#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Ravi Hunz Column: ಧರ್ಮೋದಯ ಮತ್ತು ಜಗತ್ತಿನ ಪ್ರಪ್ರಥಮ ಸಂಪತ್ತು !

ಅಲೆಮಾರಿ ತುರುಕರು ಮುಂದೆ ಬೌದ್ಧಧರ್ಮದ ಭಾಗವಾಗಿ ಆಕಾಶ ಆರಾಧನೆಯಲ್ಲಿ ತೊಡಗಿದ್ದ ರೆಂದು ಸಂಶೋಧನೆಗಳು ಹೇಳುತ್ತವೆ. ಭಾರತವು ಧರ್ಮದ ಆಧಾರದ ಮೇಲೆ ಕ್ರಿ.ಶ. 1947ರಲ್ಲಿ ಪ್ರಪ್ರಥಮವಾಗಿ ವಿಭಜನೆಗೊಂಡದ್ದಲ್ಲ. ಅದು ಕ್ರಿಸ್ತಪೂರ್ವದ ಧರ್ಮವಿನ್ನೂ ಬೀಜಾಕೃತಿ ಯಲ್ಲಿದ್ದಾಗಲೇ ವಿಭಜನೆ ಗೊಂಡಿತ್ತು!

ಧರ್ಮೋದಯ ಮತ್ತು ಜಗತ್ತಿನ ಪ್ರಪ್ರಥಮ ಸಂಪತ್ತು !

ಅಂಕಣಕಾರ ರವಿ ಹಂಜ್

Profile Ashok Nayak Feb 10, 2025 10:19 AM

ಬಸವ ಮಂಟಪ

ರವಿ ಹಂಜ್

ಭಾರತದ ಇತಿಹಾಸದ ಲಭ್ಯವಿರುವ ಸದ್ಯದ ಪುರಾವೆಗಳನ್ನು ವಿಶ್ಲೇಷಿಸಿ ನೋಡಿದಾಗ ಹೊಸ ಹೊಸ ಆಲೋಚನೆಗಳು, ಆಚರಣೆಗಳು ಕಾಲಾನುಕ್ರಮವಾಗಿ, ವಲಸಿಗರು ಬಂದಂತೆ ಸಂಸ್ಕೃತಿಯ ಕೊಡು-ಕೊಳ್ಳುವಿಕೆಯಿಂದ ಹಿಂದೂ ಸಂಸ್ಕೃತಿ ವಿಕಾಸಗೊಳ್ಳುತ್ತಾ ಸಾಗಿತು ಎಂದು ತಿಳಿದು ಬರುತ್ತದೆ. ಪ್ರಕೃತಿಯಾರಾಧನೆಯ ವಾಯು, ವರುಣ, ಅಗ್ನಿ, ಆಕಾಶಗಳಿಗೆ ಭೂಮಿಯೂ ಸೇರಿ ಪಂಚಕಾಯ ಗಳಾದವು. ಈ ಶಕ್ತಿಗಳಿಗೆ ಇಂದ್ರ ಅಧಿಪತಿಯೆನಿಸಿದನು. ಈ ಪರಿಷ್ಕೃತ ಶಕ್ತಿಗಳ ಆರಾಧನೆಗೆ ತಕ್ಕ ನಿಯಮಗಳೊಂದಿಗೆ ವೇದಗಳು ಪರಿಷ್ಕೃತಗೊಂಡವು. ಆದರೆ ಕೆಲವು ನಿಷ್ಠರಿಗೆ ಈ ಹೊಸ ಆಲೋಚ‌ ನೆಗಳು ಹಿಡಿಸಲಿಲ್ಲ. ಹಾಗಾಗಿ ಅಗ್ನಿ ಆರಾಧಕರ ಒಂದು ಗುಂಪು ಬೇರೆಯಾಗಿ ಪಾರ್ಶ್ವವಾಗಿ ಪಾರಸ, ಪಾರ್ಥಿಯನ್ನರೆನಿಸಿಕೊಂಡರು.

ಈ ಅಗ್ನಿ ಆರಾಧಕರಂತೆಯೇ ಆಕಾಶ ಆರಾಧಕರು ವಿಭಜಿತರಾಗಿ ಅಲೆಮಾರಿ ತುರುಕರೆನ್ನಿಸಿದರೆಂಬ ವಾದವಿದ್ದರೂ ಸಾಬೀತಾಗಿಲ್ಲ. ಆದರೆ ಈ ಅಗ್ನಿಯಾರಾಧಕರು ಮುಂದೆ ಸೂರ್ಯಾರಾಧಕರೆನಿಸಿ ಸಾಮಾನ್ ಯಾ ಆಸ್ಮಾನ್ ಎಂಬ ಆಕಾಶ ಆರಾಧಕರಾಗಿ ವಿಭಜನೆಗೊಂಡರು.

ಇದನ್ನೂ ಓದಿ: Ravi Hunj Column: ಮಹಾಕುಂಭಮೇಳ ಮತ್ತು ವೀರಶೈವ ಪರಂಪರೆ

ಈ ಅಲೆಮಾರಿ ತುರುಕರು ಮುಂದೆ ಬೌದ್ಧಧರ್ಮದ ಭಾಗವಾಗಿ ಆಕಾಶ ಆರಾಧನೆಯಲ್ಲಿ ತೊಡಗಿದ್ದ ರೆಂದು ಸಂಶೋಧನೆಗಳು ಹೇಳುತ್ತವೆ. ಭಾರತವು ಧರ್ಮದ ಆಧಾರದ ಮೇಲೆ ಕ್ರಿ.ಶ. 1947ರಲ್ಲಿ ಪ್ರಪ್ರ ಥಮವಾಗಿ ವಿಭಜನೆಗೊಂಡದ್ದಲ್ಲ. ಅದು ಕ್ರಿಸ್ತಪೂರ್ವದ ಧರ್ಮವಿನ್ನೂ ಬೀಜಾಕೃತಿಯಲ್ಲಿದ್ದಾ ಗಲೇ ವಿಭಜನೆಗೊಂಡಿತ್ತು! ಹಾಗಾಗಿಯೇ ಎಡಪಂಥದವರು ‘ಆರ್ಯರು ವಲಸೆ ಬಂದರು’ ಎಂದರೆ ಬಲಪಂಥದವರು ‘ಇಲ್ಲಿಂದ ಹೋದವರೇ ವಾಪಸ್ ಬಂದರು’ ಎನ್ನುತ್ತಿರುವುದು ಎನಿಸುತ್ತದೆ. ಒಟ್ಟಾರೆ ಅಂದಿನ ಮಾನವ ವಲಸೆಯು ಇಂದು ಜೈವಿಕ ಪ್ರಮಾಣಿತ ಸತ್ಯ!

