ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Profile

Avinash GR

Senior Digital Content Editor

[email protected]

ಅವಿನಾಶ್‌ ಜಿ ಆರ್ ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯವನ್ನು ಪಡೆದುಕೊಂಡಿದ್ದಾರೆ. ಕಳೆದ ೧೪ ವರ್ಷಗಳಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ವಿಜಯವಾಣಿ ಪತ್ರಿಕೆಯಲ್ಲಿ 2 ವರ್ಷ ಸಿನಿಮಾ ವರದಿಗಾರನಾಗಿ, 4 ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡಿದ್ದಾರೆ. ʻವಿಜಯ ಕರ್ನಾಟಕʼ ವೆಬ್‌ನಲ್ಲಿ 6 ವರ್ಷ ಎಂಟರ್‌ಟೇನ್‌ಮೆಂಟ್ ವಿಭಾಗದಲ್ಲಿ ‌ʻಸೀನಿಯರ್ ಡಿಜಿಟಲ್‌ ಕಂಟೆಂಟ್ ಪ್ರೊಡ್ಯೂಸರ್ʼ ಆಗಿ ಕೆಲಸ ಮಾಡಿದ್ದಾರೆ. ಸಂದರ್ಶನಗಳು, ಸಿನಿಮಾ ವಿಮರ್ಶೆಗಳು, ಚಿತ್ರರಂಗ ಮತ್ತು ಕಿರುತೆರೆ ಕ್ಷೇತ್ರಕ್ಕೆ ಸಂಬಂಧಿಸಿದ ವಿಶ್ಲೇಷಣೆ, ಅಂಕಣಗಳನ್ನು ಬರೆದಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ರಾಜಕೀಯ, ಪ್ರವಾಸ, ಓದು ಇವರ ಆಸಕ್ತಿಗಳಾಗಿವೆ. ಪ್ರಸ್ತುತ ʻವಿಶ್ವವಾಣಿʼ ಡಿಜಿಟಲ್‌ನಲ್ಲಿ ʻಸೀನಿಯರ್‌ ಡಿಜಿಟಲ್‌ ಕಂಟೆಂಟ್‌ ಎಡಿಟರ್‌ʼ ಆಗಿ ಕೆಲಸ ಮಾಡುತ್ತಿದ್ದಾರೆ.

Articles
ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼ ಶೋನ ಪ್ರತಿ ಸ್ಪರ್ಧಿಗೂ 50 ಸಾವಿರ ರೂ. ನೀಡಿದ ಶಿವಣ್ಣ ದಂಪತಿ; ಇದೇ ನೋಡಿ ದೊಡ್ಮನೆಯ ದೊಡ್ಡ ಗುಣ!

ಡಿಕೆಡಿ ಸ್ಪರ್ಧಿಗಳಿಗೆ ತಲಾ 50 ಸಾವಿರ ರೂ. ನೆರವು ನೀಡಿದ ಶಿವಣ್ಣ ದಂಪತಿ!

Shivarajkumar Charity Work: ಜೀ ಕನ್ನಡದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋನ ತೀರ್ಪುಗಾರರಾಗಿರುವ ಡಾ. ಶಿವರಾಜ್‌ಕುಮಾರ್‌ ಅವರು ಕ್ವಾರ್ಟರ್ ಫಿನಾಲೆಯಲ್ಲಿ ನೀಡಿದ್ದ ಭರವಸೆಯಂತೆ ಪ್ರತಿಯೊಬ್ಬ ಸ್ಪರ್ಧಿ, ಕೋರಿಯೋಗ್ರಾಫರ್ ಮತ್ತು ಮೆಂಟರ್‌ಗೆ ತಲಾ 50 ಸಾವಿರ ರೂ.ಗಳ ಚೆಕ್ ವಿತರಿಸಿದ್ದಾರೆ.

ʻಗ್ಯಾಂಗ್ಸ್ ಆಫ್‍ ಯುಕೆ ಚಿತ್ರಕ್ಕೂ ಭೀಮಾತೀರದ ಹಂತಕರಿಗೂ ಸಂಬಂಧವಿಲ್ಲʼ- ನಿರ್ದೇಶಕ ರವಿ ಶ್ರೀವತ್ಸ ಸ್ಪಷ್ಟನೆ

ʻಗ್ಯಾಂಗ್ಸ್ ಆಫ್ ಯುಕೆʼ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ರವಿ ಶ್ರೀವತ್ಸ

Gangs of UK Movie: ನಿರ್ದೇಶಕ ರವಿ ಶ್ರೀವತ್ಸ ಅವರು ʻಗ್ಯಾಂಗ್ಸ್ ಆಫ್ ಯುಕೆʼ ಏಪ್ರಿಲ್ 10ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಚಿತ್ರವು ಭೀಮಾತೀರದ ಹಂತಕರ ಕಥೆಯಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಇದು ವ್ಯವಸ್ಥೆಯ ವಿರುದ್ಧ ನೊಂದವರ ಮತ್ತು ತಾಯಿಯ ರಕ್ತಕಣ್ಣೀರಿನ ಕಥೆಯಾಗಿದೆ ಎಂದು ತಿಳಿಸಿದ್ದಾರೆ.

