ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aishwarya Rai: ನಟಿ ಐಶ್ವರ್ಯ ರೈ ಹಾಲಿವುಡ್ ಎಂಟ್ರಿ ಬಗ್ಗೆ ನಟ ಅಮಿತಾ ಬಚ್ಚನ್ ಹೇಳಿದ್ದೇನು ಗೊತ್ತಾ?

Amitabh Bachchan: ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಅವರು 2004ರಲ್ಲಿ ತಮ್ಮ 'ಕಾಫಿ ವಿತ್ ಕರಣ್' ಕಾರ್ಯಕ್ರಮ ದಲ್ಲಿ ಐಶ್ವರ್ಯಾ ರೈ ಅವರ ಹಾಲಿವುಡ್ ಸಿನಿಮಾ ಎಂಟ್ರಿ ಬಗ್ಗೆಯೇ ವಿಶೇಷ ಕಾರ್ಯಕ್ರಮ ಮಾಡಿದ್ದರು. ಈಗ ಅದೇ 21 ವರ್ಷದ ಹಿಂದಿನ ಹಳೆ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ. ಐಶ್ವರ್ಯಾ ಹಾಲಿವುಡ್‌ನಲ್ಲಿ ಸಕ್ಸಸ್ ಪಡೆಯುತ್ತಾರಾ ಎಂದು ಕರಣ್ ಜೋಹರ್ ಅವರು ನಟ ಅಮಿತಾ ಬಚ್ಚನ್‌ ಅವರಿಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಅಮಿತಾಬ್ ಬಚ್ಚನ್ ಅವರು ತಮ್ಮ ಅಭಿಪ್ರಾಯ ವನ್ನು ತಿಳಿಸಿದ್ದಾರೆ.

ಐಶ್ವರ್ಯ ರೈ ಹಾಲಿವುಡ್ ಸಿನಿಮಾ ಜರ್ನಿ ಬಗ್ಗೆ ನಟ ಅಮಿತಾ ಬಚ್ಚನ್ ಏನಂದ್ರು?

-

Profile Pushpa Kumari Sep 3, 2025 4:52 PM

ನವದೆಹಲಿ: ಬಾಲಿವುಡ್ ನ ಫೇಮಸ್ ಸಿನಿಮಾ ಸೆಲೆಬ್ರಿಟಿಗಳ ಫ್ಯಾಮಿಲಿಯಲ್ಲಿ ನಟ ಅಮಿತಾ ಬಚ್ಚನ್ (Amitabh Bachchan) ಫ್ಯಾಮಿಲಿ ಕೂಡ ಒಂದು. ಈ ಫ್ಯಾಮಿಲಿಯಲ್ಲಿ ನಾಲ್ಕಕ್ಕೂ ಅಧಿಕ ಮಂದಿ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟಿಗೆ ಸಾಧನೆ ಮಾಡಿದ್ದಾರೆ. ಅಂತೆಯೇ ನಟ ಅಮಿತಾ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಅವರು ನಟಿ ಐಶ್ವರ್ಯ ರೈ ಅವರನ್ನು ವಿವಾಹವಾಗಿದ್ದು ಅವರು ಕೂಡ ಬಾಲಿವುಡ್ ನಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ವಿಶ್ವ ಸುಂದರಿಯಾದ ನಟಿ ಐಶ್ವರ್ಯ ರೈ ಅವರು 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು.

