ಅಮೆರಿಕದ ಸಾಲದ ಬೆಟ್ಟವನ್ನು ಕರಗಿಸಲಿದೆಯೇ ಬಿಟ್ ಕಾಯಿನ್ ?!
“ಅಮೆರಿಕವು ಬಿಟ್ ಕಾಯಿನ್ ಮತ್ತು ಬಂಗಾರವನ್ನು ಬಳಸಿಕೊಂಡು ಸಾಲದ ಬೆಟ್ಟವನ್ನು ಕರಗಿಸಲಿದೆ. ಇದು ಹಣಕಾಸು ಜಗತ್ತಿನ ರೂಪುರೇಷೆಗಳನ್ನೇ ಬದಲಿಸಲಿದೆ. ಕ್ರಿಪ್ಟೊ ಕರೆನ್ಸಿಯ ಮೂಲಕ ಸಾಂಪ್ರದಾ ಯಿಕ ಕರೆನ್ಸಿ ವ್ಯವಸ್ಥೆಗೆ ಪರ್ಯಾಯವನ್ನು ಅಳವಡಿಸಲಿದೆ" ಎನ್ನುತ್ತಾರೆ ಕೊಬ್ಯಾ ಕೋವ್. ಆದರೆ ಈ ಪ್ರಯತ್ನದಿಂದ ಜಾಗತಿಕ ಹಣಕಾಸು ವ್ಯವಸ್ಥೆ ಅಸ್ಥಿರವಾಗಬಹುದು ಎಂದೂ ಅವರು ಎಚ್ಚರಿಸಿದ್ದಾರೆ.