ಅರಸು. ಕೃಷ್ಣ, ಯಡಿಯೂರಪ್ಪ ಅವರಿಗೆ ನಸೀಬು ಇತ್ತು
ಎಷ್ಟೇ ಆದರೂ ಮದ್ಯದ ದೊರೆಗಳು ಪಾರ್ಟಿ ಫಂಡು ಕೊಡುವವರು. ಅಂಥವರು ಬಂದು ರಾಜಶೇಖರ ಮೂರ್ತಿಯವರ ವಿರುದ್ಧ ಮಾತನಾಡುತ್ತಿದ್ದಾರೆ ಎಂದರೆ ಸೋನಿಯಾ ಗಾಂಧಿ ಸುಮ್ಮನಿರಲು ಸಾಧ್ಯವೇ? ಹಾಗಂತಲೇ ರಾಜಶೇಖರಮೂರ್ತಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸುವ ಪ್ರಪೋ ಸಲ್ಲನ್ನು ಅವರು ಕೈಬಿಟ್ಟರು. ಪರಿಣಾಮ? ನೋಡನೋಡುತ್ತಿದ್ದಂತೆಯೇ ರಾಜಶೇಖರಮೂರ್ತಿ ಅವರ ಜಾಗಕ್ಕೆ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣ ಬಂದು ಕುಳಿತರು.