Corporation, Board Term: ನಿಗಮ, ಮಂಡಳಿ ಅವಧಿ ನಾಳೆ ಅಂತ್ಯ, ಹಾಲಿ ಅಧ್ಯಕ್ಷರ ಅಧಿಕಾರಕ್ಕೆ ಅಪಾಯವಿಲ್ಲ
ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಬಿಎಯ ವಿವಿಧ ಪಾಲಿಕೆಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷರನ್ನು ಅಧಿಕಾರದಿಂದ ಬಿಡುಗಡೆ ಗೊಳಿಸಿದರೆ ಅದರಿಂದ ಅಡ್ಡ ಪರಿಣಾಮ ಉಂಟಾಗಬಹುದು ಎನ್ನುವ ಕಾರಣಕ್ಕೆ ಸರಕಾರ ಈ ಅಚ್ಚರಿಯ ನಿರ್ಧಾರಕ್ಕೆ ಮುಂದಾಗಿದೆ.
-
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
30 ನಿಗಮಗಳ ಶಾಸಕರಿಗೆ ಅಧಿಕಾರ ಚಿಂತೆ
ಅವಧಿ ವಿಸ್ತರಿಸಲು ಸರಕಾರ ಲೆಕ್ಕಾಚಾರ
ಆಕಾಂಕ್ಷಿಗಳ ಬೇಸರ
ರಾಜ್ಯದ ನಿಗಮ, ಮಂಡಳಿಗಳ ಅಧ್ಯಕ್ಷರ ಅವಧಿ ಸದ್ಯದ ಮುಗಿಯಲಿದ್ದು ಇನ್ನೇನೋ ಹೊಸಬರಿಗೆ ಅವಕಾಶ ಲಭಿಸಲಿದೆ ಎನ್ನುವಷ್ಟರಲ್ಲಿ ಅಚ್ಚರಿಯ ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ರಾಜ್ಯ ರಾಜಕಾರಣದ ಇತ್ತೀಚಿನ ಬೆಳವಣಿಗೆ ಹಿನ್ನೆಲೆಯಲ್ಲಿ ಅವಧಿ ಮುಗಿಸಿದ ಅಧ್ಯಕ್ಷರನ್ನೇ ಇನ್ನಷ್ಟು ಕಾಲ ಮುಂದುವರಿಸುವ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿದೆ.
ಇದರೊಂದಿಗೆ ಸುಮಾರು 35ಕ್ಕೂ ಹೆಚ್ಚು ಶಾಸಕರು ಹಾಗೂ 45ಕ್ಕೂ ಹೆಚ್ಚು ಪಕ್ಷದ ಪದಾಧಿ ಕಾರಿಗಳು ಹಾಗೂ ಮುಖಂಡರನ್ನು ಒಳಗೊಂಡಿದ್ದ ರಾಜ್ಯದ 80ಕ್ಕೂ ಹೆಚ್ಚು ವಿವಿಧ ನಿಗಮಗಳ ಅಧ್ಯಕ್ಷರು ಮತ್ತಷ್ಟು ಕಾಲ ಅಧ್ಯಕ್ಷರಾಗಿಯೇ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ.
ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಬಿಎಯ ವಿವಿಧ ಪಾಲಿಕೆಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಹಾಲಿ ಅಧ್ಯಕ್ಷರನ್ನು ಅಧಿಕಾರದಿಂದ ಬಿಡುಗಡೆ ಗೊಳಿಸಿದರೆ ಅದರಿಂದ ಅಡ್ಡ ಪರಿಣಾಮ ಉಂಟಾಗಬಹುದು ಎನ್ನುವ ಕಾರಣಕ್ಕೆ ಸರಕಾರ ಈ ಅಚ್ಚರಿಯ ನಿರ್ಧಾರಕ್ಕೆ ಮುಂದಾಗಿದೆ.
ಇದನ್ನೂ ಓದಿ: Vidhana Soudha Tour: ಜೂನ್ 1ರಿಂದ ಸಾರ್ವಜನಿಕರಿಗೆ ತೆರೆಯಲಿರುವ ವಿಧಾನಸೌಧ; ಯಾವಾಗ, ಶುಲ್ಕ ಎಷ್ಟು?
