ಗಗನಕ್ಕೇರಿದ ಟೊಮೆಟೋ ಬೆಲೆ
ಏಷ್ಯಾದಲ್ಲೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯನ್ನು ಹೊಂದಿರುವುದು ಕೋಲಾರ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಇಡೀ ದೇಶಕ್ಕೆ ಟೊಮೆಟೊ ಪೂರೈಕೆಯ ಪ್ರಮುಖ ಮಾರುಕಟ್ಟೆ ಕೋಲಾರ ಆಗಿದೆ. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಂಪಿಎಂಸಿ)ಗೆ ಈ ವರ್ಷ ಟೊಮೆಟೊ ಪೂರೈಕೆ ಶೇ, 50 ರಷ್ಟು ಕುಸಿತವಾಗಿದೆ ಎಂದು ಟೊಮ್ಯಾಟೋ ವರ್ತಕರು ಹೇಳುತ್ತಾರೆ.
ಉತ್ತರ ಭಾರತ ಕರ್ನಾಟಕ ಸೇರಿ ಎಲ್ಲಾ ಕಡೆಗೂ ಟೊಮ್ಯಾಟೋ ಬೇಡಿಕೆ -
ಹೂವಪ್ಪ ಐ ಹೆಚ್.
ಬೆಂಗಳೂರು: ದುಬಾರಿ ದುನಿಯಾದಲ್ಲಿ, ಎಲ್ಲವೂ ಇಂದು ದುಬಾರಿಯಾಗಿ ಬಿಟ್ಟಿದೆ. ಅದರಲ್ಲೂ ಇದೀಗ ತರಕಾರಿ, ಬೇಳೆಕಾಳು, ಮೊಟ್ಟೆ, ಖಾದ್ಯ ತೈಲ ಬೆಲೆಯೂ ಗಗನಕ್ಕೇರಿದ್ದು, ಜನರಿಗೆ ಬೆಲೆ ಏರಿಕೆಯಿಂದ ಬಾರವಾದಂತಾಗಿದೆ. ಸಪ್ಟೆಂಬರ್ ಅಕ್ಟೋಬರ್ ಮಳೆ ಹೊಡೆತಕ್ಕೆ ಟೊಮ್ಯಾಟೋ ಬೆಳೆಯುವ ದೇಶದ ಎಲ್ಲಾ ಪ್ರದೇಶದಲ್ಲಿ ಶೇ, 50 ರಷ್ಟು ಟೊಮ್ಯಾಟೋ ಇಳುವರಿ ಕುಸಿದಿದೆ. ಹೀಗಾಗಿ ಪೂರೈಕೆ ಕೊರತೆ ಯಾಗಿ ತೀವ್ರವಾಗಿ ಟೊಮ್ಯಾಟೋ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
15 ದಿನಗಳ ಹಿಂದೆ ಟೊಮೆಟೊ ಬೆಲೆ ಬಾರಿ ಕುಸಿತ ಕಂಡಿತ್ತು. ರೈತರು ಬೆಳೆ ಬೆಳೆಯಲು ಹಾಕಿದ್ದ ಬಂಡವಾಳವು ಸಹ ಬಾರದಂತಾಗಿ ಬೆಳೆದ ಟೊಮೆಟೊ ಬೆಳೆಯನ್ನು ರೈತರು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಬಹುಶಃ ಕೆಲವು ರೈತರು ಬೆಳೆಯನ್ನ ಜಮೀನಿ ನಲ್ಲೆ ಕೊಳೆಯಲು ಬಿಟ್ಟಿದ್ದರು. ಇದೀಗ ಟೊಮೆಟೋ ಮಾರುಕಟ್ಟೆಯಲ್ಲಿ ಬಾರೀ ಏರಿಕೆ ಕಂಡಿದ್ದು ಟೊಮೇಟೋ ಬೆಳೆಗಾರರಲ್ಲಿ ಸಂತಸ ಮೂಡಿದೆ.
