ಫಾಸ್ಟ್ರಾಕ್ ಸಂಸ್ಥೆಯಿಂದ ಹೊಸ ಆಕರ್ಷಕ ಲ್ಯಾಪ್ ಟಾಪ್ ಬ್ಯಾಗ್ ಶ್ರೇಣಿ ಬಿಡುಗಡೆ
ಉಪಯುಕ್ತತೆ, ಆಧುನಿಕ ಶೈಲಿ ಮತ್ತು ಸ್ವಯಂ ಅಭಿವ್ಯಕ್ತಿಯನ್ನು ಮೇಳೈಸಿ ಈ ಹೊಸ ಸರಣಿಯನ್ನು ವಿನ್ಯಾಸಗೊಳಿಸಲಾಗಿದೆ. "ಕ್ಯಾರಿ ಮೋರ್, ವೇ ಲೆಸ್" (ಹೆಚ್ಚು ವಸ್ತುಗಳನ್ನು ಕೊಂಡೊಯ್ಯಿರಿ, ತೂಕ ಮಾತ್ರ ತೀರಾ ಕಡಿಮೆ) ಎಂಬ ಶೀರ್ಷಿಕೆಯೊಂದಿಗೆ ಈ ಶ್ರೇಣಿಯನ್ನು ಪರಿಚಯಿಸಲಾಗಿದ್ದು, ಬ್ಯಾಗ್ ನ ತೂಕ ಅತ್ಯಂತ ಹಗುರವಾಗಿರುವುದರಿಂದ ಆಫೀಸ್ ಕೆಲಸ, ಪ್ರಯಾಣ ಹಾಗೂ ದೈನಂದಿನ ಬಳಕೆಗೆ ಇದು ಸೂಕ್ತ ಸಂಗಾತಿಯಾಗಲಿದೆ.
-
ಯುವಜನರ ನೆಚ್ಚಿನ ಪ್ರಮುಖ ಫ್ಯಾಷನ್ ಬ್ರ್ಯಾಂಡ್ ಫಾಸ್ಟ್ರಾಕ್ ಬ್ಯಾಗ್ಸ್, ಕ್ರಿಯಾ ಶೀಲ ಜೀವನಶೈಲಿ ಹೊಂದಿರುವ ವಿದ್ಯಾರ್ಥಿಗಳು, ಕಂಟೆಂಟ್ ಕ್ರಿಯೇಟರ್'ಗಳು ಮತ್ತು ಯುವ ವೃತ್ತಿಪರರಿಗಾಗಿ ತನ್ನ ನೂತನ ಲ್ಯಾಪ್ ಟಾಪ್ ಬ್ಯಾಗ್ ಕಲೆಕ್ಷನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಉಪಯುಕ್ತತೆ, ಆಧುನಿಕ ಶೈಲಿ ಮತ್ತು ಸ್ವಯಂ ಅಭಿವ್ಯಕ್ತಿಯನ್ನು ಮೇಳೈಸಿ ಈ ಹೊಸ ಸರಣಿಯನ್ನು ವಿನ್ಯಾಸಗೊಳಿಸಲಾಗಿದೆ. "ಕ್ಯಾರಿ ಮೋರ್, ವೇ ಲೆಸ್" (ಹೆಚ್ಚು ವಸ್ತುಗಳನ್ನು ಕೊಂಡೊಯ್ಯಿರಿ, ತೂಕ ಮಾತ್ರ ತೀರಾ ಕಡಿಮೆ) ಎಂಬ ಶೀರ್ಷಿಕೆಯೊಂದಿಗೆ ಈ ಶ್ರೇಣಿಯನ್ನು ಪರಿಚಯಿಸಲಾಗಿದ್ದು, ಬ್ಯಾಗ್ ನ ತೂಕ ಅತ್ಯಂತ ಹಗುರವಾಗಿರುವುದರಿಂದ ಆಫೀಸ್ ಕೆಲಸ, ಪ್ರಯಾಣ ಹಾಗೂ ದೈನಂದಿನ ಬಳಕೆಗೆ ಇದು ಸೂಕ್ತ ಸಂಗಾತಿಯಾಗಲಿದೆ.
ಈ ಸರಣಿಯು ಬ್ಯಾಕ್ ಪ್ಯಾಕ್ ಹಾಗೂ ಟೋಟ್ ಶೈಲಿಯಲ್ಲಿ ಒಟ್ಟು 12 ಹೊಸ ವಿನ್ಯಾಸಗಳನ್ನು ಒಳಗೊಂಡಿದೆ. ಇದರಲ್ಲಿ 10 ನೈಲಾನ್ ಮಾದರಿಯವಾಗಿದ್ದರೆ, 2 ಫಾಕ್ಸ್ ಲೆದರ್ (ಕೃತಕ ಚರ್ಮ) ಶೈಲಿಯಲ್ಲಿ ಲಭ್ಯವಿವೆ. 14- ಇಂಚು ಮತ್ತು 15- ಇಂಚಿನ ಲ್ಯಾಪ್ ಟಾಪ್ ಗಳನ್ನು ಸುಲಭವಾಗಿ ಕೊಂಡೊಯ್ಯಲು ಇದರಲ್ಲಿ ವಿಶೇಷ ಸುರಕ್ಷಿತ ಜಾಗವನ್ನು ನೀಡಲಾಗಿದೆ.
