ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ಟಿಂಗ್‌ ಬಿರುಗಾಳಿ: ಕೃಪಾ ವಿಚಾರಣೆಗೆ ಹಾಜರ್

ತನಿಖಾಧಿಕಾರಿಗಳು ವಿಚಾರಣೆ ಕರೆದಾಗ ಬರಬೇಕು ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಷರತ್ತು ವಿಧಿಸಿ ಜಾಮೀನು ನೀಡಲಾಗಿತ್ತು. ಇದಾದ ನಂತರ ಕೃಪಾ ಆಳ್ವ ವಿದೇಶಕ್ಕೆ ತೆರಳಿದ್ದರು ಎನ್ನಲಾಗಿದೆ. ವಿದೇಶದಿಂದ ವಾಪಾಸಾಗುತ್ತಿದ್ದಂತೆ ವಿಚಾರಣೆಗೆ ಹಾಜರಾಗುವಂತೆ ನೀಡಿದ ನೋಟಿಸ್ ಮೇರೆಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೈಬರ್ ಕ್ರೈಮ್ ಪೊಲೀಸರ ಮುಂದೆ ಕೃಪಾ ಹಾಜರಾಗಿದ್ದರು.

ಸ್ಟಿಂಗ್‌ ಬಿರುಗಾಳಿ: ಕೃಪಾ ವಿಚಾರಣೆಗೆ ಹಾಜರ್

-

Profile
Ashok Nayak Nov 10, 2026 12:19 PM

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನು ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ಕುಣಿಕೆಯಲ್ಲಿ ಸಿಲುಕಿದ್ದ ಕೃಪಾ ಆಳ್ವಾ(Kripa Alva) ಅವರು ಸೈಬರ್ ಕ್ರೈಮ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್(Sting Operation) ನಡೆಸಿದ ಆರೋಪ ಕೇಳಿ ಬಂದ ನಂತರ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಗೊಂಡಿದ್ದರು. ಈ ಹಿಂದೆ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಮಕ್ಕಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಆಳ್ವಾ ಅವರು ಸೈಬರ್ ಕ್ರೈಮ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಕಳೆದ ವಾರವಷ್ಟೇ ಕೃಪಾ ಆಳ್ವಾಗೆ ನ್ಯಾಯಾಲಯ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿತ್ತು.

ಇದನ್ನೂ ಓದಿ: Kripa Alva: ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್‌ ಆಪರೇಷನ್‌ ಷಡ್ಯಂತ್ರ; ಕಾಂಗ್ರೆಸ್‌ ಪಕ್ಷದಿಂದ ಕೃಪಾ ಆಳ್ವಾ ಉಚ್ಚಾಟನೆ

ತನಿಖಾಧಿಕಾರಿಗಳು ವಿಚಾರಣೆ ಕರೆದಾಗ ಬರಬೇಕು ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ ಷರತ್ತು ವಿಧಿಸಿ ಜಾಮೀನು ನೀಡಲಾಗಿತ್ತು. ಇದಾದ ನಂತರ ಕೃಪಾ ಆಳ್ವ ವಿದೇಶಕ್ಕೆ ತೆರಳಿದ್ದರು ಎನ್ನಲಾಗಿದೆ. ವಿದೇಶದಿಂದ ವಾಪಾಸಾಗುತ್ತಿದ್ದಂತೆ ವಿಚಾರಣೆಗೆ ಹಾಜರಾಗುವಂತೆ ನೀಡಿದ ನೋಟಿಸ್ ಮೇರೆಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೈಬರ್ ಕ್ರೈಮ್ ಪೊಲೀಸರ ಮುಂದೆ ಕೃಪಾ ಹಾಜರಾಗಿದ್ದರು.

ಸುಮಾರು ಎರಡೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ನವೆಂಬರ್ 11ರಂದು ಮತ್ತೆ ವಿಚಾರಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದಾರೆ. ಕೃಪಾ ಆಳ್ವಾ ಪರ ವಕೀಲೆ ನಿಖಿತಾ ಸುದ್ದಿಗಾರರೊಂದಿಗೆ ತನಾಡಿ, ಕೃಪಾ ಆಳ್ವಾ ಅವರು ಈಗಾಗಲೇ ಎರಡು ದಿನ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಮತ್ತೊಮ್ಮೆ ಬರುವುದಕ್ಕೆ ಸೂಚಿಸಿದ್ದರು. ಇದರಂತೆ ವಿಚಾರಣೆಗೆ ಬಂದಿದ್ದಾರೆ.

ಅಧಿಕೃತವಾಗಿ ಇಂದು ಹೇಳಿಕೆ ಕೊಡಲು ಬಂದಿದ್ದಾರೆ. ವಿದೇಶಕ್ಕೆ ಹೋಗಿರುವ ಬಗ್ಗೆ ಉತ್ತರಿಸಿದ ವಕೀಲೆ, ಕೃಪಾ ಆಳ್ವಾ ಅವರು ಮಗಳೊಂದಿಗೆ ವಿದೇಶಕ್ಕೆ ಹೋಗಿದ್ದರು. ಪೂರ್ವನಿಯೋಜಿತ ಪ್ರವಾಸವಾಗಿತ್ತು, ಹೊರತು ಬೇರೆ ಉದ್ದೇಶವಿಲ್ಲ ಎಂದರು.