Ramanand Sharma Column: ಶಿಸ್ತಿನ ಪಕ್ಷದಲ್ಲಿ ಹೀಗೊಂದು ಹಗ್ಗಜಗ್ಗಾಟ

ಶ್ರೀರಾಮುಲು ಅವರು ರೆಡ್ಡಿಯವರ ಮನೆಯತ್ತ ಮುಖ ಮಾಡಿರುವ ತಮ್ಮ ಮನೆಯ ಗೇಟ್ ಅನ್ನು ಬಂದ್ ಮಾಡಿದ್ದಾರಂತೆ, ‘ರೆಡ್ಡಿಯವರೊಂದಿಗೆ ಇನ್ನು ಒಂದಾಗಲು ಸಾಧ್ಯವೇ ಇಲ್ಲ’ ಎಂದು ಖಡಾ ಖಂಡಿತವಾಗಿ ಹೇಳಿದ್ದಾರಂತೆ. ಏನಾದರೂ ಚಮತ್ಕಾರ ನಡೆಯ ದಿದ್ದರೆ ಅವರಿಬ್ಬರೂ ಕಾಯಮ್ಮಾಗಿ ‘ನಾನೊಂದು ತೀರ, ನೀನೊಂದು ತೀರ’ ಎಂದು ಗುನುಗುವು ದರಲ್ಲಿ ಅಚ್ಚರಿಯಿಲ್ಲ

Ramanand Sharma Column 280125
Profile Ashok Nayak Jan 28, 2025 10:11 AM

ಕೇಸರಿ-ಕಲಹ

ರಮಾನಂದ ಶರ್ಮಾ

ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಶತ್ರುಗಳೂ ಅಲ್ಲ ಎಂಬುದು ವಿಭಿನ್ನ ಕಾಲಘಟ್ಟ ಗಳಲ್ಲಿ ಕಾಣಬರುತ್ತಿರುವ ಸತ್ಯ. ಅದು ಈಗ ಇನ್ನೊಮ್ಮೆ ಅನಾವರಣಗೊಂಡಿದೆ. ತೀರಾ ಇತ್ತೀಚಿನ ವರೆಗೆ ‘ದೇಹವೆರಡು ಆತ್ಮವೊಂದೇ’ ಎಂಬಂತೆ ಇದ್ದ, ಪರಸ್ಪರರ ಸಂಕಷ್ಟದಲ್ಲಿ ಸಹಭಾಗಿಯಾಗು ತ್ತಿದ್ದ, ರಾಜಕೀಯದಲ್ಲಿ ಒಟ್ಟೊಟ್ಟಿಗೆ ಮೇಲೇರಿದ್ದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಅವರು ಈಗ ಪರಸ್ಪರ ಕತ್ತಿ ಮಸೆಯುತ್ತಿರುವುದು, ಹಲ್ಲು ಕಡಿಯುತ್ತಿರುವುದು ಇದಕ್ಕೆ ಸಾಕ್ಷಿ.

ಕೆಲ ಮೂಲಗಳು ಹೇಳುವಂತೆ, ಶ್ರೀರಾಮುಲು ಅವರು ರೆಡ್ಡಿಯವರ ಮನೆಯತ್ತ ಮುಖ ಮಾಡಿರುವ ತಮ್ಮ ಮನೆಯ ಗೇಟ್ ಅನ್ನು ಬಂದ್ ಮಾಡಿದ್ದಾರಂತೆ, ‘ರೆಡ್ಡಿಯವರೊಂದಿಗೆ ಇನ್ನು ಒಂದಾಗಲು ಸಾಧ್ಯವೇ ಇಲ್ಲ’ ಎಂದು ಖಡಾಖಂಡಿತವಾಗಿ ಹೇಳಿದ್ದಾರಂತೆ. ಏನಾದರೂ ಚಮತ್ಕಾರ ನಡೆಯ ದಿದ್ದರೆ ಅವರಿಬ್ಬರೂ ಕಾಯಮ್ಮಾಗಿ ‘ನಾನೊಂದು ತೀರ, ನೀನೊಂದು ತೀರ’ ಎಂದು ಗುನುಗುವು ದರಲ್ಲಿ ಅಚ್ಚರಿಯಿಲ್ಲ.

