Roopa Gururaj Column: ಚಂದ್ರಗ್ರಹಣದ ಪೌರಾಣಿಕ ಹಿನ್ನೆಲೆ
ಚಂದ್ರಗ್ರಹಣದ ಪೌರಾಣಿಕ ಹಿನ್ನೆಲೆಯು ಅಮೃತ ಮಂಥನದ ಸಂದರ್ಭದಲ್ಲಿ ರಾಹು ಹಾಗೂ ಕೇತು ಗ್ರಹಗಳು ರೂಪುಗೊಂಡ ಪರಿಯನ್ನು ವಿಶದವಾಗಿ ವಿವರಿಸುತ್ತದೆ. ಸಮುದ್ರ ಮಥನ ಕಾಲದಲ್ಲಿ ಅಮೃತವು ಹೊರಬಂದಾಗ, ದೇವತೆಗಳೊಂದಿಗೆ ಸ್ವಭಾನು ಎಂಬ ರಾಕ್ಷಸನಿಗೂ ಅದು ಸಲ್ಲುತ್ತಿದೆ ಎಂಬುದು ಅರಿವಿಗೆ ಬಂದಾಗ ಮಹಾವಿಷ್ಣು ಸ್ವಭಾನುವನ್ನು ಚಕ್ರಾಯುಧದಿಂದ ಮರ್ದಿಸುವ ಕಥೆಯದು.

-

ಒಂದೊಳ್ಳೆ ಮಾತು
rgururaj628@gmail.com
ಚಂದ್ರಗ್ರಹಣದ ಪೌರಾಣಿಕ ಹಿನ್ನೆಲೆಯು ಅಮೃತ ಮಂಥನದ ಸಂದರ್ಭದಲ್ಲಿ ರಾಹು ಹಾಗೂ ಕೇತು ಗ್ರಹಗಳು ರೂಪುಗೊಂಡ ಪರಿಯನ್ನು ವಿಶದವಾಗಿ ವಿವರಿಸುತ್ತದೆ. ಸಮುದ್ರ ಮಥನ ಕಾಲ ದಲ್ಲಿ ಅಮೃತವು ಹೊರಬಂದಾಗ, ದೇವತೆಗಳೊಂದಿಗೆ ಸ್ವಭಾನು ಎಂಬ ರಾಕ್ಷಸನಿಗೂ ಅದು ಸಲ್ಲುತ್ತಿದೆ ಎಂಬುದು ಅರಿವಿಗೆ ಬಂದಾಗ ಮಹಾವಿಷ್ಣು ಸ್ವಭಾನುವನ್ನು ಚಕ್ರಾಯುಧದಿಂದ ಮರ್ದಿಸುವ ಕಥೆಯದು.
ಶ್ರೀಮನ್ನಾರಾಯಣನ ಆಯುಧವಾದ ಸುದರ್ಶನ ಚಕ್ರದ ಏಟಿಗೆ ಒಂದೇ ಕಾಯವಾಗಿದ್ದ ಸರ್ಪ ಸ್ವರೂಪಿ ದೇಹವು ಮಿಂಚಿನ ಕಾರ್ಯಾಚರಣೆ ನಡೆಯಿತೆಂಬಂತೆ ಎರಡು ಹೋಳುಗಳಾಗಿ ಛೇದಿಸ ಲ್ಪಡುತ್ತವೆ. ಸರ್ಪದ ಹೆಡೆಯ ಭಾಗವನ್ನು, ಅಂದರೆ ರುಂಡವನ್ನು ರಾಹು ಎಂಬ ಹೆಸರಿನಲ್ಲೂ, ಮುಂಡದ ಭಾಗವನ್ನು ಕೇತು ಎಂಬ ಹೆಸರಿನಲ್ಲಿಯೂ ಗುರುತಿಸುವ ಕ್ರಮ ನಮ್ಮ ಭಾರತೀಯ ಶಾಸ್ತ್ರದಲ್ಲಿದೆ.
