ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Patiala Horror: ಐಫೋನ್‌ಗಾಗಿ ಅಪ್ರಾಪ್ತನನ್ನು ಕೊಲೆ ಮಾಡಿದ ಸ್ನೇಹಿತ; ಪಂಜಾಬ್‌ನಲ್ಲೊಂದು ದೇಶವೇ ಬೆಚ್ಚಿಬೀಳುವ ಘಟನೆ

iPhone 11: ಪಂಜಾಬ್‌ನಲ್ಲಿ ಐಫೋನ್‌ 11 ಮೊಬೈಲ್‌ ಫೋನ್‌ಗಾಗಿ ಹದಿಹರೆಯದ ಬಾಲಕನ್ನು ಆತನ ಸ್ನೇಹಿತನೇ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಪಟಿಯಾಲದ 17 ವರ್ಷದ ನವಜೋತ್‌ ಸಿಂಗ್‌ ಮೃತ ಬಾಲಕ. ಕೊಲೆ ಆರೋಪಿಯನ್ನು ಅಮನ್‌ಜೋತ್ ಎಂದು ಗುರುತಿಸಲಾಗಿದೆ.

ಐಫೋನ್‌ಗಾಗಿ ಸ್ನೇಹಿತನನ್ನೇ ಕೊಲೆ ಮಾಡಿದ ಅಪ್ರಾಪ್ತ

ಸಾಂದರ್ಭಿಕ ಚಿತ್ರ.

Profile Ramesh B Apr 2, 2025 7:20 PM

ಚಂಡೀಗಢ: ಕ್ಷುಲ್ಲಕ ಕಾರಣಗಳಿಗೆ ಕೊಲೆ ಮಾಡುತ್ತಿರುವ ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆ ಈ ಘಟನೆ. ಪಂಜಾಬ್‌ನಲ್ಲಿ ಐಫೋನ್‌ 11 (iPhone 11) ಮೊಬೈಲ್‌ ಫೋನ್‌ಗಾಗಿ ಹದಿಹರೆಯದ ಬಾಲಕನ್ನು ಆತನ ಸ್ನೇಹಿತನೇ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಪಟಿಯಾಲದ 17 ವರ್ಷದ ನವಜೋತ್‌ ಸಿಂಗ್‌ (Navjot Singh) ಸ್ನೇಹಿತನ ಕುಕೃತ್ಯಕ್ಕೆ ಬಲಿಯಾದ ಬಾಲಕ ಎಂದು ಗುರುತಿಸಲಾಗಿದೆ (Patiala Horror). ಸದ್ಯ ಆತನ ಸ್ನೇಹಿತನ ಕೃತ್ಯಕ್ಕೆ ದೇಶವೇ ಬೆಚ್ಚಿ ಬಿದ್ದಿದೆ.

ಮಾ. 24ರಂದು ನವಜೋತ್‌ ತನ್ನ ಮನೆಯಲ್ಲಿ 17ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬಸ್ಥರೊಂದಿಗೆ ಸೇರಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದ. ಮಾರನೇ ದಿನ ಅಂದರೆ ಮಾ. 25ರಂದು ತನ್ನ ಸ್ನೇಹಿತರೊಂದಿಗೆ ನವಜೋತ್‌ ಪ್ರವಾಸಕ್ಕೆ ತೆರಳಿದ್ದ. ಬಳಿಕ ಬಂದಿದ್ದೇ ನವಜೋತ್‌ನ ನಿಧನ ವಾರ್ತೆ. ಇದರಿಂದ ಸಂಭ್ರಮದಿಂದ ಕೂಡಿದ್ದ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಖುಷಿ ಖುಷಿಯಿಂದ ಕೇಕ್‌ ಕಟ್‌ ಮಾಡಿದ್ದ ಮನೆ ಮಗ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ಪೋಷಕರು ಕುಸಿದು ಬಿದ್ದಿದ್ದಾರೆ.



ಈ ಸುದ್ದಿಯನ್ನೂ ಓದಿ: Sirsi Breaking: ತಿಂಡಿ ಕೊಡುವುದಾಗಿ ಪುಸಲಾಯಿಸಿ ಪಾಳುಬಿದ್ದ ದೇವಸ್ಥಾನಕ್ಕೆ ಕರೆದೊಯ್ದು ಅತ್ಯಾಚಾರ

