ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

R T Vittalmurthy Column: ಬಿಜೆಪಿ ಭಿನ್ನರಿಗೆ ಚುನಾವಣೆಯ ಕನಸು ?

ಕರ್ನಾಟಕದ ರಾಜಕೀಯ ಬೆಳವಣಿಗೆಗಳು ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದನ್ನು ಅನಿವಾರ್ಯವಾಗಿಸಲಿವೆ. ಹೀಗಾಗಿ ರಾಜ್ಯ ಬಿಜೆಪಿಯ ನಾಯಕತ್ವ ಹಿರಿಯ ನಾಯಕರಿಗೆ ದಕ್ಕಬೇಕು. ಕಾರಣ? ಹಾಲಿ ಅಧ್ಯಕ್ಷ ವಿಜಯೇಂದ್ರ ಅವರ ನಾಯಕತ್ವದಲ್ಲಿ ಬಹು ತೇಕರು ನಂಬಿಕೆ ಕಳೆದು ಕೊಂಡಿದ್ದಾರೆ

R T Vittalmurthy Column: ಬಿಜೆಪಿ ಭಿನ್ನರಿಗೆ ಚುನಾವಣೆಯ ಕನಸು ?

ಅಂಕಣಕಾರ ಆರ್‌.ಟಿ.ವಿಠ್ಠಲಮೂರ್ತಿ

Profile Ashok Nayak Jan 27, 2025 7:36 AM

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಬಿಜೆಪಿಯ ಹಿರಿಯ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ನಾಯ ಕರು ಕಳೆದ ವಾರ ದಿಲ್ಲಿಗೆ ಹೋಗಿದ್ದಾರೆ. ಹೀಗೆ ಹೋದವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ ಅವರ ಬಳಿ ಗಂಭೀರ ವಿಷಯವೊಂದನ್ನು ಪ್ರಸ್ತಾಪಿಸಿದ್ದಾರೆ.

ಅವರ ಪ್ರಕಾರ, ಕರ್ನಾಟಕದ ರಾಜಕೀಯ ಬೆಳವಣಿಗೆಗಳು ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದನ್ನು ಅನಿವಾರ್ಯವಾಗಿಸಲಿವೆ. ಹೀಗಾಗಿ ರಾಜ್ಯ ಬಿಜೆಪಿಯ ನಾಯಕತ್ವ ಹಿರಿಯ ನಾಯಕರಿಗೆ ದಕ್ಕಬೇಕು. ಕಾರಣ? ಹಾಲಿ ಅಧ್ಯಕ್ಷ ವಿಜಯೇಂದ್ರ ಅವರ ನಾಯಕತ್ವದಲ್ಲಿ ಬಹು ತೇಕರು ನಂಬಿಕೆ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: Hari Paraak Column: ದಕ್ಷಿಣ ಭಾರತದ ಹೌಸ್‌ ವೈಫ್‌ - ಸೌಟ್‌ ಇಂಡಿಯನ್

ಹೀಗಾಗಿ ಅವರನ್ನು ತಕ್ಷಣ ಕೆಳಗಿಳಿಸಿ ಬೇರೆಯವರನ್ನು ನೇಮಿಸಬೇಕು ಎಂಬುದು ಯತ್ನಾಳ್ ಗ್ಯಾಂಗಿನ ವಾದ. ಅಂದ ಹಾಗೆ, ಪಕ್ಷಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಬದಲಿಸಬೇಕು ಎಂಬ ಯತ್ನಾಳ್ ಗ್ಯಾಂಗಿನ ವಾದ ಹೊಸತೇನಲ್ಲ. ಆದರೆ ಈ ಸಲ ನಡ್ಡಾ ಅವರನ್ನು ಭೇಟಿ ಮಾಡಿ ದ ಈ ಗ್ಯಾಂಗು ವಿಜಯೇಂದ್ರ ಅವರನ್ನು ಯಾವ ಕಾರಣಕ್ಕಾಗಿ ಬದಲಿಸಬೇಕು ಅಂತ ಹೇಳಿರುವುದು ವಿಶೇಷ.