ಯತ್ನಾಳ್ ಮತ್ತು ವಿಜಯೇಂದ್ರರ ನಡುವಿನ ಸಂಘರ್ಷ ಮುಂದುವರಿದಿದ್ದು ಸದ್ಯದಲ್ಲಿ ಅದು ತಾರ್ಕಿಕ ಅಂತ್ಯವನ್ನು ಕಾಣದಿರುವ ಮತ್ತು ಬಿಜೆಪಿಯ ಬುಡವನ್ನೇ ಅಲುಗಾಡಿಸುವ ಲಕ್ಷಣಗಳಿವೆ. ಹೀಗಿರುವಾಗ, ‘ಬರಗಾಲದಲ್ಲಿ ಅಧಿಕಮಾಸ’ ಎನ್ನುವಂತೆ ರಾಮುಲು-ರೆಡ್ಡಿ ಜೋಡಿ ತಿಕ್ಕಾಟಕ್ಕೆ ಇಳಿದಿರುವುದು, ಬಿಜೆಪಿಯ ಸ್ಥಿತಿಯನ್ನು ಇನ್ನಷ್ಟು ಜರ್ಜರಿತವಾಗಿಸಿದೆ ಎನ್ನಲಡ್ಡಿಯಿಲ್ಲ.

ಇದು ಇಬ್ಬರು ನಾಯಕರ ನಡುವಿನ ‘ರಾಜಕೀಯ ಕೋಳಿಜಗಳ’ ಎಂದು ಮೇಲ್ನೋಟಕ್ಕೆ ಅನಿಸಿ ದರೂ ಅಥವಾ ‘ಇದೊಂದು ಸಣ್ಣ ಸಮಸ್ಯೆ’ ಎಂದು ಪಕ್ಷ ಸಮರ್ಥಿಸಿಕೊಂಡರೂ, ಈ ಜಗಳವೇ ಪಕ್ಷದ ಪಾಲಿಗೆ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಹೀಗಾಗಿಯೇ, ಯತ್ನಾಳ್-ವಿಜಯೇಂ ದ್ರರ ಸಂಘರ್ಷವನ್ನು ಉಪೇಕ್ಷಿಸಿದ್ದಕ್ಕೆ ಅದು ಪಕ್ಷವನ್ನೇ ದುರ್ಬಲ ಗೊಳಿಸುತ್ತಿದ್ದರೂ ಎಚ್ಚರ ಗೊಂಡಿರದ ಹೈಕಮಾಂಡ್, ರೆಡ್ಡಿ- ರಾಮುಲು ಜಗಳವು ಮಾಧ್ಯಮದಲ್ಲಿ ಸುದ್ದಿಯಾಗು ತ್ತಿದ್ದಂತೆ ರಂಗಪ್ರವೇಶ ಮಾಡಿದೆ.

ಕಲಹ ನಿವಾರಿಸಿ ಅವರಿಬ್ಬರೂ ಪರಸ್ಪರ ಕೈಕುಲುಕುವಂತೆ ಮಾಡುವ ಮಹತ್ತರ ಹೊಣೆಯನ್ನು ಹಿರಿಯ ಸಂಸದ ಪ್ರಹ್ಲಾದ್ ಜೋಶಿಯವರಿಗೆ ಅದು ವಹಿಸಿದೆ. ಆದರೆ, ಉಭಯ ನಾಯಕರು ಮತ್ತು ಅವರ ಬೆಂಬಲಿಗರ ಹೇಳಿಕೆಗಳನ್ನು ಗಮನಿಸಿದರೆ, ‘ಮಿಷನ್ ಜೋಶಿ’ ಸ-ಲವಾಗುವುದು ಅನುಮಾನ ಎನಿಸುತ್ತಿದೆ. ದೆಹಲಿಗೆ ಬಂದು ವರಿಷ್ಠರನ್ನು ಭೇಟಿ ಮಾಡುವಂತೆ ರೆಡ್ಡಿ-ರಾಮುಲು ಜೋಡಿಯನ್ನು ಆಹ್ವಾನಿಸಲಾಗಿದ್ದು, ಹೈಕಮಾಂಡಿನ ಈ ನಡೆಯು ರಾಜ್ಯ ಬಿಜೆಪಿಯ ನಾಯಕರು ಮತ್ತು ಕಾರ್ಯ ಕರ್ತರಲ್ಲಿ ಅಚ್ಚರಿ ಮೂಡಿಸಿದೆ.