ಘಟನೆಯ ವಿವರ

ಮಾ. 25ರಂದು ಗೆಳೆಯರ ಜತೆ ಹರಿದ್ವಾರಕ್ಕೆ ತೆರಳುತ್ತಿರುವುದಾಗಿ ತಿಳಿಸಿ ನವಜೋತ್‌ ಮನೆಯಿಂದ ಹೊರ ಹೋಗಿದ್ದ. ಕೆಲವೇ ಹೊತ್ತಲ್ಲಿ ಪೋಷಕರಿಗೆ ಫೋನ್‌ ಮಾಡಿ ಟ್ರಿಪ್‌ ಪ್ಲ್ಯಾನ್‌ ರದ್ದಾಗಿದ್ದಾಗಿಯೂ ಮನೆಗೆ ಹಿಂದಿರುಗುತ್ತಿರುವುದಾಗಿಯೂ ತಿಳಿಸಿದ್ದ. ಆದರೆ ಮನೆಗೆ ಮರಳಿರಲಿಲ್ಲ. ಇತ್ತ ಅದೇ ದಿನ ರಾತ್ರಿ ರೈಲ್ವೆ ನಿಲ್ದಾಣದ ಬಳಿ ಅಪರಿಚಿತ ಮೃತದೇಹ ದೊರೆತಿದ್ದಾಗಿ ಪೊಲೀಸರಿಗೆ ಕರೆಯೊಂದು ಬಂದಿತ್ತು. 2 ಭಾಗಗಳಾಗಿ ದೇಹ ಕಂಡು ಬಂದಿತ್ತು. ಎದೆಯಲ್ಲಿ ಸಾಕಷ್ಟು ಗಾಯದ ಗುರುತೂ ಇತ್ತು. ಮೇಲ್ನೀಟಕ್ಕೆ ಇದು ಕೊಲೆ ಎನ್ನುವುದು ಸ್ಪಷ್ಟವಾಗಿತ್ತು. ಆದರೆ ಮೃತದೇಹದ ಗುರುತು ಪತ್ತೆಯಾಗಿರಲಿಲ್ಲ. ʼʼಮೃತದೇಹದ ಗುರುತು ಪತ್ತೆಯಾಗದ ಕಾರಣ ನಾವು ಎಲ್ಲಡೆ ಪೋಸ್ಟರ್‌ ಅಂಟಿಸಿದ್ದೆವು. ಮಾ. 30ರಂದು ನವಜೋತ್‌ನ ತಂದೆ ಹರ್ಜಿಂದರ್‌ ಸಿಂಗ್‌ ತಮ್ಮ ಪುತ್ರ ನಾಪತ್ತೆಯಾಗಿದ್ದಾಗಿ ದೂರು ನೀಡಿದ್ದರುʼʼ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ತನಿಖೆ ವೇಳೆ ತೆರೆದುಕೊಂಡಿತ್ತು ಬೆಚ್ಚಿಬೀಳಿಸುವ ರಹಸ್ಯ

ನವಜೋತ್‌ ನಾಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ಆರಂಭಿಸಿದರು. ಆ ವೇಳೆ ನವಜೋತ್‌ನನ್ನು ಆತನ ಗೆಳೆಯ ಅಮನ್‌ಜೋತ್‌ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂತು. ನವಜೋತ್‌ ಹೊಂದಿರುವ ಐಫೋನ್‌ 11 ಮೊಬೈಲ್‌ ಫೋನ್‌ಗಾಗಿ ಕೊಲೆ ಮಾಡಲಾಗಿತ್ತು ಎನ್ನುವ ವಿಚಾರ ಬೆಳಕಿಗೆ ಬಂತು. ಸದ್ಯ ಆತನ ಬಳಿಯಿಂದ ನವಜೋತ್‌ನ ಮೊಬೈಲ್‌ ಫೋನ್‌ ವಶಪಡಿಸಿ ಬಂಧಿಸಲಾಗಿದೆ. ಅಮನ್‌ಜೋತ್ ಕೂಡ ಅಪ್ರಾಪ್ತ ಎಂದು ತಿಳಿದು ಬಂದಿದೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಮತ್ತೊಬ್ಬ ಬಾಲಕ, ಅಪರಾಧಕ್ಕೆ ಸಹಕರಿಸಲು ಅಮನ್‌ಜೋತ್ ತನಗೆ 1,000 ರೂ.ಗಳ ಆಮಿಷ ಒಡ್ಡಿದ್ದ ಎಂದು ಆರೋಪಿಸಿದ್ದಾನೆ. ಸದ್ಯ ಆತನ ಗುರುತನ್ನು ಬಹಿರಂಗಪಡಿಸಿಲ್ಲ. ಮೃತದೇಹವನ್ನು ರೈಲ್ವೆ ಹಳಿಯ ಮೇಲೆ ಇಡಲು ಸಹಾಯ ಮಾಡುವಂತೆ ಬೆದರಿಕೆ ಹಾಕಲಾಗಿತ್ತು ಎಂದೂ ತಿಳಿಸಿದ್ದಾನೆ.