ಬೆಳಗಾವಿ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ಬೆಲೆ ಸಮರ: ಏಕರೂಪದ ದರಕ್ಕೆ ಪಟ್ಟು
ಕಳೆದ ಮೂರು ವಾರಗಳ ಕಾಲ ನಿರಂತರವಾಗಿ ರಾಜ್ಯ ರೈತ ಸಂಘಟನೆ ಕಬ್ಬು ಬೆಲೆ ಏರಿಕೆ ಕುರಿತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದವು. ಕೊನೆಗೆ ಅಳೆದು, ತೂಗಿ ಸಕ್ಕರೆ ಕಾರ್ಖಾನೆಗಳ ಜತೆ ಬೆಳಗಾವಿ ಜಿಲ್ಲಾಡಳಿತ ನಿರಂತರ ಮಾತುಕತೆ ನಡೆಸಿ ಪ್ರತಿ ಟನ್ ಕಬ್ಬಿಗೆ 3600 ದರ ಘೋಷಸಲಾಗಿದೆ. ಆದರೆ ಈ ನಡುವೆ ಕಲಬುರಗಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ಕೆಲ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳು 3600 ನೀಡಲು ಒಪ್ಪಿಗೆ ಸೂಚಿಸುತ್ತಿಲ್ಲ.
-
ವಿನಾಯಕ ಮಠಪತಿ ಬೆಳಗಾವಿ
ಇಷ್ಟು ದಿನ ಸರಕಾರ ಹಾಗೂ ಕಬ್ಬು ಬೆಳೆಗಾರರ ನಡುವೆ ಇದ್ದ ಬೆಲೆ ಸಮರ ಈಗ ಕಾರ್ಖಾನೆಗಳ ನಡುವೆ ಪ್ರಾರಂಭವಾಗಿದೆ. ಬೆಳಗಾವಿ ಜಿಲ್ಲೆಯ ಕೆಲ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 4200ರ ವರೆಗೆ ಬೆಲೆ ಘೋಷಣೆ ಮಾಡಿರುವ ಪರಿಣಾಮ ಉಳಿದ ಸಕ್ಕರೆ ಕಾರ್ಖಾನೆಗಳಿಗೆ ಇದೇ ರೀತಿಯಲ್ಲಿ ದರ ನಿಗದಿಪಡಿಸಲು ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ರೈತರಲ್ಲಿ ಮೂಡಿದೆ.
ಹೌದು.. ಕಳೆದ ಮೂರು ವಾರಗಳ ಕಾಲ ನಿರಂತರವಾಗಿ ರಾಜ್ಯ ರೈತ ಸಂಘಟನೆ ಕಬ್ಬು ಬೆಲೆ ಏರಿಕೆ ಕುರಿತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದವು. ಕೊನೆಗೆ ಅಳೆದು, ತೂಗಿ ಸಕ್ಕರೆ ಕಾರ್ಖಾನೆಗಳ ಜತೆ ಬೆಳಗಾವಿ ಜಿಲ್ಲಾಡಳಿತ ನಿರಂತರ ಮಾತುಕತೆ ನಡೆಸಿ ಪ್ರತಿ ಟನ್ ಕಬ್ಬಿಗೆ 3600 ದರ ಘೋಷಸಲಾಗಿದೆ. ಆದರೆ ಈ ನಡುವೆ ಕಲಬುರಗಿ, ವಿಜಯಪುರ, ಬಾಗಲ ಕೋಟೆ ಸೇರಿದಂತೆ ಕೆಲ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳು 3600 ನೀಡಲು ಒಪ್ಪಿಗೆ ಸೂಚಿಸುತ್ತಿಲ್ಲ.
ಕಬ್ಬು ಬೆಳೆಗಾರರ ಹೋರಾಟ, ದರ ಸಮರದ ಮಧ್ಯೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೇಡಕಿ ಹಾಳದಲ್ಲಿರುವ ವೆಂಕಟೇಶ್ವರ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಹಂಗಾಮಿನ ಕಬ್ಬು ಪೂರೈಕೆ ದಾರರಿಗೆ ಪ್ರತಿ ಟನ್ ಕಬ್ಬಿಗೆ ಗರಿಷ್ಠ 4200 ದರ ನೀಡಲು ನಿರ್ಧರಿಸಿದ್ದೆ. ಅಷ್ಟೇ ಅಲ್ಲದೆ ಕಾಗವಾಡ ತಾಲೂಕಿನ ಶಿರಗುಪ್ಪಿ ಶುಗರ್ ವರ್ಕ್ಸ್ ಲಿ.ಪ್ರತಿ ಟನ್ ಕಬ್ಬಿಗೆ 4000 ರು. ದರ ನೀಡಲು ನಿರ್ಧರಿಸಿದ್ದು, ಇದರಿಂದ ಉಳಿದ ಸಕ್ಕರೆ ಕಾರ್ಖಾನೆಗಳಿಗೆ ಬೆಲೆ ನೀಡಲು ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ರೈತರಲ್ಲಿ ಮೂಡಿದೆ.
