ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆತ್ತಲಾಗಿ ದೇವಸ್ಥಾನದೊಳಗೆ ಪ್ರವೇಶಿಸಿ ವಿಗ್ರಹದ ಜತೆಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ; 1 ಲಕ್ಷ ರುಪಾಯಿ ಮನೆ ಬಾಡಿಗೆ ಪಾವತಿಸುತ್ತಿದ್ದವಳು ಇದ್ದಕ್ಕಿದ್ದಂತೆ ಸಾವಿಗೆ ಶರಣಾಗಿದ್ದು ಏಕೆ?

Woman jumping into a temple pond: ಮಹಿಳೆ ಬೆತ್ತಲೆಯಾಗಿ ದೇವಸ್ಥಾನಕ್ಕೆ ಪ್ರವೇಶಿಸಿದ್ದಾಳೆ. ನಂತರ ದೇವಿಯ ವಿಗ್ರಹವನ್ನು ಎತ್ತಿಕೊಂಡು ಕೊಳದ ಬಳಿಗೆ ನಡೆದುಕೊಂಡು ಹೋಗಿದ್ದಾಳೆ. ನಂತರ ಆಕೆ ವಿಗ್ರಹದೊಂದಿಗೆ ಕೆರೆಗೆ ಹಾರಿದ್ದಾಳೆ ಎನ್ನಲಾಗಿದೆ. ಆಕೆಯ ಮೃತದೇಹವನ್ನು ಪತ್ತೆಹಚ್ಚಲಾಗಿದ್ದರೂ, ವಿಗ್ರಹ ಇನ್ನೂ ಕಾಣೆಯಾಗಿದೆ.

ದೇವಿಯ ವಿಗ್ರಹದೊಂದಿಗೆ ಕೊಳಕ್ಕೆ ಜಿಗಿದ ಮಹಿಳೆ ಸಾವು

ಕೊಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ತೇಜಸ್ವಿನಿ -

Priyanka P
Priyanka P Jul 19, 2026 3:43 PM

ಹೈದರಾಬಾದ್‌, ಜು. 19: ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್ ಸಾವಿನ ತನಿಖೆಯೊಂದು ಅಸಾಮಾನ್ಯ ತಿರುವು ಪಡೆದುಕೊಂಡಿದೆ. ಮಹಿಳೆ ದೇವರ ವಿಗ್ರಹದೊಂದಿಗೆ ಕೊಳಕ್ಕೆ ಹಾರಿದ್ದು ಮೃತಪಟ್ಟಿದ್ದಾಳೆ. ಸದ್ಯ ಮೃತದೇಹ ಪತ್ತೆಯಾಗಿದ್ದು, ಅಧಿಕಾರಿಗಳು ನಾಪತ್ತೆಯಾದ ದೇವಾಲಯದ ವಿಗ್ರಹವನ್ನು ಹುಡುಕುತ್ತಿದ್ದಾರೆ. ತೆಲಂಗಾಣದ ಹೈದರಾಬಾದ್‌ನಲ್ಲಿ (Hyderabad) ಈ ಘಟನೆ ನಡೆದಿದೆ. ಆ ಮಹಿಳೆ ತನ್ನ ಸಾವಿಗೆ ಕೆಲವೇ ಕ್ಷಣಗಳ ಮೊದಲು ವಿಗ್ರಹವನ್ನು ಕೊಳಕ್ಕೆ ತಗೊಂಡು ಹೋಗಿದ್ದಳು ಎನ್ನಲಾಗಿದೆ. ಮೃತ ಮಹಿಳೆಯನ್ನು ತೇಜಸ್ವಿನಿ ಎಂದು ಗುರುತಿಸಲಾಗಿದೆ. ಆದರೆ ಪ್ರಕರಣದ ಹಲವು ಅಂಶಗಳು ಅಸ್ಪಷ್ಟವಾಗಿಯೇ ಉಳಿದಿದೆ ಎಂದು ಪೊಲೀಸರು ಹೇಳುತ್ತಿದ್ದು, ಆಕೆಯ ಅಂತಿಮ ಚಲನವಲನಗಳು ಮತ್ತು ಮನಸ್ಥಿತಿಯ ಬಗ್ಗೆ ವಿವರವಾದ ತನಿಖೆ ನಡೆಸಲಾಗುತ್ತಿದೆ.

ತೇಜಸ್ವಿನಿಯು ಬೆತ್ತಲೆಯಾಗಿ ದೇವಸ್ಥಾನದೊಳಕ್ಕೆ ಪ್ರವೇಶಿಸಿದ್ದಾಳೆ. ಈ ವೇಳೆ ಅಮ್ಮಾವರು ದೇವಿಯ ವಿಗ್ರಹವನ್ನು ಎತ್ತಿಕೊಂಡು ಕೊಳಕ್ಕೆ ಬಳಿಗೆ ಹೋಗಿದ್ದಾಳೆ. ನಂತರ ಅವಳು ನೀರಿಗೆ ಹಾರಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಮೃತದೇಹವನ್ನು ಪತ್ತೆಹಚ್ಚಲಾಗಿದ್ದರೂ, ವಿಗ್ರಹ ಇನ್ನೂ ಸಿಕ್ಕಿಲ್ಲ.

