ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

H‌ari Paraak Column: ಸ್ಟಿಂಗ್‌ ಆಪರೇಷನ್ V/s ಪವರ್‌ ಪಾಲಿಟಿಕ್ಸ್

ಇಂಥವರು ತಮ್ಮ ನಟನ ಮೇಲಿನ ಅಭಿಮಾನದ ಹೆಸರಲ್ಲಿ ಡಾ.ರಾಜ್ ಕುಮಾರ್ ಅಷ್ಟೇ ಅಲ್ಲ, ವಿಷ್ಣುವರ್ಧನ್ ಅವರನ್ನೂ ಬಿಡಲ್ಲ. ಸುದೀಪ್ ಅನ್ನೂ ಬಿಡಲ್ಲ. ಇಂಥ ಕೆಲಸದಲ್ಲಿ ಅದೇನೋ ವಿಕೃತ ಆನಂದ ಇವರಿಗೆ. ಇಂಥವರ ಅಕೌಂಟ್ ಗಳು ರಿಪೋರ್ಟ್ ಆಗಿ ಲಾಕ್ ಆದರೆ ಇನ್ನೊಂದು ಅಕೌಂಟ್ ಓಪನ್ ಮಾಡುತ್ತಾರೆ.

H‌ari Paraak Column: ಸ್ಟಿಂಗ್‌ ಆಪರೇಷನ್ V/s ಪವರ್‌ ಪಾಲಿಟಿಕ್ಸ್

-

ಹರಿ ಪರಾಕ್‌
ಹರಿ ಪರಾಕ್‌ Nov 1, 2026 1:40 PM

ತುಂಟರಗಾಳಿ

ಸಿನಿಗನ್ನಡ

ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವುದಕ್ಕೆ ಅಂತಾನೇ ಕೆಲವರು ಕೆಲಸ ಮಾಡ್ತಾರೆ. ಅದರಲ್ಲೂ ಅಭಿಮಾನಿಗಳ ಹೆಸರಲ್ಲಿ ದುರಭಿಮಾನ ತೋರಿಸುವವರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಅದರಲ್ಲೂ ಕೆಲವರು ಅಸಹ್ಯ ಸ್ಥಿತಿಗೆ ಇಳಿದಿರುವುದು ನೋಡಿದರೆ ಇವರು ವಿಕೃತ ಅಭಿಮಾನಿಗಳು ಎಂಬ ಅನಿಸಿಕೆ ಮೂಡುತ್ತದೆ. ಸುಖಾಸುಮ್ಮನೆ ಯಾರಾದ್ರೂ ನಟರ ಹುಟ್ಟು ಹಬ್ಬದ ದಿನ ಅವರ ಬಗ್ಗೆ ಅಸಭ್ಯ ಪೋಸ್ಟ್ ಗಳನ್ನು ಹಾಕಿ ತಮ್ಮ ವಿಕೃತಿ ಮೆರೆಯುತ್ತಾರೆ ಕೆಲವು ಕಲಹಪ್ರಿಯರು.

ಇಂಥವರಿಗೆ ಆಯಾ ನಟರ ಅಭಿಮಾನಿಗಳು ತಕ್ಕ ಪಾಠ ಕಲಿಸಿ ಅವ ರಿಂದ ಕ್ಷಮೆ ಕೇಳಿಸಿರುವುದೂ ಆಗಿದೆ. ಆದರೆ ಇಂಥ ಮನೋಸ್ಥಿತಿಗೆ ಕಾರಣ ಏನು ಎನ್ನುವುದನ್ನು ನೋಡಿದರೆ ಇವು ನಿರುದ್ಯೋಗದ ಫಲ ಎನಿಸಿದರೆ ತಪ್ಪಿಲ್ಲ. ಇಂಥವರಿಗೆ ಓದು, ಕೆಲಸ ಇಂಥ ದ್ಯಾವುದರಲ್ಲೂ ಆಸಕ್ತಿ ಇರೋದಿಲ್ಲ. ಯಾವ ದೊಡ್ಡ ಟ್ಯಾಲೆಂಟೂ ಇರೋದಿಲ್ಲ ಹಾಗಾಗಿ ಫೇಸ್ ಬುಕ್ ನಲ್ಲಿ ಅಟೆನ್ಶನ್ ಸೀಕರ್ಸ್ ಆಗಿ ಇಂಥ ಕೆಲಸಗಳಿಗೆ ಕೈ ಹಾಕುತ್ತಾರೆ. ಆದರೆ ಬೇಸರದ ಸಂಗತಿ ಅಂದ್ರೆ ಇದಕ್ಕೆ ಹೆಸರು ಬಳಕೆ ಆಗ್ತಿರೋದು ಇನ್ನೊಬ್ಬ ನಟನ ಅಭಿಮಾನಿಗಳು ಅನ್ನೋ ಟ್ಯಾಗ್.

