Roopa Gururaj Column: ಉಡುಗೊರೆಗಳ ಹಿಂದಿರುವ ಚಿಕ್ಕ ಸೂಕ್ಷ್ಮ
ರಾಜ ಹಣ್ಣುಗಳನ್ನು ನೋಡಿ ಹೇಳಿದ, ಹೌದೌದು ಹಣ್ಣುಗಳು ಬಹಳ ಚೆನ್ನಾಗಿವೆ ನನಗೆ ಸಂತೋಷ ವಾಗಿದೆ . ನಂತರ ರಾಜ ಶ್ರೀಮಂತ ರೈತನನ್ನು ದೃಷ್ಟಿಸಿ ನೋಡಿದ. ದೊಡ್ಡ ಬಂಡಿ ತುಂಬ ಒಳ್ಳೆಯ ಮಾವಿನ ಹಣ್ಣು ತಂದಿದ್ದಾನೆ. ಇವನು ಬಡವನಲ್ಲ ಎಂದುಕೊಂಡು ಹಾಗೆ ಅವನ ಕೈ ಬೆರಳುಗಳಲ್ಲಿ ಉಂಗುರ ಹಾಕಿದ ಗುರುತುಗಳನ್ನು ಗಮನಿಸಿ, ಈ ರೈತ ಕಷ್ಟಪಟ್ಟು ದುಡಿದವನಲ್ಲ ಸಾಕಷ್ಟು ಶ್ರೀಮಂತ ನಾಗಿದ್ದಾನೆ ಎಂಬುದನ್ನು ತಿಳಿದುಕೊಂಡ ರಾಜ, ಈ ಮೊದಲೇ ಬಡ ರೈತ ತಂದುಕೊಟ್ಟ ಒಂದೇ ಮಾವಿನ ಹಣ್ಣನ್ನು ಸೇವಕರಿಂದ ತರಿಸಿ ಅದನ್ನು ಶ್ರೀಮಂತನ ಕೈಯಲ್ಲಿಟ್ಟು ಇದು ಸಾಧಾರಣ ಹಣ್ಣಲ್ಲ, ನನಗೆ ಪ್ರಿಯವಾದ ಹಣ್ಣು. ಇದನ್ನು ಒಬ್ಬ ಬಡ ರೈತ ಶ್ರಮದಿಂದ ಬೆಳೆದ ಫಲ.


ಒಂದೊಳ್ಳೆ ಮಾತು
rgururaj628@gmail.com
ಒಬ್ಬ ಬಡ ರೈತನ ಹೊಲದಲ್ಲಿದ್ದ ಮಾವಿನ ಮರದಲ್ಲಿ ಒಂದು ಹಣ್ಣು ಬಿಟ್ಟಿತು. ರೈತನಿಗೆ ಸಂತೋಷವಾಯಿತು ಅಪರೂಪಕ್ಕೆ ಒಳ್ಳೆಯ ಒಂದೇ ಹಣ್ಣು ಬಿಟ್ಟಿದೆ, ಬಹಳ ಸವಿಯಾದ ಹಣ್ಣು ಮೊದಲು ಬಿಟ್ಟಿರುವ ಈ ಹಣ್ಣನ್ನು ಯಾರಾದರೂ ಸತ್ಪಾತ್ರರಿಗೆ ಉಡುಗೊರೆಯಾಗಿ ಕೊಡಬೇಕು ಎಂದು ಹಾಗೆ ಯೋಚಿಸಿದನು. ಇದನ್ನು ರಾಜ್ಯದ ಪ್ರಜೆಗಳ ಕ್ಷೇಮಕ್ಕಾಗಿ ದುಡಿಯುವ ನಮ್ಮ ದೇವರಾದ ರಾಜನಿಗೆ ಕೊಂಡೊಯ್ದು ವಿನಯದಿಂದ ಅರ್ಪಿಸಿದನು. ರಾಜ ಹಣ್ಣನ್ನು ತೆಗೆದು ಕೊಂಡು ಗಮನಿಸಿದನು : ಅದು ವಿಶೇಷ ಹಣ್ಣಾಗಿರದೆ ತೀರಾ ಸಾಧಾರಣ ಹಣ್ಣಾಗಿತ್ತು. ಆದರೂ ರಾಜ ಮುಗ್ಧ ರೈತನ ಮನಸ್ಸು ನೋಯಿಸದೆ ತನ್ನ ಸಂತೋಷ ವ್ಯಕ್ತಪಡಿಸಿ, ಒಂದು ಒಳ್ಳೆ ಜಾತಿ ಕುದುರೆ ಮೇಲೆ ಮುತ್ತು ರತ್ನ ಹವಳ ನಾಣ್ಯಗಳು ತುಂಬಿಸಿದ ಚೀಲವನ್ನು ಕಟ್ಟಿ ಅವನಿಗೆ ಉಡುಗೊರೆ ಕೊಟ್ಟನು.