“ಸರ್, ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಬದಲು, ಮುಂದಿನ ವಿಧಾನಸಭೆ ಚುನಾವಣೆ ಹತ್ತಿರವಾಗುವ ತನಕ ಬೇರೊಬ್ಬರನ್ನು ನೇಮಕ ಮಾಡಿ. ಇದನ್ನು ನಾವು ನಿಮಗೇಕೆ ಹೇಳುತ್ತಿದ್ದೇವೆ ಎಂದರೆ ಕರ್ನಾಟಕದ ರಾಜಕಾರಣ ಅಂಥ ಸಂಕ್ರಮಣ ಸ್ಥಿತಿಯಲ್ಲಿದೆ" ಅಂತ ಈ ಗ್ಯಾಂಗು ಹೇಳತೊಡಗಿದಾಗ ನಡ್ಡಾ ಕುತೂಹಲದಿಂದ ಕಿವಿ ಅರಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತು ಮುಂದುವರಿಸಿದ ಯತ್ನಾಳ್ ಮತ್ತಿತರ ನಾಯಕರು, “ಸರ್, ಇವತ್ತಿನ ಸ್ಥಿತಿ ನೋಡಿದರೆ 2026ರ ಮಾರ್ಚ್ ವೇಳೆಗೆ ಕರ್ನಾಟಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಬಹುದು. ರಾಜ್ಯ ಕಾಂಗ್ರೆಸ್‌ನ ಬೆಳವಣಿಗೆಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ನಮಗಿರುವ ಮಾಹಿತಿಯ ಪ್ರಕಾರ, 2025ರ ನವೆಂಬರ್ ಹೊತ್ತಿಗೆ ಅಧಿಕಾರ ಹಂಚಿಕೆಯ ಮಾತು ಕಾಂಗ್ರೆಸ್ ಪಕ್ಷವನ್ನು ತಲ್ಲಣಗೊಳಿಸಲಿದೆ. ಯಾಕೆಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರ ಹಂಚಿಕೆ ಮಾಡಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ.

ಈ ಕುರಿತಂತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣು ಗೋಪಾಲ, ಸುರ್ಜೇವಾಲ ಅವರ ಸಮ್ಮುಖದ ಒಪ್ಪಂದ ಪತ್ರ ಸಿದ್ಧವಾಗಿದೆ. ಅದರ ಪ್ರಕಾರ, ಈ ವರ್ಷದ ನವೆಂಬರ್ ಹೊತ್ತಿಗೆ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಬೇಕು. ಆದರೆ ಈಗಿನ ಬೆಳವಣಿಗೆಗಳನ್ನು ನೋಡಿದರೆ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟುಕೊಡುವುದಿಲ್ಲ.

ಯಾಕೆಂದರೆ ಅವರ ಬೆಂಬಲಿಗ ಸಚಿವರ‍್ಯಾರೂ ಡಿ.ಕೆ.ಶಿವಕುಮಾರ್ ಸಿಎಂ ಆಗುವುದನ್ನು ಬಯಸು ವುದಿಲ್ಲ. ಕಾರಣ? ಈಗ ಉಪಮುಖ್ಯಮಂತ್ರಿ ಆಗಿರುವಾಗಲೇ ಅವರು ತಮ್ಮನ್ನು ಸೈಡ್‌ಲೈನ್ ಮಾಡ ಲು ಯತ್ನಿಸುತ್ತಿದ್ದಾರೆ. ಇಂಥವರು ನಾಳೆ ಸಿಎಂ ಆದರೆ ಸುಮ್ಮನಿರುತ್ತಾರಾ? ನೋ ಚಾ. ಹೀಗಾಗಿ ನೀವು ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಬೇಡಿ ಎಂಬುದು ಈ ಬೆಂಬಲಿಗ ಸಚಿವರ ವಾದ.

