ಅತ್ಯಾಚಾರ, ಕೊಲೆ ಕೇಸ್ ಅಪರಾಧಿ ಸೆಂಟ್ರಲ್ ಜೈಲಿನಿಂದ ಎಸ್ಕೇಪ್
ಸೌಮ್ಯಾ ಕೊಲೆ ಪ್ರಕರಣದ ಅಪರಾಧಿ ಗೋವಿಂದಚಾಮಿ, ಕಣ್ಣೂರು ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡ ವರದಿಯಾಗಿದೆ. ಇದು ಭದ್ರತಾ ಲೋಪಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜುಲೈ 25, ಶುಕ್ರವಾರ ಬೆಳಿಗ್ಗೆ ನಡೆಸಿದ ನಿಯಮಿತ ತಪಾಸಣೆಯ ಸಮಯದಲ್ಲಿ ಗೋವಿಂದ ಚಾಮಿ ಜೈಲಿನಲ್ಲಿ ಇಲ್ಲ ಎಂಬುದು ಪತ್ತೆಯಾಗಿದೆ. ಇದರ ಬೆನ್ನಲ್ಲೇ ಪೊಲೀಸರು ಆತನಿಗಾಗಿ ಕೇರಳ, ತಮಿಳುನಾಡು ಮತ್ತು ಕರ್ನಾಟಕದಾದ್ಯಂತ ತೀವ್ರವಾದ ಹುಡುಕಾಟ ಶುರು ಮಾಡಿದ್ದಾರೆ.