ಹಾಗೆಯೇ ಬಹು ಬೇಡಿಕೆಯ ಸಚಿವ ಸಂಪುಟ ಪುನಾರಚನೆ ನಡೆದರೆ ಅಥವಾ ಹೈ ಕಮಾಂಡ್ ತೀರ್ಮಾನಿಸಿದರೆ ನಾಯಕತ್ವ ಬದಲಾವಣೆಯಾದರೆ ಆ ಬೆಳವಣಿಗೆ ನೋಡಿ ಹೊಸಬರಿಗೆ ಅವಕಾಶ ಕೊಡೋಣ ಎಂದು ಸರಕಾರ ಆಲೋಚಿಸಿದೆ. ಈ ಹಿನ್ನೆಲೆಯಲ್ಲಿ ಇಲಾಖೆಗಳು ತಮ್ಮ ವ್ಯಾಪ್ತಿಯ ನಿಗಮ, ಮಂಡಳಿಗಳ ಅಧ್ಯಕ್ಷರ ಅವಧಿ ವಿಸ್ತರಿಸುವ ನಿಟ್ಟಿನಲ್ಲಿ ಮುಂದಿನ ಆದೇಶದವರೆಗೆ ಎಂದು ಮತ್ತೊಂದು ಆದೇಶ ಹೊರಡಿಸುವಂತೆ ಸರಕಾರದಿಂದ ಮೌಖಿಕ ಸೂಚನೆ ಕೂಡ ಹೋಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಬೆಳವಣಿಗೆಯೊಂದಿಗೆ ಹಾಲಿ ಅಧ್ಯಕ್ಷರಿಗೆ ಎದುರಾಗಿದ್ದಅಧಿಕಾರ ಅವಧಿಯ ಅಂತ್ಯದ ಆತಂಕ ನಿವಾರಣೆಯಾಗಿದ್ದು, 90ಕ್ಕೂ ಹೆಚ್ಚು ನಿಗಮ, ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಆಕಾಂಕ್ಷಿಗಳಿಗೆ ಕೊಂಚ ನಿರಾಶೆ ಉಂಟಾದಂತಾಗಿದೆ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ.
ಶಾಸಕರ ಅಧಿಕಾರಕ್ಕೆ ಅಪಾಯವಿಲ್ಲ
ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಎರಡನೇ ಬಾರಿಗೆ ಅವಧಿಗೆ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ನಿಗಮ, ಮಂಡಳಿ ಅಧ್ಯಕ್ಷ,ಉಪಾಧ್ಯಕ್ಷ ಗಾದಿಗೆ ನೇಮಕ ಆರಂಭಿಸಿತ್ತು. ಮೊದಲಿಗೆ ಸಚಿವ ಸ್ಥಾನ ಕೈ ತಪ್ಪಿದ್ದ ಸುಮಾರು 30ಕ್ಕೂ ಹೆಚ್ಚು ಪ್ರಬಲ ಆಕಾಂಕ್ಷಿಗಳಿಗೆ ವಿವಿಧ ಪ್ರಮುಖ ನಿಗಮಗಳಲ್ಲಿ ಅವಕಾಶ ನೀಡಲಾಗಿತ್ತು. ಎರಡು ವರ್ಷಗಳ ಅವಧಿಗೆ ಸೀಮಿತಗೊಳಿಸಿದ್ದ ಈ ನಿಗಮಗಳ ಆದೇಶ 2024ರ ಜನವರಿ 26ಕ್ಕೆ ಹೊರಬಿದ್ದಿತ್ತು. ಹೀಗಾಗಿ ಆ ಆದೇಶದಲ್ಲಿರುವ 34 ನಿಗಮ, ಮಂಡಳಿಗಳ ಅಧ್ಯಕ್ಷರ ಅವಧಿ 2026ರ ಜನವರಿ 26ಕ್ಕೆ ಅಂದರೆ ಸೋಮವಾರಕ್ಕೆ ಅಂತ್ಯವಾಗಲಿದೆ. ಆದರೆ ಈ ಆದೇಶದಲ್ಲಿ ಮುಂದಿನ ಆದೇಶದ ವರೆಗೂ ಎನ್ನುವ ಅಂಶ ಇರುವ ಕಾರಣ ಈ ಶಾಸಕರನ್ನು ರಾಜ್ಯ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಮುಂದುವರಿಸುವ ಸಾಧ್ಯತೆ ಇದೆ. ಒಂದೊಮ್ಮೆ ಇವರನ್ನು ನಿಗಮಗಳ ಅಧ್ಯಕ್ಷ ಹುದ್ದೆಯಿಂದ ಬಿಡುಗಡೆಗೊಳಿಸಿದರೆ ಮತ್ತೆ ಇವರು ಸಂಪುಟ ಪುನಾರಚನೆ ವೇಳೆ ಅಕಾಂಕ್ಷಿಗಳಾಗಿ ಲಾಬಿ ಆರಂಭಿಸುತ್ತಾರೆ ಎನ್ನುವ ಲೆಕ್ಕಾಚಾರ ಕೂಡ ಪಕ್ಷದ ನಾಯಕರದು ಎನ್ನಲಾಗಿದೆ.
