ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Gururaj Gantihole Column: ಗ್ಯಾರಂಟಿ ಭರಾಟೆಯಲ್ಲಿ ಗ್ರಾಮಾಡಳಿತ ಮರೆತ ಸರಕಾರ

ಗ್ರಾಮ ಲೆಕ್ಕಿಗ (Village Accountant) ಎಂದು ಮುಂದು ವರಿಸಿ, ಗ್ರಾಮಗಳ ಭೂದಾಖಲೆ ಸಂಗ್ರಹ, ಕಂದಾಯ ಸಂಗ್ರಹ, ಬೆಳೆ, ನೀರಾವರಿ ಬೆಳೆಗಳ ಭಾಗಾಂಶ ವಸೂಲಿ, ಬಾಕಿ ವಸೂಲಿ, ಹೆಚ್ಚುವರಿ ತೆರಿಗೆ ಸಂಗ್ರಹ ಮತ್ತು ಜಮೀನು ಗಳ ವಿವಾದಗಳನ್ನು ಬಗೆಹರಿಸುವ ಕೆಲಸ ಸೇರಿದಂತೆ ಸಮಸ್ತ ಮಾಹಿತಿಗಳನ್ನು ತಹಶೀಲ್ದಾರ ಮೂಲಕ ಅಂದಿನ ಬ್ರಿಟಿಷ್ ಸರ್ಕಾರಿ ವ್ಯವಸ್ಥೆಗೆ ತಲುಪಿಸುವ ಜವಾಬ್ದಾರಿ ಈ ತಲಾಟಿಗಳದಾಗಿತ್ತು.

ಗ್ಯಾರಂಟಿ ಭರಾಟೆಯಲ್ಲಿ ಗ್ರಾಮಾಡಳಿತ ಮರೆತ ಸರಕಾರ

Profile Ashok Nayak Feb 20, 2025 9:40 AM

ಗಂಟಾಘೋಷ

ಗುರುರಾಜ್‌ ಗಂಟಿಹೊಳೆ

ಯಾವುದೇ ಸರಕಾರವಾಗಿರಲಿ ತಳಹಂತದಲ್ಲಿ ಯಾವ ರೀತಿ ಕಾರ್ಯನಿರ್ವಹಣೆ ನಡೆಯು ತ್ತಿದೆ ಮತ್ತು ಸರಕಾರದ ಯೋಜನೆ ಸಾರ್ವಜನಿಕರ ಆಶೋತ್ತರಗಳಿಗೆ ತಳಮಟ್ಟದ ಅಧಿಕಾರಿ ಗಳ ಸ್ಪಂದನೆ ಹೇಗಿರಲಿದೆ ಎಂಬುದನ್ನು ಸ್ಪಷ್ಟವಾಗಿ ಅರಿತು ಅದರಂತೆ ಅವರಿಗೆ ಸೂಕ್ತ ಸೌಲಭ್ಯ ಒದಗಿಸುವ ಕೆಲಸವನ್ನು ಸರಕಾರ ಮಾಡಲೇಬೇಕಾಗುತ್ತದೆ. ಇಲ್ಲವಾದರೆ ಗ್ರಾಮ ಲೆಕ್ಕಿಗರು/ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದ ಕಳೆದ ಹಲವು ತಿಂಗಳುಗಳಿಂದ ರಾಜ್ಯದಲ್ಲಿ ಎದುರಾಗಿರುವ ಸಮಸ್ಯೆ ಇಷ್ಟು ತೀವ್ರವಾಗುತ್ತಿರಲಿಲ್ಲ. ಕನಿಷ್ಠ ಸೌಲಭ್ಯವು ಇಲ್ಲದೆ ಕೆಳಹಂತದ ಅಧಿಕಾರಿಗಳು ಕಾರ್ಯನಿರ್ವಹಣೆ ಮಾಡಬೇಕು ಎಂದರೆ ಅತಿಕಷ್ಟ. ಯೋಜನೆಗೆ, ಉಚಿತ ಘೋಷಣೆಗಳ ಅನುಷ್ಠಾನಕ್ಕಾದರೂ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು.

