ಕಾರಿನ ಕೀ ಕೆಲಸ ಮಾಡದಿದ್ದ ಆ ದಿನ
ಸಹಾಯಕ್ಕಾಗಿ ಸರ್ವಿಸ್ ಸೆಂಟರ್ಗೆ ಕರೆ ಮಾಡಲು ಪ್ರಯತ್ನಿಸಿದೆ, ಆದರೆ ಯಾರೂ ಪೋನ್ ಎತ್ತಲಿಲ್ಲ. ನಂತರ, ಕಾರಿನ ಇನ್ನೊಂದು ಬದಿಗೆ ನಡೆದು ಹೋದಾಗ, ಕಾರಿನ ಹಿಂಬದಿಯ ಕಿಟಕಿ ತೆರೆದಿರುವುದು ನನ್ನ ಗಮನಕ್ಕೆ ಬಂತು. ಕಿಟಕಿಯ ಗಾಜು ಕೆಳಗಿಳಿದಿದ್ದರಿಂದಲೇ ಕಾರು ಲಾಕ್ ಆಗುತ್ತಿರಲಿಲ್ಲ! ಅಷ್ಟೇ ವಿಚಾರ. ನಾನು ಕಿಟಕಿಯ ಗಾಜನ್ನು ಮೇಲಕ್ಕೆತ್ತಿದೆ, ಅಷ್ಟೇ- ರಿಮೋಟ್ ತಕ್ಷಣ ಕೆಲಸ ಮಾಡಿತು. ಕಾರನ್ನು ಸುರಕ್ಷಿತವಾಗಿ ಲಾಕ್ ಮಾಡಿ, ನಾವಿಬ್ಬರೂ ಆಟಿಕೆ ಅಂಗಡಿಯತ್ತ ಹೆಜ್ಜೆ ಹಾಕಿದೆವು.