ಇದನ್ನೂ ಓದಿ: Roopa Gururaj Column: ಶ್ರೀಮದ್ ಭಾಗವತದ ಮಹಿಮೆ
ಹೀಗೆ ಅಮೃತದ ಅಂಶ ಸ್ವಭಾನು ಎಂಬ ರಾಕ್ಷಸನ ಮೋಸದ ತಂತ್ರದಿಂದಾಗಿ ಅಪವ್ಯಯವಾಗುತ್ತಿದೆ ಎಂಬ ಎಚ್ಚರವನ್ನು ಶ್ರೀಮನ್ನಾರಾಯಣನಿಗೆ ಒದಗಿಸಿದವರೇ ಸೂರ್ಯ ಹಾಗೂ ಚಂದ್ರರಾಗಿರುವು ದರಿಂದ ಸಮಯ ಸಿಕ್ಕಾಗ ರಾಹು ಅಥವಾ ಕೇತುಗಳು ಸೂರ್ಯ, ಚಂದ್ರರನ್ನು ನುಂಗುವ ಅಥವಾ ಘಾಸಿಗೊಳಿಸುವ ಪ್ರಯತ್ನ ನಡೆಸಲು, ಸೇಡಿನ ವಿಷಜ್ವಾಲೆ ಹೊತ್ತವರಾಗಿ, ಆಗಾಗ ಮುಂದಾಗುತ್ತಲೇ ಇರುತ್ತಾರೆ ಎಂಬುದು ನಮ್ಮ ಆರ್ಷೇಯ ನಂಬಿಕೆ.
ಈ ರೀತಿಯ ಚಂದ್ರ-ಸೂರ್ಯರ ಮೇಲಿನ ರಾಹು ಕೇತುಗಳ ಆಕ್ರಮಣ, ಸಫಲವಾಗುವ ಕಾಲ ಘಟ್ಟವೇ ಗ್ರಹಣ ಎಂಬ ವಿಧದಲ್ಲಿ ನಾವು ಭಾರತೀಯರು ನಂಬಿಕೆಯನ್ನೂ ಹೊಂದಿದ್ದೇವೆ. ದಿನಾಂಕ 7.9.2025ರ ಭಾನುವಾರ ಖಗ್ರಾಸ ಚಂದ್ರ ಗ್ರಹಣ. ಈ ಗ್ರಹಣ ಭಾರತದಾದ್ಯಂತ ಗೋಚರಿಸುವುದು. ಪೂರ್ವಭಾದ್ರ ನಕ್ಷತ್ರ ಕುಂಭ ರಾಶಿಯಲ್ಲಿ, ಚಂದ್ರಗ್ರಹಣ ಸಂಭವಿಸಲಿದೆ.
ಹಿಂದೂ ಧರ್ಮಕ್ಕೆ, ಸಂಸ್ಕೃತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಮ್ಮ ಪೂರ್ವಿಕರು ಅದೆಷ್ಟೋ ಬುದ್ಧಿವಂತಿಕೆಯಿಂದ ಅನೇಕ ವೈಜ್ಞಾನಿಕ ವಿಷಯಗಳನ್ನು ಪೌರಾಣಿಕ ಹಿನ್ನೆಲೆಯಲ್ಲಿ, ಕಥೆಗಳ ರೂಪದಲ್ಲಿ ನಮಗೆ ತಿಳಿಸಿ ಹೇಳಿದ್ದಾರೆ. ಪ್ರತಿಯೊಂದು ಕಥೆಗೂ ತನ್ನದೇ ಆದ ಪೌರಾಣಿಕ ಹಿನ್ನೆಲೆ ಇದೆ. ಅನೇಕ ಪುರಾಣದ ಕಥೆಗಳು ವೈಜ್ಞಾನಿಕ ತಳಹದಿಯಲ್ಲಿ ರೂಪುಗೊಂಡಿವೆ.
ಇಂದಿಗೂ ಕೂಡ ಅವುಗಳಲ್ಲಿ ಬಹಳಷ್ಟು ಪ್ರಸ್ತುತವಾಗಿದೆ. ಆ ನಿಟ್ಟಿನಲ್ಲಿ ನಾವಿನ್ನೂ ನಮ್ಮ ಪುರಾಣಗಳನ್ನು ಅದರ ಹಿಂದಿನ ಸತ್ಯಾಸತ್ಯತೆಗಳನ್ನು ಇನ್ನು ಸಂಪೂರ್ಣವಾಗಿ ತಿಳಿದುಕೊಂಡೇ ಇಲ್ಲ ಎನ್ನಬಹುದು.
