ತೈಲ ಕಂಪನಿಗಳಿಂದಲೇ ಪೆಟ್ರೋಲ್ಗೆ ಎಥೆನಾಲ್ ಮಿಶ್ರಣ: ಸಚಿವ ಅರ್ಷದ್
ಪೆಟ್ರೋಲ್ನಲ್ಲಿ ಎಥೆನಾಲ್(Ethenol) ಮಿಶ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಕಾಂಗ್ರೆಸ್ ಸರಕಾರದ ನಡುವಿನ ತಿಕ್ಕಾಟ ಮತ್ತೊಂದು ಹಂತಕ್ಕೆ ತಲುಪಿದೆ. ಸಚಿವ ರಿಜ್ವಾನ್ ಅರ್ಷದ್(Rizwan Arshad) ಮತ್ತೊಮ್ಮೆ ಕೇಂದ್ರ ಸರಕಾರ ಹಾಗೂ ಪೆಟ್ರೋಲಿಯಂ ಕಂಪನಿಗಳತ್ತ ಬೊಟ್ಟು ಮಾಡಿದ್ದಾರೆ.
-
ಬೆಂಗಳೂರು: ಪೆಟ್ರೋಲ್ನಲ್ಲಿ ಎಥೆನಾಲ್(Ethenol) ಮಿಶ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಕಾಂಗ್ರೆಸ್ ಸರಕಾರದ ನಡುವಿನ ತಿಕ್ಕಾಟ ಮತ್ತೊಂದು ಹಂತಕ್ಕೆ ತಲುಪಿದೆ. ಸಚಿವ ರಿಜ್ವಾನ್ ಅರ್ಷದ್(Rizwan Arshad) ಮತ್ತೊಮ್ಮೆ ಕೇಂದ್ರ ಸರಕಾರ ಹಾಗೂ ಪೆಟ್ರೋಲಿಯಂ ಕಂಪನಿಗಳತ್ತ ಬೊಟ್ಟು ಮಾಡಿದ್ದಾರೆ. ನಾಲ್ಕು ದಿನದ ಹಿಂದೆ ಆಹಾರ ಮತ್ತು ನಾಗರೀಕ ಸಚಿವ ರಿಜ್ವಾನ್ ಅರ್ಷದ್ ಶೇ.20ಕ್ಕಿಂತ ಹೆಚ್ಚು ಪ್ರಮಾಣದ ಎಥೆನಾಲ್ ಅನ್ನು ಕಂಪನಿಗಳು ಮಿಶ್ರಣ ಮಾಡುತ್ತಿವೆ, ಮಿಶ್ರಣದ ಪ್ರಮಾಣ ಶೇ.31ರವರೆಗೂ ಹೋಗಿದೆ ಎನ್ನುವ ಆರೋಪ ಮಾಡಿದ್ದರು.
ಇದೇ ವಿಷಯಕ್ಕೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸೇರಿದಂತೆ ಹಲವು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ಮಿಶ್ರಣವಾಗಿಲ್ಲ ಎನ್ನುವ ಸಮರ್ಥನೆಯನ್ನು ಪೆಟ್ರೋಲ್ ಕಂಪನಿಗಳು ಜಂಟಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದವು.
ಈ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸಿರುವ ಸಚಿವ ರಿಜ್ವಾನ್ ಅರ್ಷದ್, ರಾಜ್ಯದ ಪೆಟ್ರೋಲ್ ಬಂಕ್ಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣವಾಗುತ್ತಿರುವ ಬಗ್ಗೆ ಸರಕಾರ ಬಿಡುಗಡೆ ಮಾಡಿರುವ ವರದಿಗೆ ತೈಲ ಮಾರಾಟ ಕಂಪನಿಗಳು ಈವರೆಗೂ ನೇರ ಉತ್ತರ ನೀಡಿಲ್ಲ. ಪೆಟ್ರೋಲ್ನಲ್ಲಿ ಎಷ್ಟು ಪ್ರಮಾಣದ ಎಥೆನಾಲ್ ಮಿಶ್ರಣ ವಾಗುತ್ತಿದೆ ಎಂಬ ಪ್ರಶ್ನೆಗೆ ತಾಂತ್ರಿಕ ವಿಚಾರ ಗಳನ್ನು ಮುಂದಿಟ್ಟು ಸುತ್ತಿ ಬಳಸಿ ಉತ್ತರಿಸುತ್ತಿವೆ. ಶೀಘ್ರದಲ್ಲಿಯೇ ತೈಲ ಕಂಪನಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: E20 petrol row: ದೇಶದಲ್ಲಿ ಶೇ.39ರಷ್ಟು ಎಥೆನಾಲ್ ಉತ್ಪಾದನೆಯೇ ಇಲ್ಲ: ಕಾಂಗ್ರೆಸ್ ಆರೋಪಕ್ಕೆ ಪ್ರಲ್ಹಾದ್ ಜೋಶಿ ತಿರುಗೇಟು
ಆರು ಟರ್ಮಿನಲ್ಗಳಲ್ಲಿ ಮಿಶ್ರಣ: ರಾಜ್ಯ ಸರಕಾರ ನಡೆಸಿದ ಪರೀಕ್ಷೆಯ ವರದಿಗೆ ನಾವು ಬದ್ಧರಾಗಿದ್ದೇವೆ. 63 ಪೆಟ್ರೋಲ್ ಬಂಕ್ಗಳಿಂದ ನಿಯಮಾನುಸಾರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಎನ್ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯದ ವರದಿಯನ್ನು ತೈಲ ಕಂಪನಿಗಳು ಪ್ರಶ್ನಿಸುತ್ತಿರುವುದು ಸರಿಯಲ್ಲ. ಎಥೆನಾಲ್ ಮಿಶ್ರಣವು ಪೆಟ್ರೋಲ್ ಬಂಕ್ಗಳಲ್ಲಿ ನಡೆಯುವ ಪ್ರಕ್ರಿಯೆಯಲ್ಲ. ತೈಲ ಕಂಪನಿಗಳೇ ಇದನ್ನು ನಿಯಂತ್ರಿತ ಮತ್ತು ಸ್ವಯಂಚಾಲಿತ ಪ್ರಕ್ರಿಯೆ ಎಂದು ಹೇಳುತ್ತಿವೆ. ಹೀಗಿರುವಾಗ ಸ್ಥಳೀಯ ಪೆಟ್ರೋಲ್ ಬಂಕ್ಗಳ ಡೀಲರ್ಗಳು ಹೆಚ್ಚುವರಿ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲು ಸಾಧ್ಯವೇ ಇಲ್ಲ. ಕರ್ನಾಟಕದಲ್ಲಿ ಆರು ತೈಲ ಟರ್ಮಿನಲ್ಗಳಿದ್ದು, ಅಲ್ಲಿಯೇ ಮಿಶ್ರಣ ಪ್ರಕ್ರಿಯೆ ನಡೆಯುತ್ತದೆ. ಹೀಗಾಗಿ ಸಮಸ್ಯೆಯಿದ್ದರೆ ಅದಕ್ಕೆ ತೈಲ ಕಂಪನಿಗಳೇ ಜವಾಬ್ದಾರರಾಗಬೇಕು ಎಂದು ಆಗ್ರಹಿಸಿದರು.
ಸ್ವತಂತ್ರ ಲ್ಯಾಬ್ನಲ್ಲಿ ಪರೀಕ್ಷೆ: ತೈಲ ಕಂಪನಿಗಳ ಪ್ರಯೋಗಾಲಯಗಳಲ್ಲಿ ನಡೆಸುವ ಪರೀಕ್ಷಾ ವರದಿ ಗಳನ್ನು ಮಾತ್ರ ಇನ್ನು ಮುಂದೆ ಒಪ್ಪಲು ಸಾಧ್ಯವಿಲ್ಲ. ಪ್ರಮಾಣೀಕೃತ ಸ್ವತಂತ್ರ ಖಾಸಗಿ ಪ್ರಯೋಗಾಲಯಗಳ ಮೂಲಕ ಪರೀಕ್ಷೆ ನಡೆಸಲು ಸೂಚನೆ ನೀಡಲಾಗುವುದು. ಇದಕ್ಕೆ ತೈಲ ಕಂಪನಿಗಳು ಒಪ್ಪದಿದ್ದರೆ, ಅನ್ಯ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸು ವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲಾಗುವುದು.
