ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Hunj Column: ಅರ್ಥಹೀನವಾಗಿ ಬಡಬಡಿಸಿ ಬೂದಿಯಲ್ಲಿ ಹೊರಳಾಡುತ್ತಿರುವ ಜಾಮದಾರರು...!

ಬ್ರಾಹ್ಮಣ, ದಲಿತ, ಬಲಿತ ಯಾವುದೇ ವಿದ್ವಾಂಸರಿರಲಿ, ಅವರೆಲ್ಲರೂ ಐತಿಹಾಸಿಕ ಸಾಕ್ಷ್ಯ ಗಳನ್ನು ಮಾನ್ಯ ಮಾಡಲೇಬೇಕು. ಇದನ್ನು ಯಾವ ಬ್ರಾಹ್ಮಣ ವಿದ್ವಾಂಸರೂ ಖಂಡಿಸಿಲ್ಲ. ಪಠ್ಯ ಪರಿಷ್ಕರಣೆ ಮಾಡಿದರೆ ಅದನ್ನು ಯಾರೂ ತಳ್ಳಲಾಗದು. ಇಲ್ಲಿ ಅನವಶ್ಯಕವಾಗಿ ‘ಬ್ರಾಹ್ಮಣ ವಿದ್ವಾಂಸರು ಒಪ್ಪುವರೇ’ ಎನ್ನುವುದು ಕುಚೋದ್ಯವಷ್ಟೇ.

ಅರ್ಥಹೀನವಾಗಿ ಬಡಬಡಿಸಿ ಬೂದಿಯಲ್ಲಿ ಹೊರಳಾಡುತ್ತಿರುವ ಜಾಮದಾರರು...!

-

Ashok Nayak
Ashok Nayak Nov 26, 2025 11:16 AM

ಎದುರೇಟು (ಭಾಗ-2)

ರವಿ ಹಂಜ್

೪. ಜಾಮದಾರರು, “ಕಾಳಾಮುಖಿಗಳನ್ನು ಕುರಿತು ಹಂಜ ಒಪ್ಪಿಕೊಂಡ ಮೂರು ಅಂಶ ಗಳೆಂದರೆ: (ಅ) ರಾಮಾನುಜಾಚಾರ್ಯರು ಕಾಳಾಮುಖಿಗಳನ್ನು ಕುರಿತು ‘ಕಾಳಾಮುಖಿಗಳು ಸ್ಮಶಾನದಲ್ಲಿ ಸುಟ್ಟ ಹೆಣಗಳ ಬೂದಿಯನ್ನು ತಮ್ಮ ಮುಖಕ್ಕೆ ಬಳಿದುಕೊಳ್ಳುತ್ತಿದ್ದರು’ ಎಂದು ಹಂಜ ಅವರೇ ಬರೆದಿದ್ದಾರೆ. ಆದರೆ ಅದು ತಪ್ಪು ಎಂದು ಡೇವಿಡ್ ಲಾರೆಂಜನ್ ಬರೆದಿದ್ದಾರೆಂದು ಹಂಜ ಹೇಳಿದ್ದಾರೆ; ಮುಂದುವರಿದು, ಲಾರೆಂಜನ್ ಹೇಳಿದ್ದು ಸತ್ಯ ಮತ್ತು ರಾಮಾನುಚಾರ್ಯರು ಹೇಳಿದ್ದು ಸತ್ಯವಲ್ಲ ಎಂದಿದ್ದಾನೆ.

ಆ ಬಗ್ಗೆ ನಾನು ಹೇಳುವುದಿಷ್ಟೇ: ರಾಮಾನುಜರು ಹೇಳಿದ್ದು ಹನ್ನೊಂದು- ಹನ್ನೆರಡನೆಯ ಶತಮಾನದಲ್ಲಿ. ಆಗಿನ್ನೂ ಬಹಳಷ್ಟು ಕಾಳಾಮುಖಿ ಮಠಗಳು ಅಸ್ತಿತ್ವದಲ್ಲಿ ಇದ್ದವು. ಅವರನ್ನು ನೋಡಿ ಬರೆದ ರಾಮಾನುಜಾಚಾರ್ಯರ ಮಾತು ಸತ್ಯವೋ ಅಥವಾ ಇತ್ತೀಚೆಗೆ ವಿದೇಶಿ ವಿದ್ವಾಂಸನೊಬ್ಬ ಪುಸ್ತಕಗಳನ್ನು ಓದಿ ಹೇಳಿದ ಮಾತು ಸತ್ಯವೋ ಓದುಗರೇ ನಿರ್ಧರಿಸಲಿ. ನಾನು ಹೇಳಿದ ಮಾತಿಗೆ ರಾಮಾನುಜಾಚಾರ್ಯರ ಅಭಿಪ್ರಾಯವೇ ಆಧಾರ‌ ವಾಗಿದೆ" ಎನ್ನುತ್ತಾರೆ.

ನನ್ನ ಲೇಖನದಲ್ಲಿ, ಕಾಳಾಮುಖರ ಬಗ್ಗೆ ಅಪಾರ ಸಂಶೋಧನೆ ಮಾಡಿರುವ ಡೇವಿಡ್ ಲೊರೆಂಜನ್, ರಾಮಾನುಜಾಚಾರ್ಯರು ಕಾಪಾಲಿಕರನ್ನು ಕಾಳಾಮುಖರೆಂದು ಬಗೆದು, “ಕಾಳಾಮುಖರು ತಲೆಬುರುಡೆಯ ಭಿಕ್ಷಾಪಾತ್ರೆಯಲ್ಲಿ ಮದ್ಯಮಾಂಸಾದಿ ಸೇವನೆ ಮಾಡು ವರು. ಮೈತುಂಬಾ ಶವಗಳ ಚಿತಾಭಸ್ಮವನ್ನು ಬಳಿದುಕೊಳ್ಳುವರು" ಎಂದಿದ್ದಾರೆ.

ಇದನ್ನೂ ಓದಿ: ‌Ravi Hunj Column: ತನ್ನ ಮೂಲವನ್ನೇ ಅರಿಯದ ಜಾಮದಾರರು ವಚನಗಳನ್ನು ಅರಿಯಬಲ್ಲರೇ ?!

ಈ ಲಕ್ಷಣಗಳೆಲ್ಲವೂ ಕಾಪಾಲಿಕರ ಲಕ್ಷಣಗಳು ಎಂದು ಗ್ರಾಂಥೈತಿಹಾಸಿಕ ಆಕರಗಳಿಂದ ತಿಳಿದು ಬರುತ್ತದೆ. ಅಲ್ಲದೇ ಕರ್ನಾಟಕ, ತಮಿಳುನಾಡು, ಆಂಧ್ರದ ಇರುವ ಶಿಲಾಶಾಸನ, ದತ್ತಿ ಶಾಸನಗಳಲ್ಲಿ ಇಂಥ ಯಾವ ಉಲ್ಲೇಖವೂ ಇಲ್ಲ. ಮೇಲಾಗಿ ಈ ಎಲ್ಲಾ ಶಾಸನಗಳಲ್ಲಿ ಕಾಳಾಮುಖರ ಸಮಾಜಮುಖಿ ಧಾರ್ಮಿಕ ಶಕ್ತಿಕೇಂದ್ರ, ಜ್ಞಾನಕೇಂದ್ರ, ಆಧ್ಯಾತ್ಮಿಕ ಶಾಲೆ, ಮಠ-ಮಾನ್ಯಗಳು ಮತ್ತು ರಾಜಗುರುತ್ವದ ವಿವರಣೆಗಳಿವೆ ಎಂದು ಹಲವಾರು ಶಿಲಾ ಶಾಸನಗಳನ್ನು ಉಲ್ಲೇಖಿಸಿ ಸ್ಪಷ್ಟವಾಗಿ ದಾಖಲಿಸಿದ್ದಾರೆ.

