ಐಟಿ ಕೆಲಸ ಬಿಟ್ಟು ಬಂದು ಕೃಷಿಕನಾಗಿದ್ದ ಬೆಂಗಳೂರು ಟೆಕ್ಕಿ ಸಿಡಿಲು ಬಡಿದು ಸಾವು
ಲಕ್ಷಾಂತರ ರೂಪಾಯಿ ಆದಾಯ ಹೊಂದಿದ್ದ ಕಾರ್ಪೊರೇಟ್ ಕೆಲಸ ಬಿಟ್ಟು ಬಂದು ಕೃಷಿಕನಾಗಿದ್ದ ಬೆಂಗಳೂರು ಟೆಕ್ಕಿ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೂಲತಃ ಮಡಿಕೇರಿಯವರಾದ ರೋಷನ್ ಬಾಲಕೃಷ್ಣ ಮೃತರು. ಐಟಿ ವಲಯದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದ ಅವರು ಇತ್ತೀಚೆಗೆ ಕೆಲಸ ತ್ಯಜಿಸಿ ಕೃಷಿ ವಲಯಕ್ಕೆ ಕಾಲಿಟ್ಟಿದ್ದರು.
ಸಂಗ್ರಹ ಚಿತ್ರ -
ಮೈಸೂರು: ಕಾರ್ಪೊರೇಟ್ ಕೆಲಸ (corporate job) ಬಿಟ್ಟು ಕೃಷಿಕನಾಗಿದ್ದ (former) ಬೆಂಗಳೂರಿನ ಟೆಕ್ಕಿಯೊಬ್ಬರು (Bengaluru techie) ಸಿಡಿಲು ಬಡಿದು (lightning struck) ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೂಲತಃ ಮಡಿಕೇರಿಯವರಾದ (Madikeri) ರೋಷನ್ ಬಾಲಕೃಷ್ಣ ಮೃತರು. ಹಲವು ವರ್ಷಗಳ ಕಾಲ ಐಟಿ ವಲಯದಲ್ಲಿ ಕೆಲಸ ಮಾಡಿದ್ದ ಅವರು ಇತ್ತೀಚೆಗೆ ಕೆಲಸ ಬಿಟ್ಟು ಕೃಷಿ ವಲಯಕ್ಕೆ ಕಾಲಿಟ್ಟಿದ್ದರು. ಆದರೆ ಇದುವೇ ಈಗ ಅವರ ಪಾಲಿಗೆ ಮೃತ್ಯುವಾಗಿದೆ. ರೋಷನ್ ಅವರು ಪತ್ನಿ ಮತ್ತು ಮಗನೊಂದಿಗೆ ತಮ್ಮ ಕೃಷಿ ಭೂಮಿ ನೋಡಲೆಂದು ಹೋಗಿದ್ದು, ಅಲ್ಲಿ ಮಾವು ಕೀಳಲು ಹೋದಾಗ ಅವರಿಗೆ ಸಿಡಿಲು ಬಡಿದಿದೆ ಎನ್ನಲಾಗಿದೆ.
ಕೊಡಗು ಜಿಲ್ಲೆಯ ಮಡಿಕೇರಿ ಬಳಿಯ ಹೆರವನಾಡ್ ಗ್ರಾಮದ ದಿವಂಗತ ಹೊಸೊಕ್ಲು ಬಾಲಕೃಷ್ಣ ಅವರ ಪುತ್ರರಾಗಿರುವ ಹೊಸೊಕ್ಲು ರೋಷನ್ ಬಾಲಕೃಷ್ಣ ಅವರು ಮೈಸೂರಿನ ಯಲವಾಲ ಬಳಿ ಕಾರ್ಪೊರೇಟ್ ಕೆಲಸ ಬಿಟ್ಟು ಕೃಷಿ ಮಾಡಲು ಮುಂದಾಗಿದ್ದರು. ಆದರೆ ಅವರು ಮಂಗಳವಾರ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಮತ್ತೊಂದು ನೀಲಿ ಡ್ರಮ್ ಕ್ರೈಂ: ಬೆಳ್ಳಂಬೆಳಗ್ಗೆ ಯುವತಿಯ ಮೃತದೇಹ ಪತ್ತೆ; ಬೆಚ್ಚಿಬಿದ್ದ ಪಂಜಾಬ್
ಐಟಿ ವಲಯದಿಂದ ಇತ್ತೀಚೆಗೆ ಹೊರಬಂದಿದ್ದ ಅವರು ಕೃಷಿ ಮತ್ತು ಆಧುನಿಕ ಕೃಷಿ ಉಪಕರಣಗಳ ಮಾರುಕಟ್ಟೆಗೆ ಕಾಲಿಟ್ಟಿದ್ದರು.ಇದಕ್ಕೆ ಅವರ ಇನ್ನೊಬ್ಬ ಸಹೋದ್ಯೋಗಿಯು ಕೂಡ ಅವರಿಗೆ ಬೆಂಬಲವಾಗಿ ನಿಂತರು. ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿದ್ದ ರೋಷನ್ ಇದರೊಂದಿಗೆ ಆಧುನಿಕ ಕೃಷಿ ಉಪಕರಣಗಳನ್ನು ಪರಿಚಯಿಸುವ ಮತ್ತು ಅವುಗಳನ್ನು ಮಾರಾಟ ಮಾಡುವ ಕಾರ್ಯದಲ್ಲೂ ತೊಡಗಿಸಿಕೊಂಡರು. ಆದರೆ ಮಂಗಳವಾರ ಅವರು ತಮ್ಮ ಪತ್ನಿ, ಮಗನೊಂದಿಗೆ ಕೃಷಿ ಭೂಮಿಗೆ ಭೇಟಿ ನೀಡಲು ಹೋಗಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಈ ಸಂದರ್ಭದಲ್ಲಿ ಅವರೊಂದಿಗಿದ್ದ ಇನ್ನೋರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ರೋಷನ್ ಅವರ ಅಂತ್ಯಕ್ರಿಯೆಯನ್ನು ಹೆರವನಾಡಿನಲ್ಲಿ ನಡೆಸಲಾಯಿತು.
ತ್ವಿಶಾ ಶರ್ಮಾ ಸಾವು ಕೇಸ್; ಸಿಬಿಐನಿಂದ ಅತ್ತೆ ಗಿರಿಬಾಲಾ ಸಿಂಗ್ ಬಂಧನ
ರೋಷನ್ ಅವರ ಕುಟುಂಬಕ್ಕೆ ಮೈಸೂರು ಜಿಲ್ಲಾ ವಿಪತ್ತು ನಿರ್ವಹಣಾ ಘಟಕವು ಒಟ್ಟು 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದು, ಇದರಲ್ಲಿ 4 ಲಕ್ಷ ರೂ.ಗಳನ್ನು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ ಮತ್ತು 1 ಲಕ್ಷ ರೂ.ಗಳನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ ನೀಡಲಾಗುತ್ತದೆ.