‘ಇದೇ ಮಾನದಂಡವನ್ನು ಯತ್ನಾಳ್ ಮತ್ತು ವಿಜಯೇಂದ್ರರ ನಡುವಿನ ಸಂಘರ್ಷದ ಶಮನಕ್ಕೆ ಬಳಸಿಲ್ಲವೇಕೆ?’ ಎಂಬುದು ಅವರ ಪ್ರಶ್ನೆ. ‘ಯತ್ನಾಳರು ಬಹಳ ಕಾಲದಿಂದ ಪಕ್ಷ ವಿರೋಧಿ ಹೇಳಿಕೆ ಗಳನ್ನು ನೀಡುತ್ತಾ ಬಂದಿದ್ದಾರೆಂದು ದೂರಿದರೂ ವರಿಷ್ಠರು ಮೌನವಾಗಿರುವುದೇಕೆ? ಅವರಿಗೆ ಷೋಕಾಸ್ ನೋಟಿಸ್ ನೀಡಲಾಗಿದೆ ಎನ್ನುತ್ತಿದ್ದರೂ ಅದರ ಬಗ್ಗೆ ಕೂಡ ಖಚಿತತೆಯಿಲ್ಲ.

ಹೈಕಮಾಂಡಿನ ಈ ನಡೆಯು, ಯತ್ನಾಳರ ಚಟುವಟಿಕೆಗಳಿಗೆ ವರಿಷ್ಠರಲ್ಲಿ ಕೆಲವರ ಪರೋಕ್ಷ ಬೆಂಬಲ ವಿರುವುದರ ಸೂಚನೆಯೇ?’ ಎಂಬ ಪ್ರಶ್ನೆಗಳು ಕಾರ್ಯಕರ್ತರನ್ನು ಕಾಡುತ್ತಿವೆ. ಯತ್ನಾ ಳರು ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಸತತವಾಗಿ ಹೇಳಿಕೆ ನೀಡುತ್ತಾ ಬಂದಿದ್ದರೂ, ‘ಶಿಸ್ತಿನ ಪಕ್ಷ’ ಎಂದೇ ಒಂದು ಕಾಲಕ್ಕೆ ಕರೆಸಿಕೊಳ್ಳುತ್ತಿದ್ದ ಬಿಜೆಪಿಯು ಅವರ ವಿರುದ್ಧ ‘ಶಿಸ್ತುಕ್ರಮ’ ಕೈಗೊಳ್ಳ ದಿರುವುದು ರಾಜಕೀಯ ಪಡಸಾಲೆಯಲ್ಲಿ, ಪಕ್ಷದ ಎಲ್ಲಾ ಸ್ತರದ ಧುರೀಣರಲ್ಲಿ ಮತ್ತು ಜನ ಸಾಮಾನ್ಯರಲ್ಲಿ ಅಚ್ಚರಿ ಮೂಡಿಸಿದೆ.

‘ಪಕ್ಷವು ಏನೇ ಕಸರತ್ತು ಮಾಡಿದರೂ ದಕ್ಷಿಣದಲ್ಲಿ ಭದ್ರವಾಗಿ ಕಾಲೂರಲು ಸಾಧ್ಯವಿಲ್ಲ’ ಎಂಬ ಹತಾಶೆ ಹಾಗೂ ‘ಇದೇ ಶಕ್ತಿ ಮತ್ತು ಸಮಯವನ್ನು ಉತ್ತರದ ರಾಜ್ಯಗಳಲ್ಲಿ ವಿನಿಯೋಗಿಸಿದರೆ, ಪಕ್ಷದ ಬಲವರ್ಧನೆಯಾಗುತ್ತದೆ’ ಎಂಬ ಚಿಂತನೆಯೇ ವರಿಷ್ಠರ ಈ ನಡೆಗೆ ಕಾರಣವಿರಬಹುದು ಎಂಬ ರಾಜಕೀಯ ವಿಶ್ಲೇಷಕರ ಅನಿಸಿಕೆಯಲ್ಲಿ ಅರ್ಥವಿಲ್ಲದಿಲ್ಲ. ಒಂದು ಕಾಲಕ್ಕೆ ಹೈಕಮಾಂಡ್/ವರಿಷ್ಠರ ಹೆಸರು ಕೇಳಿದ್ದರೆ ನಡುಗುತ್ತಿದ್ದವರು ಇಂದು ‘ಕ್ಯಾರೇ’ ಎನ್ನುತ್ತಿಲ್ಲ.