ಇದನ್ನೂ ಓದಿ: SAP for Sugarcane: ಕಬ್ಬಿಗೆ ರಾಜ್ಯ ಸಲಹಾ ಬೆಲೆ ಜಾರಿಗೊಳಿಸಿ; ಸಿಎಂ ಡಿಕೆಶಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪತ್ರ
ಮಹಾರಾಷ್ಟ್ರದಲ್ಲಿನ ಬೆಲೆ ಏರಿಕೆ ಬಿಸಿ ರಾಜ್ಯಕ್ಕೆ: ಸದ್ಯ ಮಹಾರಾಷ್ಟ್ರ ಸರಕಾರ ಅಲ್ಲಿನ ರೈತರ ಹೋರಾಟಕ್ಕೆ ಮಣಿದು ಪ್ರತಿ ಟನ್ ಕಬ್ಬಿಗೆ 4200 ದರ ಘೋಷಣೆ ಮಾಡಿವೆ. ಇದರ ಬಿಸಿ ಈಗ ಗಡಿ ಭಾಗದ ನಮ್ಮ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ತಟ್ಟಿದೆ. ರಾಜ್ಯ ಸರಕಾರ ನಿಗದಿಪಡಿಸಿರುವ ದರದಂತೆ ಕಬ್ಬು ನುರಿದರೆ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ರಾಜ್ಯದ ಗ್ರಾಮಗಳ ರೈತರು ಕಬ್ಬನ್ನು ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುತ್ತವೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದ ಸಕ್ಕರೆ ಕಾರ್ಖಾನೆಗಳು ನಾಲ್ಕು ಸಾವಿರ ಮೇಲ್ಪಟ್ಟು ದರ ಘೋಷಿಸಲು ಮುಂದಾಗಿವೆ. ಅವರಿಗೆ ಸಾಧ್ಯ ವಾಗದ್ದು ನಿಮಗೇಕೆ ಸಾಧ್ಯವಿಲ್ಲ ಸದ್ಯ ಎರಡು ಕಾರ್ಖಾನೆಗಳು 4 ಸಾವಿರ ಮೇಲ್ಪಟ್ಟು ದರ ಘೋಷಣೆ ಮಾಡಿದ್ದು, ಉಳಿದ ಕಾರ್ಖಾನೆಗಳು ಇದೇ ಮಾದರಿಯಲ್ಲಿ ರೈತರಿಗೆ ದರ ನೀಡುವಂತೆ ಆಗ್ರಹ ವ್ಯಕ್ತವಾಗುತ್ತಿದೆ.
ಉಳಿದ ಜಿಲ್ಲೆಗಳ ರೈತರೂ ಪ್ರತಿ ಟನ್ ಕಬ್ಬಿಗೆ ನಾಲ್ಕು ಸಾವಿರ ಮೇಲ್ಪಟ್ಟು ಕಬ್ಬಿನ ದರ ನೀಡುವಂತೆ ಆಗ್ರಹಿಸಿದ್ದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನಲೆಯಲ್ಲಿ ಮತ್ತೊಮ್ಮೆ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿದರೂ ಅಚ್ಚರಿ ಪಡಬೇಕಿಲ್ಲ.
ದರ ನೀಡಬೇಕಾದ ಅನಿವಾರ್ಯತೆ ಸೃಷ್ಟಿ
ಸದ್ಯ ಗಡಿ ಜಿಲ್ಲೆ ಬೆಳಗಾವಿ ಸೇರಿದಂತೆ ಕಬ್ಬು ಬೆಳೆಯುವ ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್, ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳ ನಡುವೆ ಬೆಲೆ ಸಮರ ಏರ್ಪಟ್ಟಿದ್ದು. ಈ ಬಾರಿ ಮಳೆ ಕೊರತೆಯಿಂದ ಕಬ್ಬು ಇಳುವರಿ ಕಡಿಮೆಯಾಗಿರುವ ಹಿನ್ನೆಲೆ ಕೆಲ ಕಾರ್ಖಾನೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ನುರಿಸುವ ಉದ್ದೇಶದಿಂದ 4 ಸಾವಿರ ಮೇಲ್ಪಟ್ಟು ದರ ಘೋಷಣೆ ಮಾಡಿದ್ದು, ಇದರಿಂದ ಉಳಿದ ಕಾರ್ಖಾನೆಗಳಿಗೂ ರೈತರು ಕೇಳುವ ದರ ನೀಡ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಿದ್ದು ಕಾರ್ಖಾನೆಗಳ ನಡುವಿನ ಸಮರ ಸದ್ಯ ರೈತರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿದ್ದು ಸುಳ್ಳಲ್ಲ.