‘ಶ್ರೀಕೃಷ್ಣ’ ಚಿತ್ರದ ‘ಉಧೋ ಉಧೋ ಯಲ್ಲವ್ವ’ ಸಾಂಗ್‌ ರಿಲೀಸ್;‌ ಹೊಸ ಸಾಹಸಕ್ಕೆ ಮುಂದಾದ ಶಂಕರ್‍ ರಾಜ ವರ್ಮಾ

'ಶ್ರೀಕೃಷ್ಣ' ಚಿತ್ರದ 'ಉಧೋ ಉಧೋ ಯಲ್ಲವ್ವ' ಸಾಂಗ್ ರಿಲೀಸ್

Shreekrishna Kannada Movie: ನಿರ್ದೇಶಕ ಶಂಕರ್ ರಾಜ ವರ್ಮಾ ಅವರು ನಟ ಮತ್ತು ನಿರ್ಮಾಪಕರಾಗಿ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಅವರ ಶ್ರೀಕೃಷ್ಣ ಚಿತ್ರದ ಮೊದಲ ಹಾಡು ‘ಉಧೋ ಉಧೋ ಯಲ್ಲವ್ವ’ ಇತ್ತೀಚೆಗೆ ಬಿಡುಗಡೆಯಾಗಿದ್ದು, ಮೇ ತಿಂಗಳಲ್ಲಿ ಸಿನಿಮಾ ತೆರೆಕಾಣಲಿದೆ.

ಕರ್ನಾಟಕ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದ ʻಧುರಂಧರ್‌ 2ʼ; ರಣವೀರ್‌ ಸಿಂಗ್‌ ಅಬ್ಬರದ ಎದುರು ʻಬಾಹುಬಲಿ 2ʼ ರೆಕಾರ್ಡ್‌ ಪೀಸ್‌ ಪೀಸ್!‌

ಕರ್ನಾಟಕದಲ್ಲಿ ಧುರಂಧರ್ 2 ಅಬ್ಬರ: 11 ದಿನದಲ್ಲಿ ಹೊಸ ದಾಖಲೆ ಸೃಷ್ಟಿ

ಧುರಂಧರ್‌ 2 ಸಿನಿಮಾವು ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ವಿಶ್ವದಾದ್ಯಂತ 1365 ಕೋಟಿ ರೂ. ಗಳಿಸಿದ್ದು, ಕರ್ನಾಟಕದಲ್ಲಿಯೂ ದಾಖಲೆ ಮೊತ್ತವನ್ನು ಬಾಚಿಕೊಂಡಿದೆ. ಜೊತೆಗೆ 'ಬಾಹುಬಲಿ 2' ದಾಖಲೆಯನ್ನು ಅತಿ ವೇಗವಾಗಿ ಮುರಿದಿದೆ. ಉತ್ತರ ಅಮೆರಿಕಾದಲ್ಲೂ 22 ಮಿಲಿಯನ್ ಡಾಲರ್ ಗಳಿಸಿ ಭಾರತೀಯ ಚಿತ್ರರಂಗದ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

2025ರ ಅತ್ಯುತ್ತಮ ಸಿನಿಮಾ 'ಕಾಂತಾರ ಚಾಪ್ಟರ್ 1'; ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಪ್ರಶಸ್ತಿ ಪ್ರದಾನ ಸಮಾರಂಭದ ಕಲರ್‌ಫುಲ್‌ ಫೋಟೋಗಳು ಇಲ್ಲಿವೆ

Photos: ಚಂದನವನ ಕ್ರಿಟಿಕ್ಸ್ ಅವಾರ್ಡ್ಸ್: ಯಾರಿಗೆಲ್ಲಾ ಪ್ರಶಸ್ತಿ ಸಿಕ್ತು?