ಇದನ್ನೂ ಓದಿ: Flight luggage rules: ಕೇವಲ ಒಂದು ಬ್ಯಾಗ್, 7 ಕೆಜಿ ಅಷ್ಟೇ! ವಿಮಾನ ಪ್ರಯಾಣಕ್ಕೆ ಕಠಿಣ ಹ್ಯಾಂಡ್ ಬ್ಯಾಂಗ್ ನಿಯಮ ಪ್ರಕಟ
ಟ್ರೆಂಡಿ ನೋಟಕ್ಕಾಗಿ ಬಿಳಿ, ಚಾಕೊಲೇಟ್ ಬ್ರೌನ್, ಮಲಾಕೈಟ್ ಗ್ರೀನ್, ಚೆರ್ರಿ ರೆಡ್ ಹಾಗೂ ಡಸ್ಟಿ ಪಿಂಕ್ ಸೇರಿದಂತೆ ಹಲವು ಬಣ್ಣಗಳಲ್ಲಿ ಇವು ಲಭ್ಯವಿವೆ. ಲ್ಯಾಪ್ ಟಾಪ್ ಬ್ಯಾಗ್ ಎಂದರೆ ಕೇವಲ ಸಾಧನಗಳನ್ನು ಕೊಂಡೊಯ್ಯುವ ವಸ್ತು ಮಾತ್ರವಲ್ಲದೆ, ಅದು ದೈನಂದಿನ ಜೀವನಶೈಲಿಯ ಪ್ರಮುಖ ಫ್ಯಾಷನ್ ಭಾಗವಾಗಿದೆ ಎಂಬುದನ್ನು ಈ ಸರಣಿ ಹೊಸದಾಗಿ ನಿರೂಪಿಸಿದೆ.
ಈ ಬ್ಯಾಗ್ ಸಂಗ್ರಹವು ಕೇವಲ ನೋಡಲು ಸುಂದರವಾಗಿರದೆ, ಪ್ರಾಯೋಗಿಕ ಬಳಕೆಗೆ ಹೊಂದು ವಂತೆ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಕಾರ್ಡ್ ಗಳನ್ನು ಇಡಲು ಪ್ರತ್ಯೇಕ ಕಾರ್ಡ್ ಹೋಲ್ಡರ್ ಗಳು, ಪ್ರಯಾಣದ ಸಮಯದಲ್ಲಿ ಸುಲಭವಾಗಿ ಕೊಂಡೊಯ್ಯಲು ಟ್ರಾಲಿ ಲೂಪ್, ಕೀಲಿಗಳನ್ನು ಕಳೆದುಕೊಳ್ಳದೆ ಸುಲಭವಾಗಿ ಸಿಗುವಂತೆ ಮಾಡಲು ಕೀ ಲೀಶ್ ಮತ್ತು ದಿನನಿತ್ಯದ ಅಗತ್ಯ ವಸ್ತು ಗಳನ್ನು ವ್ಯವಸ್ಥಿತವಾಗಿ ಜೋಡಿಸಿಡಲು ಹೆಚ್ಚುವರಿ ಜಾಗವನ್ನು ನೀಡಲಾಗಿದೆ.
ಈ ನೂತನ ಸರಣಿಯ ಬಿಡುಗಡೆ ಕುರಿತು ಮಾತನಾಡಿದ ಟೈಟಾನ್ ಕಂಪನಿ ಲಿಮಿಟೆಡ್ ನ ಆಕ್ಸೆಸರೀಸ್ ಮತ್ತು ಫ್ರಾಗ್ರೆನ್ಸ್ ವಿಭಾಗದ ಸಿಇಒ ಮನೀಶ್ ಗುಪ್ತಾ ಅವರು, "ಇಂದಿನ ಪೀಳಿಗೆಯು ಉಪಯುಕ್ತತೆಯ ಜೊತೆಗೆ ತಮ್ಮ ವ್ಯಕ್ತಿತ್ವ ಹಾಗೂ ಶೈಲಿಯನ್ನು ಪ್ರತಿಬಿಂಬಿಸುವ ಉತ್ಪನ್ನಗಳನ್ನು ಬಯಸುತ್ತದೆ. ಕೆಲಸ, ಸೃಜನಶೀಲತೆ ಮತ್ತು ದೈನಂದಿನ ಜೀವನದ ನಡುವೆ ಸದಾ ಕ್ರಿಯಾಶೀಲ ರಾಗಿರುವ ಜನರಿಗಾಗಿ ನಮ್ಮ ಹೊಸ ಲ್ಯಾಪ್ ಟಾಪ್ ಕಲೆಕ್ಷನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ವ್ಯಕ್ತಿಗತ ಶೈಲಿಗೆ ಧಕ್ಕೆ ತರದೆ ಅದ್ಭುತ ಉಪಯುಕ್ತತೆಯನ್ನು ಒದಗಿಸುತ್ತದೆ. ಆಧುನಿಕ ವಿನ್ಯಾಸ ಹಾಗೂ ಆಕರ್ಷಕ ಫಿನಿಷಿಂಗ್ ನೊಂದಿಗೆ ಮೂಡಿಬಂದಿರುವ ಈ ಸರಣಿಯು ಯುವ ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ" ಎಂದು ಹೇಳಿದರು.
₹4,995 ಬೆಲೆಯಲ್ಲಿ ಲಭ್ಯವಿರುವ ಫಾಸ್ಟ್ರಾಕ್ ಲ್ಯಾಪ್ ಟಾಪ್ ಕಲೆಕ್ಷನ್ ಪ್ರಸ್ತುತ ಆಯ್ಕೆಮಾಡಿದ ಫಾಸ್ಟ್ರಾಕ್, ಶಾಪರ್ಸ್ ಸ್ಟಾಪ್ ಮತ್ತು ಲೈಫ್ ಸ್ಟೈಲ್ ಮಳಿಗೆಗಳಲ್ಲಿ ಹಾಗೂ ಮೈಂತ್ರಾ, ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಸೇರಿದಂತೆ ಪ್ರಮುಖ ಇ -ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಿದೆ.