ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಾಯಿಯಾದೊಡನೆ ನಿಮ್ಮ ಮಹತ್ವಾಕಾಂಕ್ಷೆಗಳಿಗೆ ವಿರಾಮ ಹೇಳಬೇಕಿಲ್ಲ, ತಾಯ್ತನವೇ ನಿಮ್ಮ ಬೆಳವಣಿಗೆಗೆ ಪೂರಕ

ತಾಯ್ತನ, ಎಂತಹ ಗಡಿಬಿಡಿಯ ದಿನಗಳಲ್ಲಿಯೂ ಹೇಗೆ ಶಾಂತವಾಗಿರುವುದು; ಎಲ್ಲ ಜವಾಬ್ದಾರಿ ಗಳನ್ನು ಹೇಗೆ ನಿರ್ವಹಿಸುವುದು; ಏನೇ ಬಂದರೂ ಹೇಗೆ ಬೇಗ ಹೊಂದಿಕೊಳ್ಳುವುದು ಮತ್ತು ಎಷ್ಟೇ ಕೆಲಸಗಳಿದ್ದರೂ ನಿಮ್ಮ ಕುಟುಂಬಕ್ಕೆ ಹೇಗೆ ಆದ್ಯತೆ ಕೊಡುವುದು ಎಂಬುದನ್ನು ಕಲಿಸುತ್ತದೆ. ಸಹಜವಾಗಿಯೇ ತಾಯಿಯಾದ ನಂತರ ನಿಮ್ಮ ಆದ್ಯತೆಗಳು ಬದಲಾಗುತ್ತವೆ.

ತಾಯಿಯಾದೊಡನೆ ನಿಮ್ಮ ಮಹತ್ವಾಕಾಂಕ್ಷೆಗಳಿಗೆ ವಿರಾಮ ಹೇಳಬೇಕಿಲ್ಲ

-

Profile
Ashok Nayak May 9, 2026 9:32 PM

ಅನಿತಾ, FOFO ಪಾರ್ಟ್ನರ್, ಹೋಮ್‌ಲೇನ್

ಅನೇಕ ಮಹಿಳೆಯರು, ತಾಯಿಯಾದೊಡನೆ ತಮ್ಮ ವೈಯಕ್ತಿಕ ಕನಸುಗಳು ಮತ್ತು ವೃತ್ತಿಪರ ಮಹತ್ವಾಕಾಂಕ್ಷೆಗಳಿಗೆ ಮುಕ್ತಾಯ ಹೇಳಬೇಕಾಗುತ್ತದೆ ಎಂದೇ ಭಾವಿಸುತ್ತಾರೆ. ಆದರೆ, ನನ್ನ ಅನುಭವ ಇದಕ್ಕೆ ತೀರಾ ಭಿನ್ನವಾಗಿದೆ. ತಾಯ್ತನ, ನನ್ನನ್ನು ನನ್ನ ಊಹೆಗೂ ಮೀರಿ ಬದಲಾಯಿಸಿತು. ನಾನು ಮೊದಲಿಗಿಂತ ಹೆಚ್ಚು ಶಕ್ತಿವಂತಳೂ, ತಾಳ್ಮೆಯುಳ್ಳವಳೂ ಆದೆ. ಪ್ರೀತಿ ಹಾಗೂ ಕಾಳಜಿಗಳಿಂದ ನನ್ನ ಮಗುವನ್ನು ಬೆಳೆಸುತ್ತಲೇ ಅರ್ಥಪೂರ್ಣವಾದ ವೃತ್ತಿಜೀವನವನ್ನು ಕಟ್ಟಿಕೊಳ್ಳುವ ನನ್ನ ಸಂಕಲ್ಪ ಮತ್ತೂ ದೃಢವಾಯಿತು.

