ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Hunj Column: ಮಹಾಬಯಲಿನಿಂದ ತಂಬಿಗಿ ಬಯಲೆಡೆಗೆ..!

ಸೃಷ್ಟಿಯಾದುದೆಲ್ಲವನ್ನೂ ‘ಸತ್’ ಎಂದರೆ ಇರುವುದು ಎಂದು ಹೇಳುವರಷ್ಟೆ. ಸೃಷ್ಟಿಗೆ ಮೊದಲ ಸ್ಥಿತಿಯು ಸದಸತ್ತುಗಳಿಗೆ ಮೀರಿ ಇಲ್ಲದಂತೆ ಇರುವುದಕ್ಕೆ ವಚನಕಾರರ ‘ಶೂನ್ಯ, ಬಯಲು’ ಎಂಬ ಪಾರಿಭಾಷಿಕ ಪದಗಳಂತೆ ಇರುವ ‘ಆಭು’ ಎಂಬ ಪಾರಿಭಾಷಿಕ ಪದವನ್ನು ಈ ಸೂಕ್ತದ ಋಷಿಯು ನಿಯೋಜಿಸಿಕೊಂಡುದು ಕಂಡುಬರುತ್ತದೆ.

Ravi Hunj Column: ಮಹಾಬಯಲಿನಿಂದ ತಂಬಿಗಿ ಬಯಲೆಡೆಗೆ..!

-

Ashok Nayak Ashok Nayak Oct 17, 2025 10:41 AM

ಬಸವ ಮಂಟಪ

ರವಿ ಹಂಜ್

ಶ್ರೀ ಟಿ.ಎನ್.ಮಲ್ಲಪ್ಪನವರು ಓರ್ವ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರು. ವೀರಶೈವ ಧರ್ಮದ ಅನೇಕ ಕೃತಿಗಳ ಗ್ರಂಥಕರ್ತರು. ಇವರು ‘ನಾಸದೀಯ ಸೂಕ್ತ’ ಎಂಬ ಕೃತಿಯನ್ನು 1968ರಲ್ಲಿ ರಚಿಸಿ‌ ದ್ದಾರೆ. ಈ ಗ್ರಂಥವನ್ನು ಚಿತ್ರದುರ್ಗದ ಮುರುಘಾಮಠ ಪ್ರಕಟಿಸಿದೆ. ಈ ಕೃತಿಯಲ್ಲಿ ಮಲ್ಲಪ್ಪ ನವರು ನಿಗಮಾಗಮಗಳು ಹೇಗೆ ಶ್ರೀಕಂಠ ಭಾಷ್ಯ, ಶ್ರೀಕರ ಭಾಷ್ಯ, ಸಿದ್ಧಾಂತ ಶಿಖಾಮಣಿಯಲ್ಲದೆ ವಚನ ಸಾಹಿತ್ಯದಲ್ಲೂ ಹಾಸುಹೊಕ್ಕಾಗಿ ಮಿಳಿತಗೊಂಡಿವೆ ಎಂದು ಪುರಾವೆ ಸಮೇತ ವಿಷಯ ಮಂಡನೆ ಮಾಡಿದ್ದಾರೆ.

ಈ ಕೃತಿಯಲ್ಲಿ ಮಲ್ಲಪ್ಪನವರು ಹೀಗೆ ವಿಶ್ಲೇಷಿಸುತ್ತಾರೆ: “ನಾಸದೀಯ ಸೂಕ್ತದಲ್ಲಿ ‘ಆಭು’ ಎಂಬ ಪದವು ಪರಬ್ರಹ್ಮ ಎಂಬ ಅರ್ಥದಲ್ಲಿ ಉಪಯೋಗಿಸಿರುವ ಪಾರಿಭಾಷಿಕಪದವು. ಬೃಹತ್ವಾತ್ ಬ್ರಹ್ಮ ಎಂಬ ಅರ್ಥದಲ್ಲಿ ಬ್ರಹ್ಮ ಎಂಬ ಪದವು ಪರಮಾತ್ಮನನ್ನು ನಿರ್ದೇಶಿಸಲು ಉಪಯೋಗಿಸಿದ ಪಾರಿಭಾಷಿಕ ಪದವಾದರೂ, ಇದನ್ನು ಆ ಅರ್ಥದಲ್ಲಿ ಋಗ್ವೇದದಲ್ಲಿ ಉಪಯೋಗಿಸಿರುವುದು ಕಂಡುಬಂದಿಲ್ಲ.