7ನೇ ವರ್ಷದ ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವು ಅದ್ದೂರಿಯಾಗಿ ಬೆಂಗಳೂರಿನಲ್ಲಿ ನಡೆದಿದೆ. 'ಕಾಂತಾರ: ಚಾಪ್ಟರ್ 1' ಚಿತ್ರವು ಒಟ್ಟು 9 ಪ್ರಶಸ್ತಿಗಳನ್ನು ಗೆದ್ದಿದ್ದು ವಿಶೇಷವಾಗಿತ್ತು. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 'ಕಾಂತಾರ: ಚಾಪ್ಟರ್ 1' ಚಿತ್ರದ ಅಭಿನಯಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದರೆ, 'ಗತ ವೈಭವ' ಚಿತ್ರಕ್ಕಾಗಿ ಆಶಿಕಾ ರಂಗನಾಥ್‌ ಅವರು ಅತ್ಯುತ್ತಮ ನಟಿ ಗೌರವಕ್ಕೆ ಪಾತ್ರವಾದರು. ಉಳಿದಂತೆ ಯಾರಿಗೆಲ್ಲಾ ಪ್ರಶಸ್ತಿ ಸಿಕ್ಕಿದೆ ಎಂಬುದರ ಮಾಹಿತಿ ಜೊತೆಗೆ ಸಮಾರಂಭದ ಕಲರ್‌ಫುಲ್‌ ಫೋಟೋಗಳು ಇಲ್ಲಿವೆ.

Chandanavana Film Critics Awards: ಅತ್ಯುತ್ತಮ ನಟ ರಿಷಬ್ ಶೆಟ್ಟಿ, ಅತ್ಯುತ್ತಮ ನಟಿ ಆಶಿಕಾ ರಂಗನಾಥ್; 9 ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡ ʻಕಾಂತಾರ 1ʼ

ಚಂದನವನ ಕ್ರಿಟಿಕ್ಸ್ ಅವಾರ್ಡ್ಸ್: ʻಕಾಂತಾರ 1ʼಗೆ 9 ವಿಭಾಗದಲ್ಲಿ ಪ್ರಶಸ್ತಿ

Chandanavana Film Critics Awards: 7ನೇ ವರ್ಷದ ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2025ನೇ ಸಾಲಿನ ಅತ್ಯುತ್ತಮ ಸಾಧಕರನ್ನು ಗೌರವಿಸಲಾಯಿತು. 'ಕಾಂತಾರ: ಚಾಪ್ಟರ್ 1' ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಹಾಗೂ ನಿರ್ದೇಶಕ ಪ್ರಶಸ್ತಿ ಪಡೆದರೆ, ಆಶಿಕಾ ರಂಗನಾಥ್ 'ಗತ ವೈಭವ' ಚಿತ್ರಕ್ಕಾಗಿ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದರು.

ʻಓಡು ಗೆಲುವೆ ನೀ ಆದಷ್ಟು ದೂರ.. ಪಡೆದೆ ತೀರುವೆವು ನೀ ಹೋದಷ್ಟು ದೂರʼ; ಸದ್ದಿಲ್ಲದೇ ಹೊಸ ಸಿನಿಮಾ ಅನೌನ್ಸ್‌ ಮಾಡಿದ ‌ʻಡಾಲಿʼ ಧನಂಜಯ್

ಡಾಲಿ ಧನಂಜಯ್ ಸರ್ಪ್ರೈಸ್; 6 ತಿಂಗಳು ಟೇಬಲ್ ಮೇಲಿದ್ದ ಕಥೆ ಈಗ ಬೆಳ್ಳಿತೆರೆಗೆ

ಡಾಲಿ ಧನಂಜಯ್‌ ಅವರು ತಮ್ಮ ಮುಂದಿನ ಸಿನಿಮಾ ಕುರಿತು ಸದ್ದಿಲ್ಲದೆ ಅಪ್‌ಡೇಟ್ ನೀಡಿದ್ದಾರೆ. ಗೆಳೆಯ ಪೂರ್ಣಚಂದ್ರ ಬರೆದಿದ್ದ ಚಿತ್ರಕಥೆಯನ್ನು ಆರು ತಿಂಗಳ ನಂತರ ಓದಿದ ಧನಂಜಯ್, ಅದಕ್ಕೆ ಫಿದಾ ಆಗಿ ತಾವೇ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಶೀಘ್ರದಲ್ಲೇ ಚಿತ್ರದ ಶೀರ್ಷಿಕೆ ಘೋಷಣೆಯಾಗಲಿದೆ.

ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ; ಬೆಂಗಳೂರಿನಲ್ಲಿ ಅಂತ್ಯಕ್ರಿಯೆ

ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ಇನ್ನಿಲ್ಲ

ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ (85) ಅವರು ಸೋಮವಾರ ಮುಂಜಾನೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ನರ್ಸ್ ಆಗಿ ಸೇವೆ ಸಲ್ಲಿಸಿದ್ದ ಅವರು, ಪ್ರಕಾಶ್ ರಾಜ್ ಅವರ ಸಾಧನೆಯ ಹಾದಿಯಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯ ಅಗಲಿಕೆಯಿಂದ ನಟ ಪ್ರಕಾಶ್ ರಾಜ್ ತೀವ್ರ ದುಃಖದಲ್ಲಿದ್ದಾರೆ.