ಅದರಲ್ಲೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಂತೂ, ‘ನೀವು ಅಧಿಕಾರ ಬಿಟ್ಟುಕೊಡುವುದೇ ಆದರೆ ನಾವು ಹೇಳಿದವರು ಸಿಎಂ ಆಗಬೇಕು. ಇಲ್ಲವೇ ನಾವು ಐವತ್ತರಷ್ಟು ಶಾಸಕರು ಪಕ್ಷ ತೊರೆಯಲು ಸಿದ್ಧರಿದ್ದೇವೆ’ ಅಂತ ಸಿದ್ದರಾಮಯ್ಯ ಅವರಿಗೆ ಹೇಳಿದ್ದಾರೆ. ಹೀಗೆ ಸಿದ್ದರಾಮಯ್ಯ ಅವರ ಕ್ಯಾಂಪಿನಲ್ಲಿ ಇಂಥ ಬೆಳವಣಿಗೆ ನಡೆದಿದ್ದರೆ, ಅತ್ತ ಡಿ.ಕೆ.ಶಿವಕುಮಾರ್ ಅವರ ಕ್ಯಾಂಪಿನಲ್ಲೂ ಹಲವು ಬೆಳವಣಿಗೆಗಳು ನಡೆದಿವೆ.

ಅದರ ಪ್ರಕಾರ, ನವೆಂಬರ್ ಹೊತ್ತಿಗೆ ಸಹಜವಾಗಿಯೇ ಡಿ.ಕೆ.ಶಿವಕುಮಾರ್ ಸಿಎಂ ಹುದ್ದೆಗೆ ‘ಕ್ಲೇಮ್’ ಮಾಡುತ್ತಾರೆ. ಎಷ್ಟೇ ಆದರೂ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ದೊಡ್ಡ ಮಟ್ಟದಲ್ಲಿ ಇನ್‌ವೆ ಮಾಡಿದವರು ಅವರು. ಆದ್ದರಿಂದ ಅವರು ಕ್ಲೇಮ್ ಮಾಡಿದಾಗ ಹೈಕಮಾಂಡ್ ನಾಯಕರು ಇಲ್ಲ ಅನ್ನುವುದು ಕಷ್ಟ. ಹೀಗಾಗಿ ಅವರು ಸಿದ್ದರಾಮಯ್ಯ ಅವರಿಗೆ ಅಧಿಕಾರ ಬಿಟ್ಟುಕೊಡಲು ಹೇಳುತ್ತಾರೆ. ಅದರೆ ಅದನ್ನು ಸಿದ್ದರಾಮಯ್ಯ ಒಪ್ಪದೆ ಹೋದಾಗ ಸಂಘರ್ಷ ಪ್ರಾರಂಭವಾಗುತ್ತದೆ ಮತ್ತು ಈ ಸಂಘರ್ಷ ಸರಕಾರದ ಪತನಕ್ಕೆ ಕಾರಣವಾಗಲಿದೆಯಲ್ಲದೆ, ಕರ್ನಾಟಕ ಮಧ್ಯಂತರ ಚುನಾವಣೆಗೆ ಅಣಿಯಾಗುವುದು ಅನಿವಾರ್ಯವಾಗುತ್ತದೆ.

ನಾವು ಇದನ್ನೇಕೆ ಹೇಳುತ್ತಿದ್ದೇವೆ ಎಂದರೆ ಕಾಂಗ್ರೆಸ್ ಸರಕಾರ ಪತನವಾದಾಗ ಪರಿಸ್ಥಿತಿಯನ್ನು ಎನ್‌ಕ್ಯಾಷ್ ಮಾಡಿಕೊಳ್ಳುವ ಶಕ್ತಿ ಬಿಜೆಪಿಗಿರಬೇಕು. ಅದರೆ ಆ ಸಂದರ್ಭದಲ್ಲಿ ವಿಜಯೇಂದ್ರ ಅಧ್ಯಕ್ಷರಾಗಿದ್ದರೆ ಅದು ಕಷ್ಟ. ಯಾಕೆಂದರೆ ಅವರ ನಾಯಕತ್ವದಡಿ ಹೋರಾಡಲು ಬಹುತೇಕ ನಾಯಕರು ಸಿದ್ಧರಿಲ್ಲ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸ ಬೇಕು" ಅಂತ ಒತ್ತಾಯಿಸಿದರಂತೆ.