ತಾಯ್ತನ, ಎಂತಹ ಗಡಿಬಿಡಿಯ ದಿನಗಳಲ್ಲಿಯೂ ಹೇಗೆ ಶಾಂತವಾಗಿರುವುದು; ಎಲ್ಲ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸುವುದು; ಏನೇ ಬಂದರೂ ಹೇಗೆ ಬೇಗ ಹೊಂದಿಕೊಳ್ಳು ವುದು ಮತ್ತು ಎಷ್ಟೇ ಕೆಲಸಗಳಿದ್ದರೂ ನಿಮ್ಮ ಕುಟುಂಬಕ್ಕೆ ಹೇಗೆ ಆದ್ಯತೆ ಕೊಡುವುದು ಎಂಬುದನ್ನು ಕಲಿಸುತ್ತದೆ. ಸಹಜವಾಗಿಯೇ ತಾಯಿಯಾದ ನಂತರ ನಿಮ್ಮ ಆದ್ಯತೆಗಳು ಬದಲಾಗುತ್ತವೆ. ನೀವು ನಿಮ್ಮ ಸ್ವಂತ ಬೆಳವಣಿಗೆಯ ಬಗ್ಗೆ ಮಾತ್ರವಲ್ಲದೆ ನಿಮ್ಮ ಮಗುವಿ ಗೊಂದು ಸುರಕ್ಷಿತವಾದ, ಪ್ರೀತಿ ಮತ್ತು ಉಲ್ಲಾಸ ತುಂಬಿರುವ ವಾತಾವರಣವನ್ನು ಸೃಷ್ಟಿ ಸುವ ಬಗ್ಗೆಯೂ ಯೋಚಿಸಲು ಪ್ರಾರಂಭಿಸುತ್ತೀರಿ. ನಿಜ ಹೇಳಬೇಕೆಂದರೆ, ತಾಯಿಯಾದ ನಂತರ ನಾನು ನನ್ನ ವೃತ್ತಿಜೀವನಕ್ಕೆ ಇನ್ನಷ್ಟು ಗಮನ ಕೊಡುತ್ತಿದ್ದೇನೆ, ಮತ್ತು ನನ್ನ ವೃತ್ತಿ ಜೀವನ ಹೆಚ್ಚು ಶಿಸ್ತುಬದ್ಧವಾಗಿದೆ.

ಇದನ್ನೂ ಓದಿ: Home Loan: ಸಾಲಗಾರರಿಗೆ ಗುಡ್‌ ನ್ಯೂಸ್; ರೆಪೊ ದರ ಇಳಿಕೆಯ ಬಳಿಕ 50 ಲಕ್ಷ ರೂ. ಗೃಹ ಸಾಲದಲ್ಲಿ ಎಷ್ಟು ಇಳಿಕೆಯಾಗಲಿದೆ?

ಉದ್ಯಮ ಮತ್ತು ತಾಯ್ತನ ಎರಡನ್ನೂ ತೂಗಿಸುವುದು ಸುಲಭವಲ್ಲ. ವರ್ಕ್ ಮೀಟಿಂಗ್ ಗಳು, ಗಡುವುಗಳು ಮತ್ತು ಮಗುವಿನ ಅಗತ್ಯತೆಗಳು... ಏಕಕಾಲದಲ್ಲಿ ಎಲ್ಲಕ್ಕೂ ಗಮನ ವನ್ನು ಹರಿಸಬೇಕಾಗುತ್ತಿರುತ್ತದೆ. ಹೆಚ್ಚಿನ ತಾಯಂದಿರಂತೆ ನಾನೂ, ಎಲ್ಲ ಗೊಂದಲಗಳ ಮಧ್ಯದಲ್ಲಿಯೂ ಸಮತೋಲನವನ್ನು ಕಾಯ್ದುಕೊಳ್ಳಲು ಕಲಿತಿದ್ದೇನೆ.

ಕೆಲವು ದಿನ ಗಳಂತೂ ಬೆಳಗ್ಗೆ ಎದ್ದೊಡನೆಯೇ ಕೆಲಸದ ಕುರಿತಾದ ಕರೆಗಳಿರುತ್ತವೆ... ಅಲ್ಲಿಂದ ಪ್ರಾರಂಭವಾಗಿ ರಾತ್ರಿ ಮಗುವಿನ ಶಾಲೆಯ ವಿಷಯಗಳನ್ನು ಕೇಳಿ, ಅದಕ್ಕೆ ಕಥೆ ಹೇಳಿ ಮಲಗಿಸುವವರೆಗೂ ಒಂದು ನಿಮಿಷ ಪುರುಸೊತ್ತಿರುವುದಿಲ್ಲ. ಆದರೆ ನಾನು ಎಂದಿ ಗೂ ನನ್ನ ಮಗುವಿಗೆ ಕೊಡಬೇಕಾದ ಗಮನವನ್ನು, ಸಮಯವನ್ನು ಕೊಟ್ಟೇ ಕೊಡುತ್ತೇನೆ. ಅದರಲ್ಲಿ ಯಾವುದೇ ರಾಜಿ ಇಲ್ಲ. ನನ್ನ ಕುಟುಂಬದ ಬೆಂಬಲವಿಲ್ಲದಿದ್ದರೆ ಈ ಬಗೆಯ ಸಮತೋಲನ ಕಾಯ್ದುಕೊಳ್ಳುವುದು ಸಾಧ್ಯವಾಗುವುದಿಲ್ಲ.

