ಸೇಶಸಾಯಿ ಟೆಕ್ನಾಲಜೀಸ್ : 600 ಕೋಟಿ ರೂ ಹೊಸ ಸಂಚಿಕೆಯೊಂದಿಗೆ ಮಾರುಕಟ್ಟೆ ಪ್ರವೇಶಕ್ಕೆ ಸೆಬಿ ಗ್ರೀನ್ ಸಿಗ್ನಲ್
ಕಂಪನಿ ಬಿಆರ್‌ಎಲ್‌ಎಮ್‌ಎಸ್ ನೊಂದಿಗೆ ಸಮಾಲೋಚಿಸಿ 120 ಕೋಟಿ ರೂ ಸಂಗ್ರಹಕ್ಕೆ ಐಪಿಒ ಪೂರ್ವ ಹಂಚಿಕೆಯನ್ನೂ ಆಯ್ಕೆ ಮಾಡುವ ಸಾಧ್ಯತೆ ಇದೆ. ಪೂರ್ವ ಐಪಿಒ ನಿಯೋಜನೆ ಪೂರ್ಣ ಗೊಂಡರೆ, ಇದರ ಅಡಿಯಲ್ಲಿ ಸಂಗ್ರಹಿಸಲಾದ ಮೊತ್ತವನ್ನು ಹೊಸ ವಿತರಣೆಯಿಂದ ಕಡಿಮೆ ಮಾಡಲಾಗುತ್ತದೆ. ಹೊಸ ಸಂಚಿಕೆ ಮೂಲಕ ಸಂಗ್ರಹಿಸಲಾದ ಬಂಡವಾಳದಲ್ಲಿ 195.33 ಕೋಟಿ ರೂ ಹಣವನ್ನು ಅಸ್ಥಿತ್ವದಲ್ಲಿರುವ ಉತ್ಪಾದನಾ ಘಟಕಗಳ ವಿಸ್ತರಣೆಗೆ ಬಂಡವಾಳ ವೆಚ್ಚಕ್ಕೆ ಬಳಸ ಲಾಗುವುದು
 