ʻಧುರಂಧರ್‌ 2 ಚಿತ್ರವನ್ನ ಗಂಭೀರವಾಗಿ ಪರಿಗಣಿಸಿ, ಇಲ್ಲವಾದರೆ...ʼ; ಚಿತ್ರರಂಗಕ್ಕೆ ಎಚ್ಚರಿಕೆ ನೀಡಿದ ರಾಮ್‌ ಗೋಪಾಲ್‌ ವರ್ಮಾ!

Dhurandhar 2: 'ಹೊಸ ಪಾಠವೆಂದು ಭಾವಿಸಿ..'- ಎಚ್ಚರಿಕೆ ನೀಡಿದ RGV

Ranveer Singh: ಧುರಂಧರ್‌ 2 ಚಿತ್ರವು 10 ದಿನಗಳಲ್ಲಿ 1200 ಕೋಟಿ ರೂ. ಗಳಿಕೆಯತ್ತ ಸಾಗುತ್ತಿದ್ದು, ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಚಿತ್ರವನ್ನು 'ಪರಮಾಣು ಬಾಂಬ್'ಗೆ ಹೋಲಿಸಿದ್ದು, ಚಿತ್ರರಂಗದ ಮೌನವನ್ನು ಪ್ರಶ್ನಿಸಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಬಿಗ್‌ ಬಾಸ್‌ 18ʼ ಖ್ಯಾತಿಯ ರಜತ್ ದಲಾಲ್; ಮದುವೆಯಾದ ಹುಡುಗಿ ಯಾರು?

ʻಬಿಗ್‌ ಬಾಸ್ 18ʼ ರಜತ್ ದಲಾಲ್ ಕೈ ಹಿಡಿದ ಹುಡುಗಿ ಯಾರು? ಫೋಟೋಗಳು ಇಲ್ಲಿವೆ

Bigg Boss 18 Rajat Dalal Wedding: ಬಿಗ್‌ ಬಾಸ್‌ 18 ಖ್ಯಾತಿಯ ಇನ್‌ಫ್ಲುಯೆನ್ಸರ್ ರಜತ್ ದಲಾಲ್ ಭಾನುವಾರ (ಮಾ. 29) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅತ್ಯಂತ ಖಾಸಗಿಯಾಗಿ ನಡೆದ ಈ ವಿವಾಹ ಸಮಾರಂಭದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ.

ಶಾಕಾಹಾರಿ ಆಹಾರ, ಬೆಳ್ಳಂಬೆಳಗ್ಗೆಯೇ ವರ್ಕ್‌ಔಟ್; ʻಪೆದ್ದಿʼ ಚಿತ್ರದ  ಪೈಲ್ವಾನ್ ಲುಕ್‌ಗಾಗಿ ರಾಮ್ ಚರಣ್ 8 ತಿಂಗಳ ಶ್ರಮ

Peddi Movie: ಅಯ್ಯಪ್ಪ ದೀಕ್ಷೆಯಲ್ಲೇ ಮೈಕಟ್ಟು ಹುರಿಗೊಳಿಸಿದ ನಟ ರಾಮ್ ಚರಣ್

Ram Charan Peddi Movie: ನಟ ರಾಮ್ ಚರಣ್ ಅವರು ಪೆದ್ದಿ ಚಿತ್ರದ ಪೈಲ್ವಾನ್‌ ಪಾತ್ರಕ್ಕಾಗಿ ಕಳೆದ 8 ತಿಂಗಳುಗಳಿಂದ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಅಯ್ಯಪ್ಪ ದೀಕ್ಷೆಯ ಅವಧಿಯಲ್ಲೇ ಕಟ್ಟುನಿಟ್ಟಾದ ಶಾಖಾಹಾರಿ ಆಹಾರ ಸೇವಿಸಿ, ಪ್ರತಿದಿನ ಬೆಳಿಗ್ಗೆ 5:30ಕ್ಕೆ ವರ್ಕ್‌ಔಟ್ ಮಾಡುವ ಮೂಲಕ ಪೈಲ್ವಾನ್ ಮೈಕಟ್ಟು ಪಡೆದಿದ್ದಾರೆ.