ಋಗ್ವೇದದ ಋಷಿಗಳು ಪರತತ್ತ್ವವನ್ನು ನಿರ್ದೇಶಿಸಲು ಯೋಜಿಸಿಕೊಂಡಿರುವ ಮೊದಲನೆಯ ಪದವು, ‘ಆಭು’ ಎಂಬ ಪದವೇ ಆಗಿದೆ. ಆಭು ಎಂಬ ಪದಕ್ಕೆ ಟೊಳ್ಳು ಎಂಬ ಸಾಮಾನ್ಯ ಅರ್ಥವೂ, ಪರಮಾತ್ಮ ಎಂಬ ಪಾರಿಭಾಷಿಕ ಅರ್ಥವೂ ಇದೆ. ಮ್ಯಾಕ್ಸ್ ಮುಲ್ಲರರು ನಾಸದೀಯ ಸೂಕ್ತವನ್ನು ಭಾಷಾಂತರಿಸುವುದರಲ್ಲಿ ‘ಆಭು’ ಪದಕ್ಕೆ ’qಟಜಿb’ ಎಂದು ಭಾಷಾಂತರಿಸಿರುವರು. ‌

ಸೃಷ್ಟಿಯಾದುದೆಲ್ಲವನ್ನೂ ‘ಸತ್’ ಎಂದರೆ ಇರುವುದು ಎಂದು ಹೇಳುವರಷ್ಟೆ. ಸೃಷ್ಟಿಗೆ ಮೊದಲ ಸ್ಥಿತಿಯು ಸದಸತ್ತುಗಳಿಗೆ ಮೀರಿ ಇಲ್ಲದಂತೆ ಇರುವುದಕ್ಕೆ ವಚನಕಾರರ ‘ಶೂನ್ಯ, ಬಯಲು’ ಎಂಬ ಪಾರಿಭಾಷಿಕ ಪದಗಳಂತೆ ಇರುವ ‘ಆಭು’ ಎಂಬ ಪಾರಿಭಾಷಿಕ ಪದವನ್ನು ಈ ಸೂಕ್ತದ ಋಷಿಯು ನಿಯೋಜಿಸಿಕೊಂಡುದು ಕಂಡುಬರುತ್ತದೆ.

ಅಷ್ಟೇಕೆ? ಶೂನ್ಯ, ಬಯಲು- ಎಂಬ ಪದಗಳಿಗೆ ನಾಸದೀಯ ಸೂಕ್ತದ ‘ಆಭು’ ಪದವೇ ಹಿನ್ನೆಲೆ ಯಾಗಿದೆಯೆನ್ನಬಹುದು. ಯದಾ ತಮಸ್ತನ್ನ ದಿವಾ ನರಾತ್ರಿರ್ನಸ್ನನ್ನ ಚಾಸಚ್ಛಿವ ಏವ ಕೇವಲಃ | ತದಕ್ಷರಂ ತತ್ ಸವಿತುರ್ವರೇಣ್ಯಂ ಪ್ರಜ್ಞೆ ಚ ತಸ್ಮಾತ್ ಪ್ರಕೃತಾ ಪುರಾಣೀ ||- ಶ್ವೇತಾಶ್ವರೋಪ ನಿಷತ್ತಿನ ಮಂತ್ರವಿದರ ಪದಗಳು ನಾಸದೀಯ ಸೂಕ್ತದಲ್ಲಿನ ಮುಖ್ಯಪದಗಳೇ, ಆದುದರಿಂದಲೇ ಈ ಮಂತ್ರದ ವಿಜ್ಞಾನ ಭಗವದ್ ಕೃತ ವಿವರಣದಲ್ಲಿ ‘ನಾಸದಾಸೀನೋಸದಾಸೀತ್ ತಮ ಆಸೀದಿತಿ ಶ್ರುತ್ಯಂತರೋಕ್ತಂ’ ಎಂದು ಹೇಳಿ ಮೇಲಿನ ಮಂತ್ರಕ್ಕೆ ನಾಸದೀಯ ಸೂಕ್ತವೇ ಆಧಾರವೆಂಬುದನ್ನು ಸ್ಪಷ್ಟ ಮಾಡಿದೆ.

ನಾಸದೀಯ ಸೂಕ್ತೋಕ್ತ ಪರಬ್ರಹ್ಮವನ್ನು ಉಪನಿಷತ್ತು ‘ಶಿವ’ ಎಂಬ ಮಂಗಳಾರ್ಥವುಳ್ಳ ಪದದಿಂದ ಕರೆದಿದೆ. ಸೂಕ್ತದ ಒಂದೆರಡನೆಯ ಮಂತ್ರದಂತೆ ರವಿಶಶಿದಿನನಿ ತೈತ್ತರೀಯ ಉಪನಿಷತ್ತಿನಲ್ಲಿ ಆತ್ಮನಿಂದ ಆಕಾಶವೂ ಆಕಾಶದಿಂದ ವಾಯುವೂ, ವಾಯುವಿನಿಂದ ಅಗ್ನಿಯೂ, ಅಗ್ನಿಯಿಂದ ಜಲವೂ, ಜಲದಿಂದ ಪೃಥ್ವಿಯೂ, ಪೃಥ್ವಿಯಿಂದ ವನಸ್ಪತಿಗಳೂ, ಅವುಗಳಿಂದ ಅನ್ನವೂ, ಅನ್ನದಿಂದ ಪುರುಷನೂ ಉತ್ಪತ್ತಿಯಾದುದನ್ನು ಹೇಳಿದೆ- ಆತ್ಮನ ಆಕಾಶಃ ಸಂಭೂತಃ ಆಕಾಶಾತ್ ವಾಯುಃ ವಾಯೋರಗಿ, ಅರಾಪಃ ಅದೃ ಪೃಥವಿ, ಪೃಥಿವ್ಯಾ ಓಷಧಯಃ ಓಷಧಿಭೆನ್ನಂ, ಅನ್ನಾತ್ ಪುರುಷಃ. ಡಾರ್ವಿನ್ನನ ನಿಯಮದಂತೆ ಸೂಕ್ಷ್ಮ ಚೇತನವಾದವುಗಳಿಂದ ಸೃಷ್ಟಿಯು ಪ್ರಾರಂಭಿಸಿ ಅತ್ಯಂತ ಚೈತನ್ಯವುಳ್ಳವುಗಳನ್ನು ಕ್ರಮವಾಗಿ ಉದ್ಭವಿಸಿಸುವುದೆಂಬ ಕಲ್ಪನೆಯು ಉಪನಿಷತ್ತಿ ನಲ್ಲಿಯೂ ಹಾಗೆಯೇ ವಚನ ವ್ಞಾಯದಲ್ಲಿಯೂ ಕಂಡುಬರುತ್ತದೆ: “ಏನೆಂದೆನಲಿಲ್ಲದ ಮಹಾ ಘನವು ತನ್ನ ಲೀಲೆಯಿಂದ ತಾನೇ ಸ್ವಯಂಭು ಲಿಂಗವಾಯಿತು, ಲಿಂಗದಿಂದಾಯಿತು ಶಿವಶಕ್ತಾತ್ಮಕ, ಆ ಶಿವಶಕ್ತಾತ್ಮಕ ನಿಂದ ಆಯಿತು ಆತ್ಮ, ಆತ್ಮನಿಂದಾದುದು ಆಕಾಶ, ಆಕಾಶದಿಂದಾದುದು ವಾಯು, ವಾಯುವಿನಿಂದಾದುದು ಅಗ್ನಿ, ಅಗ್ನಿಯಿಂದಾದುದು ಅಪ್ಪು, ಅಪ್ಪುವಿನಿಂದಾದುದು ಪೃಥ್ವಿ, ಪೃಥ್ವಿಯಿಂದಾದುದು ಸಕಲ ಜೀವವೆಲ್ಲ, ಇವೆಲ್ಲ ನಿಮ್ಮನೆ ಕಹಿನಿಂದಾದುವು ಚಿಮ್ಮಲಿಗೆಯ ಚೆನ್ನಿಗರಾಮಾ".

ಈ ವಿಭಾಗವು ಶ್ವೇತಾಶ್ವತರ ಉಪನಿಷತ್ತಿನಲ್ಲಿಯೂ ಕಂಡುಬರುತ್ತದೆ. ‘ಭೋಕ್ತಾ ಭೋಗ್ಯಂ, ಪ್ರೇರಿತಾ ರಂಚ ಮತ್ಯಾ ಸರ್ವಂ ಪ್ರೋಕ್ತಂ ತ್ರಿವಿಧಂ ಬ್ರಹ್ಮಮೇತತ್’ ಎಂದು ಶ್ವೇತಾಶ್ವತರ ಉಪನಿಷತ್ತಿನಲ್ಲಿ ಹೇಳಿರುವುದರಲ್ಲಿ ಭೋಕ್ತಾ, ಭೋಗ್ಯ ಮತ್ತು ಪ್ರೇರಿತಾರಂ ಎಂದರೆ ಪ್ರೇರಕನಾದ ಈಶ್ವರನು ಎಂಬ ತ್ರಿವಿಧವಾಗಿರುವುದು ಬ್ರಹ್ಮವೆಂದು ಹೇಳಿದೆ.

ಶಿವಮಹಾಪುರಾಣದಲ್ಲಿ ಶ್ವೇತಾಶ್ವತರ ಉಪನಿಷತ್ತಿನ ಇದೇ ಮೊದಲಾದ ಶ್ಲೋಕಗಳು ಉದ್ಧೃತ ವಾಗಿರುವುದರಿಂದ ಆ ಪುರಾಣಕ್ಕೆ ಈ ಉಪನಿಷತ್ತು ಹಿನ್ನೆಲೆಯೆಂಬುದು ಸ್ಪಷ್ಟ. ಈ ಪುರಾಣದ ಅನೇಕ ಶ್ಲೋಕಗಳು ಶ್ರೀಕಂಠಭಾಷ್ಯದಲ್ಲಿಯೂ ಶ್ರೀಕರಭಾಷ್ಯದಲ್ಲಿಯೂ ಅಧಾರವಾಗಿ ತೆಗೆದು ಕೊಳ್ಳಲ್ಪಟ್ಟಿವೆ.