ಅದಕ್ಕೆ ನಡ್ಡಾ ಅವರು, “ನೋಡೋಣ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಅಂತ ತೀರ್ಮಾನಿಸಿದ ಮೇಲೆ ಅದನ್ನು ತಡೆಯುವುದು ಕಷ್ಟ ಅನ್ನಿಸುತ್ತದೆ" ಅಂತ ಹೇಳಿದರಂತೆ. ಗೌಡ್ರ ಮನೆಯಲ್ಲಿ ನಡೆದಿದ್ದೇನು? ಹೀಗೆ ಯತ್ನಾಳ್ ಆಂಡ್ ಟೀಮು ದಿಲ್ಲಿಗೆ ಹೋಗಿ ಬಂದ ಮೇಲೆ ಜನವರಿ 22ರ ಬುಧವಾರ ಮಾಜಿ ಸಿಎಂ ಡಿ.ವಿ.ಸದಾನಂದಗೌಡರ ಮನೆಯಲ್ಲಿ ಒಂದು ಸಭೆ ನಡೆದಿದೆ. ಈ ಸಭೆಯಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಡಾ.ಅಶ್ವತ್ಥ ನಾರಾಯಣ, ಸಿ.ಟಿ.ರವಿ, ಡಾ.ಸುಧಾಕರ್, ದಾಸರಹಳ್ಳಿ ಮುನಿರಾಜು ಮತ್ತಿತರರು ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ನ್ಯಾಯಯುತವಾಗಿ ನಡೆಯಲು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಇವತ್ತು ಬಿಜೆಪಿಯ ಜಿಧ್ಯಕ್ಷರಾಗಿರುವ ಬಹುತೇಕರು ವಿಜಯೇಂದ್ರ ಅವರ ಒತ್ತಾಸೆಯಿಂದ ನೇಮಕಗೊಂಡವರು. ಹಲವು ಮಂಡಲ ಅಧ್ಯಕ್ಷರ ಕತೆಯೂ ಇದೇ. ನಾಳೆ ಚುನಾವಣೆಯಲ್ಲಿ ಇವರೇ ಮತದಾರರಾದರೆ ಅವರು ವಿಜಯೇಂದ್ರ ಅವರ ಪರವಾಗಿ ನಿಲ್ಲುತ್ತಾರೆ. ಪರಿಸ್ಥಿತಿ ಹೀಗಿರು ವಾಗ ಚುನಾವಣೆ ನಡೆದರೆ ಏನಾಗುತ್ತದೆ? ವಿಜಯೇಂದ್ರ ಗೆದ್ದೇ ಗೆಲ್ಲುತ್ತಾರೆ. ಹೀಗೆ ಪೂರ್ವ ನಿರ್ಧರಿತ ಎಪಿಸೋಡು ನಡೆಯುವುದಾದರೆ ಅದರಲ್ಲಿ ಅರ್ಥವೇ ಇಲ್ಲ.

ಹೀಗಾಗಿ ಚುನಾವಣೆ ನಡೆಯುವುದಾದರೆ ಮೊದಲು ಇಂಥ ಮತದಾರರನ್ನು ಕಟ್ ಮಾಡಬೇಕು. ಅರ್ಥಾತ್, ಈಗ ಜಿಧ್ಯಕ್ಷರಾಗಿ ನೇಮಕಗೊಂಡವರ ಪೈಕಿ ಬೆಂಗಳೂರಿನ ಮೂವರು ಅಧ್ಯಕ್ಷರು ಸೇರಿದಂತೆ ಹದಿನಾಲ್ಕು ಜಿಧ್ಯಕ್ಷರನ್ನು ಬದಲಿಸಬೇಕು. ಅಂದ ಹಾಗೆ, ಜಿಧ್ಯಕ್ಷರು, ಮಂಡಲ ಅಧ್ಯಕ್ಷರು ಅಂತಲ್ಲ. ಪಕ್ಷದ ಪದಾಧಿಕಾರಿಗಳ ನೇಮಕಾತಿ ವಿಷಯದಲ್ಲಿ ನಡೆದಿರುವುದೂ ಇದೇ. ಹೀಗೆ ವಿಜಯೇಂದ್ರ ಅವರ ಆಪ್ತರೇ ಹೆಚ್ಚಿರುವ ಪದಾಧಿಕಾರಿಗಳ ಪಟ್ಟಿಯನ್ನು ಬದಲಿಸಿ ಅಂತ ಪಕ್ಷದ ಬಹುತೇಕ ಹಿರಿಯ ನಾಯಕರು ಒತ್ತಾಯಿಸುತ್ತಲೇ ಇದ್ದಾರೆ.

