ಕ್ಯಾಪ್‌ಜೆಮಿನಿ ಕಂಪನಿಯು ಭಾರತ-ಫ್ರಾನ್ಸ್ ಆವಿಷ್ಕಾರಗಳ ವರ್ಷ 2026ರ ಹೆಮ್ಮೆಯ ಪಾಲುದಾರ ಆಗಿದೆ
ಕ್ಯಾಪ್‌ಜೆಮಿನಿ ಕಂಪನಿಯು ಜಾಗತಿಕ ಮಟ್ಟದಲ್ಲಿ ಹೊಸದನ್ನು ಆವಿಷ್ಕರಿಸುವ ಸಾಮರ್ಥ್ಯ ಹೊಂದಿರುವುದು, ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳೊಂದಿಗೆ, ನವೋದ್ಯಮ ಗಳೊಂದಿಗೆ ಹಾಗೂ ಅಕಾಡೆಮಿಕ್ ಸಂಸ್ಥೆಗಳೊಂದಿಗೆ ಇತರ ಸಂಸ್ಥೆಗಳನ್ನು ಸಂಪರ್ಕಿಸುವ ಜಾಗತಿಕ ವ್ಯವಸ್ಥೆಯನ್ನು ರೂಪಿಸುವಲ್ಲಿ ಹೊಂದಿರುವ ಖ್ಯಾತಿಯು ಈ ಕಂಪನಿಯನ್ನು ಪಾಲು ದಾರ ಆಗಿ ಆಯ್ಕೆ ಮಾಡಿರುವುದರ ಹಿಂದೆ ಕೆಲಸ ಮಾಡಿದೆ.
-
ಭಾರತ-ಫ್ರಾನ್ಸ್ ಆವಿಷ್ಕಾರಗಳ ವರ್ಷ 2026ರ ಪ್ಲಾಟಿನಂ ಪಾಲುದಾರ ಆಗಿರುವುದಾಗಿ ಕ್ಯಾಪ್‌ಜೆಮಿನಿ ಕಂಪನಿಯು ಇಂದು ತಿಳಿಸಿದೆ. ಈ ಮೂಲಕ ಕಂಪನಿಯು ಆವಿಷ್ಕಾರಗಳಿಗೆ ವೇಗ ನೀಡುವುದಕ್ಕೆ ಹಾಗೂ ಎರಡೂ ದೇಶಗಳ ನಡುವೆ ಸಮನ್ವಯವನ್ನು ಬಲಪಡಿಸು ವುದಕ್ಕೆ ಬದ್ಧತೆಯನ್ನು ಮತ್ತೊಮ್ಮೆ ಹೇಳಿದಂತಾಗಿದೆ.
ಈ ಪಾಲುದಾರಿಕೆಯ ಭಾಗವಾಗಿ ಕ್ಯಾಪ್‌ಜೆಮಿನಿ ಕಂಪನಿಯು ಡಿಜಿಟಲ್ ವೇದಿಕೆಯೊಂದನ್ನು ಅಭಿವೃದ್ಧಿಪಡಿಸಿದ್ದು, ಅದು ಫ್ರಾನ್ಸ್ ಮತ್ತು ಭಾರತದಲ್ಲಿ ಹೊಸ ಆವಿಷ್ಕಾರಗಳಿಗಾಗಿ ಕೆಲಸ ಮಾಡುತ್ತಿರುವವರನ್ನು ಪರಸ್ಪರ ಸಂಪರ್ಕಿಸುತ್ತದೆ. ಇದು ಎರಡೂ ದೇಶಗಳಲ್ಲಿ ನಡೆಯುವ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು, ಅವುಗಳಿಂದ ಕಲಿಯಲು, ಅವುಗಳ ವಿಚಾರವಾಗಿ ಪಾಲುದಾರಿಕೆ ಮಾಡಿಕೊಳ್ಳಲು ಒಂದೇ ಕಡೆ ವ್ಯವಸ್ಥೆ ಮಾಡಿಕೊಡುತ್ತದೆ.
ಕ್ಯಾಪ್‌ಜೆಮಿನಿ ಕಂಪನಿಯು ಜಾಗತಿಕ ಮಟ್ಟದಲ್ಲಿ ಹೊಸದನ್ನು ಆವಿಷ್ಕರಿಸುವ ಸಾಮರ್ಥ್ಯ ಹೊಂದಿರುವುದು, ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳೊಂದಿಗೆ, ನವೋದ್ಯಮಗಳೊಂದಿಗೆ ಹಾಗೂ ಅಕಾಡೆಮಿಕ್ ಸಂಸ್ಥೆಗಳೊಂದಿಗೆ ಇತರ ಸಂಸ್ಥೆಗಳನ್ನು ಸಂಪರ್ಕಿಸುವ ಜಾಗತಿಕ ವ್ಯವಸ್ಥೆಯನ್ನು ರೂಪಿಸುವಲ್ಲಿ ಹೊಂದಿರುವ ಖ್ಯಾತಿಯು ಈ ಕಂಪನಿಯನ್ನು ಪಾಲುದಾರ ಆಗಿ ಆಯ್ಕೆ ಮಾಡಿರುವುದರ ಹಿಂದೆ ಕೆಲಸ ಮಾಡಿದೆ.