ಪೆಟ್ರೋಲ್ ಬಂಕ್ಗಳಲ್ಲಿ ಯಾದೃಚ್ಛಿಕವಾಗಿ ಮಾದರಿ ಸಂಗ್ರಹಿಸಿ ಪರಿಶೀಲನೆ ನಡೆಸುವಂತೆಯೂ ಸೂಚಿಸಲಾಗುವುದು ಎಂದು ತಿಳಿಸಿದರು. ರಾಜ್ಯ ಸರಕಾರದ ವರದಿಗೆ ಕೇಂದ್ರ ಸರಕಾರವೇ ಉತ್ತರ ನೀಡಬೇಕಿತ್ತು. ಆದರೆ ತೈಲ ಮಾರಾಟ ಕಂಪನಿಗಳಿಂದ ಮಾತ್ರ ಪ್ರತಿಕ್ರಿಯೆ ಕೊಡಿಸಲಾಗುತ್ತಿದೆ. ಸತ್ಯ ಹೇಳುವವರ ಮೇಲೆ ಒತ್ತಡ ಹೇರಿ ಹೇಳಿಕೆ ಹಿಂಪಡೆಯುವಂತೆ ಮಾಡಲಾಗುತ್ತಿದೆ.
ಎಥೆನಾಲ್ನಲ್ಲಿರುವ ಕ್ಲೋರೈಡ್ ಮತ್ತು ಸಲರ್ ಅಂಶಗಳಿಂದ ವಾಹನಗಳ ಎಂಜಿನ್ಗೆ ಹಾನಿ ಯಾಗುವ ಸಾಧ್ಯತೆಗಳಿವೆ ಎಂಬ ಆತಂಕವಿದೆ. ಶೇ.30ರಷ್ಟು ಎಥೆನಾಲ್ ಮಿಶ್ರಣವನ್ನು ಬಿಎಂಡಬ್ಲ್ಯೂ ವಾಹನಗಳು ಬೆಂಬಲಿಸುವುದಿಲ್ಲ ಎಂದು ಕಂಪನಿಯ ಸಿಇಒ ತಿಳಿಸಿದ್ದಾರೆ. ಐಷಾರಾಮಿ ವಾಹನಗಳೇ ಇಂತಹ ಮಿಶ್ರಣಕ್ಕೆ ಹೊಂದಿಕೆಯಾಗದಿದ್ದರೆ ಸಾಮಾನ್ಯ ವಾಹನಗಳ ಸ್ಥಿತಿ ಏನು ಎಂದು ಪ್ರಶ್ನಿಸಿದರು.
ಗ್ರಾಹಕರಿಗೆ ಆಯ್ಕೆಯಿರಲಿ: ಎಥೆನಾಲ್ ಮಿಶ್ರಣದ ವಿಚಾರದಲ್ಲಿ ಗ್ರಾಹಕರಿಗೆ ಆಯ್ಕೆ ನೀಡಬೇಕು. ಇ20 ಅಥವಾ ಇ10 ಪೆಟ್ರೋಲ್ ಯಾವುದನ್ನು ಬಳಸಬೇಕು ಎಂಬುದನ್ನು ಗ್ರಾಹಕರೇ ನಿರ್ಧರಿಸುವ ಅವಕಾಶ ಇರಬೇಕು. ಇ20 ನೀತಿ ಜಾರಿಯಲ್ಲಿರುವಾಗ ಇ30 ಪ್ರಮಾಣದ ಮಿಶ್ರಣ ಏಕೆ ನಡೆಯುತ್ತಿದೆ ಎಂಬುದಕ್ಕೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಬೇಕು. ಹೆಚ್ಚಿನ ಎಥೆನಾಲ್ ಮಿಶ್ರಣದಿಂದ ವಾಹನ ಗಳಿಗೆ ಹಾನಿಯಾಗಿದ್ದರೆ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಪೆಟ್ರೋಲ್ ನೀಡಬೇಕು ಎಂದು ಅರ್ಷದ್ ಆಗ್ರಹಿಸಿದರು