ಸ್ವಲ್ಪಮಟ್ಟಿಗೆ ಸಿದ್ಧಾಂತ ಶಿಖಾಮಣಿಯಲ್ಲಿಯೂ ಇದು ಕಂಡುಬರುವುದು. ‘ಭೋಕ್ತಾ ಭೋಜ್ಯಂ ಪ್ರೇರಯಿತಾ ವಸ್ತುತ್ರಯಮಿದಂ ಸ್ಮೃತಂ’ ಎಂದು ಸಿದ್ಧಾಂತ ಶಿಖಾಮಣಿಯಲ್ಲಿಯೂ ಹೇಳಿದೆ. ವೀರಶೈವದ ಇದೇ ಮೊದಲಾದ ನಿಲುವಿಗೆ ಶಿವಮಹಾಪುರಾಣವೂ ಶ್ವೇತಾಶ್ವತರೋಪನಿಷತ್ತೂ ಹಾಗೂ ನಾಸದೀಯ ಸೂಕ್ತವೂ ಹಿನ್ನೆಲೆಗಳೆಂಬುದು ಗಮನಾರ್ಹ ವಿಷಯವಾಗಿದೆ.

ಶಕ್ತಿ ವಿಶಿಷ್ಟ ಶಿವನು ಜಗತ್ತಾಗಿ ಹೊರಹೊಮ್ಮಿ, ಅದರಲ್ಲಿ ಅಂತರ್ಯಾಮಿಯಾಗಿದ್ದು ಕಾಪಾಡಿ ಕೊನೆಗೆ ತನ್ನಲ್ಲಿ ಲಯಗೊಳಿಸಿಕೊಳ್ಳುವನೆಂಬ ವೀರಶೈವರ ಮುಖ್ಯ ಸಿದ್ಧಾಂತಕ್ಕೂ ಮೇಲ್ಕಂಡ ಆಧಾರಗಳೇ ಹಿನ್ನೆಲೆಯಾಗಿವೆ".

ತಮ್ಮ ವಿಶ್ಲೇಷಣೆಯನ್ನು ಮತ್ತಷ್ಟು ವಿಸ್ತರಿಸುತ್ತಾ ಅವರು ಹೀಗೆನ್ನುತ್ತಾರೆ: “ನಾಸದೀಯ ಸೂಕ್ತವೇ ಮೂಲಾಧಾರವಾಗಿರುವ ವಚನಕಾರರಾದ ವೀರಶೈವ ಶರಣರ ನಿಲುವೇನೆಂಬುದನ್ನು ಸೂಕ್ಷ್ಮವಾಗಿ ವಿವರಿಸುವುದನ್ನು ಅವಲೋಕಿಸಿದರೆ ತುಲನಾತ್ಮಕ ವಿವೇಚನೆಗೆ ಸಹಾಯವಾಗುವುದು. ನಾಸದೀಯ ಸೂಕ್ತದಲ್ಲಿ ಹೇಳಿರುವ ಸದಸತ್ರನಿಶತಿದಿನ ನಿಶಿಗಳಿಲ್ಲದಾಗ ಶಕ್ತಿಯಿಂದ ಹೊರಹೊಮ್ಮದಿದ್ದರೂ ತನ್ನಲ್ಲಿ ಅದ್ವಿತೀಯವಾಗಿ ತನ್ನ ಸ್ವರೂಪವೇ ಆದ ಶಕ್ತಿಯಿಂದ ಸುರಿಸುತ್ತಿದ್ದ ಪರತತ್ತ್ವವನ್ನು ‘ತದೇಕಂ ತಸ್ಮಾದ್ಧಾನೈತ್ ನಪರಃ’ ಎಂದು ಆ ಸೂಕ್ತದಲ್ಲಿಯೇ ಹೇಳಿದಂತೆ, ಶರಣರು ಹೇಳುವ ಸರ್ವಶೂನ್ಯ ನಿರಾಲಂಬ ಬ್ರಹ್ಮದ ಸ್ವರೂಪವೂ ಅದೇ ಆಗಿದೆ. ನಾಸದೀಯ ಸೂಕ್ತದಲ್ಲಿ ಸೂಕ್ಷವಾಗಿ ಹೇಳಿರುವ ಜಗತ್ ಸೃಷ್ಟಿ ವಿಷಯವನ್ನು ಉಪನಿಷತ್ಕಾರರೂ, ವಚನಕಾರರೂ ವಿಸ್ತರಿಸಿಕೊಂಡಿದ್ದಾರೆ ‘ಯದಾ ತಮಃ, ನ ದಿವಾ ನ ರಾತ್ರಿಃ ನ ಸತ್ ನಚಾ ಸತ್, ಶಿನ ಏವ ಕೇವಲಃ’ ಎನ್ನುವ ಶ್ವೇತಾಶ್ವತರ ಶ್ರುತಿಯಲ್ಲಿ ಮೇಲೆ ಹೇಳಿದ ಪರತತ್ತ್ವವನ್ನು ‘ಶಿವ ಏವ’ ಎಂದು ಕರೆಯಲಾಗಿದೆ.