ಹಾಗೆಯೇ ಮುಂದುವರಿಯುತ್ತಾ, “ಪಂಥ ಶ್ರೇಷ್ಠತೆ ಮತ್ತು ಅಂದಿನ ಪಂಥ ಸ್ಪರ್ಧಾತ್ಮಕ ಸಮಾಜದಲ್ಲಿ ಉದ್ದೇಶಪೂರ್ವಕವಾಗಿ ರಾಮಾನುಜಾಚಾರ್ಯರು, ಕಾಳಾಮುಖರನ್ನು ಹೀಗೆ ಬೇಕೆಂದೇ ಕಾಪಾಲಿಕರನ್ನಾಗಿಸಿ ಅವಹೇಳನ ಮಾಡಿರುವ ಸಾಧ್ಯತೆಯೂ ಇದೆ" ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಸಕ್ತರು ಡೇವಿಡ್ ಲೊರೆಂಜನ್ ಅವರ The Kapalikas and Kalamukhas: two lost Shaivite sects ಸಂಶೋಧನಾ ಕೃತಿಯನ್ನು ಪರಾಂಬಿಸಬಹುದು. ಓರ್ವ ಅನ್ಯ ಪಂಥಿ ಹೇಳಿದ್ದನ್ನೂ ಮತ್ತು ಸಂಶೋಧಕ ಹೇಳಿದ್ದನ್ನೂ ಉಲ್ಲೇಖಿಸಿ ಶಿಲಾಶಾಸನಗಳು ಏನು ಹೇಳಿವೆ ಎಂದಿದ್ದೇನೆ. ಈ ಮೂಲಕ ರಾಮಾನುಜಾಚಾರ್ಯರ ಅಭಿಪ್ರಾಯಕ್ಕೆ ಬೆಂಬಲವಾಗಿ ಯಾವ ಸಾಕ್ಷ್ಯ ಪುರಾವೆಯೂ ಇಲ್ಲ. ಲೊರೆಂಜನ್ ಹೇಳಿರುವುದಕ್ಕೆ ಮಲ್ಕಾಪುರ, ಅರಸೀಕೆರೆ, ನೀಲಗುಂದ, ಹಂಪಿ, ಶಿರಾಳಕೊಪ್ಪ, ಬಳ್ಳಿಗಾವಿ, ಅಲ್ಲದೇ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿನ ಅಪರಿಮಿತ ಶಿಲಾ ಶಾಸನಗಳ ಪುರಾವೆಗಳಿವೆ.

ಇವುಗಳ ಹೆಸರನ್ನು ಉಲ್ಲೇಖಿಸಲು ಹತ್ತು ಪುಟಗಳು ಬೇಕಾಗುತ್ತವೆ. ಇವೆಲ್ಲವನ್ನೂ ತಿರಸ್ಕ ರಿಸಿ ಅನುಕೂಲಸಿಂಧುವಾಗಿ ರಾಮಾನುಜಾಚಾರ್ಯರ ಅರ್ಥವನ್ನು ಶ್ರೀಯುತರು ಪರಿಗಣಿಸುವುದು ‘ಬಿದ್ದರೂ ಮೀಸೆ ಮಣ್ಣಾಗಿಲ್ಲ’ ಎಂದಾಗುತ್ತದಷ್ಟೇ!

ಇನ್ನು ಕೊಬ್ಬರಿಯ ಮಸಿಯನ್ನು ಭಸ್ಮದೊಂದಿಗೆ ವೀರಶೈವರು ತಮ್ಮ ಹಣೆಗೆ ಹಚ್ಚಿ ಕೊಳ್ಳುವುದು ವಾಡಿಕೆಯಾಗಿದ್ದರೆ ಅದು ಕಾಳಾಮುಖಿಗಳ/ಕಾಪಾಲಿಕರ ಬಳುವಳಿಯಲ್ಲದೇ ಮತ್ತೇನು? ಎನ್ನುವುದು ಬಾಲಿಶ ಪ್ರಶ್ನೆ. ನಿನ್ನೆ ಮೊನ್ನೆಯಷ್ಟೇ ನಡೆದ ಕಾರ್ತಿಕ ಮಾಸದ ಆಚರಣೆಗಳನ್ನು ಕಂಡರೆ ಈ ಕಪ್ಪಿನ ಮೂಲ ತಿಳಿಯುತ್ತದೆ.

ಸಮಾಜವಿಮುಖಿ ಕಾಪಾಲಿಕರ ಬಗ್ಗೆ ಮತ್ತು ಸಮಾಜಮುಖಿ ಕಾಳಾಮುಖರ ಬಗ್ಗೆ ಶ್ರೀಯು ತರು ಒಂದಿಂಚು ಕೆದರಿ ಸ್ಪಷ್ಟತೆ ಕಂಡುಕೊಳ್ಳಲಿ. ಕಾಪಾಲಿಕರು ಮಾಡುತ್ತಿದ್ದ ವಾಮಾ ಚಾರದ ಲೈಂಗಿಕ ದೌರ್ಜನ್ಯದ ಮಸಿಯನ್ನು ಕಾಳಾಮುಖರಿಗೆ ಬಳಿದಿರುವ ಜಾಮದಾರರು ತಮ್ಮ ಪೂರ್ವಿಕರು ಸೇವೆ ಸಲ್ಲಿಸಿದ ಪೇಶ್ವೆ, ಫಡ್ನವೀಸರ ಲೈಂಗಿಕ ದೌರ್ಜನ್ಯ ಗಳ ಕಾರಣ ಪುಣೆಯಲ್ಲಿ ಉದಯಿಸಿದ ಬುಧವಾರ ಪೇಟೆ ಕುರಿತು, ದೇಸಾಯಿಗಳು, ಜಾಮದಾರರು, ಪಾಟೀಲರು, ಗೌಡರು ನಡೆಸಿದ ದೌರ್ಜನ್ಯಗಳ ಕಾರಣ ಸವದತ್ತಿಯಲ್ಲಿ ಬೃಹದಾಕಾರವಾಗಿ ಬೆಳೆದ ದೇವದಾಸಿ ಪದ್ಧತಿಯ ಬಗ್ಗೆ ಸ್ವಲ್ಪ ಆತ್ಮಶೋಧನೆ ಮಾಡಿ ಕೊಳ್ಳಲಿ.

೫. ಜಾಮದಾರರು, “ಕಾಳಾಮುಖಿಗಳು ರಾಜಗುರುಗಳಾಗುತ್ತಿದ್ದರು ಎಂದು ಹಂಜ ಹೇಳಿದ್ದು ಸತ್ಯ. ಅವರ ಒಂದು ಕಾಳಾಮುಖಿ ಮಠ ಕಾಶಿಯಲ್ಲಿತ್ತು. ಆ ಮಠದ ಕ್ರಿಯಾಸಕ್ತಿ ಗುರುಗಳು ವಿಜಯನಗರ ಸಾಮ್ರಾಜ್ಯ ಕಟ್ಟಲು ಹಕ್ಕಬುಕ್ಕರಿಗೆ ಮಾರ್ಗದರ್ಶನ ಮಾಡಿದ್ದೂ ಸತ್ಯ. ಆದರೆ, ‘ವಿಜಯ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದರು’ ಎನ್ನುವ ಎಷ್ಟು ಜನ ಬ್ರಾಹ್ಮಣ ಇತಿಹಾಸಕಾರರು ಮತ್ತು ಬ್ರಾಹ್ಮಣ ವಿದ್ವಾಂಸರು ರವಿ ಹಂಜ ಅವರ ಮಾತನ್ನು ಒಪ್ಪುತ್ತಾರೆ? ಅವರೇ ಮುಂದಿನ ‘ಸಂಶೋಧನೆ’ ಮಾಡಲಿ" ಎನ್ನುತ್ತಾರೆ.