Ulidavaru Kandante Movie: ʻರಸ್ತೆಯಲ್ಲೂ ಇರಲಿ ಸಹನೆʼ ಎಂದ ಹುಬ್ಬಳ್ಳಿ-ಧಾರಾವಾಡ ಪೊಲೀಸರ ಕ್ರಿಯೇಟಿವಿಟಿಗೆ ರಕ್ಷಿತ್ ಶೆಟ್ಟಿ ಫ್ಯಾನ್ಸ್ ಫಿದಾ

ರಕ್ಷಿತ್ ಶೆಟ್ಟಿ 'ಉಳಿದವರು ಕಂಡಂತೆ' ಟ್ವೀಟ್ ಬಳಸಿ ಪೊಲೀಸರ ಸಂಚಾರ ಜಾಗೃತಿ

ರಕ್ಷಿತ್‌ ಶೆಟ್ಟಿ ಅವರ ಟ್ವೀಟ್‌ ಬಳಸಿಕೊಂಡು ಹುಬ್ಬಳ್ಳಿ-ಧಾರವಾಡ ಪೊಲೀಸರು ವಿಶಿಷ್ಟವಾಗಿ ಸಂಚಾರ ಜಾಗೃತಿ ಮೂಡಿಸಿದ್ದಾರೆ. 'ಉಳಿದವರು ಕಂಡಂತೆ' ಸಿನಿಮಾ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಕ್ಷಿತ್ ಮಾಡಿದ ಟ್ವೀಟ್ ಅನ್ನು ರೀ-ಪೋಸ್ಟ್ ಮಾಡಿರುವ ಪೊಲೀಸರು, ಚಿತ್ರದ ಡೈಲಾಗ್‌ ಅನ್ನು ಬಳಸಿ ರಸ್ತೆಯಲ್ಲಿ ಓವರ್‌ಟೇಕ್ ಮಾಡುವಾಗ ಜಾಗರೂಕರಾಗಿರಲು ತಿಳಿಸಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಲು ಡಾ. ವಿಷ್ಣುವರ್ಧನ್‌ ಮೊಮ್ಮಗ ಜ್ಯೇಷ್ಠ ರೆಡಿ; ಮೊದಲ ಸಿನಿಮಾಕ್ಕಾಗಿ ಭರ್ಜರಿ ತಯಾರಿ‌

ಸ್ಯಾಂಡಲ್‌ವುಡ್‌ಗೆ ವಿಷ್ಣು ಮೊಮ್ಮಗನ ಎಂಟ್ರಿ; ತಾತನ ಹಾದಿಯಲ್ಲಿ ಜ್ಯೇಷ್ಠ

Dr Vishnuvardhan Grandson Jyeshtavardhan: ʻಸಾಹಸ ಸಿಂಹʼ ಡಾ. ವಿಷ್ಣುವರ್ಧನ್‌ ಅವರ ಮೊಮ್ಮಗ ಜ್ಯೇಷ್ಠವರ್ಧನ್‌ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ನಟ ಅನಿರುದ್ಧ್ ಜತ್ಕರ್ ಪುತ್ರನಾದ ಜ್ಯೇಷ್ಠ, ನೇರವಾಗಿ ನಟನೆಗೆ ಇಳಿಯದೆ ಕಳೆದ ಹಲವು ವರ್ಷಗಳಿಂದ ನೃತ್ಯ ಮತ್ತು ನಟನೆಯಲ್ಲಿ ಕಠಿಣ ತರಬೇತಿ ಪಡೆದಿದ್ದಾರೆ.

ʻಧುರಂಧರ್‌ 2ʼ ಸಿನಿಮಾದ ಹಿಟ್‌ ಆಗಿದ್ದಕ್ಕೆ ರಣವೀರ್‌ ಸಿಂಗ್‌ಗೆ 5 ಕೋಟಿಯ ಹಮ್ಮರ್‌ ಕಾರ್‌ ಉಡುಗೊರೆಯಾಗಿ ಸಿಕ್ತಾ? ಈ ಸುದ್ದಿಯ ಅಸಲಿಯತ್ತೇನು?

ರಣವೀರ್ ಸಿಂಗ್‌ಗೆ 5 ಕೋಟಿಯ ಹಮ್ಮರ್ ಗಿಫ್ಟ್? ಅಸಲಿ ಸತ್ಯ ಇಲ್ಲಿದೆ!

Ranveer Singh: ʻಧುರಂಧರ್‌ 2ʼ ಚಿತ್ರವು ವಿಶ್ವದಾದ್ಯಂತ 1100 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ಈ ಯಶಸ್ಸಿನ ಖುಷಿಯಲ್ಲಿ ನಿರ್ದೇಶಕ ಆದಿತ್ಯ ಧರ್ ಅವರು ರಣವೀರ್‌ಗೆ 5 ಕೋಟಿ ಮೌಲ್ಯದ ಹಮ್ಮರ್ ಕಾರನ್ನು ಉಡುಗೊರೆ ನೀಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಆದರೆ, ಇದು ನಿಜವೇ?

