Thalapathy Vijay: ದಳಪತಿ ವಿಜಯ್ ಕೊನೆಯ ಸಿನಿಮಾ 'ಜನ ನಾಯಗನ್' ಚಿತ್ರದಲ್ಲಿ ನಟಿಸಲಿದ್ದಾರೆ ಈ ಖ್ಯಾತ ನಿರ್ದೇಶಕರು
Jana Nayagan Movie: ದಳಪತಿ ವಿಜಯ್ ಅವರು ತಮ್ಮ ಕೊನೆಯ ಚಿತ್ರ "ಜನ ನಾಯಗನ್" ಚಿತ್ರೀಕರಣದಲ್ಲಿ ಬಹಳಷ್ಟು ಬ್ಯುಸಿಯಾಗಿದ್ದಾರೆ. ಈ ಚಿತ್ರದ ಕುರಿತು ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ರಾಜಕೀಯ ಕಥ ಹಂದರ ಇರುವ ಚಿತ್ರದಲ್ಲಿ ವಿಜಯ್ ಜೊತೆ ಕೆಲಸ ಮಾಡಿದ ಕೆಲವು ಪ್ರಮುಖ ನಿರ್ದೇಶಕರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
-
ನವದೆಹಲಿ: ದಳಪತಿ ವಿಜಯ್ (Thalapathy Vijay) ಅವರು ತಮ್ಮ ಕೊನೆಯ ಚಿತ್ರ "ಜನ ನಾಯಗನ್" ಚಿತ್ರೀಕರಣದಲ್ಲಿ ಬಹಳಷ್ಟು ಬ್ಯುಸಿಯಾಗಿದ್ದಾರೆ. ಈ ನಡುವೆ ರಾಜಕೀಯದಲ್ಲೂ ತೊಡಗಿಕೊಂಡಿರುವ ಅವರು ತಮ್ಮದೇ ಸ್ವಂತ ಪಕ್ಷ ಸ್ಥಾಪಿಸಿ ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಗೆ ಸಿದ್ಧತೆ ಕೂಡ ನಡೆಸಿದ್ದಾರೆ. ಈ ಮೊದಲು ರಿಲೀಸ್ ಆದ ವಿಜಯ್ ನಟನೆಯ ‘ಗೋಟ್’ ಸಿನಿಮಾ ಸಾಧಾರಣ ಯಶಸ್ಸು ಕಂಡಿದ್ದರೂ ಕ್ಲೈಮ್ಯಾಕ್ಸ್ ಡೈಲಾಗ್ ಹೆಚ್ಚಿನ ಗಮನ ಸೆಳೆದಿತ್ತು. ಸದ್ಯ ಅವರ ಕೊನೆಯ ಸಿನಿಮಾ ಎಂದು ಹೇಳಾಗುತ್ತಿರುವ ಜನ ನಾಯಗನ್ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದ್ದು ಈ ಬಗ್ಗೆ ಹೊಸ ಆಪ್ಡೇಟ್ ವೊಂದು ಕೇಳಿಬಂದಿದೆ. ಈ ಚಿತ್ರದ ಕುರಿತು ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ ರಾಜಕೀಯ ಕಥ ಹಂದರ ಇರುವ ಚಿತ್ರದಲ್ಲಿ ವಿಜಯ್ ಜೊತೆ ಕೆಲಸ ಮಾಡಿದ ಕೆಲವು ಪ್ರಮುಖ ನಿರ್ದೇಶಕರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
'ಜನನಾಯಗನ್' ಚಿತ್ರವನ್ನು ಹೆಚ್. ವಿನೋತ್ ನಿರ್ದೇಶನ ಮಾಡುತ್ತಿದ್ದು ಪೂಜಾ ಹೆಗ್ಡೆ, ಮಮಿತಾ ಬೈಜು, ಬಾಬಿ ಡಿಯೋಲ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ವಿಜಯ್ ಪಾತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಥ್ರಿಲ್ ಕೂಡ ಇದೆ. ಈ ನಡುವೆ ಈ ಸಿನಿಮಾದಲ್ಲಿ ಖ್ಯಾತ ನಿರ್ದೇಶಕರು ಕೂಡ ನಟಿಸಲಿದ್ದಾರೆ ಎನ್ನುವ ಮಾಹಿತಿ ವೈರಲ್ ಆಗಿದೆ. ನಿರ್ದೇಶಕರಾದ ಲೋಕೇಶ್ ಕನಕರಾಜ್, ನೆಲ್ಸನ್ ದಿಲೀಪ್‌ಕುಮಾರ್ ಮತ್ತು ಅಟ್ಲೀ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು 'ಜನ ನಾಯಗನ್' ಚಿತ್ರದಲ್ಲಿ ಪತ್ರಕರ್ತರಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೂವರೂ ನಿರ್ದೇಶಕರು ಕೂಡ ಈಗಾಗಲೇ ವಿಜಯ್ ಅವರೊಂದಿಗೆ ಯಶಸ್ವಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಲೋಕೇಶ್ ಕನಕರಾಜ್ ಅವರು ವಿಜಯ್ ಅವರ 'ಮಾಸ್ಟರ್' ಮತ್ತು 'ಲಿಯೋ' ಚಿತ್ರಗಳನ್ನು ನಿರ್ದೇಶನ ಮಾಡಿದರೆ, ನೆಲ್ಸನ್ ದಿಲೀಪ್‌ಕುಮಾರ್ 'ಬೀಸ್ಟ್' ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಅದೇ ರೀತಿ ಅಟ್ಲೀ ' ಅವರು ತೆರಿ' ಮತ್ತು 'ಬಿಗಿಲ್' ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇದೀಗ ವಿಜಯ್ ಅವರ ಕೊನೆಯ ಚಿತ್ರದಲ್ಲಿ ಇವರೆಲ್ಲಾ ನಟಿಸುತ್ತಿರುವ ವಿಚಾರ ಕೂಡ ಅಭಿಮಾನಿಗಳಿಗೆ ಕ್ಯುರಾಸಿಟಿ ಕೂಡ ಹೆಚ್ಚು ಮಾಡಿದೆ.
ಇದನ್ನು ಓದಿ:Nidradevi Next Door Movie: ‘ನಿದ್ರಾದೇವಿ Next Door’ ಚಿತ್ರದ ಟೈಟಲ್ ಸಾಂಗ್ ಔಟ್: ಸೆ.12ಕ್ಕೆ ಚಿತ್ರ ರಿಲೀಸ್
ಈ ಚಿತ್ರವನ್ನು ಹೆಚ್. ವಿನೋದ್ ನಿರ್ದೇಶಿಸುತ್ತಿದ್ದು,ಅನಿರುದ್ಧ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿ ದ್ದಾರೆ. ಕೆವಿಎನ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಅಂತಿಮ ಹಂತ ತಲುಪಿದೆ ಎಂದು ವರದಿಯಾಗಿದೆ. ಇದು ರಾಜಕೀಯ ಕಥೆಯನ್ನು ಹೊಂದಿರುವ ಸಿನಿಮಾ ಆಗಿದ್ದು ವಿಜಯ್ ಅವರು ರಾಜಕೀಯಕ್ಕೆ ಪ್ರವೇಶಿಸುತ್ತಿರುವ ಕಾರಣ, 'ಜನ ನಾಯಗನ್' ಅವರ ಕೊನೆಯ ಚಿತ್ರವಾಗಿ ರುವ ಸಾಧ್ಯತೆಯಿದೆ. ಈ ಚಿತ್ರವು 2026ರ ಸಂಕ್ರಾಂತಿ ಹಬ್ಬದಂದು ಬಿಡುಗಡೆ ಯಾಗುವ ನಿರೀಕ್ಷೆ ಯಿದೆ. ಆದರೆ ಈ ಕುರಿತು ಚಿತ್ರತಂಡ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.