ನನ್ನ ಅದೃಷ್ಟವೆಂದರೆ ನನ್ನ ಸುತ್ತಲೂ ನನ್ನನ್ನು ಪ್ರೀತಿಸುವ ಜನರಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ನನ್ನ ಅತ್ತೆ. ನಮ್ಮ ಮನೆಯ ನಿರ್ವಹಣೆಯಲ್ಲಾಗಲಿ, ಮಗುವನ್ನು ನೋಡಿ ಕೊಳ್ಳುವುದರಲ್ಲಾಗಲಿ ಅವರ ಪಾತ್ರ ಬಹಳ ಹೆಚ್ಚಿನದು. ನಾನು, ರೇವಂತ್ ಮತ್ತು ಶಿಶಿರ್ ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತೇವೆ. ಹೀಗೆ ನನ್ನ ನೆರವಿಗೆ ಎಲ್ಲರೂ ಇರುವುದರಿಂದ ಮಗುವಿಗೆ ಬೇಕಾದಷ್ಟು ಪ್ರೀತಿ, ಕಾಳಜಿಯನ್ನೂ ಕೊಡುತ್ತ ವೃತ್ತಿಪರವಾಗಿಯೂ ಬೆಳೆಯು ವುದು ನನಗೆ ಸಾಧ್ಯವಾಗಿದೆ.

ಸ್ವತಂತ್ರವಾಗಿ ಏನನ್ನಾದರೂ ಮಾಡಬೇಕೆನ್ನುವ ತೀವ್ರವಾದ ಬಯಕೆಯೊಂದಿಗೆ ಉದ್ಯಮ ದ ಜೊತೆಗಿನ ನನ್ನ ನಂಟು ಪ್ರಾರಂಭವಾಯಿತು. ಮಾಡ್ಯುಲರ್ ಇಂಟೀರಿಯರ್ಸ್ ನಿಂದ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದೆ ಮತ್ತು ಈಗ ಮಂಗಳೂರಿನಲ್ಲಿ ಎಂಡ್-ಟು-ಎಂಡ್ ಹೋಮ್ ಇಂಟೀರಿಯರ್ ಪರಿಹಾರಗಳಲ್ಲಿ 12+ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಇಷ್ಟು ವರ್ಷಗಳಲ್ಲಿ ನಾನು ವೈವಿಧ್ಯಮಯವಾದ ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡಿ ದ್ದೇನೆ; ಆಧುನಿಕ ಮನೆಮಾಲೀಕರಿಗೆ ನಿಜಕ್ಕೂ ಏನು ಬೇಕಿದೆ ಎಂಬುದರ ಬಗ್ಗೆ ಪ್ರತ್ಯಕ್ಷ ಅನುಭವವನ್ನು ಪಡೆದುಕೊಂಡಿದ್ದೇನೆ. ಇಂಟೀರಿಯರ್ಸ್ ಇಂಡಸ್ಟ್ರಿ ಆಪರೇಷನ್ ಗಳಲ್ಲಿ ಇರುವ ನ್ಯೂನತೆಗಳನ್ನು ಸಹ ಗುರುತಿಸಿದ್ದೇನೆ.

ನಾನು ಮೂಲತಃ ಮುಂಬೈನವಳು. ಮದುವೆಯ ನಂತರ ಮಂಗಳೂರಿಗೆ ಬಂದೆ. ಸಾಕಷ್ಟು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಯಿತು. ಅವಕಾಶಗಳು ಸಿಕ್ಕರೂ ಬೆಳವಣಿಗೆ ಮತ್ತು ಸ್ಥಿರತೆ ಎರಡೂ ಇರುವಂತಹ ಅವಕಾಶಗಳನ್ನು ಪತ್ತೆ ಮಾಡುವುದು ಕಷ್ಟವಾಗಿತ್ತು. ಈಗ, ಹಿಂತಿರುಗಿ ನೋಡಿದಾಗ, ಅಂದಿನ ಆ ಅನುಭವಗಳು ನನಗೆ ಪುಟಿದೇಳುವ ಸಾಮರ್ಥ್ಯ ವನ್ನು ನೀಡಿದವು. ನನ್ನದೇ ಆದ ಮಾರ್ಗವನ್ನು ರೂಪಿಸಿಕೊಳ್ಳುವ ಆತ್ಮವಿಶ್ವಾಸವನ್ನು ಬೆಳೆಸಿದವು. ಇಂದು ಮಂಗಳೂರು ಸೇರಿದಂತೆ ಕರಾವಳಿ ಕರ್ನಾಟಕದ ಆದ್ಯಂತ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ಈ ಪ್ರದೇಶದವರ ಆತ್ಮೀಯತೆ, ಮತ್ತು ಗಟ್ಟಿಯಾದ ಕುಟುಂಬ ಮೌಲ್ಯಗಳ ಬಗ್ಗೆ ನನಗೆ ಬಹಳ ಮೆಚ್ಚುಗೆಯಿದೆ. ಒಬ್ಬ ಉದ್ಯಮಿಯಾಗಿ ಮತ್ತು ತಾಯಿ ಯಾಗಿ ನನಗೆ ಈ ಮೌಲ್ಯಗಳ ಅಪಾರವಾದ ಗೌರವವಿದೆ.

