ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Saree Davani-Langa Styling: ಸಂಕ್ರಾಂತಿ ಹಬ್ಬಕ್ಕೆ ಸೀರೆಯನ್ನು ದಾವಣಿ-ಲಂಗದಂತೆ ಉಡುವುದು ಹೇಗೆ?

ಸಂಕ್ರಾಂತಿ ಹಬ್ಬಕ್ಕೆ ವಾರ್ಡ್ರೋಬ್‌ನಲ್ಲಿರುವ ಸೀರೆಯನ್ನೇ ದಾವಣಿ-ಲಂಗದಂತೆ (Saree Davani-Langa Styling 2025) ಉಟ್ಟು ಸಂಭ್ರಮಿಸಬಹುದು? ಅದು ಹೇಗೆ ಅಂತಿರಾ? ಇಷ್ಟಾ ಡಿಸೈನರ್ ಸ್ಟುಡಿಯೋ ಎಕ್ಸ್‌ಪರ್ಟ್ ರೂಪಾ ಶೆಟ್ ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

Saree Davani-Langa Styling: ಸಂಕ್ರಾಂತಿ ಹಬ್ಬಕ್ಕೆ ಸೀರೆಯನ್ನು ದಾವಣಿ-ಲಂಗದಂತೆ ಉಡುವುದು ಹೇಗೆ?

