Winter Fashion 2025: ಟೀನೇಜ್ ಹುಡುಗಿಯರನ್ನು ಸವಾರಿ ಮಾಡುತ್ತಿರುವ ಕ್ರಾಪ್ ಸ್ವೆಟರ್!
ಗ್ಲಾಮರಸ್ ಲುಕ್ ನೀಡುವ ಕ್ರಾಪ್ ಸ್ವೆಟರ್‌ಗಳು (Winter Fashion 2025) ಟೀನೇಜ್ ಹುಡುಗಿಯರನ್ನುಈ ವಿಂಟರ್ ಸೀಸನ್‌ನಲ್ಲಿ ಸವಾರಿ ಮಾಡತೊಡಗಿವೆ. ಇವನ್ನು ಹೇಗೆಲ್ಲಾ ಧರಿಸಬಹುದು? ಅಂದವಾಗಿ ಕಾಣಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
Vishwavani News
January 13, 2025
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗ್ಲಾಮರಸ್ ಲುಕ್ ನೀಡುವ ವೈವಿಧ್ಯಮಯ ಕ್ರಾಪ್ ಸ್ವೆಟರ್‌ಗಳು ಈ ಚಳಿಗಾಲದಲ್ಲಿ (Winter Fashion 2025) ಟೀನೇಜ್ ಹುಡುಗಿಯರನ್ನು ಅಪ್ಪಿಕೊಂಡಿವೆ. ಹೌದು, ಕೇವಲ ಟಾಪ್ ಹಾಗೂ ಟೀ ಶರ್ಟ್‌ಗೆ ಸೀಮಿತವಾಗಿದ್ದ, ಕ್ರಾಪ್ ಡಿಸೈನ್ ಇದೀಗ ಸ್ವೆಟರ್ ಹಾಗೂ ಪುಲ್ಓವರ್‌ಗೂ ಕಾಲಿಟ್ಟಿದ್ದು, ಸೀಸನ್‌ಗೆ ತಕ್ಕಂತೆ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.
ಏನಿದು ಕ್ರಾಪ್ ಸ್ವೆಟರ್?
ಧರಿಸಿದಾಗ ನೋಡಲು ಗಿಡ್ಡವಾದಂತೆ ಕಾಣುವ, ಸರಿಯಾಗಿ ಕಟ್ ಮಾಡಿದಂತೆ ಇರುವ ಕ್ರಾಪ್ ಸ್ವೆಟರ್‌ಗಳು, ಹೊಟ್ಟೆಯಿಂದ ಮೇಲೆ, ಸೈಡಲ್ಲಿಕೊಂಚ ಬಾಗಿದಂತಿರುತ್ತವೆ.
ಚಿತ್ರಗಳು: ಪಿಕ್ಸೆಲ್
ಹುಡುಗಿಯರ ವಿಂಟರ್ ಸೀಸನ್ ಔಟ್‌ಫಿಟ್
ಅಂದಹಾಗೆ, ಉದ್ದವಿರುವ ಸ್ಲಿಮ್ ಹುಡುಗಿಯರಿಗಂತೂ ಇವು ನೋಡಲು ಚೆನ್ನಾಗಿ ಕಾಣಿಸುತ್ತವೆ. ಮಾತ್ರವಲ್ಲ, ಮತ್ತಷ್ಟು ಎತ್ತರವಾಗಿರುವಂತೆ ಪ್ರತಿಬಿಂಬಿಸುತ್ತವೆ.
ನಾರ್ಮಲ್ ಪ್ಯಾಂಟ್, ಪಲ್ಹಾಜೂ, ಕೇಪ್ರಿಸ್‌ಗಳಿಗೆ ಕ್ರಾಪ್ ಸ್ವೆಟರ್ ಪರ್ಫೆಕ್ಟ್ ಸೂಟ್ ಆಗುತ್ತವೆ. ಆದರೆ, ಪ್ಯಾಂಟ್‌ಗಳ ಕಟ್ಸ್ ಹಾಗೂ ಸ್ಟಿಚ್ಚಿಂಗ್ ಕ್ರಾಪ್ ಟಾಪ್‌ಗಳಿಗೆ ಮ್ಯಾಚ್ ಆಗುವುದು ಮುಖ್ಯ. ಸೆಮಿ ಫಾರ್ಮಲ್ ಉಡುಪುಗಳಿಗೂ ಹೊಂದುತ್ತವೆ. ಇನ್ನು, ಬಾಲಿವುಡ್‌ನಲ್ಲಿ, ಶನಾಯಾ, ಅನನ್ಯಾ, ಶ್ರದ್ಧಾ, ದಿಶಾ ಪಟಾನಿ, ಸಾರಾ ಕ್ರಾಪ್ ಸ್ವೆಟರ್ ಪ್ರೇಮಿಗಳು ಎನ್ನುತ್ತಾರೆ ಡಿಸೈನರ್ಸ್.