ಆಧುನಿಕಯುಗದಲ್ಲಿ ಇಂಟರ್ನೆಟ್ ನೀಡುವುದು ಸರಕಾರಕ್ಕೆ ಕಷ್ಟವಾದರೆ ಇನ್ನೇನು ನೀಡಲು ಸಾಧ್ಯ? ಶೇರ್ಷಾ ಸೂರಿಯ ಕಾಲದಲ್ಲಿ ‘ಪಟ್ವಾರಿ ಪದ್ಧತಿ’ ಯನ್ನು ಪರಿಚಯಿಸಿ, ಭೂ ದಾಖಲೆಗಳ ಸಂಗ್ರಹ, ತೆರಿಗೆ ವಸೂಲಿ, ಹಳ್ಳಿ ಸಮುದಾಯಗಳ ಒಟ್ಟು ಮಾಹಿತಿ, ಜವಾಬ್ದಾರಿ ನಿಭಾಯಿಸಲು ಒಬ್ಬರನ್ನು ನೇಮಿಸಲಾಗುತ್ತಿತ್ತು.

ಇದನ್ನೂ ಓದಿ: Gururaj Gantihole Column: ದುಡಿಮೆಯೇ ಘನತೆ ಎಂದು ಸಾರುವ ಕಾಲೇಜು

ಇವರನ್ನು ಪಟ್ವಾರಿ, ಲೇಖಪಾಲ, ಕರ್ಮಚಾರಿ, ಕನುಂಗೋ, ತಲಾಟಿ, ಗ್ರಾಮ ಲೆಕ್ಕಿಗ ಎಂಬಿ ತ್ಯಾದಿ ಹೆಸರುಗಳಿಂದ ಕರೆಯಲಾಗುತ್ತಿತ್ತು. ಬ್ರಿಟಿಷರು ಬಂದ ಮೇಲೆ ಇನ್ನೂ ವ್ಯವಸ್ಥಿತ ವಾಗಿ ಮುಂದುವರೆಯಿತು. ಗ್ರಾಮ ಲೆಕ್ಕಿಗ (Village Accountant) ಎಂದು ಮುಂದು ವರಿಸಿ, ಗ್ರಾಮಗಳ ಭೂದಾಖಲೆ ಸಂಗ್ರಹ, ಕಂದಾಯ ಸಂಗ್ರಹ, ಬೆಳೆ, ನೀರಾವರಿ ಬೆಳೆಗಳ ಭಾಗಾಂಶ ವಸೂಲಿ, ಬಾಕಿ ವಸೂಲಿ, ಹೆಚ್ಚುವರಿ ತೆರಿಗೆ ಸಂಗ್ರಹ ಮತ್ತು ಜಮೀನು ಗಳ ವಿವಾದಗಳನ್ನು ಬಗೆಹರಿಸುವ ಕೆಲಸ ಸೇರಿದಂತೆ ಸಮಸ್ತ ಮಾಹಿತಿಗಳನ್ನು ತಹಶೀಲ್ದಾರ ಮೂಲಕ ಅಂದಿನ ಬ್ರಿಟಿಷ್ ಸರ್ಕಾರಿ ವ್ಯವಸ್ಥೆಗೆ ತಲುಪಿಸುವ ಜವಾಬ್ದಾರಿ ಈ ತಲಾಟಿಗಳದಾಗಿತ್ತು.

ಇದು, ಸ್ವಾತಂತ್ರ್ಯ ನಂತರವೂ ಮುಂದುವರೆದುಕೊಂಡು ಬಂದು ಪ್ರಸ್ತುತ ಕಂದಾಯ ಇಲಾ ಖೆಯ ಅಡಿಯಲ್ಲಿ ತಲಾಟಿ, ಗ್ರಾಮ ಲೆಕ್ಕಿಗ ಹುದ್ದೆಗಳು ಕಾರ್ಯತತ್ಪರವಾಗಿವೆ. ನಂತರ, 2022ರಲ್ಲಿ ಕರ್ನಾಟಕ ಸರ್ಕಾರವು ಈ ಹುದ್ದೆಯನ್ನು ಗ್ರಾಮ ಆಡಳಿತಾಧಿಕಾರಿ (VAO) ಎಂದು ಬದಲಾಯಿಸಿತು.

