ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Infosys Lays Off: 700 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ ಇನ್ಫೋಸಿಸ್! ಕಾರ್ಮಿಕ ಸಚಿವಾಲಯಕ್ಕೆ ದೂರು

ಇನ್ಫೋಸಿಸ್ ಸಂಸ್ಥೆಯು ಆಗಾಗ್ಗೆ ಚರ್ಚೆಗೆ ಗ್ರಾಸವಾಗುತ್ತಿರುತ್ತದೆ. ಇತ್ತೀಚೆಗಷ್ಟೇ ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಉದ್ಯೋಗಿಗಳು ವಾರದಲ್ಲಿ 70 ಗಂಟೆಗಳು ಕೆಲಸ ಮಾಡಬೇಕೆಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. ಇದೀಗ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಿಂದ ಬರೋಬ್ಬರಿ 700 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗಿಗಳನ್ನು ಕ್ಯಾಂಪಸ್‌ನಿಂದ ಹೊರದಬ್ಬಲು ಬೌನ್ಸರ್ಸ್ ಹಾಗೂ ಸೆಕ್ಯೂರಿಟಿ ಗಾರ್ಡ್‌ಗಳನ್ನು ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದ್ದು,ಕಾರ್ಮಿಕ ಸಚಿವಾಲಯದಲ್ಲಿ ದೂರು ದಾಖಲಾಗಿದೆ.

700 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ ಇನ್ಫೋಸಿಸ್!

Infosys Lays Off

Profile Deekshith Nair Feb 7, 2025 5:24 PM

ಮೈಸೂರು: ಇನ್ಫೋಸಿಸ್‌ ಸಂಸ್ಥೆಯು ಆಗಾಗ್ಗೆ ಚರ್ಚೆಗೆ ಗ್ರಾಸವಾಗುತ್ತಿರುತ್ತದೆ. ಇತ್ತೀಚೆಗಷ್ಟೇ ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ(Narayana Murthy) ಅವರು ಉದ್ಯೋಗಿಗಳು ವಾರದಲ್ಲಿ 70 ಗಂಟೆಗಳು ಕೆಲಸ ಮಾಡಬೇಕೆಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು. ಇದೀಗ ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ(Infosys Lays Off) ಬರೋಬ್ಬರಿ 700 ಮಂದಿ ಉದ್ಯೋಗ ಕಳೆದೆುಕೊಂಡಿದ್ದಾರೆ. ಉದ್ಯೋಗಿಗಳನ್ನು ಕ್ಯಾಂಪಸ್‌ನಿಂದ ಹೊರದಬ್ಬಲು ಬೌನ್ಸರ್ಸ್(Bouncers) ಹಾಗೂ ಸೆಕ್ಯೂರಿಟಿ ಗಾರ್ಡ್‌ಗಳನ್ನು(Security Guard) ಬಳಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದ್ದು,ಕಾರ್ಮಿಕ ಸಚಿವಾಲಯದಲ್ಲಿ ದೂರು ದಾಖಲಾಗಿದೆ. ಅಕ್ಟೋಬರ್ 2024ರಲ್ಲಿ ಇನ್ಫೋಸಿಸ್‌ನಲ್ಲಿ ಉದ್ಯೋಗಕ್ಕೆ ಸೇರಿದ 700 ಮಂದಿಯನ್ನು ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ಫೋಸಿಸ್ ಹೇಳೊದೇನು?