ನನ್ನನ್ನು ಹೋಮ್‌ಲೇನ್‌ ಗೆ ಆಕರ್ಷಿಸಿದ್ದು ಅದರ ವಿಶ್ವಾಸಾರ್ಹತೆ; ಒಟ್ಟಾಗಿ ಕೆಲಸ ಮಾಡುವ ರೀತಿ; ಉತ್ಪನ್ನದ ಗುಣಮಟ್ಟ; ಮಾರಾಟ ನಂತರದ ಬೆಂಬಲ; ಅಚ್ಚುಕಟ್ಟಾಗಿ ರೂಪುಗೊಂಡಿರುವ ಪ್ರಕ್ರಿಯೆಗಳು ಮತ್ತು ಮೇಲ್ನೋಟಕ್ಕೇ ಕಾಣುವಂತಹ ಟೀಂ ವರ್ಕ್. ಸಾಮಾನ್ಯವಾಗಿ ಈ ಉದ್ಯಮದಲ್ಲಿ ಪರಸ್ಪರ ನಿಕಟವಾದ ಸಂಪರ್ಕವೇ ಇರುವುದಿಲ್ಲ. ಆದರೆ ಹೋಮ್‌ಲೇನ್ ನಲ್ಲಿ ಹಾಗಿಲ್ಲ. ಇಲ್ಲಿ, ತಂತ್ರಜ್ಞಾನ-ಆಧರಿತ ವ್ಯವಸ್ಥೆಗಳು ಮತ್ತು ಕಾರ್ಖಾನೆ-ಆಧರಿತ ಕೆಲಸಗಳ ಮೂಲಕ ನಿಖರತೆ ಮತ್ತು ಸ್ಥಿರತೆ ಎರಡೂ ಇವೆ.

ಒಬ್ಬ ವಾಣಿಜ್ಯೋದ್ಯಮಿಯಾಗಿ ನಾನು ಕಲಿತ ದೊಡ್ಡ ಪಾಠವೆಂದರೆ ಸೂಕ್ತವಾದ ವ್ಯವಸ್ಥೆ ಗಳು ಇರಬೇಕಾದ್ದು ಅತ್ಯವಶ್ಯ. ಸ್ವತಂತ್ರ ವ್ಯವಹಾರ ಎಂದೊಡನೆ ಜೊತೆ ಜೊತೆಗೇ ಅನಿಶ್ಚಿತತೆ ಸಹ ಇರುತ್ತದೆ. ಇದು ಸ್ವಾಭಾವಿಕ. ಆದರೆ ಹೋಮ್‌ಲೇನ್‌ ನಲ್ಲಿ ಆಪರೇಷನ್ ಗಳಿಗೆ ಒದಗಿಸುವ ಬೆಂಬಲ ಮತ್ತು ಅದರ ರಚನಾತ್ಮಕ ಚೌಕಟ್ಟು, ಗ್ರಾಹಕರಿಗೆ ಸಮಸ್ಯಾ ತೀತವಾದ ಅನುಭವವನ್ನು ನೀಡುತ್ತಲೇ ಬೆಳವಣಿಗೆಗೂ ಗಮನಹರಿಸಲು ಅನುವು ಮಾಡಿ ಕೊಡುತ್ತದೆ.

ತಾಯ್ತನ, ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ನನಗೆ ಕಲಿಸಿದೆ. ಸಹಾನು ಭೂತಿ, ತಾಳ್ಮೆ ಮತ್ತು ಗಮನವಿಟ್ಟು ಆಲಿಸುವುದರ ಪ್ರಾಮುಖ್ಯತೆಯನ್ನು ಕಲಿಸಿದೆ. ಅಬ್ಬರವೇ ಶಕ್ತಿಯಲ್ಲ ಎಂದು ಕಲಿಸಿದೆ. ಶಕ್ತಿ ಎಂದರೆ ಸ್ಥಿರತೆ, ಕಾಳಜಿ ಮತ್ತು ಯಾವಾಗಲೂ ಜವಾಬ್ದಾರಿಯಿಂದ ಕೆಲಸ ಮಾಡುವುದು. ಅಲ್ಲಿ ಸದ್ದು ಗದ್ದಲವಿರುವುದಿಲ್ಲ. ನನ್ನ ಅನಿಸಿಕೆ ಏನೆಂದರೆ: ಅನೇಕ ಮಹಿಳೆಯರು ದೊಡ್ಡ ದೊಡ್ಡ ಕೆಲಸಗಳನ್ನು ಸಮರ್ಥವಾಗಿ ಮಾಡು ತ್ತಿದ್ದಾರೆ. ಆದರೆ ಅವರಿಗೆ ಅವರ ಒಳಗಿರುವ ಸಾಮರ್ಥ್ಯಗಳ ಅರಿವೇ ಇಲ್ಲ.

ಈ ಸಲದ ತಾಯಂದಿರ ದಿನ ನನಗೆ ಬಹಳ ವಿಶೇಷವಾಗಿದೆ. ಏಕೆಂದರೆ ಅಂದೇ ನನ್ನ ಸಹೋದರನ ಮದುವೆ ಸಹ ಇದೆ. ಮಾಮೂಲಿ ಜೀವನದಿಂದ ಸ್ವಲ್ಪ ವಿರಾಮ ತೆಗೆದು ಕೊಂಡು ನನ್ನ ಮಗು ಮತ್ತು ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಎದುರು ನೋಡುತ್ತಿದ್ದೇನೆ. ತಾಯಂದಿರ ದಿನದಂದು ನಾನು ಯಾವಾಗಲೂ ಮಾಡುವ ಒಂದು ಆನಂದದ ಕೆಲಸವೆಂದರೆ ನನ್ನ ತಾಯಿ ಮತ್ತು ಅತ್ತೆಯನ್ನು ಶಾಪಿಂಗ್ ಗೆ ಕರೆದುಕೊಂಡು ಹೋಗುವುದು. ಇದು ನಮ್ಮಲ್ಲಿನ ವಿಶೇಷ ಸಂಪ್ರದಾಯ. ತಾಯ್ತನ ಮತ್ತು ವೃತ್ತಿಪರತೆ ಎರಡನ್ನೂ ಸಮ-ಸಮನಾಗಿ ನಿರ್ವಹಿಸಲು ನನಗೆ ಸಹಾಯ ಮಾಡುತ್ತಿರುವ ಈ ಇಬ್ಬರು ಮಹಿಳೆಯರ ಬಗ್ಗೆ ನನಗಿರುವ ಗೌರವ ಮತ್ತು ಪ್ರೀತಿಗಳ ಒಂದು ಪುಟ್ಟ ಸಂಕೇತ .

ನಾನು ಮಹಿಳೆಯರಿಗೆ ಒಂದು ಮಾತನ್ನು ಹೇಳಲು ಬಯಸುತ್ತೇನೆ: ತಾಯ್ತನ ಎಂದರೆ ನಿಮ್ಮ ಮಹತ್ವಾಕಾಂಕ್ಷೆಗಳನ್ನು ಬದಿಗೊತ್ತುವುದು ಎಂದಲ್ಲ. ಸರಿಯಾದ ಬೆಂಬಲ ಮತ್ತು ಸಮತೋಲನ ಇದ್ದರೆ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಬೆಳೆಯುತ್ತಲೇ ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬಹುದು. ಮಹಿಳೆಯರು ಅತ್ಯಂತ ಸಮರ್ಥ ರಿದ್ದಾರೆ. ಅದು ಅವರಿಗೇ ಗೊತ್ತಿಲ್ಲ. ಕುಟುಂಬಗಳು ಮಹಿಳೆಯರಿಗೆ ಬೆಂಬಲವಾಗಿ ನಿಂತರೆ ಎಲ್ಲರಿಗೂ, ವಿಶೇಷವಾಗಿ ಮಕ್ಕಳಿಗೆ ಒಂದು ಬಲವಾದ ಮೌಲ್ಯಯುತ ಅಡಿಪಾಯವನ್ನು ಹಾಕಲು ಸಾಧ್ಯವಾಗುತ್ತದೆ.