ಘಟನೆಗೆ ಕಾರಣವಾದ ಸಂದರ್ಭಗಳ ಬಗ್ಗೆ ಮಹತ್ವದ ಸುಳಿವನ್ನು ಈ ವಿಗ್ರಹವು ನೀಡಬಹುದೆಂದು ಅಧಿಕಾರಿಗಳು ಭಾವಿಸಿದ್ದಾರೆ. ಹೀಗಾಗಿ ಅದನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ವಿಪತ್ತು ನಿರ್ವಹಣಾ ಪಡೆ ದೋಣಿ ಹಾಗೂ ಸಿಬ್ಬಂದಿಯನ್ನು ಕೆರೆ ಬಳಿ ನಿಯೋಜಿಸಲಾಗಿದೆ. ತನಿಖಾಧಿಕಾರಿಗಳು ಮಹತ್ವದ ಸಾಕ್ಷ್ಯವೆಂದು ಪರಿಗಣಿಸಿರುವ ನಾಪತ್ತೆಯಾದ ವಿಗ್ರಹವನ್ನು ಹುಡುಕಲು ಕಾರ್ಯ ನಿರ್ವಹಿಸುತ್ತಿದ್ದಾರೆ.

ದೇವಾಲಯದ ಬಳಿ ಶೂ ಧರಿಸಿದ ಪ್ರವಾಸಿಗರು: ಹಿಂದೂಗಳ ಭಾವನೆಗೆ ಧಕ್ಕೆ ತಂದವರ ಬೆವರಿಳಿಸಿದ ಯುವಕ

ಪೊಲೀಸರು ತೇಜಸ್ವಿನಿಯ ತಾಯಿ ಅರುಣಾ ಅವರನ್ನು ವಿಚಾರಣೆ ನಡೆಸಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ತೇಜಸ್ವಿನಿ ಸಾವಿಗೆ ಮುನ್ನ ಬರೆದಿದ್ದಾಳೆ ಎನ್ನಲಾದ ಡೆತ್‌ನೋಟ್ ಪರಿಶೀಲಿಸುತ್ತಿದ್ದಾರೆ. ಅಲ್ಲದೆ, ಆಕೆಯ ಸಾವಿಗೆ ಮುನ್ನಾ ದಿನಗಳ ಹಣಕಾಸು ವ್ಯವಹಾರಗಳು, ಮೊಬೈಲ್ ಫೋನ್ ಹಿಸ್ಟ್ರಿ ಹಾಗೂ ಓಡಾಟದ ಮಾಹಿತಿಯನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ತನಿಖೆಯಲ್ಲಿ ಅಧಿಕಾರಿಗಳಿಗೆ ಹೆಚ್ಚುವರಿ ವಿವರಗಳು ಬೆಳಕಿಗೆ ಬಂದಿವೆ. ತೇಜಸ್ವಿನಿ ಹೈದರಾಬಾದ್‌ನಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಳು ಎಂಬುದು ತಿಳಿದುಬಂದಿದೆ. ತಿಂಗಳಿಗೆ ಸುಮಾರು 1 ಲಕ್ಷ ರುಪಾಯಿ ಬಾಡಿಗೆ ಪಾವತಿಸುತ್ತಿದ್ದಳು ಎನ್ನಲಾಗಿದೆ.

ಕಟ್ಟಡದ ಮೇಲಿನ ಎರಡು ಮಹಡಿ ಲಾಡ್ಜ್ ರೀತಿಯಲ್ಲಿ ನಿರ್ವಹಿಸಲಾಗುತ್ತಿತ್ತು ಎಂಬುದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ. ಈ ಕಟ್ಟಡ ಅಥವಾ ಅದರಲ್ಲಿದ್ದ ನಿವಾಸಿಗಳಿಗೆ ತೇಜಸ್ವಿನಿಯ ಸಾವಿಗೆ ಕಾರಣವಾದ ಘಟನೆಗಳೊಂದಿಗೆ ಯಾವುದೇ ಸಂಬಂಧವಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ತೇಜಸ್ವಿನಿಯ ಈ ಕೃತ್ಯದ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ಇನ್ನೂ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಸಿಸಿಟಿವಿ ದೃಶ್ಯಾವಳಿಗಳು, ಸಾಕ್ಷಿದಾರರ ಹೇಳಿಕೆಗಳು ಹಾಗೂ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮಹಿಳೆಯು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸೂಚಿಸುತ್ತವೆಯಾದರೂ, ಈ ಬಗ್ಗೆ ತನಿಖೆ ಮುಂದುವರಿದಿದೆ. ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಒತ್ತಿ ಹೇಳಿದ್ದಾರೆ.