ಈ ಕಲ್ಪನೆಯನ್ನೇ ಶಿವಮಹಾಪುರಾಣದಲ್ಲಿಯೂ, ಅದನ್ನು ಅನುಸರಿಸಿರುವ ಶ್ರೀಕಂಠ, ಶ್ರೀಕರ ಭಾಷೃಗಳಲ್ಲಿಯೂ, ಸಿದ್ಧಾಂತ ಶಿಖಾಮಣಿಯಲ್ಲಿಯೂ ವಿಸ್ತರಿಸಲಾಗಿದೆ". ನಂತರ ಶಿವಾದ್ವೈತ ಮಂಜರಿ, ಕರಣಹಸಿಗೆ, ಸೃಷ್ಟಿವಚನಗಳಲ್ಲಿನ ಹನ್ನೊಂದು ಲಿಂಗತತ್ವ ವಿಕಾಸವನ್ನು ಸಮಗ್ರವಾಗಿ ಪ್ರಭುದೇವೋಕ್ತ ಲಿಂಗತತ್ವ ವಿಕಾಸದಲ್ಲಿ ಕಾಣಬಹುದು ಎನ್ನುತ್ತಾ ಅದನ್ನು ಹೀಗೆ ವಿವರಿಸಿದ್ದಾರೆ: “ಮೊದಲು ನಿಃಕಲಬ್ರಹ್ಮವು, ಆ ನಿಃಕಲಬ್ರಹ್ಮದಿಂದ ಚಿತ್ತು; ಆ ಚಿತ್ತಿನಿಂದ ಚಿನ್ನಾದ ಚಿದ್ಬಿಂದು ಚಿತ್ಕಳೆಗಳು ಪುಟ್ಟಿದವು.

ಆ ಚಿನ್ನಾದ ಚಿದ್ಬಿಂದು ಚಿತ್ಕಳೆ ಮೂಲ ಚಿತ್ತೆಂಬ ಚತುರ್ವಿಧವು ಘಟ್ಟಿಗೊಂಡು ಅಖಂಡ ಗೋಳಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗ ವಾಯಿತು. ಆ ಮಹಾಲಿಂಗದಿಂದ ಸದಾಶಿವ ಮೂರ್ತಿ ಪುಟ್ಟಿದನು; ಆ ಸದಾಶಿವನ ಪಂಚಮುಖದಿಂದ ಭೂತಂಗಳು ಪುಟ್ಟಿದವು; ಗೋಪ್ಯಮುಖ ದಲ್ಲಿ ಆತ್ಮನು ಪುಟ್ಟಿದನು. ಅಂತಪ್ಪ ಪರಬ್ರಹ್ಮದಿಂದಾದ ಅಂಗಸ್ಥಲವೊಂದಕ್ಕೆ ಕನಳಿಗೆಯಾಗಿ ಸೇರಿದ ಇಪ್ಪತ್ತೈದು ತತ್ತ್ವಂಗಳು- ಅವು ಎಂತಾವೆಲಾ ಸ್ವಾಮಿಯೆಂದು ಬೆಸಗೊಂಡೊಡೆ- ಅರಿವು ರೂಪಮಾದ ಶ್ರವಣಾದಿ ಇಂದ್ರಿಯಂಗಳೈದು, ಕರ್ಮಕ್ರಿಯಾರೂಪಮಾದ ವಾಗಾದಿ ಇಂದ್ರಿಯಂ ಗಳೈದು, ಶಬ್ದ ವಿಷಯವೇ ಮೊದಲಾದ ವಿಷಯಂಗಳೈದು, ಪ್ರಾಣಾದಿ ವಾಯು ಗಳೈದು ಈ ಪ್ರಕಾರದಿಂದ ಹೇಳಲ್ಪಟ್ಟವುಗಳಿಂದ ಕೂಡಿರುವುದೇ ಅಂಗವು ಮಹಾಲಿಂಗವನು ತಾನೆ ಹನ್ನೊಂದು ತೆರನಾಯಿತು.