ಬ್ರಾಹ್ಮಣ, ದಲಿತ, ಬಲಿತ ಯಾವುದೇ ವಿದ್ವಾಂಸರಿರಲಿ, ಅವರೆಲ್ಲರೂ ಐತಿಹಾಸಿಕ ಸಾಕ್ಷ್ಯ ಗಳನ್ನು ಮಾನ್ಯ ಮಾಡಲೇಬೇಕು. ಇದನ್ನು ಯಾವ ಬ್ರಾಹ್ಮಣ ವಿದ್ವಾಂಸರೂ ಖಂಡಿಸಿಲ್ಲ. ಪಠ್ಯ ಪರಿಷ್ಕರಣೆ ಮಾಡಿದರೆ ಅದನ್ನು ಯಾರೂ ತಳ್ಳಲಾಗದು. ಇಲ್ಲಿ ಅನವಶ್ಯಕವಾಗಿ ‘ಬ್ರಾಹ್ಮಣ ವಿದ್ವಾಂಸರು ಒಪ್ಪುವರೇ’ ಎನ್ನುವುದು ಕುಚೋದ್ಯವಷ್ಟೇ.

೬. ಜಾಮದಾರರು, “ಲಿಂಗಾಯತರು ಮತ್ತು ವೀರಶೈವರು ಹಣೆಗೆ ಹಚ್ಚಿಕೊಳ್ಳುವ ಬೂದಿ ಸುಟ್ಟ ಹೆಣಗಳದ್ದಲ್ಲ!!" ಎಂದಿದ್ದಾರೆ. ಅಲ್ಲವೆಂದು ಯಾರು ಹೇಳಿದ್ದಾರೆ? ಮೈತುಂಬಾ ಶವಗಳ ಚಿತಾಭಸ್ಮವನ್ನು ಬಳಿದು ಕೊಳ್ಳುವರು ಕಾಪಾಲಿಕರು ಎಂಬುದು ಗ್ರಾಂಥೈತಿಹಾಸಿಕ ಆಕರಗಳಿಂದ ತಿಳಿದು ಬರುತ್ತದೆ. ಇದು ಕಾಳಾಮುಖ ಆಚರಣೆ ಎನ್ನುವುದು ಸತ್ಯಕ್ಕೆ ದೂರದ ಸಂಗತಿ ಎಂದೇ ನನ್ನ ಲೇಖನದಲ್ಲಿದೆ.

೭. ಜಾಮದಾರರು, “...ವೀರಶೈವರ ಆರಾಧ್ಯ ದೈವ ವೀರಭದ್ರ ದೇವಸ್ಥಾನದಲ್ಲಿ ನಡೆಯುವ ‘ಗುಗ್ಗಳ ಪೂಜೆ’, ‘ಶಸ್ತ್ರ ಪ್ರಯೋಗ’, ಪುರವಂತಿಕೆ ಹಾಗೂ ಬೆಂಕಿಯ ಕೆಂಡದ ಮೇಲೆ ನಡೆಯುವುದನ್ನು ಯಾರು ಮಾಡುತ್ತಾರೆ?" ಎಂದಿದ್ದಾರೆ. ಇದನ್ನು ಜಾಮ್ದಾರರು ನನ್ನನ್ನು ಕೇಳುವುದಕ್ಕಿಂತ ತಮ್ಮದೇ ಬಸವ ವಿಸ್ಮೃತಿ ಯಾತ್ರೆಯಲ್ಲಿ ಪುರವಂತಿಕೆ ವೇಷದ ವೀರಗಾಸೆ ಕುಣಿತವನ್ನು ಕೋಲಾರ, ಚಾಮರಾಜನಗರ, ಮೈಸೂರು ಮುಂತಾದೆಡೆ ಬಸವ ಸಂಸ್ಕೃತಿ ಎಂದು ಏರ್ಪಡಿಸಿದ್ದ ತಮ್ಮ ಬೆಂಬಲಿಗರನ್ನು ಕೇಳಬೇಕು. ಹಾಗೆಯೇ ವೀರಭದ್ರ ಒಡಪು ಬಳಸಿ ಕೊಪ್ಪಳದಲ್ಲಿ ವಿಸ್ಮೃತಿ ಮೆರೆದ ನಿಜಗುಣಾನಂದ ಎಂಬ ತಮ್ಮ ವಿದೂಷಕ ವಾಗ್ಮಿ ಗಳನ್ನು ಕೇಳಿ ತಿಳಿದುಕೊಳ್ಳುವುದು ಉಚಿತ.

ಅಂದ ಹಾಗೆ, ವೀರಭದ್ರನಿಗೆ ಕೆಂಡ ಹಾಯುವುದನ್ನು ಪ್ರಶ್ನಿಸುವ ಜಾಮದಾರರು ಪ್ರತಿ ವರ್ಷ ತಮ್ಮ ಊರಾದ ತೊರಗಲ್ಲಿನ ಹಿಂದೂ ದುರ್ಗಮ್ಮನ ಜಾತ್ರೆಗೆ ಹೋಗಿ ಭಕ್ತಿ ಸಮರ್ಪಿಸಿ ಅಲ್ಲಿ ದೇವರು ಮೈಮೇಲೆ ಬರುವ ಕಾಶೆವ್ವ ಪೂಜಾರಿ ಮಹಿಳೆಯ ಕಾಲಿಗೆ ಬಿದ್ದು ಶಾಸ ಕೇಳುತ್ತಾರೆ. ಅಲ್ಲಿ ದುರ್ಗಮ್ಮನ ಕೆಂಡ ಹಾಯುವುದನ್ನು ನೋಡಿ ಭಕ್ತಿಯಿಂದ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಾರೆ. ಇದು ಸೋಜಿಗದಲ್ಲಿ ಸೋಜಿಗ!! ತಾವು ಮಾಡಿದರೆ ಪ್ರೇಮ, ಅವರು ಮಾಡಿದರೆ ಬಲಾತ್ಕಾರ!

೮. ಜಾಮದಾರರು, “ಮರಣ ಸಂಸ್ಕಾರದಲ್ಲಿ ಹಂಜನ ಗುಂಪಿಗೆ ಸೇರಿದ ಅಯ್ಯನವರು ಹೆಣದ ತಲೆಯ ಮೇಲೆ ಮತ್ತು ತೊಡೆಯ ಮೇಲೆ ಏಕೆ ಕಾಲಿಡುತ್ತಾರೆ, ನೂತನ ವಟುಗಳಿಗೆ ದೀಕ್ಷೆ ನೀಡುವಾಗ ಅವರ ತಲೆಯ ಮೇಲೆ ದೀಕ್ಷೆ ನೀಡುವ ಅಯ್ಯನವರು ಏಕೆ ಕಾಲು ಇಡುತ್ತಾರೆ? ಹಾಗೂ ಸ್ಥಾವರಲಿಂಗ ಪೂಜೆ ಮಾಡುವಾಗ, ಆ ಲಿಂಗದ ಮೇಲೆ ಅಯ್ಯನವರು ತಮ್ಮ ಕಾಲು ಏಕೆ ಇಡುತ್ತಾರೆ ಹಾಗೂ ಅವರ ಕಾಲು ತೊಳೆದ ನೀರಿನಿಂದ ಸ್ಥಾವರಲಿಂಗದ ಪೂಜೆಯನ್ನು ಏಕೆ ಮಾಡುತ್ತಾರೆ ಎಂಬ ಬಗ್ಗೆ ಹಂಜ ಉತ್ತರಿಸಲಿ" ಎಂದಿದ್ದಾರೆ.