ಅಷ್ಟೇ ಅಲ್ಲ, ಇದರ ಪರಿಣಾಮವಾಗಿ ನಾಯಕರಲ್ಲಿ ವೈಮನಸ್ಸು ಬೆಳೆಯುತ್ತಲೇ ಇದೆ. ಹೀಗಾಗಿ ಇದನ್ನೆಲ್ಲ ಸರಿಪಡಿಸದೆ ಮುಂದುವರಿದರೆ ಪಕ್ಷದಲ್ಲಿ ಒಗ್ಗಟ್ಟು ಬರುವುದು ಹೇಗೆ? ಎಲ್ಲರೂ ಒಗ್ಗೂಡಿ ಒಮ್ಮತದಿಂದ ದುಡಿಯುವುದು ಹೇಗೆ? ಅಂತ ಮಾತನಾಡಿಕೊಂಡ ಈ ನಾಯಕರು ಅಂತಿಮವಾಗಿ ಸಭೆಯ ಸಂದೇಶವನ್ನು ವರಿಷ್ಠರಿಗೆ ತಲುಪಿಸಲು ನಿರ್ಧರಿಸಿದ್ದಾರೆ. ಕುತೂಹಲದ ಸಂಗತಿ ಎಂದರೆ ಈ ಸಭೆಯಲ್ಲಿ ಮಾತನಾಡಿದ ಮಾಜಿ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಮತ್ತು ಸಂಸದ ಡಾ.ಸುಧಾ ಕರ್ ಅವರು, “ವರಿಷ್ಠರು ಬಯಸಿದರೆ ರಾಜ್ಯಾಧ್ಯಕ್ಷ ಹುzಯನ್ನು ನಿಭಾಯಿಸಲು ನಾವು ರೆಡಿ" ಅಂದಿದ್ದಾರಂತೆ.

ಬೊಮ್ಮಾಯಿ, ಅಶೋಕ್ ರೆಬೆಲ್ ಆಗಿದ್ದೇಕೆ? ಇನ್ನು ಸದಾನಂದಗೌಡರ ಮನೆಯಲ್ಲಿ ನಡೆದ ಸಭೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಹೋದ ಬೆಳವ ಣಿಗೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಯಾಕೆಂದರೆ ಇವರಿಬ್ಬರು ಇತ್ತೀಚಿನವರೆಗೆ ಯಡಿಯೂ ರಪ್ಪ ಅವರ ಜತೆಗಿದ್ದವರು. ಅದರೆ ಈಗ ಇದ್ದಕ್ಕಿದ್ದಂತೆ ವಿರೋಧಿ ಪಾಳಯದಲ್ಲಿ ಗುರುತಿಸಿ ಕೊಂಡಿದ್ದಾರೆ.