ಹುದ್ದೆಯ ಹೆಸರು ಬದಲಾಯಿಸಿದ್ದು ಬಿಟ್ಟರೆ, ಈ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವವರ ಬದುಕಿನಲ್ಲಿ ಯಾವ ಬದಲಾವಣೆಯನ್ನು ತರಲಿಲ್ಲ ಎಂದು ಜಿಲ್ಲಾ ಒಕ್ಕೂಟದ ಅಧಿಕಾರಿ ಯೊಬ್ಬರು ನೊಂದು ನುಡಿಯುತ್ತಾರೆ. ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ( Village Administrative Officers)ಬೇಡಿಕೆಗಳನ್ನು ಈಡೇರಿಸಲು ಒಪ್ಪಿದ್ದರಿಂದ 7 ದಿನಗಳ ಕಾಲ ನಡೆಸಿದ್ದ ಮುಷ್ಕರವನ್ನು ಅಕ್ಟೋಬರ್ 3ರಂದು ಹಿಂಪಡೆದಿದ್ದರು. ಇದಾದ ಬಳಿಕ, ಕಂದಾಯ ಇಲಾಖೆಯ ಸಚಿವರಾಗಲಿ ಅಥವಾ ಇಲಾಖೆಯ ಕಾರ್ಯದರ್ಶಿ ಗಳಾಗಲಿ ಬಗ್ಗೆ ಕಿಂಚಿತ್ತೂ ಯೋಚಿಸದಿರುವುದು, ವಿಚಾರಿಸದಿರುವುದು ನಮಗೆ ನೋವುಂಟು ಮಾಡಿದೆ.

ತಮ್ಮದೇ ಇಲಾಖೆಯಡಿಯಲ್ಲಿ ಕಷ್ಟಪಟ್ಟು ದುಡಿಯುತ್ತಿರುವ ಒಂದು ಶ್ರಮಿಕ ವರ್ಗವನ್ನು ನಡೆಸಿಕೊಳ್ಳುತ್ತಿರುವ ದಾರಿ ಮಾತ್ರ ಅತ್ಯಂತ ಹೀನಾಯವಾಗಿದೆ ಎಂಬುದು ಇವರ ಒಕ್ಕೂ ಟದ ಮಾತು. ಇಲಾಖೆಯಲ್ಲಿ ವಿಶಿಷ್ಟ ಬದಲಾವಣೆ, ಡಿಜಿಟಲೀಕರಣ ವ್ಯವಸ್ಥೆ ತರಲು ಯತ್ನಿಸುತ್ತಿರುವ ಕಂದಾಯ ಸಚಿವರ ಪ್ರಯತ್ನ ಶ್ಲಾಘನೀಯ! ಆದರೆ, ಇಲಾಖೆಯ ಎರಡು ಕೊಂಡಿಗಳಲ್ಲಿ ಸಚಿವ, ಕಾರ್ಯದರ್ಶಿಗಳು ಒಂದು ಭಾಗವಾದರೆ, ಇಲಾಖೆಯ ಕಾರ್ಯ ಯೋಜನೆಗಳನ್ನು ಜನರಿಗೆ ಯಶಸ್ವಿಯಾಗಿ ತಲುಪಿಸಲು ಇರುವ ಮತ್ತೊಂದು ಪ್ರಮುಖ ಭಾಗವೇ ಈ ಗ್ರಾಮ ಆಡಳಿತಾಧಿಕಾರಿ ವೃಂದದ್ದು!