ಹಿಂದೂ ಸಂಸ್ಕೃತಿಯಲ್ಲಿ “ಗುರುರ್ಬ್ರಹ್ಮ... ತಸ್ಮೈ ಶ್ರೀ ಗುರವೇ ನಮಃ" ಎನ್ನುವಂತೆ ವೀರ ಶೈವ ಲಿಂಗವಂತರಲ್ಲಿಯೂ ಗುರುವಿಗೆ ಮಹತ್ತರ ಸ್ಥಾನವಿದೆ. ಈ ಕುರಿತು ಅಲ್ಲಮ ಪ್ರಭುವೇ ಹೀಗೆ ಹೇಳಿದ್ದಾನೆ: “ಶ್ರೀಗುರುವೆ ಎನಗೆ ಕಾಯವು, ಶ್ರೀಗುರುವೆ ಎನಗೆ ಪ್ರಾಣವು, ಶ್ರೀಗುರುವೆ ಎನಗೆ ಇಹವು, ಶ್ರೀಗುರುವೆ ಎನಗೆ ಪರವು, ಶ್ರೀಗುರುವೆ ಎನಗೆ ಗತಿಯು, ಶ್ರೀಗುರುವೆ ಎನಗೆ ಮತಿಯು, ಶ್ರೀಗುರುಪಾದವೆ ಎನಗೆ ಘನತರ ಮುಕ್ತಿಗೆ ಕಾರಣವು.

ಗುಹೇಶ್ವರ ಗುಹೇಶ್ವರಾ, ನಿಮ್ಮಾಣೆ ಇದು ಸತ್ಯ". ಅದೇ ರೀತಿ ಸಿದ್ಧರಾಮೇಶ್ವರನು, “ ಗುರುಪಾದೋದಕದಿಂದ ಲಿಂಗಮಜ್ಜನ ಮಾಡಬಹುದಲ್ಲದೆ, ಬರಿಯುದಕ ದಿಂದೆರೆಯ ಬಹುದೆ ಕರಸ್ಥಲದ ತೇಜವ? ಮೀರಿದ ಮೀರಿದ ಮಾರ್ಗ ಹೇಳಿದರಯ್ಯಾ, ಎನ್ನ ಗುರುಗಳು. ಅನ್ಯಜಲವನೆರೆದೆನಾದಡೆ, ತಲೆ-ತಲೆದಂಡ ಕಪಿಲಸಿದ್ಧಮಲ್ಲಿಕಾರ್ಜುನ" ಎಂದಿದ್ದಾನೆ.

ಇವೆರಡು ವಚನಗಳು ಜಾಮ್ದಾರರಿಗೆ ಅರ್ಥವಾದರೆ ಅವರ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಅರ್ಥವಾಗಿ ದೀಕ್ಷೆ ಪಡೆದು ನಿಜ ಲಿಂಗವಂತರಾಗಲಿಚ್ಛಿಸಿದರೆ ಎನಗಿಂತ ಗುರು ಅವರಿಗೆ ಸಿಕ್ಕಲಾರ! ಸಚಿವ ಶಾಮನೂರು ಮಲ್ಲಿಕಾರ್ಜುನರ ಕೈಗೆ ಪಾದ ಕೊಟ್ಟು ತೊಳೆಸಿಕೊಂಡು ಕುಡಿಸಿದ ಸಾಣೇಹಳ್ಳಿ ಶ್ರೀ, ಮರಣ ಸಂಸ್ಕಾರದಲ್ಲಿ ತಲೆಯ ಮೇಲೆ ಕಾಲಿಟ್ಟು ಹಲವಾರು ಬಾರಿ ಸಂಸ್ಕಾರ ಮಾಡಿದ ಹಂದಿಗುಂದ ಶ್ರೀ ಮತ್ತು ಅಥಣಿ ಮೋಟಗಿ ಮಠದ ಶ್ರೀ, ದೀಕ್ಷಾ ಸಮಯದಲ್ಲಿ ಕಾಲಿಟ್ಟ/ಇರಿಸಿಕೊಂಡ ಭಾಲ್ಕಿ ಪಟ್ಟದದೇವರು ಇವರದೇ ಒಕ್ಕೂಟಿಗರಾಗಿ ಈ ಕ್ರಿಯಾವಿಧಿಳನ್ನು ಸದಾ ಆಚರಿಸುತ್ತಿದ್ದರೂ ಈವರೆಗೆ ಅವರನ್ನು ಜಾಮದಾರರು ಏಕೆ ಪ್ರಶ್ನಿಸಿಲ್ಲ? ಏಕೆಂದರೆ ಜಾಮದಾರರಿಗೆ ಇವರೆಲ್ಲ ಢೋಂಗಿಗಳು ಎಂದು ಮನವರಿಕೆ ಯಾಗಿದೆ. ಹಾಗಾಗಿಯೇ ನಿಜಗುರು ರವಿ ಹಂಜಗಿಮಠನ ಪಾದವನ್ನು ಬಯಸಿದ್ದಾರೆ ಎಂದು ಅವರ ಸುಪ್ತ ಮನಸ್ಸನ್ನು ಅರಿತು ಅವರ ಶಿಷ್ಯತ್ವವನ್ನು ಅಂಗೀಕರಿಸುತ್ತೇನೆ.

೯. ಜಾಮದಾರರು, “... ‘ಅಯೋನಿಜ’ ಶಬ್ದದ ಬಗ್ಗೆ ಹೊಸ ಸಿದ್ಧಾಂತವನ್ನೇ ದಾವಣಗೆರೆ ಮೂಲದ ಈಗಿನ ಶಿಕಾಗೋವಾಸಿ ರವಿ ಹಂಜಗೀಮಠ ಸೃಷ್ಟಿಸಿದ್ದಾರೆ. ಅದಕ್ಕೆ ಅವರು ಶರಣರ ಕೆಲವು ವಚನಗಳನ್ನು ಉದ್ಧರಿಸಿ ಅಮಾಯಕ ಓದುಗರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ‘ಅಯೋನಿಜ’ ಅರ್ಥವನ್ನು ಮೂರು ತರಹದ ಮಲಗಳಿಂದ (ಅನವ, ಮಾಯಾ ಮತ್ತು ಕಾರ್ಮಿಕ) ಮುಕ್ತರಾಗುವ ಕ್ರಿಯೆಗಳಿಂದ ಶುದ್ಧರಾದವರಿಗೆ ವೀರಶೈವರು ‘ಅಯೋನಿಜ’ ಎನ್ನುವುದು ಒಂದು ವಿಚಿತ್ರ ವಿವರಣೆ. ಅದನ್ನು ತಾರ್ಕಿಕವಾಗಿ ಅರ್ಥೈಸುವುದು ಸರಿಯೆನಿಸುವುದಿಲ್ಲ" ಇತ್ಯಾದಿಯಾಗಿ ಹೇಳಿದ್ದಾರೆ.

