ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೈಕ್ರೊಸಾಫ್ಟ್‌ ಮಾರುಕಟ್ಟೆ ಮೌಲ್ಯವನ್ನು ಹಿಂದಿಕ್ಕಿದ ಬೆಳ್ಳಿ!

Investment In Silver: ಬೆಳ್ಳಿಯ ದರ ಪ್ರತಿ ಕೆಜಿಗೆ 2 ಲಕ್ಷದ 4 ಸಾವಿರ ರುಪಾಯಿಗೆ ಏರಿಕೆಯಾಗಿದೆ. ಮಾತ್ರವಲ್ಲದೆ ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ ಐಟಿ ದಿಗ್ಗಜ ಕಂಪನಿ ಮೈಕ್ರೊಸಾಫ್ಟ್‌ ಅನ್ನೂ ಹಿಂದಿಕ್ಕಿದ್ದು, ಜಗತ್ತಿನ 5ನೇ ಅತಿ ದೊಡ್ಡ ಆಸ್ತಿಯಾಗಿ ಹೊರಹೊಮ್ಮಿದೆ.

ಮೈಕ್ರೊಸಾಫ್ಟ್‌ ಮಾರುಕಟ್ಟೆ ಮೌಲ್ಯವನ್ನು ಹಿಂದಿಕ್ಕಿದ ಬೆಳ್ಳಿ!

ಸಾಂಧರ್ಬಿಕ ಚಿತ್ರ -

ನವದೆಹಲಿ: ಬೆಳ್ಳಿಯ ದರ ಪ್ರತಿ ಕೆಜಿಗೆ 2 ಲಕ್ಷದ 4 ಸಾವಿರ ರುಪಾಯಿಗೆ ಏರಿಕೆಯಾಗಿದೆ. ಮಾತ್ರವಲ್ಲದೆ ಮಾರುಕಟ್ಟೆ (Investment In Silver) ಮೌಲ್ಯದ ದೃಷ್ಟಿಯಿಂದ ಐಟಿ ದಿಗ್ಗಜ ಕಂಪನಿ ಮೈಕ್ರೊಸಾಫ್ಟ್‌ ಅನ್ನೂ ಹಿಂದಿಕ್ಕಿದ್ದು, ಜಗತ್ತಿನ 5ನೇ ಅತಿ ದೊಡ್ಡ ಆಸ್ತಿಯಾಗಿ ಹೊರಹೊಮ್ಮಿದೆ. ಬೆಳ್ಳಿಯ ಮಾರುಕಟ್ಟೆ ಮೌಲ್ಯ ಈಗ 3.59 ಟ್ರಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ. ಈ ವರ್ಷ ಬೆಳ್ಳಿಯ ಮಾರುಕಟ್ಟೆ ಮೌಲ್ಯದಲ್ಲಿ 115% ಹೆಚ್ಚಳವಾಗಿದೆ.

ಅಮೆರಿಕದ ಫೆಡರಲ್‌ ರಿಸರ್ವ್‌ ತನ್ನ ಬಡ್ಡಿ ದರವನ್ನು ಡಿಸೆಂಬರ್‌ 10ರಂದು 3.75% ರಿಂದ 3.50%ಕ್ಕೆ ಇಳಿಸಿರುವುದರಿಂದ ಹೂಡಿಕೆದಾರರ ಗಮನ ಬೆಳ್ಳಿಯ ಮೇಲಿನ ಹೂಡಿಕೆಗೆ ಹರಿದಿದೆ. ಇದರ ಪರಿಣಾಮ ದರ ಏರುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಬೆಳ್ಳಿಯ ದರ 29 ಡಾಲರ್‌ ಇತ್ತು. ಈಗ ಪ್ರತಿ ಔನ್ಸಿಗೆ 63 ಡಾಲರ್‌ಗೆ ಏರಿಕೆಯಾಗಿದೆ. ಫೆಡರಲ್‌ ರಿಸರ್ವ್‌ ಬಡ್ಡಿ ದರ ಇಳಿಸಿದಾಗ ಏನಾಗುತ್ತದೆ ಎಂದರೆ, ಹೂಡಿಕೆದಾರರಿಗೆ ಬಾಂಡ್‌ ಗಳ ಮೇಲಿನ ಹೂಡಿಕೆಗೆ ಸಿಗುವ ಆದಾಯ ಕೂಡ ಕಡಿಮೆಯಾಗುತ್ತದೆ. ಆಗ ಚಿನ್ನ-ಬೆಳ್ಳಿಯ ಮೇಲೆ ಅವರು ಹೆಚ್ಚು ಹೂಡಿಕೆ ಮಾಡುವುದರಿಂದ ಅದರ ದರ ಏರುತ್ತದೆ.