ಐಶ್ವರ್ಯಾ ಬಾಲಿವುಡ್ ಐಕಾನ್ ಮಾತ್ರವಲ್ಲದೇ ಹಾಲಿವುಡ್‌ನಲ್ಲಿಯೂ ತಮ್ಮ ನಟನಾ ಪ್ರತಿಭೆ ಯನ್ನು ಸಾಬೀತುಪಡಿಸಿದ್ದಾರೆ. 2004ರಲ್ಲಿ ಹಾಲಿವುಡ್ ನ 'ಬ್ರೈಡ್ & ಪ್ರಿಜುಡೀಸ್ ಚಿತ್ರದಲ್ಲಿ ಅಭಿನ ಯಿಸುವ ಮೂಲಕ ನಟಿ ಐಶ್ವರ್ಯ ರೈ ಅವರು ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದರು. ಜೇನ್ ಆಸ್ಟೆನ್ ಅವರ ಕ್ಲಾಸಿಕ್ ಕಾದಂಬರಿ ಆಧಾರಿತ ಈ ಸಿನಿಮಾ ನಟಿ ಐಶ್ವರ್ಯ ರೈ ಅವರ ಪ್ರತಿಭೆಗೆ ಸೂಕ್ತ ಅವಕಾಶ ಕಲ್ಪಿಸಿತ್ತು. ಈ ಮೂಲಕ ಐಶ್ವರ್ಯಾ ಅವರ ಹಾಲಿವುಡ್ ಚೊಚ್ಚಲ ಚಿತ್ರ ಬಾಲಿವುಡ್‌ನಲ್ಲಿ ಪ್ರಮುಖ ಚರ್ಚಾಸ್ಪದ ವಿಷಯ ಕೂಡ ಆಗಿತ್ತು. ಈ ಸಿನಿಮಾದ ಬಗ್ಗೆ ಅಮಿತಾಬ್ ಬಚ್ಚನ್ ಕೂಡ ಟಾಕ್ ಶೋ ಒಂದರಲ್ಲಿ ಐಶ್ವರ್ಯ ಬಗ್ಗೆ ಹೇಳಿಕೆ ಒಂದನ್ನು ನೀಡಿದ್ದು ಸದ್ಯ ಅವರ ಹೇಳಿಕೆ ಎಲ್ಲೆಡೆ ವೈರಲ್ ಆಗಿದೆ.

ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಅವರು 2004ರಲ್ಲಿ ತಮ್ಮ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಅವರ ಹಾಲಿವುಡ್ ಸಿನಿಮಾ ಎಂಟ್ರಿ ಬಗ್ಗೆಯೇ ವಿಶೇಷ ಕಾರ್ಯಕ್ರಮ ಮಾಡಿದ್ದರು. ಈ ಬಗ್ಗೆ ಅನೇಕ ಸೆಲೆಬ್ರಿಟಿಗಳು ಐಶ್ವರ್ಯ ರೈ ಕುರಿತು ಪ್ರತಿಕ್ರಿಯೆ ನೀಡಿದರು. ಈಗ ಅದೇ 21 ವರ್ಷದ ಹಿಂದಿನ ಹಳೆ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ. ಐಶ್ವರ್ಯಾ ಹಾಲಿವುಡ್‌ ನಲ್ಲಿ ಸಕ್ಸಸ್ ಪಡೆಯುತ್ತಾರಾ ಎಂದು ಕರಣ್ ಜೋಹರ್ ಅವರು ನಟ ಅಮಿತಾ ಬಚ್ಚನ್‌ ಅವರಿಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಅಮಿತಾಬ್ ಬಚ್ಚನ್ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಅಮಿತಾ ಬಚ್ಚನ್ ಅವರು ನಟಿ ಐಶ್ವರ್ಯ ರೈ ಅವರ ಹಾಲಿವುಡ್ ಸಿನಿಮಾ ಬಗ್ಗೆ ಮಾತನಾಡಿ, ಅವರು ಹಾಲಿವುಡ್ ಕೆಲವು ಸಿನಿಮಾವನ್ನು ಮಾಡಬಹುದು. ಕೆಲವು ಸಮಯ ಮಾತ್ರ ಅಲ್ಲಿ ಅಭಿ ನಯಿಸಬಹುದಷ್ಟೇ ಎಂದು ಹೇಳಿಕೆ ನೀಡಿದ್ದರು. ಇದೇ ಪ್ರಶ್ನೆಗೆ ನಟ ಅಭಿಷೇಕ್ ಬಚ್ಚನ್ ಅವರು ಉತ್ತರಿಸಿದ್ದಾರೆ. ನಟಿ ಐಶ್ವರ್ಯ ಅವರು ತುಂಬಾ ಪ್ರತಿಭಾನ್ವಿತರು, ಅದ್ಭುತ ವೃತ್ತಿಪರರು. ಹೀಗಾಗಿ ಅವರಿಗೆ ಹಾಲಿವುಡ್ ಅನೇಕ ಸಿನಿಮಾ ಆಫರ್ ಸಿಗಬಹುದು ಎಂದು ಹೇಳಿದರು. ನಟಿ ಐಶ್ವರ್ಯ ಅವರು ಹಾಲಿವುಡ್ ಆ ಸಿನಿಮಾ ಮಾಡಿದ್ದ ಸಂದರ್ಭದಲ್ಲಿ ಅವರು ಅವಿವಾಹಿತರಾಗಿದ್ದರು. ಹೀಗಾಗಿ ಮದುವೆಗೆ ಮುಂಚಿನಿಂದಲೂ ನಟ ಅಭಿಷೇಕ್ ಅವರಿಗೆ ಐಶ್ವರ್ಯಾ ಅವರ ಪ್ರತಿಭೆಯ ಬಗ್ಗೆ ಬಹಳ ಹೆಮ್ಮೆ ಇತ್ತು ಎಂಬುದಕ್ಕೆ ಈ ಟಾಕ್ ಶೋನಲ್ಲಿ ಅವರ ಹೇಳಿಕೆಯೆ ಒಂದು ಸಾಕ್ಷಿ ಎನ್ನಬಹುದು.

ಇದನ್ನೂ ಓದಿ:31 DAYS Movie: ʼಜಾಲಿಡೇಸ್ʼ ಖ್ಯಾತಿಯ ನಿರಂಜನ್ ಶೆಟ್ಟಿ ಅಭಿನಯದ ʼ31 DAYSʼ ಸೆ.5ಕ್ಕೆ ರಿಲೀಸ್‌

ನಟಿ ಐಶ್ವರ್ಯ ರೈ ಅವರ ಹಾಲಿವುಡ್ ಎಂಟ್ರಿ ಬಗ್ಗೆ ಇದೇ ಟಾಕ್ ಶೋ ನಲ್ಲಿ ಅನೇಕ ಸೆಲೆಬ್ರಿಟಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರತಿಭೆ, ಸೌಂದರ್ಯ, ಸ್ಮಾರ್ಟ್ ನೆಸ್ ನಿಂದ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. ಐಶ್ವರ್ಯ ಅವರ ಹಾಲಿವುಡ್ ಪ್ರವೇಶ ನಿಜಕ್ಕೂ ಒಂದು ಅದ್ಭುತ ನಿರ್ಣಯವಾಗಿದೆ ಎಂದು ಹೇಳಿದ್ದರು. ಇದು 2004ರ ಶೋ ಆಗಿದ್ದು ಇದೀಗ ಇದೇ ವಿಚಾರಗಳು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಟಿ ಐಶ್ವರ್ಯಾ ರೈ ಅವರು 'ಬ್ರೈಡ್ & ಪ್ರಿಜುಡೀಸ್' ಎಂಬ ಸಿನಿಮಾ ಮಾಡಿದ್ದ ಬಳಿಕ 'ದಿ ಮಿಸ್ಟ್ರೆಸ್ ಆಫ್ ಸ್ಪೈಸಸ್, 'ಪ್ರೊವೋಕ್ಡ್' ಮತ್ತು ದಿ ಪಿಂಕ್ ಪ್ಯಾಂಥರ್ 2 ಚಿತ್ರಗಳಲ್ಲಿ ಸ್ಟೀವ್ ಮಾರ್ಟಿನ್ ಜೊತೆ ಕಾಣಿಸಿಕೊಂಡರು. ನಟಿ ಹಾಲಿವುಡ್‌ನಲ್ಲಿ ಕೆಲವು ವರ್ಷ ಮಾತ್ರ ಸಕ್ರಿಯ ವಾಗಿದ್ದರು. 2023ರ ತಮಿಳಿನ ಪೊನಿಯನ್ ಸೆಲ್ವಂ 2 ನಲ್ಲಿ ಅವರು ಕೊನೆದಾಗಿ ಕಾಣಿಸಿ ಕೊಂಡಿದ್ದರು. ಅದಾದ ಬಳಿಕ ಯಾವುದೆ ಸಿನಿಮಾ ಮಾಡಿಲ್ಲ. ಆದರೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕೇನ್ಸ್ ಫೆಸ್ಟಿವಲ್ ನಲ್ಲಿ ಭಾಗಿಯಾಗುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.