ಬೆಂಗಳೂರಲ್ಲಿ ಪ್ರಾಪರ್ಟಿ ಬೆಲೆ ಹೆಚ್ಚಲು ಕಾರಣವೇನು? ಡಿಮಾಂಡ್ vs ಸಪ್ಲೇ ಲೆಕ್ಕಾಚಾರ ಇಲ್ಲಿದೆ
"2025ರಲ್ಲಿ ಬೆಂಗಳೂರಿನ ಗಗನಕ್ಕೇರಿದ ಆಸ್ತಿ ಬೆಲೆಗಳ ಹಿಂದಿನ ನಿಜವಾದ ಕಾರಣಗಳನ್ನು ತಿಳಿಯೋಣ! ಈ ಸಲುವಾಗಿ ಡಿಮ್ಯಾಂಡ್ vs ಸಪ್ಲೈ ಲೆಕ್ಕಾಚಾರಗಳನ್ನು ಇಲ್ಲಿ ನೀಡಲಾಗಿದೆ. ತ್ವರಿತ ನಗರೀಕರಣ, IT ಕ್ಷೇತಗಳ ಬೂಮ್ ಮತ್ತು ವಸತಿ ಸಲುವಾಗಿ ಇರುವ ಸೀಮಿತ ಜಮೀನು ಲಭ್ಯತೆಯ ಕಾರಣ ಇಂದು ಭೂ ದರದಲ್ಲಿ ಶೇ. 20-30 ರಷ್ಟು ಹೆಚ್ಚಳಕ್ಕೆ ಕಾರಣವಾಗುತ್ತಿವೆ. ಹೀಗಾಗಿ ತಜ್ಞರ ಒಳನೋಟಗಳು, ಡೇಟಾ-ಆಧಾರಿತ ಲೆಕ್ಕಾಚಾರಗಳು ಮತ್ತು ಹೂಡಿಕೆ ಸಲಹೆಗಳು ಇಲ್ಲಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರ್ಕೆಟ್ ರಹಸ್ಯಗಳನ್ನು ತಿಳಿಯಲು ಈ ಲೇಖನ ಓದಿ!"
ಬೆಂಗಳೂರಿನಲ್ಲಿ ಪ್ರಾಪರ್ಟಿ ಬೆಲೆ ಏರಿಕೆಗೆ ಕಾರಣ ಮತ್ತು ಅದರ ವಿಶ್ಲೇಷಣೆ ಇಲ್ಲಿದೆ -
Vijeth Kumar DN
Oct 28, 2025 6:44 PM
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಾಪರ್ಟಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗಲು ಇರುವ ಕಾರಣವೇನು? ಎಂಬ ವಿಷಯದ ಬಗ್ಗೆ ತಿಳಿದುಕೊಳ್ಳೋಣ. ಅಂದಹಾಗೆ ರಿಯಲ್ ಎಸ್ಟೇಟ್‌ನಲ್ಲಿ ಬೆಲೆ ಏರಿಕೆಗೆ ಹಲವು ಕಾರಣಗಳಿವೆ. ಕೆಲವರು ಇದಕ್ಕೆ ‘ಡಿಮಾಂಡ್ ಹೆಚ್ಚು, ಸಪ್ಲೈ ಕಡಿಮೆ’ ಅಂತ ಸಾಮಾನ್ಯ ಕಾರಣ ಕೊಡ್ತಾರೆ. ಆದರೆ ಇದರಲ್ಲಿ ಇನ್ನೂ ಹಲವಾರು ಅಂಶಗಳಿವೆ ಎಂಬುದನ್ನು ನಾವಿಲ್ಲಿ ನೋಡೋಣ. ಡಿಮಾಂಡ್ ವರ್ಸಸ್ ಸಪ್ಲೇ ಕಾನ್ಸೆಪ್ಟ್ ಏನು ಎಂಬುದನ್ನು ಸರಳವಾಗಿ ತಿಳಿದುಕೊಳ್ಳೋಣ.
