Actor Arjun Das: ನಟ ಪವನ್ ಕಲ್ಯಾಣ್ ಬಗ್ಗೆ ವಿಶೇಷ ಪೋಸ್ಟ್ ಶೇರ್ ಮಾಡಿದ ಅರ್ಜುನ್ ದಾಸ್!
OG Movie: ನಟ ಪವನ್ ಕಲ್ಯಾಣ್ ಅವರೊಂದಿಗೆ ಇದ್ದ ಆತ್ಮೀಯತೆಯ ಬಗ್ಗೆ ಸುದೀರ್ಘ ಸಾಲು ಗಳನ್ನು ನಟ ಅರ್ಜುನ್ ದಾಸ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸೆ. 25ರಂದು ಪವನ್ ಕಲ್ಯಾಣ್ ನಟನೆಯ ಓಜಿ ಸಿನಿಮಾ ರಿಲೀಸ್ ಮಾಡಲಾಗಿದೆ. ಆದರೆ ಇದಕ್ಕೂ ಮೊದಲೇ ಚಿತ್ರತಂಡಕ್ಕೆ ಹಾಗೂ ನಟ ಪವನ್ ಕಲ್ಯಾಣ್ ಬಗ್ಗೆ ಮೆಚ್ಚುಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

-

ಹೈದರಾಬಾದ್: ತಮಿಳು ಚಿತ್ರರಂಗದ ಸಕ್ರಿಯ ನಟರಲ್ಲಿ ಅರ್ಜುನ್ ದಾಸ್ (Actor Arjun Das) ಕೂಡ ಒಬ್ಬರಾಗಿದ್ದಾರೆ.. ಕೈತಿ, ಮಾಸ್ಟರ್, ವಿಕ್ರಮ್ ಸಿನಿಮಾ ಮೂಲಕ ಖ್ಯಾತಿ ಪಡೆದ ನಟ ಅರ್ಜುನ್ ದಾಸ್ ಅವರು ಸಾಕಷ್ಟು ಅಭಿಮಾನಿಗಳ ಮನಗೆದ್ದ ನಟರಾಗಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಇವರು ಈ ಬಾರಿ ತೆಲುಗು ಸೂಪರ್ ಸ್ಟಾರ್ ನಟ ಪವನ್ ಕಲ್ಯಾಣ್ ಕುರಿತು ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ನಟ ಪವನ್ ಕಲ್ಯಾಣ್ ಅವರೊಂದಿಗೆ ಇದ್ದ ಆತ್ಮೀಯತೆಯ ಬಗ್ಗೆ ಸುದೀರ್ಘ ಸಾಲುಗಳನ್ನು ನಟ ಅರ್ಜುನ್ ದಾಸ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಇವರು 'ದೆ ಕಾಲ್ ಹಿಮ್ ಓಜಿ' ಸಿನಿಮಾದಲ್ಲಿ ತೊಡಗಿಕೊಂಡಿದ್ದು ಸೆ. 25ರಂದು ಈ ಸಿನಿಮಾ ರಿಲೀಸ್ ಮಾಡಲಾಗಿದೆ. ಆದರೆ ಇದಕ್ಕೂ ಮೊದಲೇ ಚಿತ್ರತಂಡಕ್ಕೆ ಹಾಗೂ ನಟ ಪವನ್ ಕಲ್ಯಾಣ್ ಬಗ್ಗೆ ಮೆಚ್ಚುಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತೆಲುಗು ಸ್ಟಾರ್ ಪವನ್ ಕಲ್ಯಾಣ್ ಅವರನ್ನು ತಮ್ಮ ಅಣ್ಣ ಎಂದು ಕರೆದಿದ್ದು ವಿಶೇಷ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
Apologies for the long Post!@PawanKalyan @Sujeethsign @DVVMovies @sriyareddy @MusicThaman
— Arjun Das (@iam_arjundas) September 24, 2025
#OG #TheyCalHimOG 💣💥#ForeverGrateful ♥️ pic.twitter.com/cdB6LdVLJU
ನಿರ್ದೇಶಕ ಸುಜೀತ್ ಅವರ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾವಾದ 'ದೆ ಕಾಲ್ ಹಿಮ್ ಓಜಿ' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ನಟ ಅರ್ಜುನ್ ದಾಸ್ ಅವರು ಇಡೀ ಚಿತ್ರ ತಂಡಕ್ಕೆ ಮತ್ತು ನಟ ಪವನ್ ಕಲ್ಯಾಣ್ ಅವರಿಗೆ ಕೃತಜ್ಞತೆ ಸಲ್ಲಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ. ಒಜಿ ಸಿನಿಮಾ ಶೂಟಿಂಗ್ ಆರಂಭವಾದ ಬಳಿಕ ಅಭಿಮಾನಿಗಳು ಬಂದು ಎರಡು ಪ್ರಶ್ನೆಗಳನ್ನು ಕೇಳುತ್ತಿದ್ದರು. ಒಂದು ಒಜಿ ಚಿತ್ರದ ಅಪ್ಡೇಟ್ ಮತ್ತು ಪವನ್ ಸರ್ ಹೇಗಿದ್ದಾರೆ ಎಂಬುದಾಗಿ ಅವರು ಚೆನ್ನಾಗಿದ್ದಾರೆ ಎಂದು ನಾನು ಹೇಳಿದರೆ ಸಾಕು, ಅವರು ಸಂತೋಷದಿಂದ ನಗುತ್ತಾ ಹೊರಟುಹೋಗುತ್ತಿದ್ದರು. ಆದರೆ ಈ ಪ್ರೀತಿ ನನಗಲ್ಲ, ಪವನ್ ಸರ್ ಜೊತೆ ಒಡನಾಟ ಎಂದು ನನಗೆ ಚೆನ್ನಾಗಿ ಗೊತ್ತು" ಎಂದು ಅರ್ಜುನ್ ದಾಸ್ ಬರೆದಿದ್ದಾರೆ.