ಏಕಾದಶ ತತ್ತ್ವಸ್ವರೂಪವನ್ನು ತಳೆಯಿತು. ಇಂತು ಏಕಾದಶ ತತ್ತ್ವೈಸ್ವರೂಪನನ್ನು ತಳೆದ ಪರಿಕ್ರಮಂ ತರುವಾಯದ ನಿಲುಕಡೆಯು ಹ್ಯಾಗಿಪ್ಪುದೆಲೆ ಸ್ವಾಮಿಯೆಂದು ಬೆಸರಗೊಂಡೊಂಡೆ--ಶಾಂತಿ ಶಕ್ತಿಯೆ ಮೊದಲಾದ ಶಕ್ತಿಗಳೈದು, ಶಿವಸಾದಾಖ್ಯವೇ ಮೊದಲಾದ ಕತೃ ಗಳೈದು, ಈ ಎಲ್ಲಕ್ಕೂ ಉಪರಿಯಾಗಿ ತೋರುವ ಮೇಲಣ ಮಹಾಲಿಂಗತತ್ತ್ವ ತಾನೊಂದು. ಪ್ರಥಮದಲ್ಲಿ ನಿರೂಪಣವ ಪಾಲಿಸಿದೆ ಅಂಗ ಸಂಬಂಧವಾದ ತತ್ತ್ವಗಳಿಪ್ಪತತೈದು, ಲಿಂಗ ಸಂಬಂಧನಾದ ತತ್ತ್ವಗಳು ಹನ್ನೊಂದು, ಅಂಗಲಿಂಗ ಸಂಬಂಧವಾದ ಉಭಯ ತತ್ತ್ವೈಂಗಳೂ ಕೂಡಿ ಮೂವತ್ತಾರು ತತ್ತ್ವೈಂ ಗಳಾದವು.

ಕರಣಹಸಿಗೆಯಲ್ಲಿಯೂ ಇತರ ಆಧಾರಗ್ರಂಥಗಳಲ್ಲಿಯೂ ತತ್ತ್ವಾತೀತವಾದ ನಿಃಕಲಬ್ರಹ್ಮದವರೆಗೆ, ತತ್ತ್ವಾತೀತ ಪರಬ್ರಹ್ಮವು ಹಂತಹಂತವಾಗಿ ಸೃಷ್ಟಿಗೆ ಅಭಿಮುಖನಾಗುತ್ತ ಬರುವುದೆಂಬುದು ತಿಳಿದುಬರುವುದು. ಎಲ್ಲಾ ಆಧಾರಗಳಿಂದ ಸಂಕ್ಷಿಪ್ತವಾಗಿ, ‘ಸರ್ವಶೂನ್ಯ ನಿರಾಲಂಬ ಬ್ರಹ್ಮ’ (ನಿರವಯಲಿಂಗ); ಇದುವೇ ತಿಳಿದುಪ್ಪ ಗಟ್ಟಿಗೊಂಡು ಎರೆದುಪ್ಪವಾದ ಹಾಗೆ’ ಆದುದು ನಿರಂಜನ ಬ್ರಹ್ಮ; ಇದರ ‘ನಿರಂಜೋಂಕಾರ ಶಕ್ತಿಯ ನೆನಹು ಮಾತ್ರದಿಂದ’ ಆದುದು ಶೂನ್ಯಲಿಂಗ; ಇದರ ಮಹಾeನ ಚಿತ್ತಿನ ನೆನಹು ಮಾತ್ರದಿಂದ’ ಆದುದು ನಿಷ್ಕಲ ಬ್ರಹ್ಮ; ಇದರ ಜ್ಞಾನ ಚಿತ್ತು, ಆ ಚಿತ್ರಿನ ಚೆನ್ನಾದ, ಚಿದ್ಬಿಂದು ಚಿತ್ಕಳೆ ಚತುರ್ವಿಧವು ಗಟ್ಟಿಗೊಂಡು ಆದುದು ಮಹಾಲಿಂಗ; ಇದರಿಂದ ಸದಾಶಿವ ಮೂರ್ತಿಯಾದನು".

ಸಮಗ್ರವಾಗಿ ‘ಚಿನೂಲಾದ್ರಿ ಚಿತ್ಕಳೆ’ ಎಂದೇ ಹೆಸರಾದ ಜಗದ್ಗುರು ಮಲ್ಲಿಕಾರ್ಜುನ ಜಗದ್ಗುರುಗಳ ಆಶ್ರಯದಲ್ಲಿ ಪ್ರಕಟಿತಗೊಂಡ ಈ ಕೃತಿ ಮತ್ತು ಕೃತಿಕಾರರಾದ ನಿವೃತ್ತ ನ್ಯಾಯಾಧೀಶರೂ ವಿದ್ವಾಂಸರೂ ಆದ ಟಿ.ಎನ್. ಮಲ್ಲಪ್ಪನವರ ಪ್ರಬುದ್ಧತೆ ಇಲ್ಲಿ ಕಾಣುತ್ತದೆ.