ಕಾರ್ಯಕರ್ತರ ಕುರ್ಚಿಗೆ ಕಂಟಕ ಏಕೆ?
ಸರಕಾರ ಎರಡನೇ ಕಂತಿನ ನೇಮಕದಲ್ಲಿ ಮಾಜಿ ಶಾಸಕರು, ಚುನಾವಣೆಯಲ್ಲಿ ಟಿಕೆಟ್ ವಂಚಿತರು, ಪಕ್ಷದ ವಿವಿಧ ಹಂತದಲ್ಲಿ ಪದಾಧಿಕಾರಿಗಳಾಗಿ ಸಂಘಟನೆಗೆ ಸುದೀರ್ಘಕಾಲ ದುಡಿದವರೂ ಸೇರಿದಂತೆ ಸುಮಾರು 44 ಮಂದಿ ಮುಖಂಡರಿಗೆ ಅವಕಾಶ ನೀಡಿತ್ತು. 44 ಮುಖಂಡರಿಗೆ ವಿವಿಧ ನಿಗಮ, ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನೀಡಿ 2024ರ ಫೆ.28ರಂದು ನೇಮಕ ಆದೇಶ ಹೊರಡಿಸಲಾಗಿತ್ತು. ಆದರೆ ಈ ಆದೇಶದಲ್ಲಿ ಬರೀ ಎರಡು ವರ್ಷಗಳ ಅವಧಿಗೆ ಮಾತ್ರ ಎನ್ನುವ ಅಂಶ ಇತ್ತೇ ವಿನಃ, ಮುಂದಿನ ಆದೇಶದ ವರೆಗೂ ಎನ್ನುವ ವಿಚಾರ ಇರಲಿಲ್ಲ. ಹೀಗಾಗಿ 44 ಮಂದಿ ಅಧ್ಯಕ್ಷರ ಅವಧಿ ಮುಂದಿನ ತಿಂಗಳಾಂತ್ಯ ಕ್ಕೆ ಮುಕ್ತಾಯಗೊಳ್ಳಲಿದ್ದ ಕಾರ್ಯಕರ್ತರ ಕುರ್ಚಿಗೆ ಕಂಟಕ ಏಕೆ? ಸರಕಾರ ಎರಡನೇ ಕಂತಿನ ನೇಮಕದಲ್ಲಿ ಮಾಜಿ ಶಾಸಕರು, ಚುನಾವಣೆಯಲ್ಲಿ ಟಿಕೆಟ್ ವಂಚಿತರು, ಪಕ್ಷದ ವಿವಿಧ ಹಂತದಲ್ಲಿ ಪದಾಧಿಕಾರಿಗಳಾಗಿ ಸಂಘಟನೆಗೆ ಸುದೀರ್ಘಕಾಲ ದುಡಿದವರೂ ಸೇರಿದಂತೆ ಸುಮಾರು 44 ಮಂದಿ ಮುಖಂಡರಿಗೆ ಅವಕಾಶ ನೀಡಿತ್ತು. 44 ಮುಖಂಡರಿಗೆ ವಿವಿಧ ನಿಗಮ, ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ನೀಡಿ 2024ರ ಫೆ.28ರಂದು ನೇಮಕ ಆದೇಶ ಹೊರಡಿಸಲಾಗಿತ್ತು. ಆದರೆ ಈ ಆದೇಶದಲ್ಲಿ ಬರೀ ಎರಡು ವರ್ಷಗಳ ಅವಧಿಗೆ ಮಾತ್ರ ಎನ್ನುವ ಅಂಶ ಇತ್ತೇ ವಿನಃ, ಮುಂದಿನ ಆದೇಶದವರೆಗೂ ಎನ್ನುವ ವಿಚಾರ ಇರಲಿಲ್ಲ.
ಹೀಗಾಗಿ 44 ಮಂದಿ ಅಧ್ಯಕ್ಷರ ಅವಧಿ ಮುಂದಿನ ತಿಂಗಳಾಂತ್ಯಕ್ಕೆ ಮುಕ್ತಾಯಗೊಳ್ಳಲಿದೆ. ಆದರೆ ಸರಕಾರ ಈ ಅಧ್ಯಕ್ಷರನ್ನೂ ಇನ್ನಷ್ಟು ಕಾಲ ಮುಂದುವರಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿಗಳ ಆಪ್ತ ವಲಯ ತಿಳಿಸಿದೆ. ಆದರೆ ಸರಕಾರ ಈ ಅಧ್ಯಕ್ಷರನ್ನೂ ಇನ್ನಷ್ಟು ಕಾಲ ಮುಂದುವರಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿಗಳ ಆಪ್ತ ವಲಯ ತಿಳಿಸಿದೆ.