ಹೀಗೆ ನಿಯಮಬದ್ಧ ಆಚರಣೆಗಳಾಗಿ ವೇದಗಳಾಗುತ್ತ, ಚಾತುರ್ವಣವಾಗುತ್ತ ರೂಪುಗೊಂಡ ಸಮಾಜ ವಿಕಸನವು ಸಂಸ್ಕೃತಿಯೆನ್ನಿಸಿಕೊಂಡಿದ್ದಿತೇ ಹೊರತು ಒಂದೇ ಬಾರಿಗೆ ದಿಢೀರನೆ ಧರ್ಮ ವಾಗಿ ಉದಯಿಸಿರಲಿಲ್ಲ. ಅದೇ ರೀತಿ ಚಾತುರ್ವರ್ಣ ವ್ಯವಸ್ಥೆ ಸಹ. ಅಂದ ಹಾಗೆ ಈ ಚಾತು ರ್ವರ್ಣಪದ್ಧತಿಯ ವರ್ಣಾಶ್ರಮದ ಮೂಲ ಭಾರತೀಯ ಬುದ್ಧಿಜೀವಿಗಳು ಆಕ್ಷೇಪಿಸುವಂತೆ ಆರ್ಯ (ಕೌಕೇಶಿಯನ್) ಮೂಲದ ವೈದಿಕವೇ? ಭಾರತೀಯ ನೆಲಮೂಲ (ಆಫ್ರಿಕಾ ಮೂಲ) ಎನ್ನುವ ಅವೈದಿಕವೇ? ಅಥವಾ ಇರಾನ್ ಮೂಲದಿಂದ ಬಂದ ಸ್ಟೆಪಿ ಪಶುಪಾಲಕರದೇ? ಭಾರತದ ಚಾತು ರ್ವರ್ಣ ವ್ಯವಸ್ಥೆಯು ಕೇವಲ ಭಾರತದಲ್ಲಿ ಉದಯವಾದದ್ದಲ್ಲ.

ಇದರ ಉಗಮ ಮಾನವ ವಿಕಾಸ ಮತ್ತು ಸಾಮಾಜಿಕ ವಿಕಾಸದ ಜತೆಜತೆಯಲ್ಲಿಯೇ ಜಾಗತಿಕವಾಗಿ ಆರಂಭವಾಗಿತ್ತು ಮತ್ತದು ಜಗತ್ತಿನಾದ್ಯಂತ ಜಾರಿಯಿದ್ದಿತು. ಆಫ್ರಿಕಾ ಖಂಡದ ಸಹಾರಾ ಮರು ಭೂಮಿಯಲ್ಲಿ ಟೌರಿ ಎಂಬ ಜನಾಂಗವಿದೆ. ಈ ಜನಾಂಗವು ಕುಲೀನ ( Nobles), ಜಮೀನ್ದಾರಿ ( Vassals), ಪುರೋಹಿತ ( Holy men ), ಕುಶಲಕರ್ಮಿ ( Artisans ) ಮತ್ತು ಕೂಲಿಕಾರರು ಅಥವಾ ಮಾಜಿ ಗುಲಾಮರು ( Labor ) ಎಂಬ ಐದು ವರ್ಗ ಅಥವಾ ಜಾತಿಗಳನ್ನು ಈಗಲೂ ಪಾಲಿಸುತ್ತಿದೆ.

ಇವುಗಳನ್ನು ಪರೋಕ್ಷವಾಗಿ ಕ್ಷತ್ರಿಯ, ವೈಶ್ಯ, ಬ್ರಾಹ್ಮಣ, ಶೂದ್ರ ಎಂದು ವಿಂಗಡಿಸಬಹುದು. ಇಂತ ಹುದೇ ವರ್ಗೀಕರಣ ಇಂದಿನ ಅರಬರಲ್ಲಿಯೂ ಇದೆ. ಯುರೋಪಿನಲ್ಲಿ ಸಹ ಕುಲೀನ ( Nobles ), ಬ್ರಾಹ್ಮಣ ( Clergy ), ಮಧ್ಯಮವರ್ಗದ ನೌಕರಾಶಾಹಿ ವೈಶ್ಯ/ಕ್ಷತ್ರಿಯ ( Bourgeoisie ), ಶೂದ್ರ ( Peasants ) ಎಂಬ ಚಾತುರ್ವರ್ಣ ವ್ಯವಸ್ಥೆಯಿದ್ದಿತು.

ಹಾಗಾಗಿ ಚಾತುರ್ವರ್ಣ ವ್ಯವಸ್ಥೆ ಕೇವಲ ಆರ್ಯರzಗಲಿ, ಭಾರತ ನೆಲಮೂಲದವರದ್ದಾಗಲಿ, ಸ್ಟೆಫಿ ಪಶುಪಾಲಕರದ್ದಾಗಲಿ ಎನಿಸದೆ ಸಂಪೂರ್ಣ ಮಾನವ ಜನಾಂಗದವರದ್ದು ಎನ್ನಬಹುದು. ಇದ ನ್ನೆಲ್ಲ ಮರೆಮಾಚಿ ಈ ಅನಿಷ್ಟ ವ್ಯವಸ್ಥೆಯು ಭಾರತದ ಸನಾತನ ಧರ್ಮದ್ದು ಎಂದು ಭಾರತೀಯ ಉದಾರವಾದಿಗಳು ಏಕೆ ಸಂಕಥನವನ್ನು ಕಟ್ಟಿದ್ದಾರೆಯೋ ಗೊತ್ತಿಲ್ಲ!