ವಿಡಿಯೋ

ಹಾಗಾದರೆ ಬೆಳ್ಳಿಯ ದರ ಏರಿಕೆಗೆ ಇತರ ಪ್ರಮುಖ ಕಾರಣಗಳೇನು ಎಂದು ನೋಡೋದಿದ್ರೆ, ಬೆಳ್ಳಿ ಈ ಕೇವಲ ಸ್ಟೋರೇಜ್‌ ವಾಲ್ಯೂ ಅನ್ನು ಮಾತ್ರ ಒಳಗೊಂಡಿಲ್ಲ. ಉದ್ದಿಮೆಗಳಲ್ಲಿ ಕೂಡ ನಿರ್ಣಾಯಕವಾಗಿ ಬಳಕೆಯಾಗುತ್ತಿದೆ. ಕ್ಲೀನ್‌ ಎನರ್ಜಿ ಟ್ರಾನ್ಸಿಶನ್‌ ಸಾಧನಗಳಿಗೆ ಅಗತ್ಯವಾಗಿದೆ. ಸೋಲಾರ್‌ ಪ್ಯಾನೆಲ್‌ ಅಥವಾ ಸೌರ ಫಲಕಗಳಿಗೆ, ಇವಿ ಬ್ಯಾಟರಿಗಳಿಗೆ, ಸೆಮಿಕಂಡಕ್ಟರ್‌ಗಳಿಗೆ, ಮೆಡಿಕಲ್‌ ಡಿವೈಸ್‌ಗಳು, ರೊಬಾಟಿಕ್ಸ್‌, ಸ್ಯಟಲೈಟ್‌ಗಳು ಮತ್ತು ಅಡ್ವಾನ್ಸ್ಡ್‌ ಎಲೆಕ್ಟ್ರಾನಿಕ್ಸ್‌ ವಲಯದಲ್ಲಿ ಬೆಳ್ಳಿಯು ಬಳಕೆಯಾಗುತ್ತಿದೆ. ಉದ್ದಿಮೆಗಳ ವಲಯದಲ್ಲಿ ಉಂಟಾಗಿರುವ ಭಾರಿ ಬೇಡಿಕೆಯನ್ನು ಪೂರೈಸಲು ಬೆಳ್ಳಿಯ ಗಣಿಗಾರಿಕೆಯಲ್ಲಿ ತೊಡಗಿಸಿರುವವರಿಗೆ ಸಾಧ್ಯವಾಗುತ್ತಿಲ್ಲ.

ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಯಾಗುತ್ತಿದೆ. ಹಲವು ದೇಶಗಳಲ್ಲಿ ಹಣದುಬ್ಬರ ಏರುಗತಿಯಲ್ಲಿದೆ. ಬಡ್ಡಿ ದರದ ಒತ್ತಡವನ್ನು ಹಲವು ಸೆಂಟ್ರಲ್‌ ಬ್ಯಾಂಕ್‌ಗಳು ಎದುರಿಸುತ್ತಿವೆ. ದೇಶಗಳ ಸಾಲಗಳು ಏರುಗತಿಯಲ್ಲಿವೆ. ಹೂಡಿಕೆದಾರರು ಹಣಕಾಸು ನೀತಿಗಳ ಟೂಲ್ಸ್‌ಗಳ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ರಿಯಲ್‌ ಅಸೆಟ್‌ಗಳ ಮೇಲೆ ಹೂಡಿಕೆಯನ್ನು ಹೆಚ್ಚಿಸುತ್ತಿದ್ದಾರೆ. ಮುದ್ರಿಸಲು ಸಾಧ್ಯವಿಲ್ಲದ, ತುರುಚಲು ಸಾಧ್ಯವಿಲ್ಲದ, ಹಣದುಬ್ಬರವನ್ನು ನಿಭಾಯಿಸಬಲ್ಲ ಅಸೆಟ್‌ ಕ್ಲಾಸ್‌ ಗಳನ್ನು ನೋಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಳ್ಳಿ ನಿರ್ಣಾಯಕವಾಗುತ್ತಿದೆ. ಬೆಳ್ಳಿಯು ತಂತ್ರಜ್ಞಾನ ಅಧರಿತ ಇಂಡಸ್ಟ್ರಿಯಲ್ಲೂ ಬೇಕಾಗಿರುವುದು ಅದರ ಪ್ಲಸ್‌ ಪಾಯಿಂಟ್‌ ಆಗಿದೆ.

