ನಾಗಾಲ್ಯಾಂಡ್‌ನಲ್ಲಿ ವಿಷಕಾರಿ ಮದ್ಯ ಸೇವಿಸಿ 19 ಮಂದಿ ಸಾವು
ಕಳಪೆ ಗುಣಮಟ್ಟದ ಅಥವಾ ವಿಷಕಾರಿಯಾಗಿದ್ದ ಮದ್ಯ ಸೇವನೆ ಮಾಡಿ ನಾಗಾಲ್ಯಾಂಡ್‌ನಲ್ಲಿ 19 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆ ಕಳೆದ ಎರಡು ದಿನಗಳಲ್ಲಿ ಮೊಕೊಕ್‌ಚಂಗ್, ಟುಯೆನ್‌ಸಾಂಗ್ ಜಿಲ್ಲೆಯಲ್ಲಿ ನಡೆದಿದೆ. ಮೊಕೊಕ್‌ಚಂಗ್ ಜಿಲ್ಲೆಯಲ್ಲಿ 8 ಮಂದಿ ಹಾಗೂ ಟುಯೆನ್‌ಸಾಂಗ್ ಜಿಲ್ಲೆಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ.
ಸಂಗ್ರಹ ಚಿತ್ರ -
ನಾಗಾಲ್ಯಾಂಡ್: ಮದ್ಯಪಾನ ನಿಷೇಧ ಕಾನೂನು (liquor prohibition law 1990) 1990ರಿಂದ ಜಾರಿಯಲ್ಲಿರುವ ರಾಜ್ಯವಾದ ನಾಗಾಲ್ಯಾಂಡ್‌ನಲ್ಲಿ (nagaland crime) ಅಕ್ರಮ ಮದ್ಯ (illicit liquor) ಸೇವನೆಯಿಂದ 19 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಳೆದ ಎರಡು ದಿನಗಳಲ್ಲಿ ನಡೆದ ಘಟನೆಯಲ್ಲಿ ಕಳಪೆ ಗುಣಮಟ್ಟದ ಅಥವಾ ವಿಷಕಾರಿ ಮದ್ಯ ಸೇವನೆಯಿಂದಾಗಿ ಮೊಕೊಕ್‌ಚಂಗ್ ಜಿಲ್ಲೆಯ 8 ಮಂದಿ ಹಾಗೂ ಟುಯೆನ್‌ಸಾಂಗ್ ಜಿಲ್ಲೆಯ 11 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯ ಬಳಿಕ ಕಲಬೆರಕೆ ಮದ್ಯದ ಪೂರೈಕೆ ಜಾಲವನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತಂಡವೊಂದನ್ನು ರಚಿಸಿದ್ದಾರೆ.
ವಿಷಪೂರಿತ ಮದ್ಯ ಸೇವನೆ ಮಾಡಿ 19 ಮಂದಿ ಸಾವನ್ನಪ್ಪಿದ ಬಳಿಕ ಈ ಕುರಿತು ತನಿಖೆ ನಡೆಸಲು ಹಾಗೂ ಕಲಬೆರಕೆ ಮದ್ಯದ ಮೂಲ, ಪೂರೈಕೆ ಜಾಲವನ್ನು ಪತ್ತೆ ಹಚ್ಚಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಐ. ಬಂಗ್ಲಾಂಗ್ ಚಾಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
ರೀಲ್ಸ್‌ನಲ್ಲಿ ಒಡವೆ ತೋರಿಸಿದ ಬೆನ್ನಲ್ಲೇ ಯುಟ್ಯೂಬರ್ ದಂಪತಿ ಮನೆಗೆ ಕನ್ನ; 1 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳವು
ಈ ಕುರಿತು ಶನಿವಾರ ಮಾಹಿತಿ ನೀಡಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವೆಸುಪ್ರಾ ಕೆಜೊ, ಮೊಕೊಕ್‌ಚಂಗ್, ಟುಯೆನ್‌ಸಾಂಗ್ ಜಿಲ್ಲೆಯಲ್ಲಿ ಕಳೆದೆರಡು ದಿನಗಳಲ್ಲಿ ನಡೆದ 19 ಮಂದಿಯ ಸಾವುಗಳಿಗೆ ಸಂಬಂಧಿಸಿ ನಿಖರ ಕಾರಣವನ್ನು ಖಚಿತಪಡಿಸಿಕೊಳ್ಳಲು ಮದ್ಯದ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಗುವಾಹಟಿಗೆ ಕಳುಹಿಸಲಾಗಿದೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿ ಕೆಲವು ಸುಳಿವುಗಳು ಸಿಕ್ಕಿವೆ. ಪ್ರಕರಣ ತನಿಖೆಯಲ್ಲಿರುವುದರಿಂದ ಈ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಹಲವೆಡೆ ದಾಳಿ ನಡೆಸಿ 19 ಮಂದಿಯನ್ನು ಬಂಧಿಸಲಾಗಿದೆ. ಸುಮಾರು 3,000 ಬಾಟಲಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ರೀಲ್ಸ್‌ನಲ್ಲಿ ಒಡವೆ ತೋರಿಸಿದ ಬೆನ್ನಲ್ಲೇ ಯುಟ್ಯೂಬರ್ ದಂಪತಿ ಮನೆಗೆ ಕನ್ನ; 1 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳವು
ಲೇಬಲ್ ಇಲ್ಲದೇ ಇರುವ ಅಕ್ರಮ ಮದ್ಯ ಸೇವಿಸದಂತೆ ಸಾರ್ವಜನಿಕರಿಗೆ ಸಲಹೆ ನೀಡಿರುವ ಪೊಲೀಸರು, ಮದ್ಯ ಸೇವಿಸಿದ ಬಳಿಕ ತಲೆಸುತ್ತುವಿಕೆ, ದೃಷ್ಟಿ ಮಂಜಾಗುವಿಕೆ, ಉಸಿರಾಟದ ತೊಂದರೆ ಅಥವಾ ಪ್ರಜ್ಞೆ ತಪ್ಪುವಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಲು ಸೂಚಿಸಿದ್ದಾರೆ. ಯಾವುದೇ ರೀತಿಯ ಅನುಮಾನಗಳು ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.