ಟಿ.ಎನ್.ಮಲ್ಲಪ್ಪನವರ ವಿಶ್ಲೇಷಣೆಯಂತೆಯೇ ವಚನಕಾರ ಕಾಡಸಿದ್ದೇಶ್ವರನು ಹೀಗೆಂದಿದ್ದಾನೆ: “ಬ್ರಹ್ಮಾಂಡವು ಹೇಗೆ ಪುಟ್ಟಿತ್ತು ಪೇಳ್ವೆ ಕೇಳಿರಯ್ಯಾ. ಆದಿ, ಅನಾದಿಯಿಂದತ್ತತ್ತಲಾದ ನಿರಾಕಾರ ಪರವಸ್ತು ತನ್ನ ಸ್ವರೂಪವ ತಾನರಿಯದೆ ಅನಂತ ಕಲ್ಪಕಲ್ಪಾಂತರ ಇರ್ದು ತನ್ನ ಸ್ವಲೀಲೆಯಿಂದ ತಾನೇ ಜಗತ್ಸೃಷ್ಟಿ ನಿಮಿತ್ತವಾಗಿ, ನೆನವುದೋರಲು, ಆ ನೆನವು ನಿರ್ಧರವಾಗಿ ಚಿತ್ತೆನಿಸಿತ್ತು. ಆ ಚಿತ್ತಿನಿಂದ ಚಿನ್ನಾದ ಚಿದ್ಬಿಂದು ಚಿತ್ಕಳೆಗಳೊಗೆದವು. ಆ ಚಿತ್ತು ತ್ರಿವಿಧಮಲ ಸಹವಾಗಿ ಚತುರ್ವಿಧವು ಘಟ್ಟಿಗೊಂಡು ಅಖಂಡ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗ ವಾಯಿತ್ತು.

ಆ ಮಹಾಲಿಂಗದಿಂದ ಆತ್ಮ ಜನನ; ಆತ್ಮದಿಂದ ಭಾವ ಪುಟ್ಟಿತ್ತು. ಆ ಭಾವದಿಂದ ಮೋಹ ಪುಟ್ಟಿತ್ತು. ಆ ಮೋಹವೆಂದಡೆ, ಮಾಯವೆಂದಡೆ, ಆಶೆಯೆಂದಡೆ, ಮನವೆಂದಡೆ ಏಕಪರ್ಯಾಯಾರ್ಥ. ಇಂತಪ್ಪ ಮೋಹದಿಂದ ತ್ರೈಲೋಕ ಮೊದಲಾಗಿ ಚತುರ್ದಶಭುವನಂಗಳು ಪುಟ್ಟಿದವು. ಆ ಚತುರ್ದಶ ಭುವನದ ಮಧ್ಯದಲ್ಲಿ ಇರುವೆ ಮೊದಲು ಆನೆ ಕಡೆಯಾಗಿ ಎಂಬತ್ತು ನಾಲ್ಕು ಲಕ್ಷ ಜೀವರಾಶಿಯೊಳಗೆ ದೇವ-ದಾನವ-ಮಾನವರು ಮೊದಲಾದ ಹೆಣ್ಣು- ಗಂಡು, ಸಚರಾಚರಂ ಗಳೆಲ್ಲವು ಉತ್ಪತ್ತಿಯಾದವು.

ಇಂತೀ ಎಲ್ಲವು ಪರಶಿವನ ನೆನವುಮಾತ್ರದಿಂದ ಮರೀಚಿಕಾಜಲದಂತೆ, ಸುರಚಾಪದಂತೆ, ತೋರಿ ತೋರಿ ಅಡಗುವವಲ್ಲದೆ ನಿಜವಲ್ಲ ಮಿಥ್ಯವೆಂದು ತಿಳಿದು ವಿಸರ್ಜಿಸಿ ಬಿಡುವಾತ ತಾನೇ ಪರಶಿವನೆಂದು ತಿಳಿವುದಯ್ಯ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯ ಪ್ರಭುವೆ". ಅಲ್ಲಿಗೆ ಹಿಂದೂ-ವೀರಶೈವ-ಲಿಂಗವಂತ ಶರಣ ಒಂದಾಗಿ ದೇದೀಪ್ಯಮಾನವಾಗಿ ಬೆಳಗುತ್ತದೆ.

ಅದೇ ರೀತಿ ವೀರಶೈವ ಸಿದ್ಧಾಂತಕ್ಕೆ ಮೂಲವು ಶ್ವೇತಾಶ್ವರೋಪನಿಷತ್ತೆಂದರೆ, ಅದಕ್ಕೆ ಮೂಲ ವಾದುದು ಋಗ್ವೇದಾಂತರ್ಗತ ನಾಸದೀಯ ಸೂಕ್ತ. ಆ ಸೂಕ್ತದಲ್ಲಿ ‘ಕಾಮಸ್ತದಗ್ರೇ’ ಎಂದು ಮೊದಲಾಗುವ ಮಂತ್ರದಲ್ಲಿ ಕಾಮ ಎಂದರೆ ಸೃಷ್ಟಿ ವೈಭವ ಲೀಲೆ; ಇದು ಇಚ್ಛಾಶಕ್ತಿಯ ಆವಿರ್ಭಾವವಾಗಿದೆ, “ತಪಸಸ್ತನ್ಮ ಹಿನಾಂಜಾ ಯತೈಕಂ" ಎಂದು ಹೇಳಿರುವುದರಲ್ಲಿ ಜ್ಷಾನಶಕ್ತಿಯ ಅವಿರ್ಭಾವವಾಗಿದೆ.