ಆದ್ದರಿಂದಲೇ ಭಾರತೀಯರಾದ ನಾವು ಮೊದಲು ನಮ್ಮ ಪುರಾಣ, ಇತಿಹಾಸವನ್ನು ಸರಿಯಾದ ರೀತಿಯಲ್ಲಿ ಅರಿಯುವ ಪ್ರಯತ್ನ ಮಾಡಬೇಕು. ಅದರಲ್ಲಿ ನಮಗೆ ಸಿಗುವ ಅನೇಕ ವಿಚಾರಗಳು ನಮಗೆ ಜೀವನದಲ್ಲಿ ಕೇವಲ ಮೌಲ್ಯಗಳನ್ನು ಮಾತ್ರ ಅಲ್ಲದೆ, ಪ್ರಸ್ತುತ ಪರಿಸ್ಥಿತಿಗೆ ಬೇಕಾದ ಅನೇಕ ವೈಜ್ಞಾನಿಕ ವಿಚಾರಗಳನ್ನ ಕೂಡ ಅರ್ಥ ಮಾಡಿಕೊಳ್ಳಲು ಪೂರಕವಾಗಿರುತ್ತದೆ.
ಉದಾಹರಣೆಗೆ ಮದುವೆಯಾದ ದಂಪತಿಗಳಿಗೆ ಅರುಂಧತಿ ನಕ್ಷತ್ರವನ್ನು ತೋರಿಸುವ ಒಂದು ಮದುವೆಯ ಪದ್ಧತಿ ಇದೆ. ವಿವಾಹ ಸಮಾರಂಭದಲ್ಲಿ, ವಿಶೇಷವಾಗಿ ಸಪ್ತಪದಿಯ ನಂತರ, ವರನು ವಧುವಿಗೆ ಅರುಂಧತಿ ನಕ್ಷತ್ರವನ್ನು ತೋರಿಸುತ್ತಾನೆ. ಇದು ದಾಂಪತ್ಯ ಜೀವನದಲ್ಲಿ ಅವರ ನಿಷ್ಠೆ ಮತ್ತು ಸಹಬಾಳ್ವೆಯನ್ನು ನೆನಪಿಸಲು ಮಾಡಲಾಗುತ್ತದೆ.
ಹಿಂದೂ ಪುರಾಣಗಳಲ್ಲಿ ವಶಿಷ್ಠ ಮುನಿ ಮತ್ತು ಅರುಂಧತಿ ಆದರ್ಶ ದಂಪತಿಗಳಾಗಿದ್ದರು, ಅವರು ಪರಸ್ಪರ ನಿಷ್ಠೆ ಮತ್ತು ಪ್ರೀತಿಗೆ ಹೆಸರುವಾಸಿಯಾಗಿದ್ದರು. ಅರುಂಧತಿ ನಕ್ಷತ್ರವನ್ನು ತೋರಿಸುವ ಆಚರಣೆ ಆದರ್ಶ ದಂಪತಿಗಳಾದ ವಶಿಷ್ಠ ಮತ್ತು ಅರುಂಧತಿಯನ್ನು ಪ್ರತಿನಿಧಿಸುತ್ತದೆ, ಇದು ವೈವಾಹಿಕ ನಿಷ್ಠೆ, ಪ್ರೀತಿ ಮತ್ತು ಪರಸ್ಪರ ಸಮನ್ವಯದ ಸಂಕೇತವಾಗಿದೆ. ಈ ಆಚರಣೆಯು ದಂಪತಿಗಳು ಜೀವನಪೂರ್ತಿ ಒಟ್ಟಾಗಿ ಪಯಣಿಸುವುದರ ಸಂಕೇತವಾಗಿದೆ.
ಅರುಂಧತಿ ಮತ್ತು ವಶಿಷ್ಠ ಇಬ್ಬರೂ ಸಮನ್ವಯವಾಗಿ ತಿರುಗುವ ನಕ್ಷತ್ರಗಳಾಗಿದ್ದು, ಪತಿ-ಪತ್ನಿ ಯರು ಪರಸ್ಪರ ಹೆಚ್ಚು ಕಡಿಮೆ ಇಲ್ಲದೆ, ಸಮಾನವಾಗಿ ಜೀವನದ ಹಾದಿಯಲ್ಲಿ ಸಾಗಬೇಕು ಎಂಬು ದನ್ನು ಇದು ಸೂಚಿಸುತ್ತದೆ. ಇಂತಹ ಅನೇಕ ವಿಚಾರಗಳು ನಮ್ಮ ಪದ್ಧತಿಗಳಲ್ಲಿ ಆಚರಣೆ ಗಳಲ್ಲಿ ಹಾಸು ಹಕ್ಕಾಗಿವೆ. ಇನ್ನಾದರೂ ಇವುಗಳನ್ನು ಪ್ರಯತ್ನ ಪೂರ್ವಕವಾಗಿ ತಿಳಿದು ಆಚರಿಸೋಣ.