ಮೊದಲಿಗೆ ಡಿಮಾಂಡ್ ಅದ್ರೇನು?
ರಿಯಲ್ ಎಸ್ಟೇಟ್‌ನಲ್ಲಿ ಡಿಮಾಂಡ್ ಅಂದ್ರೆ ಪ್ರಾಪರ್ಟಿ ಖರೀದಿಸಲು ಇರುವ ಜನರ ಆಸಕ್ತಿ ಮತ್ತು ಸಾಮರ್ಥ್ಯ. ಐಟಿ ಉದ್ಯೋಗಗಳು, ಉದ್ಯಮ ವಿಸ್ತರಣೆ, ಹೊಸ ಯೋಜನೆಗಳು ಬಂದಾಗ ಆ ಪ್ರದೇಶದಲ್ಲಿ ಡಿಮಾಂಡ್ ಹೆಚ್ಚುತ್ತದೆ. ಉದಾಹರಣೆಗೆ: ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಏರಿಯಾಗಳಲ್ಲಿ ಕೆಲಸಕ್ಕೆ ಬಂದ ಸಾವಿರಾರು ಜನ ಮನೆ ಹುಡುಕುತ್ತಾರೆ. ಇದರಿಂದ ಸಹಜವಾಗಿಯೇ ಡಿಮಾಂಡ್ ಹೆಚ್ಚುತ್ತದೆ. ಪರಿಣಾಮ ರಿಯಲ್ ಎಸ್ಟೇಟ್ ಬೆಲೆ ಏರಿಕೆಯಾಗುತ್ತದೆ.
ಇನ್ನು ಸಪ್ಲೇ ಅಂದ್ರೇನು? ತಿಳಿಯೋಣ
ರಿಯಲ್ ಎಸ್ಟೇಟ್‌ನಲ್ಲಿ ಸಪ್ಲೇ ಅಂದ್ರೆ ಮಾರಾಟಕ್ಕೆ ಲಭ್ಯವಿರುವ ಮನೆಗಳು, ಸೈಟ್‌ಗಳು ಮತ್ತು ಫ್ಲಾಟ್ಸ್. ಸಾಮಾನ್ಯವಾಗಿ ಅರ್ಥ ಮಾಡಿಕೊಳ್ಳುವುದಾದರೆ ಎಲ್ಲಿ ಸಪ್ಲೇ ಅಂದರೆ ಪೂರೈಕೆ ಕಡಿಮೆ ಇರುತ್ತದೊ, ಅಲ್ಲಿ ಸಹಜವಾಗಿರುವ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಇದರಿಂದ ಬೆಲೆ ಏರಿಕೆಯಾಗುವುದು ಕೂಡ ಅಷ್ಟೇ ಸಹಜ. ಉದಾಹರಣೆಗೆ: ಬೆಂಗಳೂರು ನಗರದ ಮಧ್ಯ ಭಾಗದಲ್ಲಿ ಅಥವಾ ಮೆಟ್ರೋ ಸಂಪರ್ಕ ಉತ್ತಮವಾಗಿರುವ ಪ್ರದೇಶಗಳಲ್ಲಿ ಹೊಸ ಜಾಗ ಸಿಗೋದಿಲ್ಲ. ಅಲ್ಲಿ ಭೂಮಿ ಮತ್ತು ಸೈಟ್‌ನ ಪೂರೈಕೆ ತಟಸ್ಥವಾಗಿರುತ್ತದೆ. ಆದರೆ ಜನರ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಲೇ ಹೋಗುವುದರಿಂದ, ಆ ಸ್ಥಳದಲ್ಲಿನ ಬೆಲೆ ಗಗನಕ್ಕೇರುತ್ತದೆ.