ಇಂಥವರು ತಮ್ಮ ನಟನ ಮೇಲಿನ ಅಭಿಮಾನದ ಹೆಸರಲ್ಲಿ ಡಾ.ರಾಜ್ ಕುಮಾರ್ ಅಷ್ಟೇ ಅಲ್ಲ, ವಿಷ್ಣುವರ್ಧನ್ ಅವರನ್ನೂ ಬಿಡಲ್ಲ. ಸುದೀಪ್ ಅನ್ನೂ ಬಿಡಲ್ಲ. ಇಂಥ ಕೆಲಸದಲ್ಲಿ ಅದೇನೋ ವಿಕೃತ ಆನಂದ ಇವರಿಗೆ. ಇಂಥವರ ಅಕೌಂಟ್ ಗಳು ರಿಪೋರ್ಟ್ ಆಗಿ ಲಾಕ್ ಆದರೆ ಇನ್ನೊಂದು ಅಕೌಂಟ್ ಓಪನ್ ಮಾಡುತ್ತಾರೆ.

ಇದನ್ನೂ ಓದಿ: Hari Paraak Column: ನಾಣ್ಯ ಸಂಗ್ರಹ ಮಾಡೋ ಹವ್ಯಾಸ- ಚಿಲ್ರೆ ಶೋಕಿ

ಫೇಸ್ ಟು ಫೇಸ್ ಫೇಸ್ ಯಾರೂ ಸಿಗಲ್ಲ ಎಂಬ ನಂಬಿಕೆಯಲ್ಲಿ ಅಶ್ಲೀಲವಾಗಿ ಮಾತನಾಡುತ್ತಾರೆ. ಒಂದು ವೇಳೆ ಸಿಕ್ಕಿಬಿದ್ದು ಗೂಸಾ ತಿಂದರೆ ಕ್ಷಮೆ ಕೇಳಿ ಮತ್ತೆ ಇನ್ನೊಂದು ಹೆಸರಲ್ಲಿ ಅದೇ ಕೆಲಸಕ್ಕೆ ಇಳಿಯುತ್ತಾರೆ. ಒಟ್ಟಿನಲ್ಲಿ ಫೇಸ್‌ಬುಕ್ ನಂಥ ಅಸುರಕ್ಷಿತ ಜಾಲತಾಣಗಳಲ್ಲಿ ಇಂಥ ಅನಿಷ್ಟ ಸಂತತಿಗಳಿಗೆ ಕೊನೆ ಅನ್ನೋದು ಇರೋದಿಲ್ಲ.

ಯಾರೇ ಆಗಲಿ, ಇಂಥವರ ಬಗ್ಗೆ ಅದೆಷ್ಟು ಅಂತ ತಲೆಕೆಡಿಸಿಕೊಳ್ಳೋಕಾಗುತ್ತೆ, ಒಂದೆರಡು ಸಲ ಇವರಿಗೆ ಬುದ್ಧಿ ಕಲಿಸುವ ಕೆಲಸ ಮಾಡಬಹುದೇ ಹೊರತು, ಇವರ ರೀತಿ ಮಾಡೋ ಕೆಲಸ ಬಿಟ್ಟು ಅದೇ ಕೆಲಸ ಮಾಡೋಕಾಗಲ್ಲ ಅನ್ನೋದೇ ಇಂಥವರ ಭಂಡ ಧೈರ್ಯ.

73 ಒಕ

ಲೂಸ್‌ ಟಾಕ್‌ –ಕಾಮನ್‌ ಮ್ಯಾನ್

ಏನ್ ಸಾರ್, ಎಲ್ಲ ಕಡೆ ಸ್ಟಿಂಗ್ ಆಪರೇಷನ್ ಹವಾ ಇದೆಯಲ್ಲ?

- ಅಯ್ಯೋ ವಿಷ್ಯ ಗಬ್ಬುನಾರುತ್ತಿದೆ. ಸೋ, ಅದು ಸ್ಟಿಂಗ್ ಅಲ್ಲ ಸ್ಟಿಂಕ್ ಆಪರೇಷನ್ ‌

ಅದೂ ಸರಿನೇ, ಆದ್ರೂ ಈ ಹನಿಟ್ರ್ಯಾಪ್ ಹಾವಳಿ ಜಾಸ್ತಿ ಆಗಿದೆಯಲ್ಲ?

- ಹನಿ ಹನಿ ಕೂಡಿದ್ರೆ ಹಳ್ಳ ಅಂತ ಗೊತ್ತಿದ್ರೂ ಜನ ಅದರಲ್ಲಿ ಸಿಕ್ಕಿಹಾಕಿಕೊಳ್ತಾರಲ್ಲ ಅದಕ್ಕೆ

ಹಳ್ಳ ಏನ್ ಬಂತು ಬಾವಿಗೆ ಬೀಳ್ತಾ ಇದ್ದಾರೆ. ಸರಿ, ಆದ್ರೆ ಇಂಥ ವಿಷಯಗಳಲ್ಲಿ ಸಂತ್ರಸ್ತರು ಜಾಸ್ತಿ ಆಗ್ತಾ ಇರೋದು ಯಾಕೆ?

- ನೀವೊಳ್ಳೆ...ಹನಿ ಗೂಡಿಗೆ ಕಲ್ಲು ಎಸೆದ ಮೇಲೆ ಜೇನು ಹುಳಗಳು ಕಚ್ಚದೇ ಇರ್ತಾವೆಯೇ?

ಈಗ ರಾಜ್ಯದಲ್ಲಿ ನಡೀತಿರೋ ಹವಾಗೆ ಏನು ಕಾರಣ ಅಂತ ನಿಮ್ಮ ಅಭಿಪ್ರಾಯ?

- ಎಲ್ಲಾ ‘ಪವರ್’ ಪಾಲಿಟಿಕ್ಸ್

ಅಂದ ಹಾಗೆ ನಿಮಗೆ ಇಂಥ ಹನಿಟ್ರ್ಯಾಪ್ ಅನುಭವ ಆಗಿದೆಯಾ?

- ಅಯ್ಯೋ, ನನ್ ಹೆಂಡ್ತಿನೇ ನನ್ ಹತ್ರ ಬರಲ್ಲ ಅಂತಾಳೆ, ಇನ್ನು ಹನಿ ಬರ್ತದಾ. ಹೋಗ್ರಿ, ಹೋಗ್ರಿ...

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಖೇಮು ಬೆಂಗಳೂರಿನ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ. ಹಾಸ್ಟೆಲ್ ಸರಿ ಇಲ್ಲ ಅಂತ ಕಾರಣ ಹೇಳಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ. ಒಮ್ಮೆ ಖೇಮುನ ಅಮ್ಮ ತನ್ನ ಮಗನನ್ನು ನೋಡಲು ಒಂದು ಭಾನುವಾರ ಬೆಂಗಳೂರಿಗೆ ಬಂದಳು. ಆದರೆ ಬರೋಕೆ ಮುಂಚೆ ಅವಳು ಖೇಮುಗೆ ಹೇಳಿರಲಿಲ್ಲ. ಹಾಗಾಗಿ ಖೇಮುಗೆ ಶಾಕ್ ಕಾದಿತ್ತು. ಯಾಕಂದ್ರೆ ಆ ಮನೆಯಲ್ಲಿ ಖೇಮು ತನ್ನ ಗರ್ಲ್ ಫ್ರೆಂಡ್ ಜೊತೆ ಲಿವಿಂಗ್ ಟುಗೆದರ್ ನಲ್ಲಿ ಇದ್ದ. ಅಮ್ಮ ಬಂದ ಕೂಡಲೇ ತನ್ನ ಬಂಡವಾಳ ಬಯಲಾಗುತ್ತೆ ಅಂಥ ಭಯವಾಯಿತು. ಆದರೆ ಇಬ್ಬರನ್ನೂ ಒಟ್ಟಿಗೇ ನೋಡಿದ ಅಮ್ಮನಿಗೆ ಇವರ ಮಧ್ಯೆ ಸಂಬಂಧ ಇದೆ ಅಂತ ಅನುಮಾನ ಬಂತು. ಆದರೆ ಏನೂ ಕೇಳಲಿಲ್ಲ.