ಏಷ್ಯಾದಲ್ಲೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯನ್ನು ಹೊಂದಿರುವುದು ಕೋಲಾರ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಇಡೀ ದೇಶಕ್ಕೆ ಟೊಮೆಟೊ ಪೂರೈಕೆಯ ಪ್ರಮುಖ ಮಾರುಕಟ್ಟೆ ಕೋಲಾರ ಆಗಿದೆ. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಂಪಿಎಂಸಿ)ಗೆ ಈ ವರ್ಷ ಟೊಮೆಟೊ ಪೂರೈಕೆ ಶೇ, 50 ರಷ್ಟು ಕುಸಿತವಾಗಿದೆ ಎಂದು ಟೊಮ್ಯಾಟೋ ವರ್ತಕರು ಹೇಳುತ್ತಾರೆ. ಕೋಲಾರ ಮಾತ್ರವಲ್ಲದೆ, ನೆರೆಯ ಜಿಲ್ಲೆಗಳಲ್ಲಮಳೆ ಟೊಮೆಟೊ ಬೆಳೆಯನ್ನು ಹಾನಿ ಮಾಡಿದೆ.
ಇದನ್ನೂ ಓದಿ: Tomato rate in Pak: ಅಫ್ಘಾನಿಸ್ತಾನ ಗಡಿ ಬಂದ್: ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆ ಕೇಳಿದ್ರೆ ಪಕ್ಕಾ ಶಾಕ್ ಆಗ್ತೀರಾ!
ಉತ್ತರ ಭಾರತದಲ್ಲಿ ಭಾರಿ ಮಳೆ ಹಾಗೂ ಇತರೆ ಕಾರಣಗಳಿಂದಾಗಿ ಪ್ರಸ್ತುತ ಅವಧಿಯಲ್ಲಿ ಟೊಮೆಟೊ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇದೇ ಸಂದರ್ಭದಲ್ಲಿ ಕರ್ನಾಟಕದ ಬಹುತೇಕ ತರಕಾರಿಗಳ ಬೆಲೆಗಳು ಗಗನಕ್ಕೇರುತ್ತಿವೆ.
ಕಳೆದ 10-15 ದಿನಗಳಲ್ಲಿ ಟೊಮೆಟೊ ಬೆಲೆಯಲ್ಲಿ ಸುಮಾರು 50% ಏರಿಕೆಯಾಗಿದೆ ಎಂದು ಬೆಂಗಳೂರು, ಎಪಿಎಂಸಿ ಟೊಮ್ಯಾಟೋ ವರ್ತಕ ಅಂಜನಪ್ಪ ಹೇಳಿದ್ದಾರೆ.
ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಅಂದಾಜು ದಿನಾಂಪ್ರತಿ 1.50 ಸಾವಿರ ಬಾಕ್ಸ್ ಬರು ತ್ತಿದ್ದು, ಇದರಲ್ಲಿ ತಮಿಳುನಾಡಿಗೆ ದಿನಾಂಪ್ರತಿ 60-70 ಸಾವಿರ ಲಾರಿಗಳಷ್ಟು ರವಾನೆ ಯಾಗುತ್ತಿದೆ. ಈಗ ಟೊಮೆಟೊ ಬೆಲೆ ಕೋಲಾರ ಎಪಿಎಂಸಿ ದರ 15 ಕೆಜಿ 1 ಬಾಕ್ಸ್ ಗೆ ಉತ್ತಮ ಗುಣಮಟ್ಟದ್ದು 800 ರೂ. ಮಧ್ಯಮ 700 ರು. ಏರಿಕೆ ಕಂಡಿದೆ. ಇದರಿಂದ ಟೊಮೆಟೊ ಬೆಳೆಗಾರರಿಗೆ ತುಸು ಸಂತಸ ತಂದರೆ ಗ್ರಾಹಕರಿಗೆ ಹೊರೆಯಾಗಿದೆ.
ಬೆಂಗಳೂರು, ಎಪಿಎಂಸಿ ಗೆ ದಿನಾಂಪ್ರತಿ ಅಂದಾಜು 12 ಕೆಜಿ ಬಾಕ್ಸ್ 50-60 ಸಾವಿರ ಪೂರೈಕೆಯಾಗುತ್ತಿದ್ದು, ಟೊಮ್ಯಾಟೋ ದರ ಉತ್ತಮ ಗುಣಮಟ್ಟದ್ದು ಕೆಜಿಗೆ 50 ರು. ಮಧ್ಯಮ 45 ರು. ಗೆ ಇದ್ದು, ಚಿಲ್ಲರೆ ದರ 65-70 ರು. ಆಗಿದೆ.