ಮಲತ್ರಯಗಳನ್ನು ಕಳೆದುಕೊಂಡವ ಆಯೋನಿಜನಾಗುತ್ತಾನೆ ಎನ್ನುವುದು ವೀರಶೈವ ಕ್ರಿಯಾವಿಽಯ ಒಂದು ನಿಯಮ. ಹಾಗಾಗಿಯೇ ಸ್ವಾಮಿಯಾದವರಿಗೆ ಹುಟ್ಟಿನ ಹೆಸರನ್ನು ಅಳಿಸಿ ಹೊಸ ಹೆಸರನ್ನು ಕೊಡುವುದು. ಈ ಬಗ್ಗೆ ಶ್ರೀಯುತರು, ಷಟ್‌ಸ್ಥಲ ಚಕ್ರವರ್ತಿ ಚೆನ್ನಬಸವಣ್ಣನ ವಚನೇತರ ಗ್ರಂಥಗಳನ್ನು ಓದಬೇಕು. ಆಗದಿದ್ದರೆ ನನ್ನ ಹಿಂದಿನ ಲೇಖನಗಳನ್ನು ತಮ್ಮ ಕಾರಕೂನರಿಂದ ಓದಿಸದೆ ಖುದ್ದು ತಾವೇ ಓದಬೇಕಾಗಿ ವಿನಂತಿಸು ತ್ತೇನೆ.

ಮೇಲಿನ ಪ್ರಶ್ನೆಯಲ್ಲಿ ತಮ್ಮ ಕಾರಕೂನ ಬರೆದುಕೊಟ್ಟ ವಚನಾರ್ಥವನ್ನು ಬಳಸಿ ಜಾಮ ದಾರರು ತಮ್ಮನ್ನು ಮತ್ತಷ್ಟು ಬೆತ್ತಲಾಗಿಸಿಕೊಂಡಿದ್ದಾರಷ್ಟೇ. ಅವರು ಉಲ್ಲೇಖಿಸಿರುವ ಅಲ್ಲಮನ ಈ ವಚನದ ಪೂರ್ಣಪಾಠ ಹೀಗಿದೆ: “ಆಣವಮಲ ಮಾಯಾಮಲ ಕಾರ್ಮಿಕ ಮಲವೆಂಬ ಮಲತ್ರಯಂಗಳಳಿದು ನಿರ್ಮಲನಾದ ಶಿಷ್ಯ; ಕಾಯಜೀವದ ಭ್ರಾಂತುಸೂತಕ ಹಿಂಗಿ ನಿಶ್ಯಂಕನಾದ ಗುರು ಈ ಉಭಯ ಭಾವದೊಳಗೆ ಆವುದು ಮುಂದು ಆವುದು ಹಿಂದೆಂದರಿಯಬಪ್ಪುದು? ಕರಸ್ಥಲಕ್ಕೆ ಕಾರುಣ್ಯವ ಮಾಡಿದಡೆ ಮನಸ್ಥಲಕ್ಕೆ ಹಂಗಿಲ್ಲ. ಮನಸ್ಥಲದಲ್ಲಿ ಸೆರಗೊಡ್ಡಿ ಬೇಡಿರ್ದಡೆ ಕರಸ್ಥಲದ ಲಿಂಗ ಕೈಸಾರಿತ್ತು! ಗುರು ಸ್ಥಲದ ನಿಲವು ಪರಸ್ಥಲದಲಡಗಿದರೆ ಭಾವ ಬಳಲಿತ್ತಿದೇನೊ (ಬೆರಗಾಯಿತ್ತು?) ಗುಹೇಶ್ವರಾ?" ಈ ವಚನದ ಒಳಹೊರ ಬೆಡಗನ್ನೆಲ್ಲ ಸೋಸಿದರೂ ಇದರರ್ಥದಲ್ಲಿ ಯೋನಿಜ ಅಯೋ ನಿಜಕ್ಕೂ ಸಂಬಂಧವೇ ಇಲ್ಲ. ‘ಸಂತೆಗೆ ಮೂರು ಮೊಳ ನೇಯ್ದಂತೆ’ ಮಲತ್ರಯದ ಒಂದು ವಚನ ಹಾಕಿ ಏನೇನೋ ಬಡಬಡಿಸಿದಂತಿದೆ.

೧೦. ಜಾಮದಾರರು, “....ಬಸವಣ್ಣನವರ ಇಪ್ಪತ್ತ ನಾಲ್ಕು ವಚನಗಳಲ್ಲಿ ವೇದ ಶಾಸ್ತ್ರ ಪುರಾಣಗಳ ಕತೆಗಳನ್ನೇ ಬಸವಣ್ಣ ಬಳಸಿ ವೈದಿಕರ ವಾದವನ್ನು ತಿರಸ್ಕರಿಸಿದ್ದು ಸ್ಪಷ್ಟ ವಾಗಿದೆ. ಅವು ಒಂದು ತರಹದ ವಿಡಂಬನೆಯ ರೂಪದ ವಚನಗಳಾಗಿವೆ.

ಅವುಗಳಲ್ಲಿಯ ವಿಡಂಬನೆಗಳನ್ನು ಬದಿಗಿಟ್ಟು ಅವೇ ಸಾಕ್ಷಿಗಳೆಂದು ಭಾವಿಸಿ ಶರಣರು ವೇದಗಳನ್ನು ಮತ್ತು ವೈದಿಕರ ಪುರಾಣ, ಶಾಸ್ತ್ರಗಳನ್ನು ನಂಬಿದರೆಂದು ಹಂಜರು ವಾದಿ ಸುವುದರ ಹಿಂದಿರುವ ದುರುದ್ದೇಶವು ಸರಳವಾಗಿ ಅರ್ಥವಾಗುತ್ತದೆ. ಅದು ಅವರ ಪಾಂಡಿ ತ್ಯದ ಆಳ ವಿಸ್ತಾರಗಳ ಹುಸಿಯನ್ನೇ ತೋರಿಸುತ್ತದೆ" ಎನ್ನುತ್ತಾರೆ.

ಮತ್ತೊಮ್ಮೆ ‘ಸಂತೆಗೆ ಮೂರು ಮೊಳ’ದ ಕಾರಕೂನ ವ್ಯಾಖ್ಯಾನ. ಕಾಯವೇ ಕೈಲಾಸವಾದ ಕಾರಣ ಕಾಯದ ಯಾವ ಯಾವ ಅಂಗದಲ್ಲಿ ರುದ್ರನಿದ್ದಾನೆ ಎಂದು ವರ್ಣಿಸುತ್ತ ಇದನ್ನರಿ ಯಿರಿ ಎಂದಿದ್ದಾನೆ. ಜಾಮ್ದಾರರು ಕೊಟ್ಟಿರುವ ವಚನದ ಕೊನೆಯ ಸಾಲುಗಳು ಹೀಗಿವೆ: “ ಇಂತೀ ರುದ್ರರುಗಳು ತಮ್ಮ ... ತಮ್ಮಸ್ಥಾನಂಗಳೊಳಗಿಪ್ಪರಾಗಿ; ಇದನರಿಯದೆ ವಿಭೂತಿಯ ಧರಿಸಿದಡೆ ಕತ್ತೆ ಬೂದಿಯಲ್ಲಿ ಹೊರಳಿದಂತೆ ಕಾಣಾ ಕೂಡಲಚೆನ್ನಸಂಗಮ ದೇವಾ". ಅಂದರೆ ಶ್ರೀಯುತರು ಹೀಗೆಲ್ಲ ಏನೇನೋ ಅರ್ಥಹೀನವಾಗಿ ಬಡಬಡಿಸಿ ಬೂದಿಯಲ್ಲಿ ಹೊರಳಾಡುತ್ತಿದ್ದಾರೆ ಎನ್ನಬಹುದಷ್ಟೇ.