ಬೆಳ್ಳಿಯಲ್ಲಿ ಹೇಗೆ ಹೂಡಿಕೆ ಮಾಡಬಹುದು?:

ಭಾರತದಲ್ಲಿ ನೀವು ಬೆಳ್ಳಿಯಲ್ಲಿ ಹೂಡಿಕೆ ಮಾಡಬೇಕಿದ್ದರೆ ಬೆಳ್ಳಿಯ ನಾಣ್ಯಗಳು, ಗಟ್ಟಿಗಳು, ಆಭರಣಗಳು, ದೀಪಗಳನ್ನು ಖರೀದಿಸಬಹುದು. ಇದು ಭೌತಿಕವಾಗಿ ಹೂಡಿಕೆ ಮಾಡುವ ಪರಂಪರಾನುಗತ ವಿಧಾನ. ಇನ್ನೂ ಕೆಲವು ಆಯ್ಕೆಗಳು ಇವೆ. ನೀವು ಸಿಲ್ವರ್‌ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ಗಳಲ್ಲಿ ಅಥವಾ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಬಹುದು. ಇಟಿಎಫ್‌ಗಳಲ್ಲಿ ಬೆಳ್ಳಿಯ ಮಾರುಕಟ್ಟೆ ಮೌಲ್ಯವನ್ನು ಅಧರಿಸಿ ಆದಾಯ ಸಿಗುತ್ತದೆ. ಇಟಿಎಫ್‌ನಲ್ಲಿ ಸಾಮಾನ್ಯವಾಗಿ ಒಂದು ಯುನಿಟ್‌ ಎಂದರೆ ಒಂದು ಗ್ರಾಮ್‌ ಬೆಳ್ಳಿಯ ಮೌಲ್ಯವಾಗಿರುತ್ತದೆ. ಭೌತಿಕ ಬೆಳ್ಳಿಯಾದರೆ ಅದನ್ನು ಕಳವಾಗದಂತೆ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಾಗುತ್ತದೆ. ಆದರೆ ಇಟಿಎಫ್‌ಗಳಲ್ಲಿ ಅಂಥ ಆತಂಕ ಇರುವುದಿಲ್ಲ. ಬಿಎಸ್‌ಇ, ಎನ್‌ಎಸ್‌ಇಗಳಲ್ಲಿ ಮಾರುಕಟ್ಟೆ ವೇಳೆಯಲ್ಲಿ ಈ ಯುನಿಟ್‌ಗಳ ಕೊಡು-ಕೊಳ್ಳುವಿಕೆಯನ್ನು ಮಾಡಬಹುದು. ಸಿಲ್ವರ್‌ ಇಟಿಎಫ್‌ಗಳಲ್ಲಿ ಕನಿಷ್ಠ 100 ರುಪಾಯಿಯಿಂದಲೂ ಹೂಡಿಕೆ ಆರಂಭಿಸಬಹುದು.

ಡಿಜಿಟಲ್‌ ಗೋಲ್ಡ್‌ನಲ್ಲಿ ಹೂಡಿಕೆ ಅಪಾಯಕಾರಿ; ಹೂಡಿಕೆದಾರರಿಗೆ ಸೆಬಿ ಎಚ್ಚರಿಕೆ

ಬೆಳ್ಳಿಯ ಕೆಲವು ಇಟಿಎಫ್‌ಗಳು: ಐಸಿಐಸಿಐ ಪ್ರುಡೆನ್ಷಿಯಲ್‌ ಸಿಲ್ವರ್‌ ಇಟಿಎಫ್‌, ನಿಪ್ಪೋನ್‌ ಇಂಡಿಯಾ ಸಿಲ್ವರ್‌ ಇಟಿಎಫ್‌, ಎಚ್‌ಡಿಎಫ್‌ಸಿ ಸಿಲ್ವರ್‌ ಇಟಿಎಫ್‌, ಆದಿತ್ಯ ಬಿರ್ಲಾ ಸನ್‌ ಲೈಫ್‌ ಇಟಿಎಫ್.