ಬಾಗಿಲು ಮುಚ್ಚುವ ಹಂತ ತಲುಪಿದ ಕನಸಿನ ಗ್ರಂಥಾಲಯ
ಮೈಸೂರಿನ ರಾಜೀವ್ ನಗರ ಬಡಾವಣೆ ನಿವಾಸಿಯಾಗಿರುವ ಇವರು ಓದಿದ್ದು ಕೇವಲ ಒಂದನೇ ತರಗತಿ, ಆದರೆ ನೋಡಿ ಕಲಿತದ್ದು ಅಪಾರ. ಬಡತನದ ಬೇಗೆಯಲ್ಲಿ ನಲುಗಿದ ಕುಟುಂಬದಲ್ಲಿ ಹುಟ್ಟಿದ ಇಸಾಕ್ ಅವರಿಗೆ ಓದು ಹತ್ತಲಿಲ್ಲ ಎಂದಲ್ಲ, ತುಂಬಿದ ಕುಟುಂಬದ ಹೊಟ್ಟೆ ತುಂಬಿಸಬೇಕಾದ ಅನಿವಾರ್ಯತೆ. ಅದರ ಪರಿಣಾಮವಾಗಿ ಎಳೆಯ ವಯಸ್ಸಿಗೇ ಬಾಲಕಾರ್ಮಿಕ, ಜೀತದಾಳು.