ಡಿಮಾಂಡ್ ಹೆಚ್ಚಾಗಲು ಪ್ರಮುಖ ಕಾರಣಗಳು
- ಮೊದಲಿಗೆ ಜನಸಂಖ್ಯೆ ಹೆಚ್ಚಳ – ನಗರಕ್ಕೆ ಜನಸಂದಣಿ ಹೆಚ್ಚಾಗುತ್ತಾ ಹೋದಂತೆ ರಿಯಲ್ ಎಸ್ಟೇಟ್ ಡಿಮಾಂಡ್ ಏರುತ್ತಾ ಹೋಗುತ್ತದೆ.
- ಕೆಲಸದ ಅವಕಾಶಗಳು – ಐಟಿ/ಬಿಟಿ ಕಂಪನಿಗಳು, ಕೈಗಾರಿಕೆಗಳು, ಎಸ್‌ಇಝಡ್ ಯೋಜನೆಗಳಿಂದಾಗಿ ಕೆಲಸದ ಅವಕಾಶಗಳು ಹೆಚ್ಚಾಗಿ ಜನರ ಆಗಮನವಾಗುತ್ತದೆ.
- ಮೂಲಭೂತ ಸೌಕರ್ಯಗಳ ಅಭಿವೃದ್ಧಿ – ಮೆಟ್ರೋ, ಫ್ಲೈ ಓವರ್, ರಿಂಗ್ ರೋಡ್ ಹೀಗೆ ಪ್ರಮುಖ ಸೌಕರ್ಯಗಳ ಅಭಿವೃದ್ಧಿಯಿಂದಾಗಿಯೂ ರಿಯಲ್ ಎಸ್ಟೇಟ್ ಡಿಮಾಂಡ್ ವೃದ್ಧಿಸುತ್ತದೆ.
- ಜೀವನ ಗುಣಮಟ್ಟ ಸುಧಾರಣೆ – ಜನ ಸಾಮಾನ್ಯರು ತಮ್ಮ ಜೀವನದ ಗುಣಮಟ್ಟ ಹೆಚ್ಚಿಸಿಕೊಳ್ಳಲು ಗೇಟೆಡ್ ಕಮ್ಯೂನಿಟಿ, ಐಶಾರಾಮಿ ಫ್ಲಾಟ್‌ಗಳ ಕಡೆಗೆ ಹೆಚ್ಚಾದ ಆಸಕ್ತಿ ತೋರುತ್ತಾರೆ.
- ಶಿಕ್ಷಣ ಮತ್ತು ಆರೋಗ್ಯ – ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಾಲೆ-ಕಾಲೇಜು ಮತ್ತು ಆಸ್ಪತ್ರೆಗಳ ಅಭಿವೃದ್ಧಿ ಕೂಡ ಬೇಡಿಕೆ ಹೆಚ್ಚಿಸುತ್ತೆ.
ರಿಯಲ್ ಎಸ್ಟೇಟ್ ಹೂಡಿಕೆಗೆ ಸೂಕ್ತ ಸಮಯ ಯಾವುದು?
ಸಪ್ಲೇ ಕಡಿಮೆಯಾಗಲು ಕಾರಣವೇನು?
- ರೆಸಿಡೆನ್ಷಿಯಲ್ ಭೂಮಿಯ ಲಭ್ಯತೆ ಕಡಿಮೆ – ಅದರಲ್ಲೂ ನಗರ ಪ್ರದೇಶಗಳಲ್ಲಿ ಹೊಸ ಜಾಗ ಸಿಗೋದಿಲ್ಲ.
- ಸರ್ಕಾರದ ನೀತಿ ನಿಯಮಗಳು – ಭೂ ಮಾಫಿಯಾ ತಡೆಯುವ ಸಲುವಾಗಿ ಸರ್ಕಾರ ಗ್ರೀನ್ ಝೋನ್, ಫಾರೆಸ್ಟ್ ಏರಿಯಾ, ಲೇಕ್ ಬಫರ್ ಝೋನ್ ಎಂದೆಲ್ಲಾ ಕಡಿವಾಣ ಹಾಕಿದೆ.