ಈ ವರ್ಷದ ಮೊದಲ ಬ್ಲಾಕ್‌ ಬಸ್ಟರ್‌ ಹಿಟ್‌ ʻಲವ್‌ ಮಾಕ್ಟೇಲ್‌ 3ʼ; ವಿದೇಶದಲ್ಲೂ ರಿಲೀಸ್‌ ಆಯ್ತು ಕನ್ನಡ ಸಿನಿಮಾ

ಯುಎಸ್‌ಎ, ಆಸ್ಟ್ರೇಲಿಯಾದಲ್ಲಿ 'ಲವ್ ಮಾಕ್ಟೇಲ್ 3' ಕ್ರೇಜ್ ಶುರು

Love Mocktail 3: ಡಾರ್ಲಿಂಗ್ ಕೃಷ್ಣ ನಿರ್ದೇಶನದ 'ಲವ್ ಮಾಕ್ಟೇಲ್ 3' ಸಿನಿಮಾ 2026ರ ಮೊದಲ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೆ ಮಾಡಿರುವ ಈ ಸಿನಿಮಾ ಈಗ ಅಮೆರಿಕ, ಆಸ್ಟ್ರೇಲಿಯಾ ಮತ್ತು ಜರ್ಮನಿಯಂತಹ ದೇಶಗಳಲ್ಲೂ ಬಿಡುಗಡೆಯಾಗಿದೆ.

ʻಲವ್‌ ಮಾಕ್ಟೇಲ್‌ 3ʼ ಚಿತ್ರದ ಕೃತಿಚೌರ್ಯ ವಿವಾದಕ್ಕೆ‌ ಬಿತ್ತು ಬ್ರೇಕ್; ಫಿಲ್ಮ್‌ ಚೇಂಬರ್‌ನಲ್ಲಿ ನಡೆದಿದ್ದೇನು?

'ಲವ್ ಮಾಕ್ಟೇಲ್ 3' ಕಥೆ ವಿವಾದ ಅಂತ್ಯ; ಫಿಲ್ಮ್ ಚೇಂಬರ್ ಸಭೆಯಲ್ಲಿ ಇತ್ಯರ್ಥ

Love Mocktail 3 Story Dispute: ನಟ ಡಾರ್ಲಿಂಗ್ ಕೃಷ್ಣ ಅವರ 'ಲವ್ ಮಾಕ್ಟೇಲ್ 3' ಚಿತ್ರದ ಕಥೆಯ ಕುರಿತು ಕೇಳಿಬಂದಿದ್ದ ಕೃತಿಚೌರ್ಯದ ವಿವಾದವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಂತ್ಯಗೊಂಡಿದೆ. ಡಾ. ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಎರಡೂ ಚಿತ್ರಗಳ ಕಥೆಗಳು ವಿಭಿನ್ನವಾಗಿವೆ ಎಂದು ನಿರ್ಧರಿಸಲಾಗಿದೆ.

ಒಂದೇ ಮಾತಿಗೆ 40 ಲಕ್ಷ ರೂ. ಕಳುಹಿಸಿಕೊಟ್ಟಿದ್ದ ನಟ ರಾಮ್‌ ಚರಣ್;‌ ಚಿರು ಪುತ್ರನ ಉದಾರತೆಯನ್ನು ಕೊಂಡಾಡಿದ ಡ್ಯಾನ್ಸ್‌ ಮಾಸ್ಟರ್‌

ʻಕಡಿಮೆಯಾದ್ರೆ ಹೇಳಿ ಹಣ ಕೊಡ್ತೀನಿʼ; ರಾಮ್ ಚರಣ್ ಉದಾರತೆಗೆ ಇಲ್ಲಿದೆ ಸಾಕ್ಷಿ

Ram Charan Birthday: ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ಅವರ ಜನ್ಮದಿನದಂದು (ಮಾ.27) ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅವರು ಒಂದು ವಿಚಾರವನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ರಾಮ್‌ ಚರಣ್‌ ಅವರ ಉದಾರತೆಯನ್ನು ಕೊಂಡಾಡಿದ್ದಾರೆ.

