Gold Rate Today on 24th June 2026: ಮಧ್ಯಪ್ರಾಚ್ಯದಲ್ಲಿ ಶಾಂತಿ ಒಪ್ಪಂದ; ಚಿನ್ನದ ದರದಲ್ಲಿಂದು ಮತ್ತೆ ಇಳಿಕೆ
ಸ್ವರ್ಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಇಂದೂ ಚಿನ್ನದ ದರದಲ್ಲಿ ಮತ್ತೆ ಇಳಿಕೆ ಕಂಡು ಬಂದಿದೆ. ಬುಧವಾರ ರೂ. 25 ಇಳಿಕೆ ಕಂಡಿದ್ದು ಬೆಂಗಳೂರಿನಲ್ಲಿ 22 ಕ್ಯಾರಟ್ನ 1 ಗ್ರಾಂ ಚಿನ್ನಕ್ಕೆ 13,230 ರೂ. ಇದ್ದರೆ, 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 27 ರೂ. ಇಳಿಕೆಯಾಗಿ 14,433 ರೂಪಾಯಿ ಕಂಡು ಬಂದಿದೆ.
ಚಿನ್ನದ ದರದಲ್ಲಿ ಇಳಿಕೆ (ಸಂಗ್ರಹ ಚಿತ್ರ) -
ಬೆಂಗಳೂರು: ಸ್ವರ್ಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ಇಂದೂ ಚಿನ್ನದ ದರದಲ್ಲಿ ಮತ್ತೆ ಇಳಿಕೆ ಕಂಡು ಬಂದಿದೆ. ಬುಧವಾರ ರೂ. 25 ಇಳಿಕೆ ಕಂಡಿದ್ದು ಬೆಂಗಳೂರಿನಲ್ಲಿ 22 ಕ್ಯಾರಟ್ನ 1 ಗ್ರಾಂ ಚಿನ್ನಕ್ಕೆ 13,230 ರೂ. ಇದ್ದರೆ, 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 27 ರೂ. ಇಳಿಕೆಯಾಗಿ 14,433 ರೂಪಾಯಿ ಕಂಡು (Gold Rate Today on 24th June 2026) ಬಂದಿದೆ. ಇನ್ನು 22 ಕ್ಯಾರಟ್ನ 8 ಗ್ರಾಂ ಚಿನ್ನದ ಬೆಲೆ 1,05,840 ರೂ. ಇದ್ದರೆ, 10 ಗ್ರಾಂಗೆ 1,32,300 ರೂ. ಮತ್ತು 100 ಗ್ರಾಂ ಚಿನ್ನಕ್ಕೆ 13,23,000 ರೂ. ಪಾವತಿ ಮಾಡಬೇಕಾಗುತ್ತದೆ. 24 ಕ್ಯಾರಟ್ನ 8 ಗ್ರಾಂ ಚಿನ್ನದ ಬೆಲೆ 1,15,464 ರೂ. ಇದ್ದರೆ 10 ಗ್ರಾಂಗೆ ನೀವು 1,44,330 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,43,300 ರೂ. ಪಾವತಿ ಮಾಡಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,230 ರೂ. | 14,433 ರೂ |
| ಮುಂಬೈ | 13,230 ರೂ. | 14,433 ರೂ |
| ದೆಹಲಿ | 13,230 ರೂ. | 14,433 ರೂ |
| ಕೋಲ್ಕತಾ | 13,230 ರೂ. | 14,433 ರೂ |
| ಹೈದರಾಬಾದ್ | 13,230 ರೂ. | 14,433 ರೂ |
ಬೆಳ್ಳಿ ದರದಲ್ಲಿ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 245 ರುಪಾಯಿ ಇದೆ. 10 ಗ್ರಾಂ ಬೆಳ್ಳಿಗೆ 2,450 ರುಪಾಯಿ ಹಾಗೂ 1 ಕೆಜಿಗೆ 2,45,000 ರುಪಾಯಿ ಕಂಡು ಬಂದಿದೆ.