ ತಜ್ಞರು

ಈ ಬಾರಿಯ ಬಜೆಟ್‌ನ್ನು ಬಹಳಷ್ಟು ಜನ ನೀರಸ ಎಂದು ಬಣ್ಣಿಸಬಹುದು. ಏಕೆಂದರೆ ಕೇಂದ್ರ ಸರಕಾರ ಈ ವರ್ಷದ ಬಜೆಟ್‌ನಲ್ಲಿ ಯಾವುದೇ ಹೊಸ ಅಥವಾ ವಿಶೇಷವಾದ ಅಂಶಗಳನ್ನು ಮಂಡಿ ಸಿಲ್ಲ. ಈ ಬಜೆಟ್ ಬಹಳ ನಿರೀಕ್ಷಿತವಾಗಿತ್ತು. ಆರ್ಥಿಕತೆಯನ್ನು ಸದಾ ಗಮನಿಸುವ ಜನರಿಗೆ ಈ ಬಾರಿಯ ಬಜೆಟ್‌ನಲ್ಲಿ ವಿಶೇಷವೇನೂ ಇರುವುದಿಲ್ಲ ಎನ್ನುವುದು ತಿಳಿದಿತ್ತು.

ಏಕೆಂದರೆ ಮಧ್ಯಮ ವರ್ಗಕ್ಕೆ ಬೇಕಾದ ಆದಾಯ ತೆರಿಗೆಯ ಅಂಶವನ್ನು ಕಳೆದ ವರ್ಷದ ಬಜೆಟ್‌ ನಲ್ಲಿ ನೀಡಿ ಆಗಿತ್ತು. ಡಾಲರ್ ಆತಂರಿಕ ಮೌಲ್ಯ ಸರಿಸುಮಾರು ಹತ್ತು ಪ್ರತಿಶತ ಕುಸಿತವನ್ನು ಕಂಡಿದೆ. ಇದರರ್ಥ ಭಾರತೀಯ ರುಪಾಯಿ ಬಲಿಷ್ಠವಾಗಬೇಕಿತ್ತು. ಆದರೆ ರುಪಾಯಿ ಕೂಡ ಒಂದೇ ಸಮನೆ ಕುಸಿತವನ್ನು ಕಾಣುತ್ತಿದೆ. ಇದರ ಕಾರಣ ಆಮದು ಮತ್ತು ರಫ್ತು ವ್ಯಾಪಾರದಲ್ಲಿ ಬಹಳಷ್ಟು ಏರಿಳಿತಗಳಿವೆ. ಈ ಅಂಶವನ್ನು ಗಮನಿಸದವರಿಗೆ ಈ ಬಾರಿಯ ಬಜೆಟ್‌ನಲ್ಲಿ ಕಾರ್ಪೊರೇಟ್ ಹೌಸು ಗಳಿಗೆ ಹೇಳಿಕೊಳ್ಳುವ ಬದಲಾವಣೆ ತರುವ ಯಾವ ಅಂಶವೂ ಇರುವುದಿಲ್ಲ. ಯಥಾಸ್ಥಿತಿ ಕಾಯ್ದು ಕೊಳ್ಳುವುದು ಮಾತ್ರ ಉತ್ತಮ ಮಂತ್ರವಾಗಿರುತ್ತದೆ ಎನ್ನುವುದು ತಿಳಿದ ವಿಷಯವಾಗಿತ್ತು.

ಇದನ್ನೂ ಓದಿ: Rangaswamy Mookanahalli Column: ರಿಜೆಕ್ಟ್‌ ದಿ ರಿಜೆಕ್ಷನ್: ನಿರಾಕರಣೆಯನ್ನು ನಿರಾಕರಿಸಿ !

ಬಯೋ ಫಾರ್ಮ ವಲಯದಲ್ಲಿ ಮಾತ್ರ ಒಂದಷ್ಟು ಸಂಚಲನ ಉಂಟಾಗಬಹುದು, ಉಳಿದಂತೆ ಇದೊಂದು ಫಂಡ್ ಅಲೋಕೇಷನ್ ಬಜೆಟ್ ಆಗಿದೆ. ಅಂದರೆ ಪ್ರತಿವರ್ಷವೂ ಹಣವನ್ನು ವಲಯ ಗಳಿಗೆ ಇಷ್ಟಿಷ್ಟು ಎಂದು ಹಂಚುವುದು ವಾಡಿಕೆ. ಅದರ ಜತೆಗೆ ಹೊಸ ಅಂಶಗಳ ಸೇರ್ಪಡೆ ಇದ್ದೇ ಇರುತ್ತದೆ. ಈ ಬಾರಿ ಹಣವನ್ನು ವಲಯವಾರು ಹಂಚಿಕೆ ಮಾಡುವುದಷ್ಟೇ ಬಜೆಟ್ ಉದ್ದೇಶ ವಾಗಿತ್ತು. ರೈಲ್ವೆ ವಲಯದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇದ್ದರೂ ಅವುಗಳ ಬಗ್ಗೆ ಕೂಡ ಯಾವುದೇ ಹೇಳಿಕೊಳ್ಳುವ ಮಹತ್ತರ ಯೋಜಗಳ ಘೋಷಣೆಯಾಗಿಲ್ಲ.