ಇದನ್ನೂ ಓದಿ: Vidyashankar Sharma Column: ಏಕೆ ಹೀಗೆ ಓಡುವೆ ?
ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಕಂಪನಿಯು ಹೂಡಿಕೆಯನ್ನು ಮುಂದುವರಿಸಿರುವುದು, ಜನರೇಟಿವ್ ಎ.ಐ. ವ್ಯವಸ್ಥೆಯ ಬಗ್ಗೆ ಬಹಳಷ್ಟು ನೌಕರರಿಗೆ ತರಬೇತಿ ಕೊಡುತ್ತಿರುವುದು ಕ್ಯಾಪ್‌ಜೆಮಿನಿ ಕಂಪನಿಗೆ ಹೊಸ ಆವಿಷ್ಕಾರಗಳನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸುವುದಕ್ಕೆ ಇನ್ನಷ್ಟು ಬಲ ನೀಡಿವೆ.
“ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳಲ್ಲಿ ಭಾರತ ಮತ್ತು ಫ್ರಾನ್ಸ್ ತಮ್ಮ ಪಾಲುದಾರಿಕೆಯನ್ನು ಹೆಚ್ಚಿಸುತ್ತಿವೆ. ಅದರಲ್ಲೂ ಮುಖ್ಯವಾಗಿ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಎರಡೂ ದೇಶಗಳು ಸಮಾನ ಆಲೋಚನೆಯನ್ನು, ದೀರ್ಘಾವಧಿ ಕಾರ್ಯ ತಂತ್ರವನ್ನು ಹೊಂದಿವೆ. ಇದರಿಂದಾಗಿ ಎರಡೂ ದೇಶಗಳ ಆವಿಷ್ಕಾರದ ಪಯಣದಲ್ಲಿ 2026ನೇ ಇಸವಿಯು ಮಹತ್ವದ್ದಾಗುತ್ತದೆ.
ಎ.ಐ. ಬಲದಲ್ಲಿ ಕೆಲಸ ಮಾಡುವ ಉದ್ದಿಮೆಯಾಗಿ, ತಂತ್ರಜ್ಞಾನ ಕಂಪನಿಯಾಗಿ, ಆವಿಷ್ಕಾರದ ವರ್ಷದ ಹೆಮ್ಮೆಯ ಪಾಲುದಾರ ಆಗಿ ಕ್ಯಾಪ್‌ಜೆಮಿನಿಯು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಸಂಕೀರ್ಣವಾದ ಹಾಗೂ ಏಕಕಾಲಕ್ಕೆ ಹಲವು ಕಾರ್ಯಗಳನ್ನು ನಿರ್ವಹಿಸುವ ಉಪಕ್ರಮಗಳನ್ನು ಬೆಂಬಲಿಸುವ ಅನುಭವ ಹೊತ್ತುತರುತ್ತಿದೆ. ತಂತ್ರಜ್ಞಾನದಲ್ಲಿ ನಾವು ಹೊಂದಿರುವ ನಾಯಕತ್ವವನ್ನು ದೊಡ್ಡ ವ್ಯವಸ್ಥೆಗಳನ್ನು ನಿರ್ವಹಿಸುವ ನಮ್ಮ ಅನುಭವದ ಜೊತೆ ಬೆಸೆಯುತ್ತಿದ್ದೇವೆ, ಆ ಮೂಲಕ ಸಂಸ್ಥೆಗಳಿಗೆ ಹೆಚ್ಚು ವ್ಯವಸ್ಥಿತವಾಗಿ, ಅಡ್ಡಿಗಳು ಇಲ್ಲದ, ಪರಿಣಾಮಕಾರಿಯಾಗಿ ಪಾಲುದಾರಿಕೆ ಹೊಂದಲು ನೆರವು ನೀಡುತ್ತೇವೆ” ಎಂದು ಕ್ಯಾಪ್‌ಜೆಮಿನಿ ಸಮೂಹದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಐಮನ್ ಎಜ್ಜತ್ ಹೇಳಿದ್ದಾರೆ.
ತಂತ್ರಜ್ಞಾನದ ಆಧಾರದಲ್ಲಿ ನಡೆಯುವ ಪರಿವರ್ತನೆಗಳಲ್ಲಿ ಆಳವಾದ ಪರಿಣತಿ ಹೊಂದಿರುವ ಕ್ಯಾಪ್‌ಜೆಮಿನಿ ಕಂಪನಿಯು ವ್ಯವಸ್ಥಿತವಾದ ಪಾಲುದಾರಿಕೆಯಲ್ಲಿ, ಜ್ಞಾನದ ವರ್ಗಾವಣೆಯನ್ನು ಅಡ್ಡಿಗಳು ಇಲ್ಲದೆ ಮಾಡಿಕೊಡುವಲ್ಲಿ ನೈಪುಣ್ಯ ಹೊಂದಿದೆ.