- ಮಾನ್ಯತೆ ತಡವಾಗುತ್ತದೆ – ಬಿಡಿಎ, ಬಿಬಿಎಂಪಿ, ಗ್ರಾಮ ಪಂಚಾಯಿತಿಗಳಿಂದ ಹೊಸದಾಗಿ ಆದ ಲೇಯೌಟ್‌ಗಳಿಗೆ ಮಾನ್ಯತೆ ಸಿಗುವುದು ತಡವಾಗುತ್ತದೆ.
- ದುಬಾರಿ ನಿರ್ಮಾಣ ವೆಚ್ಚ – ಕಟ್ಟ ನಿರ್ಮಾಣ ಸಲುವಾಗಿ ಬಳಸಲಾಗುವ ಸರಕುಗಳ ಬೆಲೆ ಗಗನಕ್ಕೇರಿರುವುದರಿಂದ ಬಿಲ್ಡರ್ಸ್ ಹೊಸ ಪ್ರಾಜೆಕ್ಟ್‌ಗಳ ತರುವುದನ್ನು ಕಡಿಮೆ ಮಾಡುತ್ತಾರೆ.
- ಭೂ ಮಾಲೀಕರ ದರ್ಬಾರ್ – ಕೆಲವರು ದೊಡ್ಡ ಜಾಗಗಳನ್ನು ಖರೀದಿ ಮಾಡಿ ಅವುಗಳನ್ನು ಭವಿಷ್ಯದಲ್ಲಿ ಲಾಭ ಪಡೆಯುವ ಉದ್ದೇಶಕ್ಕೆ ಬಿಡುತ್ತಾರೆ. ಇದರಿಂದ ಭೂಮಿಯ ಪೂರೈಕೆಯು ಮಾರುಕಟ್ಟೆಗೆ ಬರೋದಿಲ್ಲ.
ಮನೆ ತಗೊತಿದ್ದೀರಾ? ಈ ವಾಸ್ತು ವಿಚಾರಗಳು ಗೊತ್ತಿರಲಿ
ಡಿಮಾಂಡ್-ಸಪ್ಲೇ ನಡುವಣ ಅಸಮತೋಲನ
* ಡಿಮಾಂಡ್ ಹೆಚ್ಚು + ಸಪ್ಲೇ ಕಡಿಮೆ = ಹೀಗಿದ್ದಾಗ ಪ್ರಾಪರ್ಟಿ ಬೆಲೆ ಗಗನಕ್ಕೇರುತ್ತದೆ.
* ಡಿಮಾಂಡ್ ಕಡಿಮೆ + ಸಪ್ಲೇ ಹೆಚ್ಚು = ಹೀಗಿದ್ದಾಗ ಬೆಲೆ ತಟಸ್ಥವಾಗುತ್ತದೆ ಅಥವಾ ಕುಸಿಯುತ್ತದೆ.
* ಸಮತೋಲನದ ಬೇಡಿಕೆ ಮತ್ತು ಪೂರೈಕೆ = ಹೀಗಿದ್ದಾಗ ಆರೋಗ್ಯಕರ ರೀತಿಯಲ್ಲಿ ದರ ಏರಿಕೆಯಾಗುತ್ತದೆ.
* ಇದನ್ನು ಸ್ಟಾಕ್ ಮಾರ್ಕೆಟ್ ಮಾಡೆಲ್‌ನಂತೆ ಅರ್ಥ ಮಾಡಿಕೊಳ್ಳಬಹುದು – ಹೆಚ್ಚು ಖರೀದಿದಾರರು ಬಂದರೆ ಶೇರ್ ಬೆಲೆ ಏರಿದಂತೆ, ಪ್ರಾಪರ್ಟಿ ಬೆಲೆಯೂ ಏರುತ್ತದೆ.
ಹಳ್ಳಿ ಮನೆಗೆ ಇ-ಖಾತಾ ಮಾಡಿಸೋದು ಹೇಗೆ?