೧೧. ಜಾಮದಾರರು, “ನಾನು ಸುವರ್ಣ ಟಿ.ವಿ.ಗೆ ನೀಡಿದ ಒಂದು ಗಂಟೆಯ ದೀರ್ಘ ಸಂದರ್ಶನದಲ್ಲಿ ಹೇಳಿದ ಕೆಲ ಸಂಗತಿಗಳನ್ನು ಹಂಜ ಹೇಗೆ ತಿರುಚಿದ್ದಾನೆಂಬುದನ್ನು ಆ ಸಂದರ್ಶನವನ್ನು ವೀಕ್ಷಿಸಿದ ನಾಲ್ಕು ಲಕ್ಷಕ್ಕೂ ಹೆಚ್ಚು ಜನರೇ ಹೇಳಬಲ್ಲರು. ಪ್ರತಿಯೊಬ್ಬ ಭಾರತೀಯ ನಿವಾಸಿಗೆ, ತನಗೆ ಸರಿಯೆನಿಸಿದ ಯಾವುದೇ ಧರ್ಮವನ್ನು ಆಚರಿಸುವ ಅಥವಾ ಯಾವುದೇ ಧರ್ಮವನ್ನು ಆಚರಿಸದಿರುವ ಹಾಗೂ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಧರ್ಮಾಂತರಗೊಳ್ಳುವ ಮೂಲಭೂತ ಹಕ್ಕನ್ನು ನೀಡಲಾಗಿದೆ.

ಆ ಧರ್ಮವನ್ನು ಆಚರಿಸುವ, ಅದನ್ನು ಬೆಳೆಸುವ ಹಕ್ಕನ್ನೂ ನೀಡಲಾಗಿದೆ. ಅದನ್ನು ತನಗೆ ಬೇಕಾದಂತೆ ತಿರುಚಿ ಬರೆದು ಜನರನ್ನು ಎತ್ತಿ ಕಟ್ಟುವ ದುಷ್ಟ ಪ್ರಯತ್ನವು ಈ ಹಂಜ ಎಂಬ ಪೇಪರ ಟೈಗರ್‌ನದ್ದು. 1945ರಿಂದ ಈವರೆಗೆ ೮೦ ವರ್ಷಗಳಿಂದ ಕರ್ನಾಟಕ ಮತ್ತು ಮಹಾ ರಾಷ್ಟ್ರದ ಲಿಂಗಾಯತರು ನಡೆಸುತ್ತಿರುವ ಹೋರಾಟಗಳು ಅಲ್ಪ ಸಂಖ್ಯಾತ ಧರ್ಮದ ಹೋರಾಟಗಳೇ ಆಗಿವೆ ಎಂದು ನಾನು ಆ ಸಂದರ್ಶನದಲ್ಲಿ ಹೇಳಿದ್ದನ್ನು ಈ ದುಷ್ಟ ಹೇಗೆ ತಿರುಚಿzನೆ ನೋಡಿ" ಎಂದು ಅಲವತ್ತುಕೊಂಡಿದ್ದಾರೆ.

ಈ ಕುರಿತ ನನ್ನ ಲೇಖನದ ಭಾಗ: “ಕನ್ನಡದ ಟಿವಿ ಮಾಧ್ಯಮದ ಅದೇ ಸಂವಾದದಲ್ಲಿ ಮುಂದುವರಿದು ಶ್ರೀ ಜಾಮ್ದಾರರು, ‘ನಮ್ಮದು ‘ಲಿಂಗಾಯತ ಸ್ವತಂತ್ರ ಧರ್ಮ’ಕ್ಕಾಗಿ ನಡೆಸುತ್ತಿರುವ ಹೋರಾಟವಲ್ಲ. ಇದು ಮೈನಾರಿಟಿ ಸ್ಟೇಟಸ್ಸಿಗಾಗಿ ನಡೆಸುತ್ತಿರುವ ಹೋರಾಟ ಎಂದರು" ಎಂದಿದ್ದೇನೆ. ಅದನ್ನೇ ಮೇಲೆ ಜಾಮದಾರರು ಅನುಮೋದಿಸಿದ್ದಾರೆ.

ನಂತರದ ಭಾಗದಲ್ಲಿ ನಾನು, “ಕಳೆದ ಬಾರಿಯ ಕಾಂಗ್ರೆಸ್ ಸರಕಾರದ ಅವಧಿಯಿಂದಲೂ ‘ಲಿಂಗಾಯತ ಸ್ವತಂತ್ರ ಧರ್ಮ’ ಎಂದೇ ಕಿಂದರಿ ಊದುತ್ತಾ ಹೋರಾಟ ಕಟ್ಟಿಕೊಂಡು ಬಂದ ‘ಕಿವಿಯೂದುವ ಕಾಯಕವಾಹಿ ಅನುವಂಶೀಯತೆ’ಯ ಜಾಮ್ದಾರರು, ಈಗ ಇದ್ದಕ್ಕಿದ್ದಂತೆ ಒಂದು ಟಿವಿ ಸಂವಾದ/ ಸಂದರ್ಶನದಲ್ಲಿ ತಮ್ಮ ಹೋರಾಟಗಾರರನ್ನೆ ಕೈ ಬಿಟ್ಟು, “ನಮ್ಮದು ಸ್ವತಂತ್ರ ಧರ್ಮಕ್ಕಾಗಿ ನಡೆಸುತ್ತಿರುವ ಹೋರಾಟವಲ್ಲ.

ಏಕೆಂದರೆ ಸ್ವತಂತ್ರ ಧರ್ಮ ಎನ್ನುವುದು ಸಾಂವಿಧಾನಿಕವಾಗಿ ಎಂದೆಂದಿಗೂ ಸಾಧ್ಯವಿಲ್ಲ. ಹಾಗಾಗಿ ನಮ್ಮದು ಮೈನಾರಿಟಿ ಸ್ಟೇಟಸ್ಸಿಗಾಗಿ ನಡೆಸುತ್ತಿರುವ ಹೋರಾಟ!" ಎಂದರು. ಈ ವಾಕ್ಯವನ್ನು “ಅಖಂಡ ವೀರಶೈವ ಲಿಂಗವಂತ ಸಮಾಜವು ನಾಲ್ಕು ಇಂಚು ಆಳಕ್ಕಿಳಿದು ನೋಡಿದಾಗ ಗೋಚರಿಸುವುದು, ಕೇವಲ ಮತ್ತು ಕೇವಲ, ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ, ಪಾತಾಳದಿಂದವತ್ತತ್ತ, ಬ್ರಹ್ಮಾಂಡದಿಂದವತ್ತತ್ತದ, ಅಗಮ್ಯ ಅಗೋಚರ ಅಪ್ರತಿಮ ಧರ್ಮದ್ರೋಹ!

ಪ್ರಜಾಪತಿ ಕೊಟ್ಟ ಗುರಿ ತಲುಪಿದನ್ನಕ್ಕ, ಚುಳುಕಾದ ಲಿಂಗಾಯತ ಪ್ರತ್ಯೇಕ ಧರ್ಮ!" ಎಂದಿದ್ದೇನೆ. ಇದರಲ್ಲಿ ಯಾವುದನ್ನು ತಿರುಚಿದ್ದೇನೆ? ಮೊನ್ನೆಯ ಸಂದರ್ಶನದವರೆಗೆ ಶ್ರೀಯುತರು ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಹೋರಾಡಿಲ್ಲವೇ?! ಇದು ‘ಅರವತ್ತಕ್ಕೆ ಅರುಳು ಮರುಳು’ ಎನ್ನಬೇಕಷ್ಟೇ.

ಇನ್ನು ಪೇಪರ್ ಟೈಗರ್ ಎಂದಿರುವ ಶ್ರೀಯುತರಿಗೆ ತಮ್ಮ ಲಾಟ್ ಫೂಟ್ ಇಂಗ್ಲಿಷ್ ಸಾಹೇಬರ A pen is mightier than a sword ಎಂಬ ಆಪ್ಯಾಯಮಾನ ಗಾದೆ ಮಾತು ತಿಳಿಯದೇ?! ನನ್ನನ್ನು ಅಸಲಿ ಟೈಗರ್ ಆಗಿಯೇ ನೋಡಬೇಕೆನಿಸಿದರೆ ಅದೇನೂ ನನಗೆ ಹೊಸತಲ್ಲ. ನಾನು ಅಪ್ಪಟ ಗಂಡುಮೆಟ್ಟಿನ ನಡುನಾಡಿನ ದಾವಣಗೆರೆಯವನು. ಅಮೆರಿಕೆ ಯಲ್ಲಿ ಮೂವತ್ತು ವರ್ಷ ಕಳೆದಿದ್ದರೂ ನನ್ನ ಅಪ್ಪಟ ದೇಸಿ ಸೊಗಡಿನ ಜನಪದ ಭಾಷೆ ಯನ್ನು ನಿರರ್ಗಳವಾಗಿ ಬಳಸಬ. ಹಾಗೆ ನನ್ನನ್ನು ಮಾತನಾಡಲು ವೃಥಾ ಪ್ರಚೋದಿಸಿ ಹುಲಿಯ ವತಾರವನ್ನು ಜಾಮದಾರರ ತುಮಕೂರಿನ ಶಿಷ್ಯನೊಬ್ಬ ಧ್ವನಿಮು ದ್ರಿಸಿಕೊಂಡು ಯುಟ್ಯೂಬಿನಲ್ಲಿ ಬಿಟ್ಟಿದ್ದಾನೆ.

ಘನಸರಕಾರದ ತೊದಲು ಕನ್ನಡದ ಪ್ರಸ್ತುತ ಗೊಂದಲ, ಮಾನಸಿಕ ತುಮುಲ, ಬೇಗುದಿ, ಪರಿತ್ಯಕ್ತ ಭಾವ ಇವೆಲ್ಲದರಿಂದ ಬಳಲುತ್ತಿರುವ ಶ್ರೀಯುತರು ಕೇಳಿಸಿಕೊಂಡು ಆನಂದಿಸಲಿ ಎಂದು ಹಾರೈಸುತ್ತೇನೆ. ೧೨. ಜಾಮದಾರರು, “ಮೂರು ಸಲ ಅತ್ಯಂತ ದುಃಖಮಯ ಕನಿಕರ ಪ್ರಸಂಗಗಳಲ್ಲಿ ನಾನು ಮೂರು ಜನ ಮಹಿಳಾ ತಹಸೀಲ್ದಾರರ ಮನೆಗೆ ಹೋಗಿ ಸಾಂತ್ವನ ಹೇಳಿಬಂದಿದ್ದನ್ನು ತಿರುಚಿ, ನನ್ನ ಚಾರಿತ್ರ್ಯಹರಣ ಮಾಡುವಂತೆ ಬರೆದಿದ್ದನ್ನು ಖಂಡಿಸು ತ್ತೇನೆ.

ಅಂಥದೇ ಅನೇಕ ಪ್ರಸಂಗಗಳಲ್ಲಿ ಹತ್ತಾರು ಪುರುಷ ತಹಸೀಲ್ದಾರರುಗಳ ಮತ್ತು ಇತರ ಕೆಳಮಟ್ಟದ ಅಧಿಕಾರಿಗಳ ಮನೆಗಳಿಗೆ ಹೋಗಿ ಸಾಂತ್ವನ ಹೇಳಿ ಬಂದಿದ್ದನ್ನು ಏಕೆ ಈ ದುಷ್ಟ ಹೇಳಲಿಲ್ಲ? ಈ ರೀತಿಯ ಲೇಖನಗಳಿಗೆ ಅವಕಾಶವನ್ನು ಏಕೆ ಶ್ರೀ ವಿಶ್ವೇಶ್ವರ ಭಟ್ಟರು ನೀಡುತ್ತಿದ್ದಾರೆ ಎಂಬುದೇ ಸೋಜಿಗವಾಗಿದೆ" ಎಂದು ಸೋಜಿಗಗೊಂಡಿದ್ದಾರೆ.

ಈ ಕುರಿತಾದ ನನ್ನ ಲೇಖನದ ಭಾಗ: “ಶ್ರೀಯುತರು ಕಂದಾಯ ಇಲಾಖೆಯ ಕಾರ್ಯದರ್ಶಿ ಗಳಾಗಿದ್ದಾಗ ಕಾರ್ಯನಿಮಿತ್ತ ಉತ್ತರ ಕರ್ನಾಟಕದ ಕಡೆ ಹೋದಾಗ ಮಹಿಳಾ ತಹಸೀಲ್ದಾರ ರಿದ್ದರೆ ಅವರನ್ನು ಕಚೇರಿಯಲ್ಲಿ ಭೇಟಿ ಮಾಡದೆ ಸರಕಾರಿ ನಡವಳಿಕೆ ಸಂಹಿತೆ ಬಾಹಿರ ವಾದರೂ ಸರಿಯೇ, ಹೆಣ್ಣುಮಕ್ಕಳನ್ನು ಅವರ ನೆಮ್ಮದಿತಾಣವಾದ ಅವರವರ ಮನೆಗಳಲ್ಲಿ ಭೇಟಿ ಮಾಡಿ ಚರ್ಚಿಸುತ್ತಿದ್ದರೆಂಬ ಸಾಮಾಜಿಕ ಕಳಕಳಿಗೆ ಹೆಸರುವಾಸಿಯಾಗಿದ್ದರು.

ಕಾರ್ಯನಿಮಿತ್ತವಾಗಿ ಮನೆಗಳಿಗೆ ಹೋಗುವಷ್ಟು ಸಮಯಾವಕಾಶವಿಲ್ಲದಾಗ ಶ್ರೀಯುತರು ಮಹಿಳಾ ಅಧಿಕಾರಿಗಳನ್ನು ತಾವು ಉಳಿದುಕೊಂಡ ಸರಕಾರಿ ಪ್ರವಾಸಿ ಮಂದಿರಗಳಿಗೆ ಕರೆಸಿ ಆಪ್ತತೆಯಿಂದ ಪಕ್ಕದ ಕೂರಿಸಿಕೊಂಡು ಕಚೇರಿಯ ಕಾರ್ಯಗಳ ಬಗ್ಗೆ ಸಲಹೆ ಸೂಚನೆ ನೀಡುತ್ತಿದ್ದರು ಎಂಬ ವಿಶಿಷ್ಟ ಮಹಿಳಾ ಕಾಳಜಿಗೆ ಖ್ಯಾತರಾಗಿದ್ದರು. ಇದಿಷ್ಟು ಅವರ ಎದ್ದುಗಾಣುವ ಮುಕುಟಮಣಿ ವ್ಯಕ್ತಿತ್ವವಾದ ಕಾರಣ ಇಲ್ಲಿ ಉಲ್ಲೇಖಿಸಲಾಗಿದೆಯಷ್ಟೇ" ಎಂದಿದ್ದೇನೆ. ಇಲ್ಲಿ ಚಾರಿತ್ರ್ಯಹರಣ ಮಾಡುವಂಥ ವಿಷಯ ನಿದೆ? ಕುಂಬಳಕಾಯಿ ಎನ್ನದೇನೇ ಹೆಗಲು ಏಕೆ ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ, ದೇಸಾಯಿ ಕಂ ಜಾಮ್ದಾರ ಕಾಯಕವಾಹಿ ಅನುವಂಶೀಯ ಸಾಹೇಬರು? ಅಂದ ಹಾಗೆ ಜಾಮ್ದಾರ ಸಾಹೇಬರು ಅಪರಾಧಶಾಸ್ತ್ರದಲ್ಲಿ ಪದವಿ ಪಡೆದವರು!