ಇದು ಹೈಕಮಾಂಡ್ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿರುವುದರ ಸೂಚನೆಯೇ? ಅಥವಾ ‘ಅತಿ ಯಾದರೆ ಅಮೃತವೂ ವಿಷವಾಗುತ್ತದೆ’ ಎಂಬ ಮಾತಿನಂತೆ ಅತಿಯಾದ ನಿಯಂತ್ರಣ ಮತ್ತು ಎಚ್ಚರಿ ಕೆಯೇ ಪಕ್ಷಕ್ಕೆ ಮುಳುವಾಗುತ್ತಿದೆಯೇ? ಎಂಬುದಕ್ಕೆ ಬಲ್ಲವರೇ ಉತ್ತರಿಸಬೇಕು. ಏಕೆಂದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಒಂದೇ ಒಂದು ಎಚ್ಚರಿಕೆಯ ಮಾತಿಗೆ ರಾಜ್ಯದ ಕೆಲ ಕಾಂಗ್ರೆಸ್ಸಿಗರು ‘ಸೈಲೆಂಟ್’ ಮೋಡ್‌ಗೆ ಬಂದರೆ, ವರಿಷ್ಠರ ಎಚ್ಚರಿಕೆಯ ಹೊರತಾಗಿಯೂ ರಾಜ್ಯ ಬಿಜೆಪಿಗರು ‘ವೈಲೆಂಟ್’ ಮೋಡ್‌ನಲ್ಲಿದ್ದಾರೆ,

ಶಿಸ್ತು-ಸಂಯಮ ಹಳಿ ತಪ್ಪುತ್ತಿದೆ. ಭಿನ್ನಮತ, ಸಣ್ಣಪುಟ್ಟ ವೈಮನಸ್ಸು ಎಲ್ಲ ರಾಜಕೀಯ ಪಕ್ಷ ಗಳಲ್ಲೂ ಸಾಮಾನ್ಯ; ಆದರೆ ರಾಜ್ಯ ಬಿಜೆಪಿಯಲ್ಲಿ ಇದು ಮಿತಿಯನ್ನು ದಾಟಿದೆ ಎನ್ನಬಹುದು. ಯತ್ನಾಳ್ -ವಿಜಯೇಂದ್ರ ಬಣಕ್ಕೆ ಸೀಮಿತವಾಗಿದ್ದ ಭಿನ್ನಮತವೀಗ ರೆಡ್ಡಿ-ರಾಮುಲು ಜಟಾಪಟಿ ಯವರೆಗೆ ವಿಸ್ತರಿಸಿರುವುದೇ ಇದಕ್ಕೆ ಸಾಕ್ಷಿ. ಈ ಮಧ್ಯೆ, ವಿ.ಸುನೀಲ್ ಕುಮಾರ್ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಗಳು ಹರಿದಾಡಿದ್ದವು; ಇದಕ್ಕೆ ನೇರ ಕಾರಣಗಳು ಬಯಲಾಗದಿದ್ದರೂ, ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಯ ಬಗ್ಗೆ ನೊಂದು ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿತ್ತು.

ಇಷ್ಟು ಸಾಲದೆಂಬಂತೆ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರೂ ಸದ್ದುಮಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದ ಗೌಡರು ಇತ್ತೀಚೆಗೆ ದನಿಯೇರಿಸಿ ಮಾತನಾ ಡುತ್ತಿದ್ದು, ‘ರಾಜ್ಯ ಬಿಜೆಪಿಯಲ್ಲಿನ ಸಮಸ್ಯೆಗಳಿಗೆ ಕೋರ್ ಕಮಿಟಿ ಮತ್ತು ಹೈಕಮಾಂಡ್ ನೇರ ಕಾರಣ; ವಿಜಯೇಂದ್ರ ತಾತ್ಕಾಲಿಕ ಅಧ್ಯಕ್ಷರಷ್ಟೇ’ ಎಂಬರ್ಥದ ಷರಾ ಬರೆಯುವ ಮೂಲಕ ಬಿಜೆಪಿ ಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಗ್ರಹಿಕೆಯನ್ನು ಪುಷ್ಟೀಕರಿಸಿದ್ದಾರೆ.