ಇರಲಿ, ಮಾನವರು ಅಲೆಮಾರಿಗಳಿಂದ ಸಾಮಾಜಿಕ ನೆಲೆಮಾರಿಗಳಾಗುವ ವಿಕಾಸದ ಕಾಲಘಟ್ಟ ದಲ್ಲಿ ಈ ವ್ಯವಸ್ಥೆ ಜಾಗತಿಕವಾಗಿ ರೂಪುಗೊಂಡಿದೆ. ನೆಲೆಮಾರಿತನಕ್ಕೆ ತಕ್ಕಂತೆ ವೃತ್ತಿಗಳು ವಿಕಾಸ ಗೊಂಡಂತೆ ಈ ಸಾಮಾಜಿಕ ಶ್ರೇಣಿಯ ವರ್ಗೀಕರಣವು ವೃತ್ತಿಗನುಗುಣವಾಗಿ ವಿಸ್ತಾರಗೊಂಡಿದೆ. ಇಂಥ ಜಾಗತಿಕ ವಿಸ್ತರಣೆಯನ್ನು ಭಾರತವೂ ಸೇರಿದಂತೆ ಎಲ್ಲಾ ರಾಷ್ಟ್ರಗಳೂ ಅಳವಡಿಸಿ ಕೊಂಡಿದ್ದವಷ್ಟೇ.

ಕ್ಯಾ ಎನ್ನುವ ಇಂಗ್ಲಿಷ್ ಪದವು ಮೂಲತಃ ‘ಕಾಸ್ತಾ’ ಎನ್ನುವ ಸ್ಪ್ಯಾನಿಶ್ ಪದವಾಗಿದೆ. ಈ ಪದವನ್ನು ಭಾರತಕ್ಕೆ 17ನೇ ಶತಮಾನದಲ್ಲಿ ಪೋಚುಗೀಸರು ಪರಿಚಯಿಸಿದರು. ಕೆಲವು ದೇಶಗಳು ವೈವಾಹಿಕ ಸಂಬಂಧಗಳನ್ನು ಜಾತಿಯ ಮಿತಿಗೆ ನಿರ್ಬಂಧಿಸಿದ್ದರೆ ಕೆಲವು ಅಂತರ್ಜಾತಿ ವಿವಾಹಗಳನ್ನು ಒಪ್ಪಿದ್ದವು. ಇಂಥ ಜಾಗತಿಕ ವ್ಯವಸ್ಥೆಯನ್ನೇ ಮನುವು ಸ್ಮೃತಿಯಾಗಿ ಬರೆದದ್ದೇ ಹೊರತು ಹೊಸ ಆವಿಷ್ಕಾರವನ್ನೇನೂ ಮಾಡಿಯಲ್ಲ.

ಆದರೆ ಮನುಸ್ಮೃತಿ ಅಂತರ್ವರ್ಣ ವಿವಾಹಗಳನ್ನು ಮಾನ್ಯ ಮಾಡಿತ್ತು. ಹಾಗಾಗಿಯೇ ಭಾರತದಲ್ಲಿ ಅತ್ಯಂತ ವಿಸ್ತಾರವಾದ ಜನಾಂಗೀಯ ವೈವಿಧ್ಯವು ಜಾತ್ಯತೀತವಾಗಿ ಕಾಣಸಿಗುವುದು. ಉದಾಹರಣೆಗೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರಾಗಿರಲಿ ಅಥವಾ ದಲಿತರಾಗಿರಲಿ ಸಾಕಷ್ಟು ಕುಟುಂಬಗಳಲ್ಲಿ ಕಡುಕಪ್ಪು, ಕಡುಗೆಂಪು, ಬಂಗಾರದ ಬಣ್ಣದ ಕೂದಲಿನ, ಬೆಕ್ಕಿನ ಕಣ್ಣಿನ ವೈವಿಧ್ಯದ ಮಕ್ಕಳು ಕಾಣು ವುದು. ಏಕೆಂದರೆ ಇಸ್ಲಾಂ ದಾಳಿಯಿಂದುಂಟಾದ ‘ಹುಟ್ಟಿನಿಂದ ಜಾತಿ’ ಪದ್ಧತಿಯ ಅನುಷ್ಠಾನಕ್ಕೂ ಮೊದಲು ಅತ್ಯಂತ ಸುವಿಸ್ತಾರವಾಗಿ ಆದ ಅಂತರ್ವರ್ಣ ಸಂಕರವೇ ಇದಕ್ಕೆ ಕಾರಣ.

ಸಮಾಜವಾದಿ ಸಂಶೋಧಕರು ಹೇಳುವಂತೆ ಅನಾದಿ ಕಾಲದಿಂದಲೂ ಭಾರತದಲ್ಲಿ ಹುಟ್ಟಿನಿಂದ ಜಾತಿ ಇದ್ದಿದ್ದರೆ ಇಂಥ ವಿಸ್ತಾರವಾದ ವಂಶವಾಹಿ ಸಂಕರ ಭಾರತದಲ್ಲಿ ಸಾಧ್ಯವಿರುತ್ತಲೇ ಇರಲಿಲ್ಲ ಎನ್ನುವುದು ವೈಜ್ಞಾನಿಕ ಸತ್ಯ. ಈ ಸತ್ಯದ ಕಾರಣವೇ ಚೀನಿಯರು ಚೀನಿಯರಂತೆ ಇದ್ದಾರೆಯೇ ಹೊರತು ಭಾರತದಂತೆ ಬಹುರೂಪಿಗಳಾಗಿ ಅಲ್ಲ ಎಂಬುದು ನನ್ನ ಚೀನಿ ಗೆಳತಿಯ ಅಂಬೋಣ.

ಈ ಹಿಂದೆ ಅಲೆಮಾರಿ ವೀರಶೈವ ಕಾಳಾಮುಖರ ನೆಲೆಮಾರಿ ವೃತ್ತಿ ವಿಕಾಸದಲ್ಲಿ ವಿಶ್ಲೇಷಿಸಿದಂತೆಯೇ ಜಾಗತಿಕ ನಾಗರಿಕತೆಗಳಲ್ಲಿ ವೃತ್ತಿಗಳು ಕುಲನಾಮವಾದವು. ಪುರೋಹಿತ-ಪ್ರೀ, ವೈಶ್ಯ-ಮರ್ಚಂಟ್/ಸ್ಮಿತ್, ಕ್ಷತ್ರಿಯ-ವಾರಿಯರ್, ಕುರುಬ-ಶೆಪರ್ಡ್, ಚಮ್ಮಾರ-ಶುಮಾಕರ್, ಮಠ-ಮೊನ್ಯಾಸ್ಟ್ರಿ, ಮಾಲಿ-ಗಾರ್ಡನರ್, ಕಮ್ಮತ--ರ್ಮರ್/-ಲ್ಕನರ್/ಗ್ರೋವರ್, ಬಡಿಗೇರ್-ವುಡ್‌ಮನ್/ವುಡ್‌ಸ್ಮಿತ್, ಈಡಿಗ-ಬ್ರ್ಯೂವರ್, ಗಾರೆ -ಮೇಸನ್ ಎಂಬ ಜಾಗತಿಕ ಸಾಮ್ಯತೆಯನ್ನು ಇಲ್ಲಿ ಮತ್ತೊಮ್ಮೆ ಸಾಂದರ್ಭಿಕವಾಗಿ ನೆನಪು ಮಾಡಿಕೊಳ್ಳಬಹುದು.