ಕೇರಳದಲ್ಲೂ ಸಂಗ್ರಹ : ಕರ್ನಾಟಕದ ಪೆಟ್ರೋಲ್ ಮಾದರಿಗಳಲ್ಲಿ ಶೇ.31.2ರಷ್ಟು ಎಥೆನಾಲ್ ಪತ್ತೆಯಾಗಿದೆ ಎಂಬ ವರದಿಯ ಬೆನ್ನ ಕೇರಳದಲ್ಲೂ ಪರಿಶೀಲನೆ ಆರಂಭವಾಗಿದೆ. ತಿರುವನಂತ ಪುರಂ, ಎರ್ನಾ ಕುಲಂ, ಕೋಯಿಕ್ಕೋಡ್ ಹಾಗೂ ಕಣ್ಣೂರು ಜಿಗಳ ತಲಾ ಐದು ಪೆಟ್ರೋಲ್ ಬಂಕ್ಗಳಿಂದ ಮಾದರಿಗಳನ್ನು ಸಂಗ್ರಹಿಸಿ ಸರಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹತ್ತು ದಿನಗಳಲ್ಲಿ ವರದಿ ನಿರೀಕ್ಷಿಸಲಾಗಿದ್ದು, ಶೇ.20ಕ್ಕಿಂತ ಹೆಚ್ಚು ಎಥೆನಾಲ್ ಪತ್ತೆಯಾದರೆ ಸಂಬಂಧ ಪಟ್ಟ ಪೆಟ್ರೋಲ್ ಬಂಕ್ಗಳನ್ನು ಸೀಲ್ ಮಾಡಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಆರೋಪಿಗಳೂ ಅವರೇ, ನ್ಯಾಯಾಧೀಶರೂ ಅವರೇ ತೈಲ ಕಂಪನಿಗಳು ರಾಜ್ಯ ಸರಕಾರ ಸಂಗ್ರಹಿಸಿದ ಮಾದರಿಗಳ ಪರೀಕ್ಷಾ ವಿಧಾನ ಪ್ರಶ್ನಿಸುತ್ತಿವೆ. ಆದರೆ ಕಳೆದ ಮೂರು ದಿನಗಳಿಂದ ಅವುಗಳ ಅಧಿಕಾರಿಗಳೇ ಪೆಟ್ರೋಲ್ ಬಂಕ್ಗಳಿಗೆ ತೆರಳಿ ಹೈಡ್ರೋಮೀಟರ್ ಮೂಲಕ ಪರೀಕ್ಷೆ ನಡೆಸುತ್ತಿzರೆ. ಕೆಲವೇ ನೂರು ರುಪಾಯಿಗಳ ಉಪಕರಣ ಬಳಸಿ ನಡೆಸುವ ಪರೀಕ್ಷೆ ಸರಿಯಾಗುತ್ತದೆ, ಆದರೆ ಮಾನ್ಯತೆ ಪಡೆದ ಪ್ರಯೋಗಾಲಯದ ಪರೀಕ್ಷೆ ಸರಿಯಿಲ್ಲ ಎನ್ನುವುದು ಯಾವ ನ್ಯಾಯ? ಇಲ್ಲಿ ಆರೋಪಿಗಳೂ ಅವರೇ, ನ್ಯಾಯಾಧೀಶರೂ ಅವರೇ ಆಗಿದ್ದಾರೆ ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
![]()
ತೈಲ ಮಾದರಿ ಸಂಗ್ರಹಿಸುವಾಗ ತೈಲ ಕಂಪನಿಗಳ ಪ್ರತಿನಿಧಿಗಳು ಹಾಗೂ ಬಂಕ್ ಸಿಬ್ಬಂದಿಯ ಸಹಿ ಪಡೆಯಲಾಗಿದೆ. ನಿಯಮದಂತೆ ಮೂರು ಮಾದರಿಗಳಾಗಿ ವಿಂಗಡಿಸಿ, ಒಂದು ಮಾದರಿ ಯನ್ನು ಬಂಕ್ಗೆ ನೀಡಿ, ಮತ್ತೊಂದನ್ನು ಇಲಾಖೆ ಉಳಿಸಿ ಕೊಂಡು, ಮೂರನೆಯದನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪರೀಕ್ಷಾ ವರದಿ ತೈಲ ಕಂಪನಿಗಳಿಗೂ ಕಳುಹಿಸಲಾಗಿದ್ದರೂ ಈವರೆಗೆ ಸ್ಪಷ್ಟ ಉತ್ತರ ಬಂದಿಲ್ಲ.
-ರಿಜ್ವಾನ್ ಅರ್ಷದ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