ಕನ್ನಡ - ತಮಿಳಿನಲ್ಲಿ ರಿಲೀಸ್‌ ಆಯ್ತು ʻಲೈಫ್ ಟುಡೇʼ ಚಿತ್ರದ ಹಾಡು; ಕಿರಣ್‌ ಆದಿತ್ಯಗೆ ಜೋಡಿಯಾದ ಲೇಖಾ ಚಂದ್ರ

Kiran Adithya: 'ಲೈಫ್ ಟುಡೇ' ಚಿತ್ರದ ʻನೀನೇ ನೀನೇʼ ಸಾಂಗ್‌ ರಿಲೀಸ್

Life Today Movie: ಕಿರಣ್ ಆದಿತ್ಯ ಮತ್ತು ಲೇಖಾ ಚಂದ್ರ ಅಭಿನಯದ 'ಲೈಫ್ ಟುಡೇ' ಚಿತ್ರದ "ನೀನೇ ನೀನೇ" ಹಾಡು ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಕಾಂತ ಕನ್ನಲ್ಲಿ ನಿರ್ದೇಶನದ ಈ ಮಹಿಳಾ ಪ್ರಧಾನ ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದು, ಕವಿರಾಜ್ ಸಾಹಿತ್ಯ ಬರೆದಿದ್ದಾರೆ.

ʻರಾಮರಸʼ ಚಿತ್ರಕ್ಕೆ ಗುರು ಸಿದ್ಧನಾಗಿ ಎಂಟ್ರಿ ಕೊಟ್ಟ ಪ್ರಜ್ವಲ್‍ ದೇವರಾಜ್; ʻಬಿಗ್‌ ಬಾಸ್‌ʼ ಕಾರ್ತಿಕ್‌ ಮಹೇಶ್‌ಗೆ ಸಿಕ್ತು ಹೊಸ ಬಿರುದು

'ರಾಮರಸ' ಅಖಾಡಕ್ಕೆ ಗುರು ಸಿದ್ಧನಾಗಿ ನಟ ಪ್ರಜ್ವಲ್ ದೇವರಾಜ್ ಎಂಟ್ರಿ

Ramarasa Movie Update: ಗುರು ದೇಶಪಾಂಡೆ ನಿರ್ಮಾಣದ ಮತ್ತು ಬಿ. ಎಂ. ಗಿರಿರಾಜ್ ನಿರ್ದೇಶನದ 'ರಾಮರಸ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ 'ಗುರು ಸಿದ್ಧ' ಎಂಬ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಅಲೆಮಾರಿ 'ಸುಡುಗಾಡು ಸಿದ್ಧ' ಸಮುದಾಯದ ಹಿನ್ನೆಲೆ ಹೊಂದಿರುವ ಈ ಪಾತ್ರದ ಟೀಸರ್ ಅನ್ನು ಅವದೂತ ವಿನಯ್ ಗುರೂಜಿ ಬಿಡುಗಡೆ ಮಾಡಿದ್ದಾರೆ.

ಮಲಯಾಳಂ ಚಿತ್ರರಂಗದತ್ತ ಹೊರಟ ರಾಧಿಕಾ ಕುಮಾರಸ್ವಾಮಿ; ಬಿಗ್‌ ಬ್ಯಾನರ್‌ನಲ್ಲಿ ಶುರುವಾಗಲಿದೆ ಹೊಸ ಸಿನಿಮಾ

ಮಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ರಾಧಿಕಾ ಕುಮಾರಸ್ವಾಮಿ!

Radhika Malayalam Movie: ನಟಿ ರಾಧಿಕಾ ಕುಮಾರಸ್ವಾಮಿ ಅವರು ಶೀಘ್ರದಲ್ಲೇ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆಯೊಂದು ಇವರನ್ನು ಸಂಪರ್ಕಿಸಿದ್ದು, ಕಥೆ ಇಷ್ಟವಾಗಿರುವ ಕಾರಣ ಡೇಟ್ಸ್ ಹೊಂದಾಣಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಸ್ವತಃ ರಾಧಿಕಾ ಅವರೇ ಖಚಿತಪಡಿಸಿದ್ದಾರೆ.

Ranveer Singh: ಬಾಕ್ಸ್ ಆಫೀಸ್‌ನಲ್ಲಿ 'ಧುರಂಧರ್ 2' ಸುನಾಮಿ; ಈವರೆಗೂ ಸೃಷ್ಟಿಯಾದ 9 ಅದ್ಭುತ ದಾಖಲೆಗಳು ಇಲ್ಲಿವೆ ನೋಡಿ

Ranveer Singh: ʻಧುರಂಧರ್ 2' ಸೃಷ್ಟಿಸಿದ 9 ಸಾರ್ವತ್ರಿಕ ದಾಖಲೆಗಳು

Dhurandhar 2 Box Office Records: ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಬಿಡುಗಡೆಯಾದ ಕೇವಲ ಏಳು ದಿನಗಳಲ್ಲಿ ವಿಶ್ವದಾದ್ಯಂತ 1006.50 ಕೋಟಿ ರೂಪಾಯಿ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಮೂಲಕ ಅತಿ ವೇಗವಾಗಿ ಸಾವಿರ ಕೋಟಿ ಕ್ಲಬ್ ಸೇರಿದ ಭಾರತದ ಎರಡನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ಹಲವು ದಾಖಲೆಗಳನ್ನು ಸೃಷ್ಟಿಸಿದೆ.