ಇಂತಹ ಪ್ರಮುಖ ವಿಚಾರ ಗಳಲ್ಲಿ ಕಾನೂನಾತ್ಮಕ ನಿರ್ಧಾರಗಳನ್ನು ಸಕಾಲದಲ್ಲಿ ತೆಗೆದು ಕೊಳ್ಳದಿದ್ದರೆ ಪ್ರಯೋಜನವೇನು ಬಂತು? ಅಷ್ಟಕ್ಕೂ ಇವರು ಕೇಳುತ್ತಿರುವುದು ಈಡೇರಿ ಸಲು ಅಸಾಧ್ಯವಾದವುಗಳೇನಲ್ಲ! ಇಲಾಖೆಯ ಸಚಿವರು ಸ್ವಲ್ಪ ವಿವೇಚನೆ ಬಳಸಿದರೆ, ಕ್ಷಣಮಾತ್ರದಲ್ಲಿ ಸರಿಪಡಿಸಬಹುದಾದ ಬೇಡಿಕೆಗಳಾಗಿವೆ ಮತ್ತು ಆಡಳಿತ ವ್ಯವಸ್ಥೆಯ ಒಂದು ಶ್ರಮಿಕ ವರ್ಗದ ಭಾಗವಾಗಿರುವ VAO ಗಳ ಸಮಸ್ಯೆಗಳನ್ನು ಇಲಾಖೆ ಮತ್ತು ಸರ್ಕಾರ ಸರಿಪಡಿಸಬೇಕಲ್ಲದೇ ಹಾದಿಬೀದಿಯಲ್ಲಿ ಅವರನ್ನು ಮುಷ್ಕರಕ್ಕೆ ಮುಂದಾಗು ವಂತೆ ನಡೆಸಿಕೊಳ್ಳುವುದು ಕೂಡ ಆಡಳಿತಾತ್ಮಕ ಸರ್ಕಾರಿ ವ್ಯವಸ್ಥೆಯ ವಿಫಲತೆಯಾಗಿ ಕಂಡು ಬರುತ್ತದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಭಾಭವನ, ಚಿತ್ರದುರ್ಗದಲ್ಲಿ ನಡೆದ ರಾಜ್ಯ ಕಾರ್ಯ ಕಾರಿಣಿ ಸಭೆಯಲ್ಲಿ ರಾಜ್ಯದ ಸರ್ವ ಸದಸ್ಯರ ಒಪ್ಪಿಗೆಯಂತೆ ಸೆಪ್ಟೆಂಬರ್ 26ರಿಂದ ಆರಂಭಿ ಸಿದ್ದ ಮುಷ್ಕರವನ್ನು ಕಂದಾಯ ಕಾರ್ಯದರ್ಶಿಗಳ ಆಶ್ವಾಸನೆ ಮೇರೆಗೆ ಅಕ್ಟೋಬರ್ 3ರಂದು ನಿಲ್ಲಿಸಲಾಗಿತ್ತು.

ಇಲಾಖೆಯು ಮಾತು ತಪ್ಪಿದ ನಡೆಗೆ ಸಿಡಿದೆದ್ದ ಗ್ರಾಮ ಆಡಳಿತ ಅಧಿಕಾರಿಗಳ ವೃಂದವು 2ನೇ ಹಂತದ ಮುಷ್ಕರಕ್ಕೆ ಕರೆಕೊಟ್ಟಿದೆ. ಅಷ್ಟಕ್ಕೂ ಇವರ ಬೇಡಿಕೆಗಳೇನು ಎಂದು ವಿಚಾ ರಿಸಿದಾಗ, ಕೆಲವು ಗ್ರಾಮ ಆಡಳಿತ ಅಧಿಕಾರಿಗಳನ್ನು ಮುಕ್ತವಾಗಿ ಮಾತನಾಡಿಸಿದಾಗ, ‘ನುಡಿದಂತೆ ನಾವು ನಡೆಯುತ್ತಿದ್ದೇವೆ’ ಎನ್ನುವ ಸರ್ಕಾರಕ್ಕೆ ಇವರ ಸಮಸ್ಯೆ ಕಾಣಿಸದಾಗಿದೆ. ಸರಕಾರಿ ಹುದ್ದೆ ಎಂದುಕೊಂಡು ಹೆಮ್ಮೆಯಿಂದ ಕೆಲಸಕ್ಕೆ ಹಾಜರಾಗುವ ಇವರಿಗೆ, ಹಳ್ಳಿ ಗಳಲ್ಲಿ ಕೆಲಸ ಮಾಡುವಾಗ ಯಾವುದೇ ಒಂದು ನಿರ್ದಿಷ್ಟ ಕಚೇರಿ ಇಲ್ಲದಿರುವುದು, ಸರಿ ಯಾದ ಕುರ್ಚಿ-ಮೇಜುಗಳು, ದಾಖಲೆಗಳನ್ನು ಸಂಗ್ರಹಿಸಿಡಲು ತಿಜೋರಿ-ಕಪಾಟು ಗಳಂತಹ ವ್ಯವಸ್ಥೆ ಇಲ್ಲದಿರುವುದು ಮೊದಲು ಅನುಭವಕ್ಕೆ ಬರುತ್ತದೆ. ಕೆಲವೆಡೆ, ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಇತರೆ ಇಲಾಖೆಯ ಹಳೆಯ ಕಟ್ಟಡಗಳಲ್ಲಿ ಹಾಗೋ ಹೀಗೋ ಸದ್ಯಕ್ಕೆ ಕೆಲಸ ಮಾಡಿ, ಮುಂದಕ್ಕೆ ನೋಡೋಣ ಎಂದು ಇವರನ್ನು ಅಲ್ಲಿಗೆ ತಳ್ಳುತ್ತಾರೆ. ಇದನ್ನು ಮೀರಿ ಕೆಲಸ ಮಾಡುತ್ತ ಹೋಗುವ VA ವೃಂದಕ್ಕೆ ಕಾಡುವ ಸಮಸ್ಯೆ ಗಳು ಅಷ್ಟಿಷ್ಟಲ್ಲ!

ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಜರಾತಿ ಇತರೆ ವಿಚಾರ ನಮೂದಿಸಲು Mobile/ Tablet Device ಗಳನ್ನು ನೀಡಲಾಗಿದೆ. ಆದರೆ, ಹಗಲಿರುಳು ಹತ್ತಾರು ಗ್ರಾಮಗಳ ಜವಾಬ್ದಾ ರಿಯ ಜೊತೆಗೆ, ಸರ್ಕಾರ ಕೊಟ್ಟಿರುವ 21ಕ್ಕೂ ಅಧಿಕ ತಂತ್ರಾಂಶಗಳನ್ನು ಬಳಸಿ, ನಮ್ಮ ಬಳಿಗೆ ಬರುವ ಜನರ ಮತ್ತು ಇಲಾಖೆ ವಹಿಸುವ ಕಾರ್ಯಗಳನ್ನು ನಿಭಾಯಿಸಬೇಕು. ಹೀಗಾಗಿ, ಒಂದು ವ್ಯವಸ್ಥಿತ All Application Compatible Device ನಂತಹ Mobile ಅಥವಾ Tab ಸರ್ಕಾರದಿಂದಾಗಲಿ, ಇಲಾಖೆಯಿಂದಾಗಲಿ ಕೊಡದೆ ಕೆಲಸ ಮಾಡಿಸುತ್ತಿರು ವುದು ಇವರ ಕಾರ್ಯ ಒತ್ತಡಗಳಲ್ಲಿ ಒಂದಾಗಿದೆ.

ಹೀಗೆ, ಒಟ್ಟು 23 ಬೇಡಿಕೆಗಳನ್ನು ಇಲಾಖೆಯ ಮುಂದಿಟ್ಟುಕೊಂಡು ಈ ಶ್ರಮಿಕವರ್ಗವು ಅನಿರ್ದಿಷ್ಟಾವಧಿಯ ಮುಷ್ಕರಕ್ಕೆ ಕರೆಕೊಟ್ಟಿದೆ. ಇವರ ಬೇಡಿಕೆಗಳಲ್ಲಿ ಪ್ರಮುಖ ವಾಗಿರು ವುದು, ರಾಜ್ಯಾದ್ಯಂತ ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ ಸುಮಾರು 52 ಲಕ್ಷ ಮೃತ ಖಾತೆದಾರರ ಪಹಣಿ ದಾಖಲೆಗಳನ್ನು ಮೃತ ವಾರಸುದಾರರಿಗೆ ಹಕ್ಕು ಬದಲಾ ವಣೆ ಮಾಡುವ ಇ-ಪೌತಿ ಆಂದೋಲನವನ್ನು ಕೈಬಿಡುವಂತೆ ಮಾಡಿರುವ ಮನವಿ ಯಾಗಿದೆ.

ಇದಕ್ಕೆ, ಇವರು ಕೊಡುವ ಮಾಹಿತಿ ಏನೆಂದರೆ, ಖಾಸಗಿ ಒಡೆತನದ ಕೃಷಿ ಜಮೀನುಗಳ ಹಕ್ಕು ಬದಲಾವಣೆ ವಿಚಾರವು ಖಾತೆದಾರರ ವೈಯಕ್ತಿಕ ವಿಚಾರವಾಗಿದ್ದು, ಉತ್ತರಾಧಿ ಕಾರ, ಹಕ್ಕು ಬದಲಾವಣೆ ಇತ್ಯಾದಿ ಕ್ರಮಗಳು ಅವರ ವಿವೇಚನೆಗೆ ಬಿಟ್ಟ ವಿಷಯಗಳಾ ಗಿದ್ದು, ಗ್ರಾಮ ಆಡಳಿತಾಧಿಕಾರಿಗಳು ಬಲವಂತವಾಗಿ ಕ್ರಮಕ್ಕೆ ಮುಂದಾಗುವುದು ಯೋಗ್ಯ ವಲ್ಲ.

ಅಗಳೇ ಮುಂದಾಗಿ, ಪಹಣಿ, ಮರಣ ಪ್ರಮಾಣಪತ್ರ, ವಂಶವೃಕ್ಷ, ಮ್ಯೂಟೇಶನ್ ಇತ್ಯಾದಿ ಗಳನ್ನು ಸಂಗ್ರಹಿಸಿ, ರೈತರನ್ನು ಸಂಪರ್ಕಿಸಿ ಹಕ್ಕು ದಾಖಲೆ ಬದಲಾಯಿಸುವಂತೆ ಒತ್ತಡ ಹೇರುವ ಈ ಯೋಜನೆಯ ಕ್ರಮವನ್ನು ರಾಜ್ಯಾದ್ಯಂತ ಒಗ್ಗಟ್ಟಾಗಿ ವಿರೋಧಿಸುತ್ತಿದ್ದಾರೆ. ಈ ಪ್ರಕ್ರಿಯೆಗಳಲ್ಲಿ ಅಗಳ ಮೇಲೆ ಹಲವೆಡೆ ನೂರಾರು ಕ್ರಿಮಿನಲ್ ಪ್ರಕರಣಗಳೂ ಸಹ ದಾಖ ಲಾಗಿವೆ. ಈ ಯೋಜನೆಯನ್ನು ಪ್ರಯೋಗಿಕವಾಗಿ, ಗದಗ ಜಿಲ್ಲೆಯನ್ನು ಆಯ್ಕೆ ಗೊಳಿಸ ಲಾಗಿದ್ದು, ಇದನ್ನು ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘವು ವಿರೋಧಿಸಿ, ಕಾರ್ಯ ನಿರ್ವಹಿಸದಿರಲು ತೀರ್ಮಾನಿಸಿದೆ.

ಇದರಂತೆ, ಚಿಕ್ಕಮಗಳೂರಿನಲ್ಲಿ 30ಕ್ಕೂ ಹೆಚ್ಚು ಅಧಿಕಾರಿಗಳ ಭಡ್ತಿಯನ್ನು ತಡೆಹಿಡಿ ದಿರುವುದು, ಅಂತರ-ಜಿಲ್ಲಾ ವರ್ಗಾವಣೆಯ ನಿಯಮವನ್ನು ಮರುಸ್ಥಾಪಿಸುವುದು, ಸೇವಾ ವಿಷಯಗಳಿಗೆ ಸೌಲಭ್ಯ ಕಲ್ಪಿಸುವುದು, ಕಚೇರಿ ಕಾರ್ಯನಿರ್ವಣೆಯಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವುದು, ಈಗಿರುವ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸುವುದು, ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ, ಕುಟುಂಬಕ್ಕೆ 50 ಲಕ್ಷ ಪರಿಹಾರಧನ ನೀಡುವುದು, ಕರ್ತವ್ಯದಲ್ಲಿದ್ದಾಗ ಹಗಳಾಗುತ್ತಿರುವುದು ಸರ್ಕಾರಕ್ಕೆ ಗೊತ್ತಿರುವುದೇ ಆಗಿದೆ, ಈ ಸಂಬಂಧ ಪೋಲಿಸ್ ಇಲಾಖೆಯಲ್ಲಿರುವಂತೆ 3 ಸಾವಿರ ಆಪತ್ತಿನ ಭತ್ಯೆ ನೀಡುವುದು, ಪ್ರಯಾಣ ಭತ್ಯೆ, ತಪ್ಪಾದ ಪ್ರಮಾಣಪತ್ರ ನೀಡಿದ ಕುರಿತು ಹಲೆವೆಡೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಇದಕ್ಕೆ ತಪ್ಪು ಮಾಹಿತಿ ನೀಡಿದ ಅರ್ಜಿದಾರ ರನ್ನೇ ಹೊಣೆಗಾರರನ್ನಾಗಿಸುವುದು, ಬೆಳೆ ಸಮೀಕ್ಷೆಯನ್ನು ತೋಟಗಾರಿಕೆ ಇಲಾಖೆಗೆ ವರ್ಗಾಹಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈ ವೃಂದವು ಸರ್ಕಾರ, ಕಂದಾಯ ಇಲಾಖೆಯ ಮುಂದೆ ತಮ್ಮ ಬೇಡಿಕೆ ಇಟ್ಟಿದೆ.

ನಾವೇನು ಅಸಾಧ್ಯ ಮತ್ತು ನಮ್ಮ ಯೋಗ್ಯತೆ ಮೀರಿ ಬೇಡಿಕೆಗಳನ್ನು ಬಯಸುತ್ತಿಲ್ಲ. ಗ್ರಾಮ ಆಡಳಿತಾಧಿಕಾರಿಗಳು ಸಹ ಜನರ ಸೇವೆಯನ್ನು ನಿಷ್ಠಯಿಂದಲೇ ಮಾಡುತ್ತ ಬರುತ್ತಿದ್ದು, ಕಾರ್ಯದಲ್ಲಿ ಇನ್ನೂ ಉತ್ತಮ ಗುಣಮಟ್ಟ ಕಂಡುಕೊಳ್ಳಲು ನಮಗೆ ಅಗತ್ಯ ಉಪಕರಣ ಳನ್ನು, ಮೂಲಭೂತ ಸೌಕರ್ಯಗಳನ್ನು ಮತ್ತು ನಮ್ಮ ಕೆಲಸದಲ್ಲಿ ನಮಗೆ ಸಿಗಬೇಕಾದ ಆತ್ಮಗೌರವ, ಸಮ್ಮಾನವನ್ನು ನಾವು ಬಯಸುತ್ತಿದ್ದೇವೆ.

ನಾವೂ ಈ ವ್ಯವಸ್ಥೆಯ ಭಾಗವಾಗಿದ್ದು, ಉನ್ನತ ಹುದ್ದೆಯಲ್ಲಿರುವವರೇ ಸುಳ್ಳು ಭರವಸೆ ಗಳನ್ನು ನೀಡುವ ಮೂಲಕ ನಮ್ಮನ್ನು ದಾರಿ ತಪ್ಪಿಸುತ್ತಿರುವುದೇಕೆ? ಇಲಾಖೆಯೇ ನಮ್ಮನ್ನು ತಾರತಮ್ಯ ದೃಷ್ಟಿಯಿಂದ ನಡೆಸಿಕೊಳ್ಳುತ್ತಿದೆ ಎಂಬ ಅಳಲು ಈ ಅಧಿಕಾರಿ ಗಳದ್ದು! ಕಂದಾಯ ಇಲಾಖೆಯಿಂದ ಬಳಸಲ್ಪಡುತ್ತಿರುವ, ಸಂಯೋಜನೆ, ಇ-ಆಫೀಸ್, ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗರು ಹುಕುಂ, ಹಕ್ಕುಪತ್ರ, ನಮೂನೆ 1-5, ಪೌತಿ ಆಪ್, ಬೆಳೆ ಸಂರಕ್ಷಣೆ, ಸಿ-ವಿಜಿ್, ನವೋದಯ, ಗರುಡ, ಭೂಮಿ, ಎಲೆಕ್ಟ್ -೧, ವೋಟರ್ ಹೆಲ್ಪ್‌ ಲೈನ್, ಬೆಳೆ ಸಮೀಕ್ಷೆ, ಪಿಎಂ ಕಿಸಾನ್, ಕೃಷಿ ಗಣತಿ, ನೀರಾವರಿ ಗಣತಿ, ದಿಶಾಂಕ್ ಸೇರಿದಂತೆ 21ಕ್ಕೂ ಹೆಚ್ಚು ತಂತ್ರಾಂಶಗಳು (Web ಮತ್ತು Mobile Applications) ನಿರಂತರವಾಗಿ ಗ್ರಾಮ ಆಡಳಿತ ಅಧಿಕಾರಿಗಳಿಂದ ಬಳಸಲ್ಪಡುತ್ತಿವೆ.