ಬೆಲೆ ಏರಿಕೆಗೆ ಇತರ ಕೆಲ ಕಾರಣಗಳು
* ಹಣದುಬ್ಬರ: ಕಟ್ಟಡ ನಿರ್ಮಾಣಕ್ಕೆ ಬೇಕಾಗುವ ಸಿಮೆಂಟ್, ಸ್ಟೀಲ್, ಲೇಬರ್ ಕಾಸ್ಟ್ ಏರಿದಂತೆ ನಿರ್ಮಾಣ ವೆಚ್ಚ ಕೂಡ ಹೆಚ್ಚುತ್ತದೆ.
* ಸರ್ಕಾರದ ನಿಯಮಗಳು: ಸರ್ಕಲ್ ರೇಟ್ ಅಂದರೆ ಸರಕಾರಿ ಬೆಲೆಯ ಪರಿಷ್ಕರಣೆ, ಸ್ಟ್ಯಾಂಪ್ ಡ್ಯೂಟಿ ವೆಚ್ಚ, ಜಿಎಸ್‌ಟಿ ಕೂಡ ಪರಿಣಾಮ ಬೀರುತ್ತದೆ.
* ಹೂಡಿಕೆದಾರರ ಭಾವನೆ: ಎನ್‌ಆರ್‌ಐಗಳು ಮತ್ತು ದೊಡ್ಡ ಮಟ್ಟದ ಹೂಡಿಕೆದಾರರು ಪ್ರಾಪರ್ಟಿ ಖರೀದಿಸಿದರೆ ಬೆಲೆ ಕೃತಕವಾಗಿ ಮೇಲೇರುತ್ತದೆ.
* ಉಹಾಪೋಹಗಳು: ಕೆಲ ಪ್ರದೇಶಗಳಲ್ಲಿ ಫ್ಯೂಚರ್‌ಗೆ ಇಲ್ಲಿ ಮೆಟ್ರೋ ಬರುತ್ತೆ, ದೊಡ್ಡ ಮಾಲ್/ ಅಪಾರ್ಟ್‌ಮೆಂಟ್ಸ್ ಬರತ್ತೆ ಅಂತೆಲ್ಲಾ ಊಹಾಪೋಹಗಳಿಂದಲೂ ಬೆಲೆ ಏರಿಕೆ ಆಗಿರುತ್ತದೆ.
ಅಂತಿಮವಾಗಿ, ಪ್ರಾಪರ್ಟಿ ಬೆಲೆ ಏರಲು ಈ ಡಿಮಾಂಡ್ ಮತ್ತು ಸಪ್ಲೇ ನಡುವಣ ಅಸಮತೋಲನವೇ ಕಾರಣ. ಆದರೆ ಇದರ ಹಿಂದೆ ಜನಸಂಖ್ಯೆ ಹೆಚ್ಚಳ, ಮೂಲಭೂತ ಸೌಕರ್ಯಗಳು, ಹೂಡಿಕೆದಾರರ ಮನಸ್ಥಿತಿ, ಸರ್ಕಾರದ ನಿಯಮಗಳು ಇತ್ಯಾದಿ ಅಂಶಗಳೂ ಸಮಾನ ಪಾತ್ರ ವಹಿಸುತ್ತವೆ. ನೀವು ಪ್ರಾಪರ್ಟಿ ಖರೀದಿ ಅಥವಾ ಹೂಡಿಕೆ ಮಾಡುವಾಗ ಬೇಡಿಕೆ ಮತ್ತು ಪೂರೈಕೆಯ ಸ್ಥಿತಿ ನೋಡಿಕೊಂಡರೆ ಭವಿಷ್ಯದಲ್ಲಿ ಆ ಜಾಗದ ಮೌಲ್ಯ ವರ್ಧನೆ ಬಗ್ಗೆ ಅರ್ಥಮಾಡಿಕೊಳ್ಳಬಹುದು.