ಆದರೆ, ‘ಪಕ್ಷದಲ್ಲಿ ಎಲ್ಲಾ ಮಹತ್ವದ ಹುದ್ದೆಗಳನ್ನು ಅನುಭವಿಸಿರುವ ಸದಾನಂದ ಗೌಡರು ಈಗ ಕಳೆದುಕೊಳ್ಳುವುದು ಏನೂ ಇಲ್ಲದಿರುವುದರಿಂದ ಹೀಗೆ ಧೈರ್ಯವಾಗಿ ಸತ್ಯವನ್ನು ನುಡಿದಿದ್ದಾರೆ’ ಎಂಬ ಟೀಕೆಯೂ ಕೇಳಿಬರುತ್ತಿದೆ. ಗೌಡರ ಮನೆಯಲ್ಲಿ ಹಲವು ಹಿರಿಯ ನಾಯಕರು ಸಭೆ ನಡೆಸಿ ದ್ದು, ಅವರನ್ನು ‘ತಟಸ್ಥ ಗುಂಪಿನವರು’ ಎನ್ನಲಾಗುತ್ತಿದೆ. ಮಾತ್ರವಲ್ಲದೆ, ‘ಪಕ್ಷದಲ್ಲಿ ಇನ್ನೂ ಕೆಲವು ಬಣಗಳಿದ್ದು, ರಂಗಪ್ರವೇಶಕ್ಕೆಂದು ಅವು ಮುಹೂರ್ತಕ್ಕಾಗಿ ಕಾಯುತ್ತಿವೆ’ ಎಂಬ ಮಾತೂ ಸುಳಿದಾ ಡುತ್ತಿದೆ.

‘ಪಕ್ಷದ ರಾಜ್ಯಾಧ್ಯಕ್ಷ ಪದವಿಗೆ ಮುರುಗೇಶ ನಿರಾಣಿ ಸಹಿತ ಸುಮಾರು 9 ಆಕಾಂಕ್ಷಿಗಳಿದ್ದು, ಸದ್ಯದ ಬೆಳವಣಿಗೆಯನ್ನು ನೋಡಿದರೆ ಅವಿರೋಧ ಆಯ್ಕೆ ಅಸಾಧ್ಯ, ಚುನಾವಣೆ ಅನಿವಾರ್ಯ’ ಎಂಬ ಸುದ್ದಿಯೂ ಅಲ್ಲಲ್ಲಿ ಹರಿದಾಡುತ್ತಿದೆ. ‘ಕುಟುಂಬ ರಾಜಕಾರಣ’ವನ್ನು ವಿರೋಧಿಸಿಕೊಂಡೇ ಬಂದಿದ್ದ ಬಿಜೆಪಿಯು ಕರ್ನಾಟಕದ ರಾಜ್ಯಾಧ್ಯಕ್ಷರನ್ನು ನೇಮಿಸುವಾಗ ಅದೇ ಆಶಯವನ್ನು ಶಿರಸಾ ಪಾಲಿಸಿದ್ದಿದ್ದರೆ ಇಂದು ಪಕ್ಷಕ್ಕೆ ಇಂಥ ದುಸ್ಥಿತಿ ಒದಗುತ್ತಿರಲಿಲ್ಲ.