ಈ ಪೈಕಿ ಬೊಮ್ಮಾಯಿ ಅವರು ಇತ್ತೀಚೆಗೆ ನಡೆದ ಉಪಚುನಾವಣೆಯ ನಂತರ ಯಡಿಯೂರಪ್ಪ-ವಿಜಯೇಂದ್ರ ವಿರುದ್ಧ ತಿರುಗಿ ಬಿದ್ದಿzರೆ. ಕಾರಣ? ಶಿಗ್ಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ತಮ್ಮ ಪುತ್ರ ಭರತ್ ಬೊಮ್ಮಾಯಿ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಅವರೇ ಕಾರಣ ಎಂಬುದು ಬೊಮ್ಮಾಯಿ ಸಿಟ್ಟು. ಈ ಇಬ್ಬರು ಸೇರಿ ಕ್ಷೇತ್ರದ ಲಿಂಗಾಯತ ಮತ ಬ್ಯಾಂಕನ್ನು ಒಡೆದರು. ಆ ಮೂಲಕ ಕಾಂಗ್ರೆಸ್ ಗೆಲುವಿಗೆ ಕಾರಣರಾದರು ಎಂಬುದು ಬೊಮ್ಮಾಯಿ ಕೋಪ. ಹೀಗಾಗಿ ಅವರು ವಿರೋಧಿ ಪಾಳಯದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಅಶೋಕ್ ಅಸಮಾಧಾನಕ್ಕೆ ಅವರ ಕಿವಿ ತಲುಪಿದ ಒಂದು ಮೆಸೇಜು ಕಾರಣ. ಅದರ ಪ್ರಕಾರ ಇತ್ತೀಚೆಗೆ ದಿಲ್ಲಿಗೆ ಹೋಗಿದ್ದ ವಿಜಯೇಂದ್ರ ಅವರು “ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕ ರಾಗಿ ಅಶೋಕ್ ಅವರ ಪರ್ಫಾರ್ಮೆನ್ಸ್ ಡಲ್ಲು" ಅಂದಿದ್ದರಂತೆ. ಹೀಗೆ ವಿಜಯೇಂದ್ರ ತಮ್ಮ ಬಗ್ಗೆ ವರಿಷ್ಠರಿಗೆ ಕೊಟ್ಟ ರಿಪೋರ್ಟಿನ ವಿವರ ಮರುದಿನವೇ ಅಶೋಕ್ ಕಿವಿಗೆ ಬಿದ್ದಿದೆ. ‌

ಪರಿಣಾಮ? ಕೆರಳಿದ ಅಶೋಕ್ ಕೂಡಾ ಈಗ ವಿಜಯೇಂದ್ರ ವಿರೋಧಿ ಪಾಳಯದಲ್ಲಿ ಕಾಣಿಸಿ ಕೊಂಡಿದ್ದಾರೆ. ಅಗರ್ವಾಲ್‌ಗೇ ಗುರ್ರೆಂದ ಕಟ್ಟಾ ಟೀಮು ಈ ಮಧ್ಯೆ ರಾಜ್ಯ ಬಿಜೆಪಿಯ ಒಳಬೇಗುದಿ ಯನ್ನು ಅರಿಯಲು ಪಕ್ಷದ ಉಸ್ತುವಾರಿ ರಾಧಾಮೋಹನದಾಸ್ ಅಗರ್ವಾಲ್ ಕಳೆದ ವಾರ ಸಭೆ ನಡೆಸಿದರಲ್ಲ? ಈ ಸಭೆಯ ನಂತರ ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರೇಣುಕಾ ಚಾರ್ಯ ಮತ್ತಿತರರು ಅಗರ್ವಾಲ್ ಅವರನ್ನು ಅಮರಿಕೊಂಡಿದ್ದಾರೆ.

“ಅಲ್ಲ ಸರ್, ಪಕ್ಷದಲ್ಲಿ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿವೆ. ಆದರೆ ಈ ಕುರಿತು ಚರ್ಚಿಸಲು ನೀವು ನಮ್ಮೊಂದಿಗೆ ಏಕೆ ಸಭೆ ಮಾಡುತ್ತಿಲ್ಲ?" ಅಂತ ಪ್ರಶ್ನಿಸಿದ್ದಾರೆ. ಆಗ ಉತ್ತರಿಸಿದ ಅಗರ್ವಾಲ, “ಅರೇ, ಮಾತೆತ್ತಿದರೆ ನಿಮ್ಮನ್ನೆಲ್ಲ ಕರೆಯುತ್ತಾ ಕೂರಲು ಆಗುತ್ತದಾ?ನೀವೇನು ಹಾಲಿ ಎಮ್ಮೆಗಳಾ? ಎಮ್ಮೆಲ್ಸಿಗಳಾ?" ಎಂದು ಕೇಳಿದ್ದಾರೆ.