Profile Vishwavani News Jan 13, 2025 9:03 PM
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಬ್ಬಕ್ಕೆ ದಾವಣಿ-ಲಂಗ ಡಿಸೈನರ್‌ವೇರ್ ಖರೀದಿಸಲಿಲ್ಲವೇ! ಅಥವಾ ಹಳೆಯದನ್ನು ಮತ್ತೊಮ್ಮೆ ಧರಿಸಲು ಬೇಸರವೇ! ಹಾಗಾದಲ್ಲಿ ಚಿಂತಿಸಬೇಡಿ, ಹೊಸ ಹೊಸ ಬಗೆಯ ದಾವಣಿ-ಲಂಗವನ್ನು (Saree Davani-Langa Styling 2025) ನೀವು ಹಬ್ಬಗಳಲ್ಲಿ ಮಾತ್ರವಲ್ಲ, ಯಾವುದೇ ಗ್ರ್ಯಾಂಡ್ ಟ್ರೆಡಿಷನಲ್ ಸಮಾರಂಭದಲ್ಲಿ ಧರಿಸಬಹುದು! ಅದು ಹೇಗೆ ಅಂತಿರಾ! ನಿಮ್ಮ ವಾರ್ಡ್ರೋಬ್‌ನಲ್ಲಿರುವ ಯಾವುದಾದರೂ ರೇಷ್ಮೆ ಅಥವಾ ಬಾರ್ಡರ್ ಸೀರೆಯನ್ನು ತೆಗೆದುಕೊಳ್ಳಿ. ದಾವಣಿ-ಲಂಗದಂತೆ ಉಟ್ಟು ಸಂಭ್ರಮಿಸಿ ಎನ್ನುತ್ತಾರೆ ಎಕ್ಸ್‌ಪರ್ಟ್.
image-6f380c39-8820-4889-a120-14b2c37426be.jpg
ಚಿತ್ರಕೃಪೆ: ಇಷ್ಟಾ ಡಿಸೈನರ್ ಸ್ಟುಡಿಯೋ
ಹಬ್ಬದ ಸೀಸನ್‌ನಲ್ಲಿ ಟ್ರೆಂಡಿಯಾದ ಸೀರೆಯ ದಾವಣಿ-ಲಂಗ ಸ್ಟೈಲಿಂಗ್
ಹೌದು, ಹಬ್ಬದ ಸೀಸನ್‌ನಲ್ಲಿ ಈ ಸ್ಟೈಲಿಂಗ್ ಟ್ರೆಂಡಿಯಾಗಿದೆ. ನೀವೂ ಕೂಡ ನಿಮ್ಮ ಅಥವಾ ನಿಮ್ಮ ಅಮ್ಮನ, ಅಕ್ಕನ ಸೀರೆಯನ್ನು ದಾವಣಿಯಂತೆ ಉಟ್ಟು ನಲಿದಾಡಬಹುದು. ಈ ಕುರಿತಂತೆ ಇಷ್ಟಾ ಡಿಸೈನರ್ ಸ್ಟುಡಿಯೋದ ಎಕ್ಸ್‌ಪರ್ಟ್ ರೂಪಾ ಶೆಟ್ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಟ್ರೈ ಮಾಡಿ ನೋಡಿ.
image-4c258318-5485-4048-9e77-dde6270017ef.jpg
image-bd6f43c2-23f0-4941-87f3-de484c3291de.jpg
ಮಾಡೆಲ್: ಬಿಂದು
ಸೀರೆಯಲ್ಲಿ ದಾವಣಿ-ಲಂಗದ ಸ್ಟೈಲಿಂಗ್
ಎಕ್ಸ್‌ಪರ್ಟ್ ರೂಪಾ ಶೆಟ್ ಹೇಳುವಂತೆ, ಮೊದಲೇ ಪ್ಲಾನ್ ಮಾಡಿ ಮ್ಯಾಚ್ ಆಗುವಂತಹ ಸೀರೆಯನ್ನು ಆಯ್ಕೆ ಮಾಡಿಟ್ಟುಕೊಳ್ಳಬೇಕು. ಇದಕ್ಕಾಗಿ ಒಂದಿಷ್ಟು ಐಡಿಯಾ ಹಾಗೂ ಟಿಪ್ಸ್ ನೀಡಿದ್ದಾರೆ.
ದಾವಣಿ-ಲಂಗವನ್ನಾಗಿಸಲು ಅಮ್ಮನ ಅಥವಾ ಯಾವುದೇ ಸಮಾರಂಭಕ್ಕೆ ಕೊಂಡಂತಹ ಮಲ್ಟಿಪಲ್ ಬಾರ್ಡರ್ ಅಥವಾ ಮಲ್ಟಿ ಕಲರ್ಡ್ ಬಿಗ್ ಬಾರ್ಡರ್ ರೇಷ್ಮೆ ಸೀರೆಗಳನ್ನು ಇನ್ಸ್ಟಂಟ್ ಫ್ಲೀಟ್ಸ್ ಲಂಗವಾಗಿ ಪರಿವರ್ತಿಸಬಹುದು.
ಮೊದಲಿಗೆ ವೈವಿಧ್ಯಮಯ ಅಂಚು ಹೊಂದಿರುವ ಗ್ರ್ಯಾಂಡ್ ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
ಆದಷ್ಟೂ ಸಾಫ್ಟ್ ಸೀರೆಯನ್ನೇ ಆಯ್ಕೆ ಮಾಡಿಕೊಳ್ಳಬೇಕು.
ಸ್ಲೀವ್ ಡಿಸೈನ್ ಇರುವಂತಹ ಕಾಂಟ್ರಾಸ್ಟ್ ವರ್ಣದ ರೇಷ್ಮೆಯ ಸೀರೆಯ ಬ್ಲೌಸನ್ನು ಇದಕ್ಕೆ ಮ್ಯಾಚ್ ಮಾಡಬೇಕು.
ಮೊದಲಿಗೆ ಪೇಟಿಕೋಟ್ ಮೇಲೆ ನಾರ್ಮಲ್ ಸೀರೆ ಉಡುವಂತೆ ಸಿಕ್ಕಿಸಬೇಕು.
ಬಲಭಾಗದ ಸೈಡಿಗೆ ಸೀರೆಯ ಅಂಚನ್ನು ಸಿಕ್ಕಿಸಿ, ನೆರಿಗೆಗಳನ್ನು ಮಾಡುವಂತೆ ಮಾಡಬೇಕು.
ಪ್ರತ್ಯೇಕವಾಗಿ ಒಂದೊಂದು ನೆರಿಗೆಯನ್ನು ಒಂದರ ಪಕ್ಕ ಒಂದರಂತೆ ಸಿಕ್ಕಿಸುತ್ತಾ ಬರಬೇಕು. ಇದು ನೋಡಲು ಉದ್ದ ಲಂಗದಂತೆ ಕಾಣಿಸಬೇಕು.
ಇಡೀ ಸೀರೆಯ ನೆರಿಗೆ ಮತ್ತೊಮ್ಮೆ ಮೊದಲಿಗೆ ಸಿಕ್ಕಿಸಿದ, ಬಲಭಾಗದ ನೆರಿಗೆ ಬಳಿ ಬಂದಾಗ ಟೈಟಾಗಿ ಅದನ್ನು ಸಿಕ್ಕಿಸಬೇಕು. ಸೇಫ್ಟಿ ಪಿನ್ ಬಳಸಬಹುದು. ಕೊನೆಯಲ್ಲಿ ನೋಡಲು ಇದು ಥೇಟ್ ನೆರಿಗೆಯಿರುವ ರೇಷ್ಮೆಯ ಲಂಗದಂತೆ ಕಾಣುವುದು.
ಮತ್ತೊಬ್ಬರ ಸಹಾಯ ತೆಗೆದುಕೊಂಡಲ್ಲಿ ನೆರಿಗೆ ಮಾಡಲು ಸುಲಭವಾಗುವುದು.
ಈ ಸುದ್ದಿಯನ್ನೂ ಓದಿ | Winter Fashion 2025: ಚಳಿಗಾಲದ ಟಾಪ್ ಲಿಸ್ಟ್‌ಗೆ ಸೇರಿದ ಬ್ರೈಟ್ ಬಣ್ಣದ ಫ್ಯಾಷನ್‌ವೇರ್ಸ್!
ಪ್ಲಂಪಿಯಾಗಿರುವವರಾದಲ್ಲಿ ಹೀಗೆ ಉಟ್ಟುಕೊಳ್ಳಿ
ಪೆಟಿಕೋಟ್ ಬದಲು ಯಾವುದೇ ರೇಷ್ಮೆಯ ಲೆಹೆಂಗಾ ಕೂಡ ಧರಿಸಬಹುದು.
ಸಾಫ್ಟ್ ಸಿಲ್ಕ್ ಸೀರೆಯನ್ನು ದಾವಣಿಯಂತೆ ಬಳಸಿ, ಹಿಂಭಾಗದಲ್ಲಿ ನೆರಿಗೆ ಬರುವಂತೆಯೂ ಉಡಬಹುದು. ಇದಕ್ಕಾಗಿ ಯು ಟ್ಯೂಬ್‌ನಲ್ಲಿ ಸಾಕಷ್ಟು ಟ್ಯುಟೋರಿಯಲ್‌ಗಳಿವೆ. ನೋಡಿ ಕಲಿಯಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)