ಪಕ್ಷದ ತೆಕ್ಕೆಯಲ್ಲಿ ಹಿರಿಯರು-ಅನುಭವಿಗಳು-ಅರ್ಹರು ಸಾಕಷ್ಟಿ ರುವಾಗ, ಕೆಲವೇ ವರ್ಷ ‘ರಾಜ ಕೀಯ’ ಮಾಡಿದವರನ್ನು ಈ ಹುದ್ದೆಯಲ್ಲಿ ಪ್ರತಿಷ್ಠಾಪಿಸಿದ್ದನ್ನು ಹಲವರಿಗೆ ಜೀರ್ಣಿಸಿಕೊಳ್ಳಲಾಗಿಲ್ಲ. ದಶಕದಿಂದ ರಾಜಕಾರಣ ಮಾಡುತ್ತಾ ಬಂದವರು, ನಿನ್ನೆ-ಮೊನ್ನೆ ಬಂದವರಿಂದ ಆದೇಶ-ನಿರ್ದೇ ಶನ ಪಡೆಯುವುದು ಇರಿಸುಮುರಿಸಿನ ಬಾಬತ್ತೇ ಎನ್ನಿ! ಆದರೆ ಪಕ್ಷದ ವರಿಷ್ಠರು ಯಾವುದೋ ರಾಜಕೀಯ ಸಮೀಕರಣವನ್ನು ತಾಳೆಮಾಡಲೆಂದು, ಯಾರನ್ನೋ ಖುಷಿಪಡಿಸಲೆಂದು ಕೈಗೊಂಡ ನಿರ್ಣಯವೇ ಪ್ರಸ್ತುತ ದುಬಾರಿಯಾದಂತೆ ಕಾಣುತ್ತಿದೆ.

ಅಣ್ಣಾಮಲೈ ಅವರಿಗೆ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಸ್ಥಾನವನ್ನು ನೀಡಿದಾಗ, “ನಿನ್ನೆಯವರೆಗೆ ನಮಗೆ ಸಲ್ಯೂಟ್ ಹೊಡೆದವರಿಂದ ನಾವು ಆದೇಶ ಪಡೆಯಬೇಕೇ?" ಎಂಬ ಆಕ್ಷೇಪ ಕೆಲ ಹಿರಿಯ ನಾಯಕರಿಂದ ಹೊಮ್ಮಿತ್ತಂತೆ! ಆದರೆ, ವಿಜಯೇಂದ್ರರನ್ನು ನೇಮಿಸುವಾಗ ಹೈಕಮಾಂಡ್‌ನ ಲೆಕ್ಕಾ ಚಾರ ಬೇರೆ ಇತ್ತೇನೋ?! ವಿಧಾನಸಭಾ ಚುನಾವಣೆಯಲ್ಲಿ ಗೆದ್ದಾಗ ಪಕ್ಷದ ರಾಜ್ಯ ಘಟಕದ ಅಧ್ಯ ಕ್ಷರು ಗದ್ದುಗೆ ಹಿಡಿಯುವ ‘ಅಲಿಖಿತ ಪರಂಪರೆ’ ನಮ್ಮಲ್ಲಿದೆ, ಬಹುತೇಕ ಸಂದರ್ಭಗಳಲ್ಲಿ ಇದು ನಿಜವೂ ಆಗಿದೆ.

ಹೀಗಾಗಿ, ಇಂಥ ‘ದೂರದೃಷ್ಟಿ’ಯ ಕೆಲ ನಾಯಕರು ಮುಂಜಾಗ್ರತಾ ಕ್ರಮವಾಗಿ ಈ ಭಿನ್ನಮತಕ್ಕೆ ತಿದಿಯೂದುತ್ತಿದ್ದಾರೆ ಎಂಬ ವಿಶ್ಲೇಷಕರ ಊಹೆಯಲ್ಲಿ ತಥ್ಯವಿದೆ ಎನಿಸುತ್ತದೆ. ಮುಂದಿನ ದಿನ ಗಳಲ್ಲಿ ಈ ಭಿನ್ನಮತ ಶಮನವಾಗುತ್ತದೋ ಅಥವಾ ತೀವ್ರಗೊಂಡು ಪಕ್ಷಕ್ಕೆ ಮರ್ಮಾಘಾತ ನೀಡು ತ್ತದೋ ಎಂಬುದು ಬೇರೆ ವಿಷಯ.

ಆದರೆ, ಕರ್ನಾಟಕದ ಹೆಬ್ಬಾಗಿಲ ಮೂಲಕ ದಕ್ಷಿಣದಲ್ಲಿ ಸೀಮೋಲ್ಲಂಘನ ಮಾಡಬೇಕೆಂಬ ಬಿಜೆಪಿ ಯ ಮಹತ್ವಾಕಾಂಕ್ಷೆಗೆ ಅಡೆತಡೆ ಒದಗುತ್ತಿರುವುದಂತೂ ಖರೆ!

(ಲೇಖಕರು ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?