ಹಾಗಾಗಿಯೇ ಇಲ್ಲಿಗೆ ವಲಸೆ ಬಂದ ವಲಸೆಗಾರರೆಲ್ಲರೂ ಚಾತುರ್ವರ್ಣ ಎಂಬ ಜಾಗತಿಕ ಸಾಮಾಜಿಕ ಶ್ರೇಣೀಕರಣ ವ್ಯವಸ್ಥೆಯನ್ನು ಅಳವಡಿಸಿಕೊಂಡದ್ದು. ಇಂಥ ಪ್ರಬಲ ಐತಿಹಾಸಿಕ, ಮಾನವಿಕ, ಸಾಮಾಜಿಕ, ವಂಶವಾಹಿಕ ಸಾಕ್ಷಿಗಳಿದ್ದರೂ ಅವನ್ನು ಬದಿಗೆ ತಳ್ಳಿ ಸ್ವತಂತ್ರ ಭಾರತದ ಸಂವಿಧಾನ ರಚನೆಯಲ್ಲಿ ಮನುಸ್ಮೃತಿಯನ್ನು ಗಾಢವಾಗಿ ಅಪ್ಪಿಕೊಳ್ಳಲಾಯಿತು.

ಯಾವ ದೇಶ ಒಂದೊಮ್ಮೆ ಕುಲೀನ ದೇಶ ಎಂದು ಹೆಸರಾಗಿತ್ತೋ ಅದನ್ನು ಪ್ರಜಾಪ್ರಭುತ್ವ ರಾಷ್ಟ್ರ ವಾಗಿ ರೂಪಿಸುವ ಸಮಯದಲ್ಲಿ ಮತ್ತೆ ಪುನರ್ ನಿರ್ಮಿಸುವ ‘ಸಂಭವಾಮಿ ಯುಗೇ ಯುಗೇ’ ಅವಕಾಶವನ್ನು ಕೈಚೆಲ್ಲಲಾಯಿತು ಎಂದು ಷರಾ ಅಲ್ಲ, ಅಂತಿಮ ನಿರ್ಣಯವೆಂದೇ ಉದ್ಘೋಷಿಸ ಬಹುದು. ಏಕೆಂದರೆ ಅಂದು ಸಾಂವಿಧಾನಿಕವಾಗಿ ಜಾತಿಯನ್ನು ನಿರ್ಮೂಲ ಮಾಡಬಹುದಾದಂಥ ಸುವರ್ಣಾವಕಾಶವನ್ನು ದೂರದರ್ಶಿತ್ವವಿಲ್ಲದ ರಾಷ್ಟ್ರನಾಯಕರು ಕೈಚೆಲ್ಲಿಬಿಟ್ಟರು ಎನ್ನುವುದಕ್ಕೆ ಇಂದಿನ ಜಾತ್ಯಂಧ ಸಮಾಜವೇ ಸಾಕ್ಷಿಭೂತವಾಗಿ ನಿಂತಿದೆ.

ಇರಲಿ, ಅಂದಿನ ಕಾಲಘಟ್ಟದ ಕುಲೀನ ಸುಸಜ್ಜಿತ ಸಂಸ್ಕೃತಿಯನ್ನು ಬೌದ್ಧರು, ಜೈನರು, ಆರ್ಯರು, ಅನಾರ್ಯರೆಲ್ಲರೂ ಪಾಲಿಸುತ್ತಿದ್ದರು. ಅದೇ ರೀತಿಯಲ್ಲಿ ಸೂತ್ರ, ಶಾಸ್ತ್ರಗಳು ಈ ಎಲ್ಲಾ ಜನರಿಂದ ವಿಕಾಸಗೊಳ್ಳುತ್ತಾ ಸಾಗಿದ್ದವು. ಸೂತ್ರ, ಶಾಸ್ತ್ರಗಳು ಯಾವುದೇ ಒಂದು ಧರ್ಮಕ್ಕೆ ಸೀಮಿತ ವಾಗಿರಲಿಲ್ಲ. ಸಂಸ್ಕೃತಿಯೊಟ್ಟಿಗೆ ಭಾಷೆ, ಅರ್ಥ, ವೈದ್ಯ, ತರ್ಕ, ಲೋಹ, ಯೋಗ ಮುಂತಾದ ಶಾಸ್ತ್ರ ಗಳು ವಿಕಾಸ ಹೊಂದಿದಂತೆಯೇ ಅಧ್ಯಾತ್ಮ ಕೂಡಾ ರೂಪುಗೊಳ್ಳುತ್ತಿದ್ದಿತು.

ಶಾಸ್ತ್ರಗಳು ರೂಪುಗೊಂಡಂತೆಯೇ ಅದಕ್ಕೆ ತಕ್ಕನಾಗಿ ಉದ್ಯೋಗಗಳು, ಕುಶಲಕರ್ಮಗಳು ರೂಪುಗೊಂಡವು. ಸಾಮಾನ್ಯರಿಗೆ ಕ್ಲಿಷ್ಟವೆನಿಸಿದ್ದ ಅಧ್ಯಾತ್ಮವನ್ನು ಸರಳೀಕರಿಸಿದ ಕೀರ್ತಿ ಬುದ್ಧನಿಗೆ ಸಲ್ಲುತ್ತದೆ. ಆತನ ಸರಳ ಬೋಧನೆಯ ಆಧ್ಯಾತ್ಮಿಕ ತತ್ವಗಳ ಯಶಸ್ಸು ಕ್ರಮೇಣ ಪ್ರಸಿದ್ಧಿ ಪಡೆ ಯುತ್ತಾ ಆತನ ಬಹುದೊಡ್ಡ ಅನುಯಾಯಿಗಳ ಪಂಗಡವನ್ನೇ ಹುಟ್ಟುಹಾಕುತ್ತದೆ.

ಬುದ್ಧನ ತತ್ವಗಳು ಬೌದ್ಧಧರ್ಮವೆನಿಸಿ ಆತನ ಅನುಯಾಯಿಗಳು ಬೌದ್ಧ ಧರ್ಮೀಯ ರೆನಿಸಿ ಕೊಳ್ಳುತ್ತಾರೆ. ಹೀಗೆ ಸರಳಗೊಂಡ ಭಾರತೀಯ ಆಧ್ಯಾತ್ಮಿಕ ತತ್ವ ಬೌದ್ಧಧರ್ಮ ವೆನಿಸಿಬಿಡುತ್ತದೆ. ಅದೇ ರೀತಿ ಜೈನಧರ್ಮದ ಮಹಾವೀರ ಕೂಡಾ ಕ್ಲಿಷ್ಟವಾಗಿದ್ದ ತತ್ವಜ್ಞಾನವನ್ನು ಸರಳೀಕರಿಸಿದನು. ಈತ ಬುದ್ಧನ ಸಮಕಾಲೀನನಾದರೂ ಜೈನಧರ್ಮ ಸ್ಥಾಪಕನಲ್ಲ. ಮಹಾವೀರನನ್ನು ಜೈನಧರ್ಮದ ೨೪ನೇ ತೀರ್ಥಂಕರನೆಂದು ಹೇಳಲಾಗುತ್ತದೆ.

ಮಹಾವೀರನಿಗಿಂತ ಮುಂಚಿನ ತೀರ್ಥಂಕರರ ಕುರಿತು ಯಾವುದೇ ಐತಿಹಾಸಿಕ ದಾಖಲೆಗಳಿಲ್ಲ. ಆದರೆ ಜೈನಧರ್ಮದ 23ನೇ ತೀರ್ಥಂಕರ ಪಾರ್ಶ್ವನಾಥನು ಕ್ರಿಸ್ತಪೂರ್ವ 8ನೇ ಶತಮಾನದಲ್ಲಿದ್ದ ನೆನ್ನಲಾಗುತ್ತದೆ. ಅದಲ್ಲದೇ ಕೆಲವು ಬೌದ್ಧಗ್ರಂಥಗಳು ಕೂಡಾ ಬೌದ್ಧಧರ್ಮಕ್ಕಿಂತ ಮುಂಚೆ ಜೈನ ಧರ್ಮವಿದ್ದಿತೆನ್ನುತ್ತವೆ. ಆ ನೆಲೆಗಟ್ಟಿನಲ್ಲಿ ಜೈನಧರ್ಮ ಭಾರತದ ಪ್ರಪ್ರಥಮ ಐತಿಹಾಸಿಕ ‘ಧರ್ಮ’ ವೆನಿಸುತ್ತದೆ.

ಅಗ್ನಿ ಆರಾಧಕರು ಪಾರ್ಶ್ವಗೊಂಡ ಕಾಲ ಕೂಡ ಜೈನರ ಪಾರ್ಶ್ವನಾಥನ ಕಾಲವಿರಬಹುದು. ಸನಾತನದಿಂದ ಟಿಸಿಲೊಡೆದ ಪಾರ್ಥಿ ಯನ್ನರಂತೆಯೇ ಈತ ಕೂಡಾ ಟಿಸಿಲೊಡೆದುಕೊಂಡು ಪಾರ್ಶ್ವ ಪಾರಸನಾಗಿ, ರಿಷಭನಾಥನೆಂಬ ಆದಿ ತೀರ್ಥಂಕರನನ್ನು ಭಜಿಸುತ್ತ ಜೈನಧರ್ಮವನ್ನು ಒಗ್ಗೂಡಿಸಿರಬಹುದೆನಿಸುತ್ತದೆ. ಹೀಗೆ ಬೌದ್ಧಧರ್ಮ ಮತ್ತು ಜೈನಧರ್ಮಗಳು ಧರ್ಮದ ಆಯಾಮ ಪಡೆದಾಗ ಈ ಎರಡೂ ಧರ್ಮಕ್ಕೆ ಸೇರದ ಜನ ತಾವು ಆಚರಿಸಿಕೊಂಡು ಬರುತ್ತಿದ್ದ ಸಂಸ್ಕೃತಿಯನ್ನೇ ಧರ್ಮವೆನ್ನ ತೊಡಗಿದರು. ಪ್ರಾಥಮಿಕ ಹಂತಗಳಲ್ಲಿ ಜೈನರು ಮತ್ತು ಬೌದ್ಧರು, ಹಿಂದೂ ಆಚರಣೆ ಗಳೊಟ್ಟಿಗೆ ಇನ್ನೊಂದಿಷ್ಟು ಹೊಸ ಆಚರಣೆಗಳನ್ನು ಅಳವಡಿಸಿಕೊಂಡಿರುವವರೆನಿಸಿದ್ದರೇ ಹೊರತು ಅನ್ಯಧರ್ಮೀಯರೆಂದಲ್ಲ.

ಆದರೆ ಬೌದ್ಧ ಮತ್ತು ಜೈನ ಧರ್ಮಗಳು ಯಾವಾಗ ಖ್ಯಾತಿ ಹೊಂದಲಾರಂಭಿಸಿದವೋ ಆಗ ಹಿಂದೂ ಸಂಸ್ಕೃತಿ ಧರ್ಮವಾಗಿ ಜಾಗೃತಗೊಂಡಿತು. ಕ್ಷತ್ರಿಯಧರ್ಮಗಳಾಗಿ ಆರಂಭಗೊಂಡಿದ್ದ ಜೈನ ಮತ್ತು ಬೌದ್ಧಧರ್ಮಗಳಲ್ಲಿ ಬೌದ್ಧಧರ್ಮ ಕ್ರಮೇಣ ವೈಶ್ಯರನ್ನು ಹೆಚ್ಚಾಗಿ ಆಕರ್ಷಿಸುತ್ತ ಪ್ರಗತಿ ಪಡೆಯಿತು.

ಧರ್ಮರಹಿತವಾಗಿದ್ದ ಬಹುಸಂಖ್ಯಾತ ಹಿಂದೂ ಸಂಸ್ಕೃತಿಯ ಜನ ಹಿಂದೂ ರ್ಮೀಯರೆನಿಸಿದರು. ಸಂಸ್ಕೃತಿಯಿಂದ ಧರ್ಮವಾಗುವ ಪ್ರಕ್ರಿಯೆ ಧರ್ಮಗ್ರಂಥಗಳ, ದೇವಾನುದೇವತೆಗಳ, ಇತಿಹಾಸ ಪುರುಷರ, ರೀತಿನೀತಿಗಳ, ಅಧ್ಯಾತ್ಮ ರೂಪಕಗಳ ರಚನೆಗೆ ಮುನ್ನುಡಿ ಬರೆಯಿತು. ಧರ್ಮವಾಗಿ ಪರಿವರ್ತಿತಗೊಂಡ ಧರ್ಮರಹಿತರ ಸಂಸ್ಕೃತಿಯೇ ಸಹಜವಾಗಿ ಇತರೆರಡು ಧರ್ಮಗಳಿಗಿಂತ ಮೊದಲ ಧರ್ಮವೆನಿಸಿಬಿಟ್ಟಿತು!

ಇದನ್ನು ಜೈನರಾಗಲೀ, ಬೌದ್ಧರಾಗಲೀ ಅಲ್ಲಗಳೆಯಲಿಲ್ಲ. ಏಕೆಂದರೆ ಅವರೆಲ್ಲರ ಸಂಸ್ಕೃತಿ ಕೂಡಾ ಹಿಂದೂವೇ ಆಗಿದ್ದಿತು. ಹಿಂದೂ ಸಂಸ್ಕೃತಿಯ ದಾರ್ಶನಿಕರೆನಿಸಿದ್ದ ಬುದ್ಧ ಮತ್ತು ಮಹಾವೀರ ಧರ್ಮಸಂಸ್ಥಾಪಕರೆನಿಸಿಬಿಟ್ಟರು. ಪ್ರಾಥಮಿಕ ಹಂತಗಳಲ್ಲಿ ಜೈನರು ಮತ್ತು ಬೌದ್ಧರು, ಹಿಂದೂ ಆಚರಣೆಗಳೊಟ್ಟಿಗೆ ಇನ್ನೊಂದಿಷ್ಟು ಹೊಸ ಆಚರಣೆಗಳನ್ನು ಅಳವಡಿಸಿಕೊಂಡಿರುವವರೆನಿಸಿದ್ದರೇ ಹೊರತು ಅನ್ಯಧರ್ಮೀಯರೆಂದಲ್ಲ.

ಧರ್ಮ ವಿಕಾಸದಂತೆಯೇ ಧರ್ಮ ಸಂಘರ್ಷ ಸಹ ಏಕಾಏಕಿಯಾಗಿ ಉದ್ಭವಗೊಂಡದ್ದಲ್ಲ. ಇದು ಕೂಡಾ ತತ್ವ, ಆಚರಣೆ, ಆಧ್ಯಾತ್ಮಿಕ ಸೂತ್ರ, ಶಾಸ್ತ್ರಗಳು ಭಿನ್ನಾಭಿಪ್ರಾಯಗಳಾಗಿ ವಿಕಾಸಗೊಳ್ಳುತ್ತಾ, ರಾಜಕೀಯವಾಗಿ ಮೇಲುಗೈ ಸಾಧಿಸಿದವರ ಮೇಲೆ ಈರ್ಷ್ಯೆಗಳಾಗಿ ಹಲವು ಶತಮಾನಗಳಲ್ಲಿ ವಿಕಾಸಗೊಂಡ ಸಂಘರ್ಷವಾಗಿದ್ದಿತು!

ಶತಮಾನಗಳು ಉರುಳಿದಂತೆ ಆ ಧರ್ಮ ಸಂಘರ್ಷವು ಕೇವಲ ಮಹಾಕಾವ್ಯಗಳಾಗಿದ್ದ ರಾಮಾ ಯಣ, ಮಹಾಭಾರತಗಳನ್ನು ಧರ್ಮಗ್ರಂಥಗಳೆನಿಸಿಬಿಟ್ಟಿತು. ಇವುಗಳ ಐತಿಹ್ಯ, ಕಾಲ, ಸ್ಮಾರಕ, ಕಥೆ, ಉಪಕಥೆಗಳು ಮುಂದಿನ ಶತಮಾನಗಳಲ್ಲಿ ಊರ್ಜಿತಗೊಳ್ಳುತ್ತಾ ಸಾಗಿಬಂದವು. ಸಾಮಾಜಿಕವಾಗಿ ಅಂದಿನ ಜನಜೀವನದಲ್ಲಿ ಮದ್ಯ, ಮಾಂಸ ಮತ್ತು ಜೂಜುಗಳು ಸಾಮಾನ್ಯವಾಗಿದ್ದವು.

ಅಂಬೇಡ್ಕರ್ ಆರ್ಯರನ್ನು ಮಹಾನ್ ಕುಡುಕರು ಮತ್ತು ಜೂಜುಗಾರರೆನ್ನುತ್ತಾರೆ. ಆರ್ಯರು ಜೂಜಿನ ವಿವಿಧ ಆಟಗಳನ್ನು ಸೃಷ್ಟಿಸಿಕೊಂಡಿದ್ದರೆಂದು ತಮ್ಮ ‘ರಿಡಲ್ಸ್ ಇನ್ ಹಿಂದೂಯಿಸಂ’ ಪುಸ್ತಕದಲ್ಲಿ ಬರೆದಿದ್ದಾರೆ. ಒಟ್ಟಾರೆ ಅಂದಿನ ಜೀವನಶೈಲಿಯಲ್ಲಿ ಗಂಡು‌ ಹೆಣ್ಣೆನ್ನದೇ ಎಲ್ಲಾ ವರ್ಗಗಳೂ ಮದ್ಯ ಮತ್ತು ಮಾಂಸಗಳನ್ನು ಸೇವಿಸುತ್ತ ಜೂಜುಗಳಲ್ಲಿ ಕಾಲ ಕಳೆಯುತ್ತಿದ್ದ ರೆನ್ನುತ್ತಾರೆ.

ಹಾಗಾಗಿಯೇ ಮುಂದೆ ಧಾರ್ಮಿಕ ದೇವರುಗಳು ಸೃಷ್ಟಿಗೊಂಡಾಗ ಆ ದೇವರುಗಳ ಜೀವನ ದಲ್ಲಿಯೂ ಸೋಮರಸ, ಮಾಂಸ, ಜೂಜುಗಳು ಭಾಗವೇ ಆಗಿದ್ದವು. ಇದೇ ಸಾಮಾಜಿಕ ಜೀವನ ಪದ್ಧತಿ ಬುದ್ಧ, ಜೈನ, ಹಿಂದೂಗಳೆಲ್ಲರ ಜೀವನ ಪದ್ಧತಿಯಾಗಿದ್ದಿತು. ಇಂಥ ಸಾಮಾಜಿಕ ಜೀವನದ ದರ್ಪಣಚಿತ್ರವೇ ರಾಮಾಯಣ ಮತ್ತು ಮಹಾಭಾರತದಂಥ ಮಹಾಕಾವ್ಯಗಳು. ಧರ್ಮಸಂಸ್ಥಾಪಕ ರೆನಿಸಿದ ಬುದ್ಧ, ರಿಷಭನಾಥರು ಮಾನವರೇ ಆಗಿದ್ದುದರಿಂದ ಹಿಂದೂ ಧರ್ಮ ದೇವರುಗಳನ್ನು ಸೃಷ್ಟಿಸಿಕೊಂಡಾಗ ಆ ದೇವರುಗಳನ್ನು ಮದ್ಯ, ಮಾಂಸ ಸೇವಿಸುವ ಸಂಸಾರಿ ಮಾನವರ ವಿಸ್ತೃತ ರೂಪವಾಗಿಯೇ ಸೃಷ್ಟಿಸಿಕೊಂಡರೂ ಅವರಿಗೆ ವಿಶೇಷ ದೈವಿಕ ಶಕ್ತಿಯಿದ್ದಿತಷ್ಟೇ.

ಅಂದಿನ ಜನಾಂಗವು ದೇವರುಗಳಿಗೆ ಇಂಥ ವಿಶೇಷ ಶಕ್ತಿಯಿರುವಂತೆ ಏಕೆ ಕಲ್ಪಿಸಿಕೊಂಡಿದ್ದರು? ಇಂದಿನ ಜಾಗತಿಕ ಪ್ರಜಾಪ್ರಭುತ್ವದ ಸಮಸಮಾನತೆಯನ್ನು ಪ್ರತಿಪಾದಿಸುವ ಸಂಸತ್ತುಗಳ ವ್ಯವಸ್ಥೆ ಯ ಕನಸನ್ನು ಭಾರತದ ಹಿಂದೂ ಸಂಸ್ಕೃತಿಯು ಕ್ರಿಸ್ತಪೂರ್ವದ ಪ್ರಜಾಪ್ರಭುತ್ವದ ಸಂಸತ್ ರೂಪ ವನ್ನು ದೇವಲೋಕದ ರೂಪದಲ್ಲಿ ಕಂಡುಕೊಂಡಿತ್ತು ಎಂದರೆ ಆಶ್ಚರ್ಯವಾಗುವುದೇ!? ಇಂದಿನ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದ ಸಂಸತ್ ಹೇಗಿರುತ್ತದೆಂದರೆ ಅದಕ್ಕೊಂದು ಕ್ಯಾಪಿಟಲ್ ಹಿಲ ಯಾ ರಾಜಧಾನಿ ಯಾ ರಾಜನೈತಿಕ ಸಂಕೀರ್ಣ ಎಂದಿರುತ್ತದೆ.

ಅಂದು ಸಂಸತ್ ಭವನ. ಅದಕ್ಕೊಬ್ಬ ಸಭಾಧ್ಯಕ್ಷ ಯಾನೆ ಸ್ಪೀಕರ್. ಪ್ರಮುಖ ಸಮಸ್ಯೆಗಳ ಕೂಲಂ ಕಷ ಚರ್ಚೆ, ನಿರ್ಧಾರ, ನಿರ್ಧಾರದ ಅನುಕೂಲ, ಅನನುಕೂಲಗಳ ಪರಿಶೀಲನೆ, ಮಾರ್ಗೋ ಪಾಯ ಮತ್ತು ಅನುಷ್ಠಾನಗಳ ನಿರ್ಣಯಗಳ ಅಂಗೀಕರಣ. ಆಡಳಿತದ ಪ್ರಮುಖನಾಗಿ ಪ್ರಧಾನಿ ಅಥವಾ ಅಧ್ಯಕ್ಷ. ನಂತರ ಹಲವು ಇಲಾಖೆಗಳ ಮಂತ್ರಿಗಳು ಅಥವಾ ಕಾರ್ಯದರ್ಶಿಗಳು ಮತ್ತು ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಇರುತ್ತಾರೆ.

ಎಲ್ಲಾ ಅಧಿಕಾರವೂ ಕೇವಲ ಒಬ್ಬರ ಬಳಿಯಿರದೆ ಹಂಚಿಕೆಯಾಗಿ ದೇಶವನ್ನು ಮುನ್ನಡೆಸಲು ಸಹಕಾರಿಯಾಗಿರುತ್ತದೆ ಎಂದು ಸಂಕ್ಷಿಪ್ತವಾಗಿ ಹೇಳಬಹುದು. ಈಗ ಹಿಂದೂ ಸಂಸ್ಕೃತಿಯ ದೇವ ಲೋಕದ ಕಲ್ಪನೆಯನ್ನು ಊಹಿಸಿಕೊಳ್ಳಿ. ಕ್ಯಾಪಿಟಲ್ ಹಿಲ ಯಾ ರಾಜಧಾನಿ ಯಾ ರಾಜ ನೈತಿಕ ಸಂಕೀರ್ಣ ಎಂದರೆ ದೇವಲೋಕ. ಸಂಸತ್ ಭವನವು ಇಂದ್ರನ ಆಸ್ಥಾನ. ಸಭಾಧ್ಯಕ್ಷ ಯಾನೆ ಸ್ಪೀಕರ್ ಇಂದ್ರ. ಪ್ರಮುಖ ಸಮಸ್ಯೆಗಳ ಕೂಲಂಕಷ ಚರ್ಚೆ, ನಿರ್ಧಾರ, ನಿರ್ಧಾರದ ಅನುಕೂಲ, ಅನನು ಕೂಲಗಳ ಪರಿಶೀಲನೆ, ಮಾರ್ಗೋಪಾಯ ಮತ್ತು ಅನುಷ್ಠಾನಗಳ ನಿರ್ಣಯಗಳ ಅಂಗೀ ಕರಣ ಇಂದ್ರಸಭೆಯ ಕಾರ್ಯಮಾರ್ಗವಾಗಿದೆ.