ಸಿ-ವೃಂದ ನೌಕರರ ಹತ್ತುಪಟ್ಟು ನಾವು ಕೆಲಸ ಮಾಡುತ್ತಿದ್ದೇವೆ, ಇದಕ್ಕಾಗಿ ನಮ್ಮನ್ನು ತಾಂತ್ರಿಕ ಹುದ್ದೆ ವೇತನ ಶ್ರೇಣಿ ನೀಡಿ ಎಂಬ ಪ್ರಮುಖ ಬೇಡಿಕೆಯೂ ಆಗಿದೆ. ಅಂತರ್ ಜಿಲ್ಲಾ ವರ್ಗಾವಣೆ ವಿಚಾರವು ಈ ನೌಕರರ ಬದುಕಿನಲ್ಲಿ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಈ ಹಿಂದೆ ಇದ್ದ ಈ ನಿಯಮವನ್ನು ಸರ್ಕಾರ ಸುತ್ತೋಲೆ ಹೊರಡಿಸಿ, ಕಂದಾ ಯ ಇಲಾಖೆಯಿಂದ ಹಿಂಪಡೆದಿರುವು ದರಿಂದ, ನೌಕರರ ಜೀವನದಲ್ಲಿ ಅಲ್ಲೋಲ ಕಲ್ಲೋಲಗಳನ್ನೇ ಸೃಷ್ಟಿಸುತ್ತಿದೆ.

ನೌಕರರ ಕೌಟುಂಬಿಕ ಸಮಸ್ಯೆಗಳು ಹೆಚ್ಚುತ್ತಿದ್ದು, ಚಿಕ್ಕಮಕ್ಕಳ ಪಾಲನೆ ಪೋಷಣೆ ಸವಾ ಲಾಗಿದೆ. ವಿದ್ಯಾಭ್ಯಾಸದ ಸಮಸ್ಯೆ, ದೂರ ಊರಿನಲ್ಲಿರುವ ವಯಸ್ಸಾದ ತಂದೆ ತಾಯಿಗಳ ಪೋಷಣೆ ಮತ್ತು ಆರೋಗ್ಯದ ಚಿಂತೆ, ಗರ್ಭೀಣಿ/ಬಾಣಂತಿಯರ ವಿಚಾರಗಳು, ಅಂಗವಿಲಕ ನೌಕರರ ಒಂಟಿ ಜೀವನ, ದೂರದಲ್ಲಿ ಕೆಲಸ ಮಾಡುತ್ತಿರುವುದರಿಂದ ಪತಿ-ಪತ್ನಿಯರಲ್ಲಿ ಬಿರುಕು ಮೂಡುತ್ತಿರುವುದು, ನೂರಾರು ಕುಟುಂಬಗಳು ವಿಚ್ಛೇದನವನ್ನೂ ಎದುರಿಸುತ್ತಿವೆ ಎಂಬುದು ಇವರ ವರ್ಗಾವಣೆ ಬೇಡಿಕೆಗೆ ಕಾರಣಗಳಾಗಿವೆ.

ಹೌದು, ಪ್ರತಿಯೊಬ್ಬರು ತಮ್ಮ ಹಕ್ಕುಗಳನ್ನು ಹೊಂದಲು ನಮ್ಮ ಸಂವಿಧಾನದಲ್ಲಿ ಸಮಾನ ಅವಕಾಶಗಳನ್ನು ನೀಡಲಾಗಿದೆ. ಹೀಗಿರುವಾಗ, ಸರ್ಕಾರಿ ವ್ಯವಸ್ಥೆಯ ಭಾಗವಾಗಿ ರುವ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ಪ್ರಾಥಮಿಕ ಅವಶ್ಯಕತೆಗಳನ್ನು ಕೇಳುವು ದರಲ್ಲಿ ತಪ್ಪೇನಿದೆ ಎಂಬುದು ತಲಾಟಿಯೊಬ್ಬರ ಅಳಲು!

ಈ ಹಿಂದೆ, ಮುಷ್ಕರ ಹೂಡಿದ್ದವರಿಗೆ ಇಲಾಖೆಯ ಮುಖ್ಯ ಕಾರ್ಯದರ್ಶಿಗಳೇ ಸ್ವತಃ ನಿಮ್ಮ ಬೇಡಿಕೆಗಳನ್ನು ಈಡೇರಿಸ ಲಾಗುವುದು ಎಂದು ನೇರವಾಗಿ ಸಂಘಟನೆಯ ಮುಂದೆ ಹೇಳಿದ್ದರಿಂದ ಪ್ರತಿಭಟನೆಯನ್ನು ಹಿಂಪಡೆದಿದ್ದರು. ಅಂದು ಕೊಟ್ಟ ಮಾತನ್ನು ಸ್ವತಃ ಸರ್ಕಾರವೇ ಉಲ್ಲಂಘಿಸುವುದೆಂದರೆ ಹೇಗೆ?