ಆಗೆಲ್ಲ ಉರಿದುಬಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತಿತರರು, “ನಾವು ಹಾಲಿ ಎಮ್ಮೆಗಳು, ಎಮ್ಮೆ ಲ್ಸಿಗಳು ಅಲ್ಲ ಅಂದ್ರೆ ರಾಜಕೀಯವಾಗಿ ಶಕ್ತಿ ಇಲ್ಲದವರು ಅಂತ ಅರ್ಥಾನಾ? ಅಥವಾ ಇರುವ ಅರವತ್ತು ಪ್ಲಸ್ ಶಾಸಕರನ್ನು ಕಟ್ಟಿಕೊಂಡು ರಾಜ್ಯದಲ್ಲಿ ಪಕ್ಷ ಕಟ್ಟಬಹುದು ಅಂತೇನಾದರೂ ನೀವು ತೀರ್ಮಾನಿಸಿದ್ದೀರಾ?" ಅಂತ ಅಬ್ಬರಿಸಿದ್ದಾರೆ.

ಅಷ್ಟೇ ಅಲ್ಲ, ಮಾತು ಮುಂದುವರಿಸಿ “ನಾವೂ ಮೂರು-ನಾಲ್ಕು ಬಾರಿ ಶಾಸಕರಾದವರು. ಸಚಿವ ರಾಗಿ ಕೆಲಸ ಮಾಡಿದವರು. ರಾಜ್ಯದಲ್ಲಿ ಪಕ್ಷಕ್ಕೆ ಭದ್ರನೆಲೆ ಅಂತಿದ್ದರೆ ಅದರಲ್ಲಿ ನಮ್ಮ ಕೊಡುಗೆ ಯೂ ಇದೆ. ಇದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡು ಮಾತನಾಡಿ. ಈಗ ನೀವು ಹೇಳುತ್ತಿರುವುದು ಹೇಗಿದೆ ಎಂದರೆ ‘ನಿಮ್ಮಿಂದೇನು ಪ್ರಯೋಜನ’ ಅನ್ನುವಂತಿದೆ.

ಆದರೆ ಇವೆಲ್ಲ ನಡೆಯುವುದಿಲ್ಲ. ಇನ್ನು ಮೇಲೆ ರಾಜ್ಯ ಬಿಜೆಪಿಯ ಬೆಳವಣಿಗೆಗಳೇನೇ ಇದ್ದರೂ ನಮ್ಮನ್ನು ಕರೆಸಿ ಮಾತನಾಡಬೇಕು" ಅಂತ ತಾಕೀತು ಮಾಡಿದ್ದಾರೆ. ಯಾವಾಗ ಹಿರಿಯ ನಾಯಕರ ದಂಡು ಹೀಗೆ ಗುಟುರು ಹಾಕತೊಡಗಿತೋ, ಅಗ ರಾಧಾಮೋಹನದಾಸ್ ಅಗರ್ವಾಲ್ ಬೆಚ್ಚಿ ಬಿದ್ದಿದ್ದಾರೆ.

ಅಷ್ಟೇ ಅಲ್ಲ, ಕುಳಿತ ಜಾಗದಿಂದ ಮೇಲೆದ್ದು ಹೊರಡಲು ಅಣಿಯಾಗಿದ್ದಾರೆ. ಅಷ್ಟಾದರೂ ಪಟ್ಟು ಬಿಡದ ಕಟ್ಟಾ ಮತ್ತಿತರರು, “ಇಷ್ಟು ದಿನದಿಂದ ಯತ್ನಾಳ್ ಮತ್ತಿತರರು ರಾಜ್ಯ ನಾಯಕತ್ವದ ವಿರುದ್ಧ ಮಾತನಾಡುತ್ತಲೇ ಇದ್ದಾರೆ. ಯಾಕೆ ಅವರ ಮೇಲೆ ಕ್ರಮ ಕೈಗೊಂಡಿಲ್ಲ" ಅಂತ ಕೇಳಿದ್ದಾರೆ. ಆಗ ಅಗರ್ವಾಲ್ ಅವರು, “ಯತ್ನಾಳ್ ಪಕ್ಷದ ಹಿರಿಯ ನಾಯಕರು. ಹೀಗಾಗಿ ತಕ್ಷಣ ಅವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ" ಅಂತ ಹೇಳಿ ರಪಕ್ಕನೆ ಪಕ್ಕದಲ್ಲಿದ್ದ ರೂಮು ಸೇರಿಕೊಂಡಿದ್ದಾರೆ.