ಕಳೆದ ಅಕ್ಟೋಬರ್‌ನಲ್ಲಿ ಟ್ರೈನಿಯಾಗಿ ಇನ್ಫೋಸಿಸ್‌ಗೆ ಸೇರಿಕೊಂಡಿದ್ದ ಅಭ್ಯರ್ಥಿಗಳು ಇನ್ಫೋಸಿಸ್ ಎಲಿಜಿಬಲ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಈ ಅಭ್ಯರ್ಥಿಗಳಿಗೆ ಮೂರು ಅವಕಾಶ ನೀಡಲಾಗಿತ್ತು. ಆದರೆ ಮೂರು ಅವಕಾಶದಲ್ಲೂ ಈ ಅಭ್ಯರ್ಥಿಗಳು ತೇರ್ಗಡೆಯಾಗಿಲ್ಲ. ಹೀಗಾಗಿ ಈ ಅಭ್ಯರ್ಥಿಗಳನ್ನು ಕಂಪನಿಯಲ್ಲಿ ಮುಂದುವರಿಸಲು ಸಾಧ್ಯವಿಲ್ಲ. ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಕೆಲಸ ಮಾಡಲು ಕನಿಷ್ಠ ಅರ್ಹತೆ, ಪ್ರತಿಭೆ ಇರಲೇಬೇಕು. ಇದು ಪ್ರತಿಭೆಗಳ ಆಗರವಾಗಿದೆ. ಇಷ್ಟಾದರೂ ಅವರಿಗೆ ಮೂರು ಬಾರಿ ಅವಕಾಶ ನೀಡಲಾಗಿತ್ತು. ಕಂಪನಿ ನಿಯಮದ ಪ್ರಕಾರ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಇನ್ಫೋಸಿಸ್ ಹೇಳಿದೆ.



ಕಂಪನಿಯಿಂದ ಹೊರಬಿದ್ದಿರುವ ಅಭ್ಯರ್ಥಿಗಳು ಇನ್ಫೋಸಿಸ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಅಂತಿಮ ಕ್ಷಣದಲ್ಲಿ ಇನ್ಫೋಸಿಸ್ ಸಿಲೆಬಸ್ ಬದಲಾಯಿಸಿದೆ. ಪರೀಕ್ಷೆಯಲ್ಲಿ ಕೆಲ ಬದಲಾವಣೆ ಮಾಡಿದೆ. ಇದು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದಿದ್ದಾರೆ. ಇಷ್ಟೇ ಅಲ್ಲ ಉದ್ಯೋಗ ಕಳೆದುಕೊಂಡವರನ್ನು ಕ್ಯಾಂಪಸ್‌ನಿಂದ ಒತ್ತಾಯಪೂರ್ವಕವಾಗಿ ಹೊರದಬ್ಬಲಾಗಿದೆ. ಇದಕ್ಕಾಗಿ ಇನ್ಪೋಸಿಸ್ ಬೌನ್ಸರ್ಸ್ ಹಾಗೂ ಸೆಕ್ಯೂರಿಟಿ ಗಾರ್ಡ್ ಬಳಸಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ.

ಈ ಸುದ್ದಿಯನ್ನೂ ಓದಿ:N.R. Narayana Murthy: ದೇಶದ ಶೇ.60 ಜನರನ್ನು ಬಡತನ ಕಾಡುತ್ತಿದೆ: ಇನ್ಫೋಸಿಸ್ ನಾರಾಯಣ ಮೂರ್ತಿ

ವಾರಕ್ಕೆ 70 ಗಂಟೆ ಕೆಲಸ ತಪ್ಪಲ್ಲ: ನಾರಾಯಣಮೂರ್ತಿ

ವಾರಕ್ಕೆ 70 ಗಂಟೆ ಕೆಲಸದ ಕುರಿತಾದ ತಮ್ಮ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ, ಯಾರೊಬ್ಬರೂ ಒತ್ತಾಯಪೂರ್ವಕವಾಗಿ ಅದನ್ನು ಹೇರುವಂತಿಲ್ಲ ಎಂದು ಹೇಳಿದ್ದಾರೆ.

ಭಾರತೀಯ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಕಳೆದ ವರ್ಷ ನಾರಾಯಣ ಮೂರ್ತಿ ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿತ್ತು. ಪರ–ವಿರೋಧ ಚರ್ಚೆಗಳು ನಡೆದಿದ್ದವು. ಈ ಬಗ್ಗೆ ಅವರು ಮುಂಬೈನ ಎಎಂಸಿಯ ಕಿಲಾಚಂದ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡುವಾಗ ಸ್ಪಷ್ಟೀಕರಣವನ್ನು ನೀಡಿದ್ದರು.