ಖೇಮು ತಾನಾಗಿಯೇ, ಇದು ಪಿಜಿ, ಒಬ್ಬನಿಗೇ ಆದರೆ ತುಂಬಾ ದುಬಾರಿ ಆಗುತ್ತೆ. ಅವಳು ನನ್ನ ಕೊಲೀಗ್. ಹಾಗಾಗಿ ಬಾಡಿಗೆ ಶೇರ್ ಆಗುತ್ತೆ ಅಂತ ಅವಳು ಇದೇ ಮನೆಯಲ್ಲಿ ಇರ್ತಾಳೆ. ಆದರೆ, ಅವಳಿಗೆ ಅಂತ ಸೆಪರೇಟ್ ರೂಮಿದೆ ಅಂತ ಬೊಗಳೆ ಬಿಟ್ಟ. ಸರಿ ಅಮ್ಮ ಏನೂ ಮಾತಾಡಲಿಲ್ಲ. ಅಂದು ಅಲ್ಲೇ ಇದ್ದು ಮರುದಿನ ಊರಿಗೆ ಹೊರಟಳು ಅಮ್ಮ. ಅದಾದ ನಂತರ ಖೇಮುನ ಗರ್ಲ್ ಫ್ರೆಂಡ್ ಬಂದು ಖೇಮು ಹತ್ರ ಹೇಳಿದಳು. ನೋಡು ಖೇಮು, ನಿಮ್ಮಮ್ಮನ ಮೇಲೆ ನಾನು ಆಪಾದನೆ ಹೊರಿಸ್ತಾ ಇಲ್ಲ, ಆದರೆ ಅವರು ಬಂದು ಹೋದ ಮೇಲೆ ಮನೆಯಲ್ಲಿದ್ದ ಬೆಳ್ಳಿ ತಟ್ಟೆ ಕಾಣಿಸ್ತಾ ಇಲ್ಲ ಅಂತ ಹೇಳಿದಳು. ಅದಕ್ಕೆ ಅಮ್ಮನ್ನು ಡೈರೆಕ್ಟಾಗಿ ಹಂಗೆ ಕೇಳೋದು ಅಂತ ಸಂಕೋಚ ಮಾಡಿ ಕೊಂಡ ಖೇಮು ಅಮ್ಮನಿಗೆ ಒಂದು ಮೆಸೇಜ್ ಕಳಿಸಿದ. ಅದರಲ್ಲಿ ಹೀಗೆ ಬರೆದಿತ್ತು.

‘ಅಮ್ಮ, ನಾನು ನಿನ್ನನ್ನು ನಂಬುತ್ತೇನೆ. ನಿನ್ನ ಮೇಲೆ ಅನುಮಾನ ಅಂತಲ್ಲ, ಆದರೆ ನೀನು ಬಂದು ಹೋದ ಮೇಲೆ ಮನೆಯಲ್ಲಿದ್ದ ಬೆಳ್ಳಿ ತಟ್ಟೆ ಕಾಣಿಸ್ತಾ ಇಲ್ಲ ಅಂತಷ್ಟೇ ಹೇಳೋಕೆ ಇಷ್ಟಪಡ್ತೀನಿ.’ ಐದು ನಿಮಿಷ ಬಿಟ್ಟು ಅಮ್ಮನಿಂದ ರಿಪ್ಲೈ ಬಂತು. ‘ನಾನೂ ನಿನ್ನನ್ನು ನಂಬುತ್ತೇನೆ. ನಿನ್ನ ಮೇಲೆ ಅನುಮಾನ ಅಂತಲ್ಲ. ನಿಮ್ಮಿಬ್ಬರ ಮಧ್ಯೆ ಸಂಬಂಧ ಇದೆ ಅಂತಲೂ ಅಲ್ಲ. ಆದರೆ, ಅವಳು ತನ್ನ ರೂಮಿನ ಮಲಗೋದಾಗಿದ್ರೆ ಅವಳ ಹಾಸಿಗೆಯ ದಿಂಬಿನ ಕೆಳಗೆ ಬೆಳ್ಳಿ ತಟ್ಟೆ ಇಟ್ಟಿರೋದು ಕಾಣಿಸ್ತಾ ಇತ್ತು ಅಂತಷ್ಟೇ ಹೇಳೋಕೆ ಇಷ್ಟಪಡ್ತೀನಿ.’