ಅಕ್ಟೋಬರ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ರೈತರು ಕೂಡಾ ಭಾರೀ ನಷ್ಟ ಅನುಭವಿಸಿದ್ದಾರೆ. ಈ ಮಧ್ಯೆ ಪೂರೈಕೆ ಪ್ರಮಾಣವೂ ಕಡಿಮೆಯಾಗಿದ್ದರಿಂದ ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳುತ್ತಾರೆ ಕೋಲಾರ ಟೊಮ್ಯಾಟೋ ವ್ಯಪಾರಿ ಬಾಲಾಜಿ
ಬೇಡಿಕೆಗೆ ಕಾರಣ: ಈ ಹಿಂದೆ ಸುರಿದ ಅತಿಯಾದ ಮಳೆಯಿಂದಾಗಿ ಟೊಮ್ಯಾಟೋ ಬೆಳೆ ನೆಳ ಕಚಿದೆ. ಬೇಡಿಕೆಯಷ್ಟು ಪೂರೈಕೆ ಇಲ್ಲದೆ ಎಲ್ಲಾ ಕಡೆ ಅಭಾವ ಸೃಷ್ಟಿಯಾಗಿದೆ. ಹಾಗೂ
ಈಗಾಗಲೇ ಮದುವೆ ಸೀಸನ್ ಆರಂಭವಾಗಿದೆ. ಹಲವು ಕಡೆಗಳಲ್ಲಿ ವಿವಾಹ ಸಮಾರಂಭ ಗಳು ಮತ್ತು ವರ್ಷಾಂತ್ಯದ ಹಬ್ಬಗಳು ಸಹ ಬರುತ್ತಿದೆ. ಇದೇ ಕಾರಣದಿಂದ ಟೊಮೆಟೊಗೆ ಬೇಡಿಕೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದ್ದು, ಬೆಲೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೇ 100 ರ ಗಡಿ ಬಂದರೂ ಆಶ್ಚರ್ಯವಿಲ್ಲ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರದಲ್ಲಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದ ಆಜಾದ್‌ಪುರ್ ಮಾರುಕಟ್ಟೆಗೆ ಪೂರೈಕೆಯ ಟ್ರಕ್‌ಗಳು ಅರ್ಧಕ್ಕಿಂತಲೂ ಕಡಿಮೆಯಾಗಿತ್ತು ಎಂದು ವರದಿ ಯಾಗಿದೆ. ಅಲ್ಲದೇ ಅತಿಯಾದ ಮಳೆಯಿಂದಾಗಿ ಅನೇಕ ಪ್ರದೇಶಗಳಲ್ಲಿ ಬೆಳೆಗಳು ಹಾಳಾ ಗಿವೆ. ಇದೇ ಕಾರಣದಿಂದ ಪೂರೈಕೆಯಲ್ಲಿ ಕೊರತಡೆ ಉಂಟಾಗಿದೆ" ಎಂದು ಟೊಮೆಟೊ ವ್ಯಾಪಾರಿ ಅಶೋಕ್ ಕೌಶಿಕ್ ತಿಳಿಸಿದ್ದಾರೆ.
*
ಬೆಂಗಳೂರಲ್ಲಿ ಟೊಮ್ಯಾಟೋ ಚಿಲ್ಲರೆ ದರ ಕೆಜಿಗೆ 65-70 ಆಗಿದೆ.
ಕೆಜಿಗೆ ಟೊಮ್ಯಾಟೋ 100 ರ ಹತ್ತಿರ ಬರುವ ಸಂಭವ.
ಮಾರುಕಟ್ಟೆಗೆ ಟೊಮ್ಯಾಟೋ ಶೇ, 50 ರಷ್ಟು ಪೂರೈಕೆ ಕುಸಿತ.
ದೇಶದ್ಯಾಂತ ಟೊಮ್ಯಾಟೋ ಇಳುವರಿ 40-50 ರಷ್ಟು ಕುಸಿತ.