ಕ್ರಾಪ್ ಸ್ವೆಟರ್ ಮೇಕೋವರ್
ಕ್ರಾಪ್ ಸ್ವೆಟರ್, ಡಿಸಿಪ್ಲೀನ್ ಲುಕ್ ನೀಡುವುದಿಲ್ಲ ಎನ್ನುವ ಸ್ಟೈಲಿಸ್ಟ್ ಜಿಯಾ ಹೇಳುವಂತೆ, ಕ್ರಾಪ್ ಸ್ವೆಟರ್ ಜತೆಗೆ ಮ್ಯಾಚ್ ಆಗುವಂತಹ ಶೇಡ್ಸ್, ಇಲ್ಲವೇ ಪ್ರಿಂಟ್ಸ್ ಅಥವಾ ಚೆಕ್ಸ್‌ನೊಳಗೊಂಡ ಪ್ಯಾಂಟ್ ಮ್ಯಾಚ್ ಮಾಡಬಹುದು. ಜತೆಗೆ ಕಲರ್ ಫ್ರೇಮ್ ಇರುವ ಕೂಲ್ ಗ್ಲಾಸ್ ಇಲ್ಲವೇ ಸಾದಾ ಫ್ಯಾಷನಬಲ್ ಸನ್‌ಗ್ಲಾಸ್ ಧರಿಸಿ ಫಂಕಿ ಲುಕ್ ನೀಡಬಹುದು. ಫಂಕಿ ಆಕ್ಸೆಸರೀಸ್‌ಗಳು ಮ್ಯಾಚ್ ಆಗುತ್ತವೆ ಎನ್ನುತ್ತಾರೆ ಅವರು. ಇನ್ನು, ಧರಿಸುತ್ತಿರುವ ಕ್ರಾಪ್ ಸ್ವೆಟರ್ ಕ್ಯಾಶುವಲ್ ವೇರ್‌ನದ್ದಾ ಅಥವಾ ಎಥ್ನಿಕ್ ಸ್ಟೈಲ್‌ಗೆ ಹೊಂದುತ್ತದೆಯಾ! ಎಂಬುದನ್ನು ಗಮನಿಸಿ ಮ್ಯಾಚ್ ಮಾಡಬೇಕು ಎನ್ನುತ್ತಾರೆ.
ಹೇರ್ ಸ್ಟೈಲ್ ಹೀಗಿರಲಿ
ವಿಂಟರ್ ಸೀಸನ್‌ನಲ್ಲಿ ಕ್ರಾಪ್ ಸ್ವೆಟರ್ ಅಥವಾ ಪುಲ್ಒವರ್ಸ್ ಧರಿಸಿದಲ್ಲಿಆದಷ್ಟೂ ಫ್ರೀ ಹೇರ್ ಬಿಡುವುದು ಬೇಡ. ಯಾಕೆಂದರೆ ಮೊದಲೇ ಬೆಚ್ಚಗಿನ ಉಡುಪು ಧರಿಸಿದಾಗ ಸೆಕೆಯಾಗಬಹುದು. ಹಾಗಾಗಿ ಹೈ ಪೋನಿ, ಫಿಶ್ಟೇಲ್, ಸೈಟ್ ಪೋನಿ, ಲಾಂಗ್ ಸೈಡ್ ಚೋಟಿಯಂತಹ ಹೇರ್ ಸ್ಟೈಲ್‌ಗಳು ಪರ್ಫೆಕ್ಟ್ ಸೂಟ್ ಆಗುತ್ತವೆ. ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್ ಚಾಂದ್.
ಈ ಸುದ್ದಿಯನ್ನೂ ಓದಿ | Winter Fashion 2025: ಚಳಿಗಾಲದ ಟಾಪ್ ಲಿಸ್ಟ್‌ಗೆ ಸೇರಿದ ಬ್ರೈಟ್ ಬಣ್ಣದ ಫ್ಯಾಷನ್‌ವೇರ್ಸ್!
ಕ್ರಾಪ್ ಸ್ವೆಟರ್ ಪ್ರಿಯ ಹುಡುಗಿಯರ ಗಮನಕ್ಕೆ
ನೋಡಲು ಸ್ಲಿಮ್ ಆಗಿದ್ದಲ್ಲಿ, ಆದಷ್ಟೂ ಪ್ರಿಂಟ್ಸ್‌ನದ್ದು ಸೆಲೆಕ್ಟ್ ಮಾಡಿ.
ತೀರಾ ಕುಳ್ಳಗಿರುವವರು ಈ ಡ್ರೆಸ್ ಜತೆ ಹೈ ಹೀಲ್ಡ್ ಧರಿಸುವುದು ಉತ್ತಮ.
ಧರಿಸುವ ಆಕ್ಸೆಸರೀಸ್‌ಗಳು ಕಲರ್‌ಫುಲ್ ಆಗಿದ್ದರೂ ಓಕೆ.
ಈ ಉಡುಪಿಗೆ ಎಲ್ಲವೂ ಮ್ಯಾಚಿಂಗ್ ಇರಬೇಕೆಂದಿಲ್ಲ!
(ಲೇಖಕಿ ಫ್ಯಾಷನ್ ಪತ್ರಕರ್ತೆ)