ರೈತ ಮತ್ತೆ ಮತ್ತೆ ನಮಸ್ಕರಿಸಿ ಅರಸ ಉಡುಗೊರೆ ಕೊಟ್ಟ ಕುದುರೆಯ ಮೇಲೆ ಹತ್ತಿ ಸಂತೋಷದಿಂದ ಹಳ್ಳಿಗೆ ಬಂದನು. ಅವನ ಮನೆಯ ಸ್ವಲ್ಪ ದೂರದಲ್ಲಿ ಒಬ್ಬ ಜಿಪುಣ ಶ್ರೀಮಂತ ರೈತನಿದ್ದನು. ಅವನು ಬಡ ರೈತನ ಅದೃಷ್ಟದ ಬಗ್ಗೆ ತಿಳಿದು ಮರುದಿನವೇ ಆಳುಗಳ ಕೈಲಿ ಒಳ್ಳೆಯ ರಸಪುರಿ ಮಾವಿನ ಹಣ್ಣುಗಳನ್ನು ಕೀಳಿಸಿ ಒಂದು ಗಾಡಿ ತುಂಬಾ ತುಂಬಿಸಿ ರಾಜ ಸಭೆಗೆ ಬಂದು ಪ್ರಭು ನಾನು ಒಬ್ಬ ಬಡ ರೈತ. ನನ್ನ ತೋಟದಲ್ಲಿ ಹೊನ್ನ ಬಣ್ಣದ ರಸಪೂರಿ ಮಾವಿನ ಹಣ್ಣುಗಳು ರಾಶಿ ರಾಶಿ ಬಿಟ್ಟಿದೆ. ಅದನ್ನು ನಮ್ಮ ಪ್ರಭುಗಳಿಗೆ ಉಡುಗೊರೆಯಾಗಿ ಕೊಡಬೇಕು ಎಂಬ ಆಸೆಯಿಂದ ಎಲ್ಲವನ್ನು ಕೊಯ್ಸಿಕೊಂಡು ತಂದಿರುವೆ ಸ್ವೀಕರಿಸಿ ಎಂದು ಕೈಮುಗಿತನು.
ಇದನ್ನೂ ಓದಿ: Roopa Gururaj Column: ಲಾಭವಿಲ್ಲದೆ ಯಾರು ಅನಗತ್ಯವಾಗಿ ಸಹಾಯ ಮಾಡುವುದಿಲ್ಲ
ರಾಜ ಹಣ್ಣುಗಳನ್ನು ನೋಡಿ ಹೇಳಿದ, ಹೌದೌದು ಹಣ್ಣುಗಳು ಬಹಳ ಚೆನ್ನಾಗಿವೆ ನನಗೆ ಸಂತೋಷ ವಾಗಿದೆ . ನಂತರ ರಾಜ ಶ್ರೀಮಂತ ರೈತನನ್ನು ದೃಷ್ಟಿಸಿ ನೋಡಿದ. ದೊಡ್ಡ ಬಂಡಿ ತುಂಬ ಒಳ್ಳೆಯ ಮಾವಿನ ಹಣ್ಣು ತಂದಿದ್ದಾನೆ. ಇವನು ಬಡವನಲ್ಲ ಎಂದುಕೊಂಡು ಹಾಗೆ ಅವನ ಕೈ ಬೆರಳುಗಳಲ್ಲಿ ಉಂಗುರ ಹಾಕಿದ ಗುರುತುಗಳನ್ನು ಗಮನಿಸಿ, ಈ ರೈತ ಕಷ್ಟಪಟ್ಟು ದುಡಿದವನಲ್ಲ ಸಾಕಷ್ಟು ಶ್ರೀಮಂತನಾಗಿದ್ದಾನೆ ಎಂಬುದನ್ನು ತಿಳಿದುಕೊಂಡ ರಾಜ, ಈ ಮೊದಲೇ ಬಡ ರೈತ ತಂದುಕೊಟ್ಟ ಒಂದೇ ಮಾವಿನ ಹಣ್ಣನ್ನು ಸೇವಕರಿಂದ ತರಿಸಿ ಅದನ್ನು ಶ್ರೀಮಂತನ ಕೈಯಲ್ಲಿಟ್ಟು ಇದು ಸಾಧಾರಣ ಹಣ್ಣಲ್ಲ, ನನಗೆ ಪ್ರಿಯವಾದ ಹಣ್ಣು. ಇದನ್ನು ಒಬ್ಬ ಬಡ ರೈತ ಶ್ರಮದಿಂದ ಬೆಳೆದ ಫಲ. ಇದರ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ಇದನ್ನು ನೀನು ತೆಗೆದುಕೊಳ್ಳಬಹುದು ಎಂದು ಅವನ ಕೈಗೆ ಕೊಟ್ಟನು. ಶ್ರೀಮಂತನ ದುರಾಸೆಯ ಕನಸುಗಳು ನುಚ್ಚುನೂರಾಯಿತು. ಅವನು ಅಂದು ಕೊಂಡಿದ್ದೇ ಒಂದು, ಆಗಿದ್ದೆ ಇನ್ನೊಂದು.
