ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲಿಫ್ಟ್‌ ಬಳಸುವಾಗ ಎಚ್ಚರ; ಸಾಕು ನಾಯಿ ದಾಳಿಯಿಂದ ಮೂವರಿಗೆ ಗಾಯ: ಆಕ್ರಮಣಕಾರಿ ಶ್ವಾನ ನಿಯಂತ್ರಿಸಲಾಗದೆ ಅಸಹಾಯಕಳಾಗಿ ನಿಂತ ಮಾಲಕಿ

Pet dog attack: ಸಾಕು ನಾಯಿಯೊಂದು ಲಿಫ್ಟ್ ಒಳಗೆ ಆಕ್ರಮಣಕಾರಿಯಾಗಿ ವರ್ತಿಸಿ ಮೂವರು ಯುವತಿಯರ ಮೇಲೆ ದಾಳಿ ಮಾಡಿದ ಘಟನೆ ಮಹಾರಾಷ್ಟ್ರದ ಮುಂಬೈಯ ಬಹುಮಹಡಿ ವಸತಿ ಕಟ್ಟಡದಲ್ಲಿ ನಡೆದಿದೆ. ಲಿಫ್ಟ್ ಬಾಗಿಲು ಮುಚ್ಚುತ್ತಿದ್ದಂತೆ, ನಾಯಿ ಇದ್ದಕ್ಕಿದ್ದಂತೆ ಆಕ್ರಮಣಕಾರಿಯಾಗಿ ವರ್ತಿಸಿ ಯುವತಿಯರ ಮೇಲೆ ದಾಳಿ ಮಾಡಿತು.

ಲಿಫ್ಟ್ ಒಳಗೆ ದಾಳಿ ನಡೆಸಿದ ಸಾಕು ನಾಯಿ; ವಿಡಿಯೊ ವೈರಲ್‌

ಜೆಮಿನಿ ಎಐ ರಚಿತ ಚಿತ್ರ -

Priyanka P
Priyanka P Jul 18, 2026 8:40 PM

ಮುಂಬೈ, ಜು. 18: ಸಾಕು ನಾಯಿಯೊಂದು ಲಿಫ್ಟ್ ಒಳಗೆ ಆಕ್ರಮಣಕಾರಿಯಾಗಿ ವರ್ತಿಸಿ ಮೂವರು ಯುವತಿಯರ ಮೇಲೆ ದಾಳಿ ಮಾಡಿದ ಘಟನೆ ಮಹಾರಾಷ್ಟ್ರದ ಮುಂಬೈಯ (Mumbai) ಬಹುಮಹಡಿ ವಸತಿ ಕಟ್ಟಡದಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (viral video) ಆಗಿದೆ. ಗುರುವಾರ (ಜುಲೈ 16) ಸಂಜೆ ಮಲಾಡ್‌ನ ಪಶ್ಚಿಮ ಉಪನಗರದಲ್ಲಿರುವ ಶೇತ್ ಐರೀನ್ ಟವರ್‌ನಲ್ಲಿ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಯ ಸಂಪೂರ್ಣ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊ ವೈರಲ್ ಆಗಿದೆ.

ಯಾರಿಗೂ ಯಾವುದೇ ಗಂಭೀರ ಗಾಯವಾಗಿರುವ ಬಗ್ಗೆ ವರದಿಯಾಗಿಲ್ಲ. ಜತೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆ ತನ್ನ ಸಾಕುಪ್ರಾಣಿಯನ್ನು ಲಿಫ್ಟ್‌ನಲ್ಲಿ ಕರೆದೊಯ್ಯಲು ಅನುಮತಿ ಪಡೆದಿದ್ದಾಗಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ, ಯುವತಿಯರು ಲಿಫ್ಟ್ ಒಳಗೆ ಇರುವಾಗ ಮಹಿಳೆಯೊಬ್ಬರು ತನ್ನ ಸಾಕು ನಾಯಿಯೊಂದಿಗೆ ಪ್ರವೇಶಿಸುತ್ತಿರುವುದನ್ನು ತೋರಿಸಲಾಗಿದೆ.

ಇಲ್ಲಿದೆ ವಿಡಿಯೊ:



ಲಿಫ್ಟ್ ಬಾಗಿಲು ಮುಚ್ಚುತ್ತಿದ್ದಂತೆ, ನಾಯಿ ಆಕ್ರಮಣಕಾರಿಯಾಗಿ ವರ್ತಿಸಿ ಯುವತಿಯರ ಮೇಲೆ ದಾಳಿ ಮಾಡಿತು. ಸೀಮಿತ ಜಾಗದಲ್ಲಿ ನಾಯಿಯ ಆಕ್ರಮಣದಿಂದ ಯುವತಿಯರು ಭಯಗೊಂಡರು. ನಾಯಿಯ ಮಾಲಕಿ ಅದನ್ನು ತಡೆಯಲು ಪ್ರಯತ್ನಿಸುತ್ತಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ. ಫ್ಲೋರ್‌ ಬರುತ್ತಿದ್ದಂತೆ ಇಬ್ಬರು ಯುವತಿಯರು ಲಿಫ್ಟ್‌ನಿಂದ ಹೊರಗೆ ಓಡಿದ್ದಾರೆ. ಆದರೆ, ಮತ್ತೊಬ್ಬ ಯುವತಿಗೆ ಸಾಧ್ಯವಾಗಲಿಲ್ಲ.

ಶೌಚಾಲಯದ ನೀರು ಬಳಸಿ ನಿಂಬೆ ಜ್ಯೂಸ್ ತಯಾರಿಸಿದ ವ್ಯಾಪಾರಿ

ಯುವತಿ ಭೀತಿಗೊಂಡೇ ಲಿಫ್ಟ್‌ನೊಳಗೆ ಉಳಿದ್ದಳು. ಮಾಲಕಿ ಶ್ವಾನವನ್ನು ಗಟ್ಟಿಯಾಗಿ ಹಿಡಿದಿಟ್ಟೊಕೊಂಡಿದ್ದಳು. ಅದಾಗ್ಯೂ ಆಕೆಯ ಹಿಡಿತದಿಂದ ತಪ್ಪಿಸಿಕೊಂಡು ನಾಯಿ ದಾಳಿ ನಡೆಸಿದೆ. ಬಳಿಕ ಆ ಯುವತಿ ಲಿಫ್ಟ್ ತೆರೆದಾಗ ಹೊರಗೆ ಓಡಿದ್ದಾಳೆ. ಈ ವೇಳೆ ಶ್ವಾನವು ಅವಳನ್ನು ಬೆನ್ನಟ್ಟಿದೆ. ಈ ವೇಳೆ ಮಾಲಕಿ ಹರಸಾಹಸಪಟ್ಟು, ಕೂತು, ನಿಂತು ಸಾಕು ನಾಯಿಯನ್ನು ಹಿಡಿದುಕೊಂಡಿದ್ದಾಳೆ.

ಇನ್ನು ನಾಯಿಗೆ ಬಾಯಿಪಟ್ಟಿಯನ್ನು ಅಳವಡಿಸಿದ್ದರಿಂದ ಭಾರಿ ದುರಂತ ತಪ್ಪಿದೆ. ಘಟನೆಯಲ್ಲಿ ಯಾರಿಗೂ ಹೆಚ್ಚಿನ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಆದರೆ, ಈ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನಿವಾಸಿಗಳಲ್ಲಿ ಕಳವಳ ಮೂಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.