ಇಲ್ಲಿ ಪ್ರಧಾನಿ ಯಾನೆ ಅಧ್ಯಕ್ಷ ಸಹ ಒಬ್ಬನೇ ಅಲ್ಲ. ಅದೂ ಅಧಿಕಾರ ವಿಕೇಂದ್ರಿಕರಣಗೊಂಡು ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಹಂಚಿಕೆಯಾಗಿದೆ. ಇಂಧನ ಮತ್ತು ಶಕ್ತಿ ಖಾತೆಗೆ ಅಗ್ನಿ, ಪವನ ಶಕ್ತಿ ಹವಾಮಾನ ಖಾತೆಗೆ ವಾಯು, ನೀರಾವರಿ ಖಾತೆಗೆ ವರುಣ, ಕೃಷಿಗೆ ಭೂಮಿ, ವಿದ್ಯೆಗೆ ಸರಸ್ವತಿ, ಹಣಕಾಸಿಗೆ ಲಕ್ಷ್ಮಿ, ಸಮಾಜ ಕಲ್ಯಾಣಕ್ಕೆ ಪಾರ್ವತಿ, ಜನನ ಮತ್ತು ಮರಣ ಖಾತೆಗೆ ಯಮ. ವಿವಿಧ ಪ್ರಾಂತ್ಯದ ಪ್ರತಿನಿಧಿಗಳಾಗಿ ಮುಕ್ಕೋಟಿ ದೇವ ದಾನವ ಋಷಿ ಮುನಿ ಗಾಂಧರ್ವರಾದಿಯಾಗಿ ಇರುವರು.

ಈ ದೇವಲೋಕದಲ್ಲಿ ಸರ್ವಸಮಾನವಾಗಿ ಮಹಿಳೆಯರು, ಕಿನ್ನರರು, ಯಕ್ಷಿಣಿಯರು, ಸಲಿಂಗಕಾಮಿ ಗಳು, ಶಾಪಗ್ರಸ್ತರಾದಿಯಾಗಿ ಎಲ್ಲಾ ವರ್ಗಗಳಿಗೂ ಸ್ಥಾನವನ್ನು ಕಲ್ಪಿಸಿಕೊಡಲಾಗಿದೆ. ಈ ವ್ಯವಸ್ಥೆ ಯಲ್ಲಿ ಒಬ್ಬರನ್ನೊಬ್ಬರು ಹದ್ದುಬಸ್ತಿನಲ್ಲಿಡಲು ನಿಯಂತ್ರಣ ಮತ್ತು ಸಮತೋಲನಗಳ ರೂಪುರೇಷೆ ಗಳಿವೆ. ಒಂದು ದೇಶವನ್ನೋ ಅಥವಾ ಇಡೀ ಭೂಮಂಡಲವನ್ನೋ ನಿಯಂತ್ರಿಸಲು ಈ ರೀತಿಯ ಒಂದು ಆಡಳಿತಾತ್ಮಕ ವ್ಯವಸ್ಥೆಯಿರಬೇಕು ಎಂಬ ಪರಿಕಲ್ಪನೆಯನ್ನು ರೂಪಿಸಿಕೊಳ್ಳುವಷ್ಟು ಹಿಂದೂ ಸಂಸ್ಕೃತಿ ಮುಂದುವರಿದಿದ್ದಿತು. ಈ ಕ್ರಿಸ್ತಪೂರ್ವ ಹಿಂದೂ ದೇವಲೋಕದ ಆಡಳಿತ ವ್ಯವಸ್ಥೆಯೇ ಇಂದಿನ ಅಮೆರಿಕದಿಂದ ಹಿಡಿದು ಭಾರತವಲ್ಲದೆ ಅನೇಕ ರಾಷ್ಟ್ರಗಳಲ್ಲಿ ಅನುಷ್ಠಾನ ದಲ್ಲಿರುವುದು!

ಈ ದೇವಾನುದೇವತೆಗಳ ಅನುಶಾಸನವೇ ಇಂದಿನ ಬಹುಪಾಲು ರಾಷ್ಟ್ರಗಳ ಸಂವಿಧಾನ! ಇಂಥ ಸವಿಸ್ತಾರ ಸ್ವರೂಪದ ಸಂಸತ್ತಿನ ಕನಸನ್ನು ಹಿಂದೂ ಸಂಸ್ಕೃತಿಯು ಕ್ರಿಸ್ತಪೂರ್ವದ ರೂಪಿಸಿತ್ತು ಎಂಬ ವಾಸ್ತವವನ್ನು ಅರಿಯದೆ ೧೨ನೇ ಶತಮಾನದ ಬಸವಣ್ಣನ ಶರಣರ ಚಾವಡಿಯೇ ಜಗತ್ತಿನ ಪ್ರಪ್ರಥಮ ಸಂಸತ್ತಿನ ಪರಿಕಲ್ಪನೆ ಎಂದು ಭಾವವೇಶದಿಂದ ನುಡಿಯುವುದು ಎಷ್ಟು ಔಚಿತ್ಯ ಪೂರ್ಣ?! ಕ್ರಿಸ್ತಪೂರ್ವ ಔನ್ಯತ್ಯ ಭಾರತವು ಕ್ರಿಸ್ತಶಕದ ಆಧುನಿಕ ಶತಶತಮಾನಗಳಲ್ಲಿಯೂ ಹೇಗೆ ಅಧೋಗತಿಯತ್ತ ತೊಟ್ಟಿಕ್ಕಿಕೊಂಡು ಸಾಗುತ್ತಿದೆ ಎಂಬುದಕ್ಕೆ ಬೆಲೆಕಟ್ಟಲಾಗದ ಬಹುಮೌಲಿಕ ನಿದರ್ಶನವೇ ಈ ವಾಸ್ತವಿಕ ನೆಲೆಗಟ್ಟಿನ ಮತ್ತು ಭಾವಾವೇಶದ ನಡುವಿನ ಅಂತರ!

ಇಡೀ ವಿಶ್ವವು ಪಾತಾಳದಿಂದ ಮುಗಿಲೆತ್ತರಕ್ಕೆ ಏರುತ್ತಿದ್ದರೆ, ಭಾರತ ಮುಗಿಲಿನಿಂದ ಪಾತಾಳಕ್ಕೆ ಇಳಿಯುತ್ತಿದೆ. ಇದಕ್ಕೆ ಅವಧಿ ಮೀರಿ ಸಮಾಧಿಯಲ್ಲಿರುವ ಸಿದ್ಧಾಂತಗಳ ಬುದ್ಧಿಜೀವಿಗಳು ಹಳ್ಳ ತೋಡಿ ತೋಡಿ ಪಾತಾಳದೆಡೆ ಹರಿಸುತ್ತಿದ್ದಾರೆ, ಅಷ್ಟೇ.

(ಲೇಖಕರು ಶಿಕಾಗೊ ನಿವಾಸಿ ಹಾಗೂ ಸಾಹಿತಿ)