ಷೇರು ಮಾರುಕಟ್ಟೆ ತತ್ತರಗೊಳ್ಳಲು ಕಾರಣಗಳೇ ಬೇಕಿಲ್ಲ. ಕಳೆದ ಎರಡು ಮೂರು ದಿನದಿಂದ ಲೋಹಗಳ ಮೌಲ್ಯದಲ್ಲಿ ಭಾರಿ ಕುಸಿತ ಉಂಟಾದ ಕಾರಣ ಕುಸಿತ ಕಂಡಿದ್ದ ಮಾರುಕಟ್ಟೆ, ಇಂದು ಬಜೆಟ್ ಅವಧಿಯಲ್ಲಿ ಮತ್ತಷ್ಟು ಕುಸಿಯಿತು. ಯಾವ ವಲಯಕ್ಕೂ ಚೇತರಿಕೆ ನೀಡುವ ಸುದ್ದಿ ಇಲ್ಲದ್ದು ಒಂದು ಕಾರಣವಾದರೆ, ಜ್ವರ ಬಂದವರಿಗೆ ಬರೆ ಎಳೆದಂತೆ ಫ್ಯೂಚರ್ ಮತ್ತು ಅಪ್ಷನ್ ಟ್ರೇಡ್ ಮೇಲಿನ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (ಎಸ್‌ಟಿಟಿ) ಹೆಚ್ಚಳ ಮಾಡಿದ್ದು ಮಾರುಕಟ್ಟೆ ಕುಸಿಯಲು ಇನ್ನೊಂದು ಪ್ರಮುಖ ಕಾರಣವಾಯ್ತು.‌

ಇದನ್ನೂ ಓದಿ: Union Budget 2026: ಗ್ರಾಮೀಣ ಆರ್ಥಿಕತೆಗೆ ಬಲ, 2026ರ ಬಜೆಟ್‌ನಲ್ಲಿ ರೈತರು ಮತ್ತು ಮಹಿಳಾ ನೇತೃತ್ವದ ಉದ್ಯಮಗಳಿಗೆ ಆದ್ಯತೆ!

ಫ್ಯೂಚರ್ ಮೇಲಿನ ಎಸ್‌ಟಿಟಿ .0.02 ಇದ್ದದ್ದು 0.05 ಪ್ರತಿಶತ ಏರಿಕೆ ಮಾಡಿದ್ದಾರೆ. ಸಂಖ್ಯೆಯ ದೃಷ್ಟಿ ಯಲ್ಲಿ ಇದು ಬಹಳ ಕಡಿಮೆ ಎನ್ನಿಸಬಹುದು. ಪರ್ಸಂಟೇಜ್ ಲೆಕ್ಕಾಚಾರದಲ್ಲಿ ಇದು ಬಹಳ ದೊಡ್ಡದು. ಎರಡೂವರೆ ಪಟ್ಟು ಪ್ರತಿಶತ ಏರಿಕೆಯಾಗಿದೆ. ಅಪ್ಷನ್ ಪ್ರೀಮಿಯಂ ಎಸ್‌ಟಿಟಿ 010 ಇಂದ 0.15 ಪ್ರತಿಶತವಾಗಿದೆ. ಅಪ್ಷನ್ ಎಕ್ಸರ್ಸೈಸ್ 0.125 ಇದ್ದದ್ದು 0.15 ಪ್ರತಿಶತಕ್ಕೆ ಏರಿಕೆ ಕಂಡಿದೆ.

ಮಾರುಕಟ್ಟೆಯಲ್ಲಿ ನಡೆಯುವ ವಹಿವಾಟಿನ ಲೆಕ್ಕಾಚಾರದಲ್ಲಿ ನೋಡಿದಾಗ ಇದು ಬಹುದೊಡ್ಡ ಹೊಡೆತ ಎನ್ನಬಹುದು. ಮಾರುಕಟ್ಟೆ ಬಹಳ ಸೆನ್ಸಿಟಿವ್, ತೆರಿಗೆ ಹೆಚ್ಚಳ, ಜಾಗತಿಕ ವಿತ್ತ ಜಗತ್ತಿನಲ್ಲಿನ ಅಸ್ಥಿರತೆ ಮಾರುಕಟ್ಟೆ ಕುಸಿತಕ್ಕೆ ಕಾರಣವಾದವು.

ಒಟ್ಟಾರೆ ಜನ ಸಾಮಾನ್ಯನ ಭಾಷೆಯಲ್ಲಿ ನೀರಸ, ಬೋರಿಂಗ್ ಬಜೆಟ್ ಎನ್ನಲು ಅಡ್ಡಿಯಿಲ್ಲ. ಹೂಡಿಕೆದಾರರಿಗೂ, ವ್ಯಾಪಾರಸ್ಥರಿಗೂ ಹೇಳಿಕೊಳ್ಳುವ ಯಾವ ಸುದ್ದಿಯೂ ಇಲ್ಲದೆ, ಇದೊಂದು ಹಣವನ್ನು ವಲಯಗಳಿಗೆ ಅಂದರೆ ಆರೋಗ್ಯ, ಕೃಷಿ, ಶಿಕ್ಷಣ, ಮೂಲಭೂತ ಸೌಲಭ್ಯ ಇತ್ಯಾದಿಗಳಿಗೆ ಹಂಚುವ ಬಜೆಟ್ ಎನ್ನಬಹುದು. ಕ್ಯಾಪಿಟಲ್ ಎಕ್ಸ್‌ಪೆಂಡಿಚರ್ ಹೆಚ್ಚಳ ಮಾಡಿರುವುದು ಮತ್ತು ಫಿಸ್ಕಲ್ ಡೆಫಿಸಿಟ್ 4.3ರಲ್ಲಿ ಇಟ್ಟಿರುವುದು ಈ ಬಜೆಟ್‌ನಿಂದ ಹೊರಬಂದಿರುವ ಧನಾತ್ಮಕ ಅಂಶ.