‌ʻವಿರೋಶ್‌ʼ ಮದುವೆ ಸಂಭ್ರಮಕ್ಕೆ ಒಂದು ತಿಂಗಳು; ಈ ಖುಷಿಯ ಕ್ಷಣದ ಬಗ್ಗೆ ವಿಜಯ್‌ ದೇವರಕೊಂಡ - ರಶ್ಮಿಕಾ ಹೇಳಿದ್ದೇನು?

'ವಿರೋಶ್' ದಾಂಪತ್ಯಕ್ಕೆ 1 ತಿಂಗಳ ಸಂಭ್ರಮ; ರಶ್ಮಿಕಾ-ವಿಜಯ್ ಹೇಳಿದ್ದೇನು?

Rashmika Mandanna Vijay Deverakonda Wedding: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ವಿವಾಹದ ಒಂದು ತಿಂಗಳ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಈ ಸುಂದರ ಪಯಣಕ್ಕೆ ಕಾರಣರಾದ ಆಪ್ತ ಗೆಳತಿ ಐಶ್ವರ್ಯಾ ಮತ್ತು ವೆಡ್ಡಿಂಗ್ ಪ್ಲಾನರ್ ಪ್ರಿಯಾ ಮಗಂತಿ ಅವರಿಗೆ ಈ ಜೋಡಿ ಧನ್ಯವಾದ ಅರ್ಪಿಸಿದೆ.

ಕರ್ನಾಟಕದಲ್ಲಿ 70 ಕೋಟಿ ರೂ. ದಾಟಿದ ʻಧುರಂಧರ್‌ 2ʼ ಕಲೆಕ್ಷನ್‌; ಏಳೇ ದಿನದಲ್ಲಿ ಪರಭಾಷಾ ಚಿತ್ರಗಳ ದಾಖಲೆಗಳು ಧೂಳೀಪಟ!

ಕರ್ನಾಟಕದಲ್ಲಿ 'ಧುರಂಧರ್ 2' ಅಬ್ಬರ; ಪರಭಾಷಾ ಚಿತ್ರಗಳ ರೆಕಾರ್ಡ್ ಧೂಳೀಪಟ

Dhurandhar 2: ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಕರ್ನಾಟಕದಲ್ಲಿ ಕೇವಲ ಏಳು ದಿನಗಳಲ್ಲಿ 73 ಕೋಟಿ ರೂಪಾಯಿ ಗಳಿಸಿ ಐತಿಹಾಸಿಕ ದಾಖಲೆ ಬರೆದಿದೆ. ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಶೋಗಳು ಮತ್ತು ಆರಂಭಿಕ ದಿನಗಳ ದುಬಾರಿ ಟಿಕೆಟ್ ದರ ಈ ಬೃಹತ್ ಗಳಿಕೆಗೆ ಕಾರಣವಾಗಿದೆ ಎನ್ನಬಹುದು.

ʻಆಪರೇಷನ್ ಸಿಂಧೂರ್‌ʼ ಕುರಿತ ಸಿನಿಮಾ ಮಾಡಲಿದ್ದಾರೆ ʻಕಾಶ್ಮೀರ್‌ ಫೈಲ್ಸ್‌ʼ ವಿವೇಕ್‌ ಅಗ್ನಿಹೋತ್ರಿ; ಅದ್ರೆ, ಡೈರೆಕ್ಟರ್‌ ಬಗ್ಗೆ ನೆಟ್ಟಿಗರಿಗೆ ಬೇಸರವೇಕೆ?

ವಿವೇಕ್ ಅಗ್ನಿಹೋತ್ರಿ ಕೈಸೇರಿದ 'ಆಪರೇಷನ್ ಸಿಂಧೂರ್' ಸಿನಿಮಾ!

Operation Sindoor Movie: ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ 'ಆಪರೇಷನ್ ಸಿಂಧೂರ್' ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. 2025ರಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಪಾಕಿಸ್ತಾನದೊಳಗೆ ನುಗ್ಗಿ ನಡೆಸಿದ ಗುಪ್ತ ಕಾರ್ಯಾಚರಣೆಯ ಕಥೆ ಇದಾಗಿದೆ. ಈ ಚಿತ್ರಕ್ಕೆ ಭೂಷಣ್ ಕುಮಾರ್ ನಿರ್ಮಾಪಕರು.

Loading...