ಪತ್ತನಂತಿಟ್ಟದಲ್ಲಿ ‘ಶಬರಿಮಲೆ’ ವಿವಾದ: ಈ ಸಲ ಚುನಾವಣಾ ಪ್ರಚಾರ ವಿಷಯ
ಆರನ್ಮುಳ ವಿಧಾನಸಭಾ ಕ್ಷೇತ್ರ ಕೂಡಾ ಕಳೆದೆರಡು ಚುನಾವಣೆಯಲ್ಲಿ ಎಡರಂಗದ ಕೈ ಹಿಡಿದಿದ್ದು ಹಿರಿಯ ಪತ್ರಕರ್ತೆ ವೀಣಾ ಜಾರ್ಜ್ ಆ ಕ್ಷೇತ್ರದಿಂದ ಗೆದ್ದು ಎರಡು ಅವಧಿಯ ಸರಕಾರದಲ್ಲೂ ಸಚಿವೆಯಾದವರು. ಈ ಬಾರಿ ಕೂಡಾ ಅವರು ಆರನ್ಮುಳದಿಂದ ಸ್ಪರ್ಧಿಸು ತ್ತಿದ್ದು, ಕಾಂಗ್ರೆಸ್ ಪಕ್ಷದಿಂದ ಅಭಿನ್ ವರ್ಕಿ ಕಣದಲ್ಲಿದ್ದರೆ ಬಿಜೆಪಿಯು ರಾಜ್ಯದ ಹಿರಿಯ ನೇತಾರ ಮತ್ತು ಮಿಜೋರಾಮ್ ಮಾಜಿ ರಾಜ್ಯಪಾಲರಾಗಿದ್ದ ಕುಮ್ಮನಂ ರಾಜಶೇಖರನ್ ಅವರನ್ನು ಆರನ್ಮುಳದಿಂದ ಕಣಕ್ಕಿಳಿಸಿ ರೋಚಕ ಪೈಪೋಟಿಗೆ ನಾಂದಿ ಹಾಡಿದೆ.