“ತಪನಾ ಸೃಷ್ಟವ್ಯ ಪರ್ಯಾಲೋಚನ ರೂಪತ್ವಂ" ಎಂದು ಮೊದಲಾಗಿ ಹೇಳಿದ ಜಗತ್ಸೃಷ್ಟಿ ವಿಷಯಕವಾದವಾಗಿದೆ. ಮುಂದಿನ ನಾಸದೀಯಸೂಕ್ತ ಮಂತ್ರದ ಸಾಯಣಭಾಷ್ಯವು, “ಏವಂ ಮಾಯಾ ಸಹಿತಃ ಪರಮೇಶ್ವರಃ ಸರ್ವಂ ಜಗತ್ಸೃಷ್ಟ್ಯ ಸ್ಪಯಂಚಾನುಪ್ರವಿಶ್ಯ ಭೋಕಭೋಗ್ಯಾ ದಿರೂಪೇಣ ವಿಭಾಗಂ ಕೃತವಾನಿತ್ಯರ್ಥಃ" ಎಂದಿದೆ.

ಇನ್ನು ಶ್ರೇತಾಶ್ವತರೋಪನಿಷತ್ತಿನಲ್ಲಿ “ಭೋಕ್ತಾ ಭೋಗ್ಯಂ ಪ್ರೇರಿತಾರಂ ಚ ಮತ್ವಾ ಸರ್ವಂ ಪ್ರೋಕ್ತಂ ತ್ರಿವಿಧಂ ಬ್ರಹ್ಮ ಮೇತತ್" ಎಂದು ಹೇಳಿರುವುದು ನಾಸದೀಯಸೂಕ್ತ ಮಂತ್ರಕ್ಕೆ, ಸಾಯಣ ಭಾಷ್ಯದಲ್ಲಿ ಹೇಳಿರುವ ಅರ್ಥಕ್ಕೆ ಆನುಸಾರವಾಗಿದೆ. ‘ಸಿದ್ಧಾಂತ ಶಿಖಾಮಣಿ’ಯಲ್ಲಿ “ಭೋಕ್ತಾ ಭೋಜ್ಯಂ ಪ್ರೇರ ಯಿತಾ ವಸ್ತುತ್ರಯಮಿದಂ ಸ್ಮೃತಂ" ಎಂದು ಹೇಳಿರುವುದರ ಮೂಲವು ನಾಸದೀಯ ಸೂಕ್ತವೂ, ತದನು ಸಾರನಾದ ಶ್ರೇತಾಶ್ವತರೋಪನಿಷತ್ತೂ, ಎಂಬುದು ಸ್ಪಷ್ಟವಾಗು ತ್ತದೆ.

ಇದನ್ನೇ ತೋಂಟದ ಸಿದ್ದಲಿಂಗೇಶ್ವರರು ತಮ್ಮ ಈ ಎರಡು ವಚನಗಳಲ್ಲಿ ಹೀಗೆ ಪ್ರತಿರೂಪಿಸಿ ದ್ದಾರೆ:‘ಆದಿ ಮಧ್ಯಾವಸಾನವಿಲ್ಲದಂದು, ಆದಿ ಅನಾದಿ, ಬಿಂದು ಕಳೆಗಳಿಲ್ಲದಂದು, ಸಾವಯವ, ನಿರವಯವಿಲ್ಲ ದಂದು, ತತ್ವ ಬ್ರಹ್ಮಾಂಡಾದಿ ಲೋಕಾದಿ ಲೋಕಂಗಳೇ ನುಯೇನೂ ಇಲ್ಲದಂದು; ನಿತ್ಯ ನಿರಂಜನ ಪರವಸ್ತು ನೀನೊರ್ಬನೆಯಿzಯಲ್ಲ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ’.

‘ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯ, ಆತ್ಮನೆಂಬ ಅಷ್ಟತನು ಮೂರ್ತಿ ಸ್ವರೂಪುಗೊಳ್ಳದಂದು, ನಾನು, ನೀನೆಂಬ ಭ್ರಾಂತಸೂತಕ ಹುಟ್ಟದಂದು, ನಾಮ, ರೂಪು, ಕ್ರಿಯೆಗಳೇನುಯೇನೂ ಇಲ್ಲದಂದು, ಸರ್ವಶೂನ್ಯವಾಗಿರ್ದೆಯಲ್ಲ ನೀನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ’. ಹೀಗೆ ಹಿಂದೂ ಸಂಸ್ಕೃತಿಯ ಬೀಜಮೂಲವು ಟಿಸಿಲೊಡೆದು ಮತಧರ್ಮಗಳಾಗುತ್ತ ವಿಕಸಿಸಿದ ಛಾಯೆಗಳು ಗ್ರಾಂಥೈತಿಹಾಸಿಕವಾಗಿ ಗಾಢವಾಗಿವೆ, ನಿರೂಪಿಸಲ್ಪಟ್ಟಿವೆ.

(ಮುಂದುವರಿಯುವುದು)

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)