ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉಧಂಪುರದಲ್ಲಿ ಕಂದಕಕ್ಕೆ ಉರುಳಿದ ಬಸ್‌; 15 ಮಂದಿ ಸಾವು, 20 ಜನರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ಬಸ್ ಉರುಳಿಬಿದ್ದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿ, 20 ಜನರು ಗಾಯಗೊಂಡಿದ್ದಾರೆ. ಜಿಲ್ಲೆಯ ರಾಮನಗರದ ಖಗೋಟ್ ಪ್ರದೇಶದಲ್ಲಿ ಈ ದುರಂತ ಘಟನೆ ನಡೆದಿದೆ.

ಉಧಂಪುರದಲ್ಲಿ ಕಂದಕಕ್ಕೆ ಉರುಳಿದ ಬಸ್‌; 15 ಮಂದಿ ಸಾವು, 20 ಜನರಿಗೆ ಗಾಯ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Apr 20, 2026 11:40 AM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಉಧಂಪುರ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ ಬಸ್ ಉರುಳಿಬಿದ್ದ (Road Accident) ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿ, 20 ಜನರು ಗಾಯಗೊಂಡಿದ್ದಾರೆ. ಜಿಲ್ಲೆಯ ರಾಮನಗರದ ಖಗೋಟ್ ಪ್ರದೇಶದಲ್ಲಿ ಈ ದುರಂತ ಘಟನೆ ನಡೆದಿದೆ. ಅಪಘಾತದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಕೂಡಲೇ, ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಹಲವಾರು ಆಂಬ್ಯುಲೆನ್ಸ್‌ಗಳನ್ನು ನಿಯೋಜನೆ ಮಾಡಲಾಗಿದೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು X ನಲ್ಲಿ ಪೋಸ್ಟ್ ಮೂಲಕ ಅಪಘಾತವನ್ನು ದೃಢಪಡಿಸಿದರು. ರಾಮನಗರದಿಂದ ಪ್ರಯಾಣಿಸುತ್ತಿದ್ದ ಸಾರ್ವಜನಿಕ ಸಾರಿಗೆ ಬಸ್ ಅಪಘಾತಕ್ಕೀಡಾಗಿದೆ ಎಂದು ಅವರು ಹೇಳಿದ್ದಾರೆ. ಒಂದು ಗಂಟೆಯ ಹಿಂದೆ ರಾಮನಗರದಿಂದ ಉಧಂಪುರಕ್ಕೆ ಹೋಗುವ ಮಾರ್ಗದಲ್ಲಿ ಸಾರ್ವಜನಿಕ ಸಾರಿಗೆ ಬಸ್ಸಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ಬಗ್ಗೆ ತಿಳಿದ ನಂತರ ಉಧಂಪುರ ಜಿಲ್ಲಾಧಿಕಾರಿ ಶ್ರೀ ಮಿಂಗಾ ಶೆರ್ಪಾ ಅವರೊಂದಿಗೆ ಮಾತನಾಡಿದೆ. ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಕೈಗೊಳ್ಳಲಾಗಿದೆ. ಭಾರೀ ಸಾವುನೋವುಗಳಾಗುವ ಸಾಧ್ಯತೆ ಇದೆ. ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುತ್ತಿದೆ. ಗಾಯಾಳುಗಳನ್ನು ವೈದ್ಯಕೀಯ ಸಹಾಯಕ್ಕಾಗಿ ಸ್ಥಳಾಂತರಿಸಲಾಗುವುದು" ಎಂದು ಅವರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನು ವಿಮಾನದ ಮೂಲಕ ಸಾಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

ಹೊಸಪೇಟೆಯಲ್ಲಿ ಸರಣಿ ಅಪಘಾತ; ಬೈಕ್, ಕಾರು, ಬಸ್​ಗೆ ಡಿಕ್ಕಿ ಹೊಡೆದು ಲಾರಿ ಪಲ್ಟಿ, ನಾಲ್ವರ ಸಾವಿನ ಶಂಕೆ

ಕಂದಕಕ್ಕೆ ಬಿದ್ದ ಪ್ರವಾಸಕ್ಕೆ ತೆರಳುತ್ತಿದ್ದ ವ್ಯಾನ್

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಕೇರಳದ ಪ್ರವಾಸಿ ವ್ಯಾನ್​ವೊಂದು ತಿರುವಿನಲ್ಲಿ ಕಂದಕಕ್ಕೆ ಉರುಳಿ ಬಿದ್ದು, ಅಪಘಾತ (Accident) ಸಂಭವಿಸಿದ್ದು, ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಚಾಲಕ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ(ಏ. 17) ಸಂಜೆ ಕೊಯಮತ್ತೂರು ವಾಲ್ಪಾರೈ ಘಾಟ್ ವಿಭಾಗದ 13ನೇ ಹೇರ್ ಪಿನ್ ತಿರುವಿನಲ್ಲಿ ವ್ಯಾನ್ ವಾಲ್ಪಾರೈನಿಂದ ಪೊಲ್ಲಾಚಿಗೆ ಇಳಿಯುವಾಗ ವಾಹನವು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಆಳವಾದ ಕಣಿವೆಗೆ ಉರುಳಿ ಬಿದ್ದಿದೆ. ಪರಿಣಾಮ ವ್ಯಾನ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ವ್ಯಾನ್​ನಲ್ಲಿ ಒಟ್ಟು 13 ಮಂದಿ ಪ್ರಯಾಣಿಸುತ್ತಿದ್ದರು. ಕೇರಳದ ಮಲಪ್ಪುರಂ ನಿವಾಸಿಗಳು ಎನ್ನಲಾಗಿದ್ದು ಪ್ರವಾಸಕ್ಕೆ ತೆರಳಿದ್ದರು. ಅಪಘಾತದಿಂದ ಸ್ಥಳದಲ್ಲೇ 8 ಮಂದಿ ಮೃತಪ