                                -
 Ashok Nayak
                            
                                Apr 17, 2025 11:36 AM
                                
                                Ashok Nayak
                            
                                Apr 17, 2025 11:36 AM
                            ಮುಂಬೈ ಮೂಲದ ತಂತ್ರಜ್ಞಾನ ಆಧಾರಿತ ಸೇವೆ ಒದಗಿಸುವ ಸೇಶಸಾಯಿ ಟೆಕ್ನಾಲಜಿ ಲಿಮಿಟೆಡ್ ಷೇರು ಮಾರುಕಟ್ಟೆ ಪ್ರವೇಶಕ್ಕೆ ಸೆಕ್ಯೂರಿಟಿ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ಹಸಿರು ನಿಶಾನೆ ತೋರಿದೆ. ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಹೂಡಿಕೆ ಸಂಗ್ರಹಕ್ಕೆ ಸೇಶಸಾಯಿ ಟೆಕ್ನಾಲಜಿ ಲಿಮಿಟೆಡ್ ಸಂಸ್ಥೆ ಮುಂದಾಗಿದ್ದು ಡಿಸೆಂಬರ್ 27, 2024ರಂದು ಐಪಿಒಗಾಗಿಿ ಕರಡು ದಾಖಲೆಗಳನ್ನು ಸಲ್ಲಿಕೆ ಮಾಡಿತ್ತು.ಈ ಐಪಿಒ ಸಂಚಿಕೆಯು 600 ಕೋಟಿ ರೂ ಹೊಸ ಸಂಚಿಕೆ ಷೇರುಗಳು ಹಾಗೂ ಆಫರ್ ಫಾರ್ ಸೇಲ್‌ನಲ್ಲಿ (ಒಎಫ್‌ಎಸ್) ಪ್ರಗ್ನ್ಯಾತ್ ಪ್ರವೀಣ್ ಲಲ್ವಾಣಿಯಿಂದ 39,37,008 ಇಕ್ವಿಟಿ ಷೇರುಗಳು ಮತ್ತು ಗೌತಮ್ ಸಂಪತ್‌ರಾಜ್ ಜೈನ್ ಅವರ 39,37,007 ಇಕ್ವಿಟಿ ಷೇರುಗಳು ಒಳಗೊಂಡಿವೆ.
ಇದನ್ನೂ ಓದಿ: Vishweshwar Bhat Column: ಅತಿ ಕೆಲಸ ತರುವ ಕುತ್ತು
ಕಂಪನಿ ಬಿಆರ್‌ಎಲ್‌ಎಮ್‌ಎಸ್ ನೊಂದಿಗೆ ಸಮಾಲೋಚಿಸಿ 120 ಕೋಟಿ ರೂ ಸಂಗ್ರಹಕ್ಕೆ ಐಪಿಒ ಪೂರ್ವ ಹಂಚಿಕೆಯನ್ನೂ ಆಯ್ಕೆ ಮಾಡುವ ಸಾಧ್ಯತೆ ಇದೆ. ಪೂರ್ವ ಐಪಿಒ ನಿಯೋಜನೆ ಪೂರ್ಣ ಗೊಂಡರೆ, ಇದರ ಅಡಿಯಲ್ಲಿ ಸಂಗ್ರಹಿಸಲಾದ ಮೊತ್ತವನ್ನು ಹೊಸ ವಿತರಣೆಯಿಂದ ಕಡಿಮೆ ಮಾಡಲಾಗುತ್ತದೆ. ಹೊಸ ಸಂಚಿಕೆ ಮೂಲಕ ಸಂಗ್ರಹಿಸಲಾದ ಬಂಡವಾಳದಲ್ಲಿ 195.33 ಕೋಟಿ ರೂ ಹಣವನ್ನು ಅಸ್ಥಿತ್ವದಲ್ಲಿರುವ ಉತ್ಪಾದನಾ ಘಟಕಗಳ ವಿಸ್ತರಣೆಗೆ ಬಂಡವಾಳ ವೆಚ್ಚಕ್ಕೆ ಬಳಸ ಲಾಗುವುದು. 300 ಕೋಟಿ ರೂ ಹಣವನ್ನು ಕಂಪನಿಯ ಬಾಕಿ ಸಾಲದ ಮರುಪಾವತಿಗೆ ಹಾಗೂ ಸಾಮಾನ್ಯ ಕಾರ್ಪೋರೇಟ್ ಉದ್ದೇಶಕ್ಕೆ ಬಳಸಲಾಗುವುದು.
ಸೇಶಸಾಯಿ ಟೆಕ್ನಾಲಜಿ ಬ್ಯಾಂಕಿಂಗ್, ವಿಮಾ ಸಂಸ್ಥೆ, ಹಣಕಾಸು ಸೇವಾ ಸಂಸ್ಥೆಗಳಿಗೆ ಹಣಕಾಸು ಪಾವತಿ, ಸಂವಹನ, ಡಾಟಾ ಸೆಕ್ಯೂರಿಟಿ ವ್ಯವಸ್ಥೆಯನ್ನು ಒದಗಿಸುವಲ್ಲಿ ಕೇಂದ್ರೀಕೃತವಾಗಿದೆ. ಇದು ಭಾರತದಲ್ಲಿ ಬಿಎಫ್‌ಎಸ್‌ಐ ವಲಯದ ಕಾರ್ಯಾಚರಣೆಗಳು ಮತ್ತು ವಿತರಣೆಗಳನ್ನು ಸಕ್ರಿಯ ಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಇದು ಕೈಗಾರಿಕೆಗಳಾದ್ಯಂತ ವೈವಿಧ್ಯಮಯ ಗ್ರಾಹಕ ರಿಗೆ ಇಂಟರ್ನೆಟ್ ಆಫ್ ಥಿಂಗ್ಸ್ ("ಐಒಟಿ") ಪರಿಹಾರಗಳನ್ನು ಸಹ ನೀಡುತ್ತದೆ.
ಐಐಎಫ್‌ಎಲ್ ಕ್ಯಾಪಿಟಲ್ ಸರ್ವೀಸಸ್ ಲಿಮಿಟೆಡ್, ಐಸಿಐಸಿಐ ಸೆಕ್ಯುರಿಟೀಸ್ ಲಿಮಿಟೆಡ್ ಮತ್ತು ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಬುಕ್-ರನ್ನಿಂಗ್ ಲೀಡ್ ಮ್ಯಾನೇಜರ್‌ಗಳಾಗಿದ್ದು, ಲಿಂಕ್ ಇಂಟೈಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ರಿಜಿಸ್ಟ್ರಾರ್ ಆಗಿದೆ. ಈಕ್ವಿಟಿ ಷೇರುಗಳನ್ನು ಬಿಎಸ್‌ಇ ಲಿಮಿಟೆಡ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ ಪಟ್ಟಿ ಮಾಡಲು ಪ್ರಸ್ತಾಪಿಸಲಾಗಿದೆ.
 
            