ನಟ ಪವನ್ ಕಲ್ಯಾಣ್ ಜೊತೆ ಮೊದಲ ಬಾರಿಗೆ ನಡೆಸಿದ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದು ನೀವು ಮೊದಲ ಬಾರಿಗೆ ನನ್ನೊಂದಿಗೆ ಮಾತನಾಡಿದಾಗ, ನೀವು ನನ್ನ ಸಂದರ್ಶನಗಳನ್ನು ನೋಡಿ ದ್ದೀರಿ ಎಂದು ಹೇಳಿದ್ದು ನನಗೆ ಇನ್ನೂ ನೆನಪಿದೆ. ಇದನ್ನು ನಾನು ನನ್ನ ಫ್ಯಾಮಿಲಿ ಜೊತೆಗೂ ಶೇರ್ ಮಾಡಿ ಪವನ್ ಸರ್ ಗೆ ನನ್ನ ಹೆಸರು ಪರಿಚಯ ಎಲ್ಲ ಗೊತ್ತು ಎಂದು ಹೆಮ್ಮೆಯಿಂದ ಹೇಳಿಕೊಂಡೆ. ಚಿತ್ರೀಕರಣದ ಸಮಯದಲ್ಲಿ ಅವರು ನನ್ನ ಜೊತೆ ಬಹಳ ವಿಚಾರ ಶೇರ್ ಮಾಡಿದ್ದರು ನನಗೆ ಅನೇಕ ಸಲಹೆ ಕೂಡ ನೀಡಿದ್ದರು. ಅವರು ನನ್ನ ಅಣ್ಣ ನಂತೆ. ಪವನ್ ಅಣ್ಣನ ಮಾತುಗಳ ಸಲಹೆಯನ್ನು ನಾನು ಶಾಶ್ವತವಾಗಿ ಪಾಲಿಸುತ್ತೇನೆ ಎಂದು ಬರೆದು ಕೊಂಡಿದ್ದಾರೆ.
ಪವನ್ ಅಣ್ಣ ಅವರು ನಿಜವಾಗಿಯೂ ಹೃದಯ ಶ್ರೀಮಂತಿಕೆ ಉಳ್ಳವರು. ನಿಮ್ಮ ದಯೆ, ಔದಾರ್ಯ ಮತ್ತು ನಿಮ್ಮ ವಿನಮ್ರತೆ, ಶ್ರಮಶೀಲತೆಯೂ ಅಭಿಮಾನಿಗಳಿಗೆ ಸ್ಫೂರ್ತಿದಾಯಕವಾಗಿದೆ. ಪವನ್ ಅಣ್ಣ ನೀವು ಪರದೆಯ ಮೇಲೆ ಸ್ಟೈಲಿಶ್ ಹೀರೋ ಮಾತ್ರವಲ್ಲ ಜೀವನದಲ್ಲಿ ರಿಯಲ್ ಹೀರೋ ಆಗಿದ್ದೀರಿ. ನಿಮ್ಮೊಂದಿಗೆ ಮತ್ತೆ ಕೆಲಸ ಮಾಡಲು ನಾನು ಆಶಿಸುತ್ತೇನೆ ಎಂದು ಅರ್ಜುನ್ ದಾಸ್ ಅವರು ಪೋಸ್ಟ್ ನಲ್ಲಿ ಬರೆದಿದ್ದಾರೆ.
ತಮ್ಮ ಪೋಸ್ಟ್ ನ ಕೊನೆಗೆ ಅರ್ಜುನ್ ದಾಸ್ ಅವರು, ಪವನ್ ಕಲ್ಯಾಣ್ ಅವರಿಗೆ ಭವಿಷ್ಯದಲ್ಲಿ, ನಿಮ್ಮ ಯಾವುದೇ ಸಿನಿಮಾದಲ್ಲಿ ಸಣ್ಣ ಪಾತ್ರವಾದರೂ ಸರಿ ನಾನು ಅದನ್ನು ಪ್ರೀತಿಯಿಂದ ಒಪ್ಪಿಕೊಳ್ಳುವೆ. ಅದು ವಾಯ್ಸ್ ಓವರ್ ಆಗಿರಲಿ ಅಥವಾ ನಾನು ಒಂದು ನಿಮಿಷದ ಪಾತ್ರವಾದರು ಒಕೆ. ಅದನ್ನು ನಾನು ನಿಮಗಾಗಿ ಸಂತೋಷದಿಂದ ಮಾಡುತ್ತೇನೆ. ನೀವು ನಿಮ್ಮ ಕುಟುಂಬದವರಂತೆ ಭಾವಿಸುತ್ತೇನೆ. ಧನ್ಯವಾದಗಳು, ಪವನ್ ಅಣ್ಣಯ್ಯಾ...ಇಂದಿನಿಂದ, ನಿಮ್ಮ ಅನುಮತಿಯೊಂದಿಗೆ, ನಾನು ನಿಮ್ಮನ್ನು ಅಣ್ಣ ಎಂದೇ ಕರೆಯುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗಿದ್ದು ಫ್ಯಾನ್ಸ್ ಕೂಡ ಈ ಪೋಸ್ಟ್ ಗೆ ಲೈಕ್ ಕಾಮೆಂಟ್ ನೀಡಿದ್ದಾರೆ.