ಕಲಿತ ವಿದ್ಯೆಗೆ ಹೀಗೆ ಕುಂಬಳಕಾಯಿ ನೈವೇದ್ಯ ಮಾಡಿಬಿಟ್ಟರೆ ಹೇಗೆ, ದೇಸಾಯಿಗಳೇ! ಅಂದ ಹಾಗೆ ವಿಸ್ಮೃತಿ ಅಭಿಯಾನದ ಸಮಾರೋಪ ಸಮಾರಂಭದ ವೇದಿಕೆ ಮೇಲಿದ್ದ ಲೈಂಗಿ ಕಾಸಕ್ತ ವಿರಕ್ತರಲ್ಲದೆ ಪರಸತಿಯರನ್ನೇ ಬಯಸುವ ಧನ್ನೂರ, ಬಾಯಲ್ಲಿ ಬಸವ ಎನ್ನುತ್ತ ಮನದಲ್ಲಿ ಮೆಕ್ಕಾ ನೆನೆಯುತ್ತ ಹೆಂಗಳೆಯರ ಇನ್‌ಬಾಕ್ಸಿಗೆ ಹೋಗಿ ಗಂಡನಿಂದ ತೃಪ್ತಿ ಸಿಕ್ಕಿದೆಯೇ ಎಂದು ಕೇಳುವ ಬಿಜಾಪುರಿ ಮುರ್ಗಾ (ನನ್ನ ಬಳಿ ಸ್ಕ್ರೀನ್ ಶಾಟ್ ಸಾಕ್ಷಿ ಇದೆ), ಗದುಗಿನ ಗಣೇಶ ಹಾಸ್ಟೆಲ್ಲಿನಲ್ಲಿದ್ದಾಗ ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟು ಹಿಗ್ಗಾಮುಗ್ಗಾ ತದುಕಿಸಿಕೊಂಡಿದ್ದ ನಿಮ್ಮ ಮಾಧ್ಯಮ ಸಂಚಾಲಕ (ಪ್ರತ್ಯಕ್ಷದರ್ಶಿ ಗಳು ನನ್ನ ಸಂಪರ್ಕದಲ್ಲಿದ್ದಾರೆ).... ಒಬ್ಬರೇ ಇಬ್ಬರೇ? ಎಲ್ಲರೂ ಅವರೇ!

ಅವರಂತೆಯೇ ನೀವೂ ಎಂದುಕೊಂಡಿರೇಕೆ? ಒಂದು ವೇಳೆ, ಜಾಮದಾರರು ರಾಯಚೂರಿನ ಜಿಲ್ಲಾ ಪಂಚಾಯತ್ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಲುಗಳಲ್ಲಿ ಅಡುಗೆ ಮಾಡುವ ಆಯ್ದ ದಲಿತ ಹಿಂದುಳಿದ ವರ್ಗಗಳ ಹಂಗಾಮಿ ಮಹಿಳಾ ಸಿಬ್ಬಂದಿಯನ್ನು ಕಕ್ಕುಲಾತಿಯಿಂದ ಒಬ್ಬಂಟಿಯಾಗಿರುತ್ತಿದ್ದ ತಮ್ಮ ಮನೆಗೆ ಅಡುಗೆ ಮಾಡಲು ಕರೆಸಿಕೊಳ್ಳುತ್ತಿದ್ದರು ಎನ್ನುವ ‘ಕುಂಬಕಾಯಿ’ ಆರೋಪ ಮಾಡಿದರೆ ಇನ್ನೇನೇನು ಮುಟ್ಟಿ ತಟ್ಟಿ ನೋಡಿಕೊಳ್ಳುವಿರಿ? ರಾಯಚೂರಿನಲ್ಲಿ ಕೇವಲ ನಾಲ್ಕು ತಿಂಗಳ ಕಾಲವಿದ್ದೇ ಅಲ್ಲಿನ ಡಿಎಸ್‌ಎಸ್ ತುಂಬಾ ಮಹಿಳಾ ಕಕ್ಕುಲಾತಿಗೆ ಖ್ಯಾತರಾಗಿದ್ದರು ಎಂದರೆ...ಬಸವಾ ಬಸವಾ! ಹಂಗಾಮಿ ನೌಕರಿ ಕಾಯಂ ಆದಿತೆಂದೋ ಮಗದೊಂದೋ ಆಶೆಯಿಟ್ಟುಕೊಂಡು ಅಡುಗೆ ಬಡಿಸಿದವರ ಪಾಡೆಂತೋ!

ಇದು ಕಕ್ಕುಲಾತಿಯೋ ಅಧಿಕಾರ ದುರುಪಯೋಗವೋ, ರಾಯಚೂರು ನರಸಪ್ಪನೇ ಬಲ್ಲ! ಅಂದ ಹಾಗೆ ಈ ಬಗ್ಗೆ ‘ಕಕ್ಕುಲಾತಿ ಜಮಾವಣೆಗಳು’ ಎಂಬ ಗ್ರಂಥವನ್ನೇ ಬರೆಯುವಷ್ಟು ಸಾಕ್ಷಿಭೂತ ಮಾಹಿತಿ ನನ್ನಲ್ಲಿದೆ. ಪ್ರಸ್ತುತ ವರ್ತಮಾನದಲ್ಲಿ ನಿಷ್ಪಕ್ಷಪಾತ ಪತ್ರಿಕಾ ಧರ್ಮ ವನ್ನು ಆಚರಿಸುತ್ತ ವಸ್ತುನಿಷ್ಠ, ಸತ್ಯನಿಷ್ಠ, ಸಮಾಜಮುಖಿ ಲೇಖನಗಳನ್ನು ಕೊಡುತ್ತಿರುವ ಪತ್ರಿಕೆ, ‘ವಿಶ್ವವಾಣಿ’. ವಿಶ್ವವಾಣಿಯ ಕಾರಣವಾಗಿಯೇ ಇಂದು ಅಖಂಡ ವೀರಶೈವ ಲಿಂಗವಂತ ಸಮಾಜವು ಒಗ್ಗೂಡಿದೆ.

ಯಾವ ಮಠ-ಮಾನ್ಯಗಳು, ಮಹಾಸಭಾಗಳು ಮಾಡದ ಧರ್ಮರಕ್ಷಣಾ ಕಾರ್ಯವನ್ನು ಮಾಡಿದೆ. ಹಾಗಾಗಿ ಶ್ರೀಯುತ ಜಾಮದಾರರು ತಮ್ಮಲ್ಲಿ ಆತ್ಮಲಿಂಗವನ್ನೇನಾದರೂ ಹೊಂದಿ ದ್ದರೆ ತಮ್ಮ ಭಂಜಕ ಪ್ರವೃತ್ತಿಯನ್ನು ತಕ್ಷಣಕ್ಕೆ ಖೈದು ಮಾಡಿ ‘ವಿಶ್ವವಾಣಿ’ ಸಂಪಾದಕರಾದ ವಿಶ್ವೇಶ್ವರ ಭಟ್ಟರಿಗೆ ಋಣಿಯಾಗಿರಬೇಕು...

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)