ಲೈನ್‌ ಮ್ಯಾನ್

ಕಾಫಿ ಕಲರ್ ಟೀಶರ್ಟ್ʼನ ಏನಂತಾರೆ ?

– ‌ಯಾವುದೇ ಕಲರ್ ಇರ್ಲಿ, ಟೀ ಶರ್ಟೇ ಅಂತಾರೆ.

ಬೀಡಾ ಅಂಗಡಿಯಲ್ಲಿ ಕೆಲಸ ಮಾಡುವವನು

- ಎಲೆ ಮಾನವ

- ಕೀಟನಾಶಕ ಮಾರುವವನು

- ಹುಳು ಮಾನವ

- ಪ್ರಕೃತಿ ಪ್ರೇಮದಿಂದ ಗಿಡ ನೆಡುವವನು

- ಅಮರ ಪ್ರೇಮಿ

ಬೋಳು ಮಂಡೆಯವರ ಅಡ್ವಾಂಟೇಜ್

- ನೀನೇನೇ ಮಾಡಿದ್ರೂ, ನಂದೊಂದ್ ಕೂದ್ಲೂ ಕಿತ್ಕೊಳ್ಳೋಕಾಗಲ್ಲ ಅಂತ ಡೈಲಾಗ್ ಹೊಡೀಬಹುದು.

ಕೂದಲು ಜಾಸ್ತಿ ಇರೋದ್ರ ಅನನುಕೂಲ

- ಹೊಡೆದಾಡುವಾಗ ಎದುರಿನವನ ಕೈಗೆ ಕೂದಲು ಸುಲಭವಾಗಿ ಸಿಗುತ್ತೆ.

ಹೆಂಡ್ತಿನ ಸುಲಭವಾಗಿ ಎತ್ಕೊತೀರಾ, ಆದರೆ ಅದಕ್ಕಿಂತ ಭಾರ ಕಮ್ಮಿ ಇರೋ ಗ್ಯಾಸ್ ಸಿಲಿಂಡರ್ ಎತ್ಕೊಳೋಕಾಗಲ್ವ? ಅನ್ನೋರಿಗೆ ಉತ್ತರ

- ಗ್ಯಾಸ್ ಸಿಲಿಂಡರ್ ಮೇಲಿಂದ ಕೆಳಗಡೆವರೆಗೂ ಒಂದೇ ಥರ ಇರುತ್ತೆ. ಎತ್ಕೊಳ್ಳೋಕೆ ಗ್ರಿಪ್ ಸಿಗಲ್ಲ.

ಜೀವನದಲ್ಲಿ ಬೇಕಿzಲ್ಲವೂ ಸುಲಭವಾಗಿ ಸಿಕ್ರೆ, ಜನ ಮೈಮರೆಯುತ್ತಾರೆ

- ಉದಾಹರಣೆ- ಆರ್‌ಸಿಬಿಗೆ ಸಿಕ್ಕ ಆರೇಂಜ್ ಕ್ಯಾಪ್, ಪರ್ಪಲ್ ಕ್ಯಾಪ್

ಪ್ರೇಮಿಗಳ ದಿನ ಜೊತೆಗಿದ್ದ ಹುಡುಗ ಹುಡುಗಿಯರಿಗೆ ಹಿಂದೂ ಸಂಘಟನೆಗಳು ಬಲವಂತವಾಗಿ ಮಾಡಿಸೋ ಮದುವೆ

- ಆರೇಂಜ್ ಮ್ಯಾರೇಜ್