ರಾಜನು ಕೊಡುವವರಿಗೆಲ್ಲಾ ಸಮಾನವಾಗಿ ಕಾಣುತ್ತಿದ್ದನು. ಆದರೆ ಅವರು ಕೊಡುವ ಹೃದಯದ ಉದ್ದೇಶವನ್ನು ನೋಡುತ್ತಿದ್ದನು. ಬಡ ರೈತನ ಪ್ರಾಮಾಣಿಕ ಉಡುಗೊರೆ ರಾಜನ ಹೃದಯ ಸ್ಪರ್ಶಿ ಸಿತು, ಆದರೆ ಶ್ರೀಮಂತನ ಲಾಭದ ಲಾಲಸೆ ರಾಜನಿಗೆ ಸ್ಪಷ್ಟವಾಗಿ ಗೋಚರಿಸಿತು.
ನಾವು ಕೂಡ ಮತ್ತೊಬ್ಬರಿಗೆ ಉಡುಗೊರೆ ಕೊಡಬೇಕಾದರೆ, ಅವರ ಯೋಗ್ಯತೆಯನ್ನು ಅಳೆಯು ತ್ತೇವೆ. ಅವರಿಗೆ ಎಷ್ಟರ ಉಡುಗೊರೆ ಕೊಟ್ಟರೆ ಸರಿ ಇರಬಹುದು ಎಂದು ಲೆಕ್ಕ ಹಾಕುತ್ತೇವೆ. ಆದರೆ ಉಡುಗೊರೆಗಳನ್ನ ಕೊಡಬೇಕಾದ್ದು ನಮ್ಮ ಯೋಗ್ಯತೆಗನುಸಾರ. ಅದರ ಬದಲಾಗಿ ಏನನ್ನು ಮತ್ತೊಬ್ಬರು ನಮಗೆ ಎಷ್ಟರ ಉಡುಗೊರೆ ಕೊಟ್ಟಿದ್ದರು ಎಂದು ಅದನ್ನು ಸರಿದೂಗಿಸಲು ಪ್ರಯ ತ್ನಿಸಬಾರದು.
ಮನಃಪೂರ್ವಕವಾಗಿ ಅವರಿಗೆ ಅಗತ್ಯವಾಗುವಂತ ಅವರು ಇಷ್ಟಪಡುವಂತಹ ಉಡುಗೊರೆಯನ್ನು ಕೊಟ್ಟಾಗ ನಿಜಕ್ಕೂ ಅದು ಅವರ ಹೃದಯಕ್ಕೆ ಮುಟ್ಟುತ್ತದೆ ಮತ್ತು ಕೊನೆಯವರೆಗೂ ನೆನಪಿನಲ್ಲಿ ಉಳಿಯುತ್ತದೆ. ಅಷ್ಟಾಗದಿದ್ದರೆ ಕೊಡುವುದೇ ಬೇಡ ಯಾರು ಅದರ ಬಗ್ಗೆ ಬೇಸರಪಟ್ಟು ಕೊಳ್ಳುವು ದಿಲ್ಲ. ಕೊಡುವುದಾದರೆ ಅದು ಉಪಯೋಗಕ್ಕಾಗುವಂತಾಗಿರಲಿ. ಉಡುಗೊರೆಗಿಂತ ಉದ್ದೇಶ ಮಹತ್ತರವಾಗಿರಬೇಕು ನೈತಿಕತೆ ಇಲ್ಲದೆ ಕೊಟ್ಟ ದಾನ ಎಂದಿಗೂ ಹೃದಯದವರೆಗೆ ತಲುಪದು.