20 ವರ್ಷ ಕಳೆದರೂ ನಡೆಯದ ಭೂ ಹಂಚಿಕೆ: ಚಿಕ್ಕಬಳ್ಳಾಪುರದಲ್ಲಿ ಮನನೊಂದು ಕಾರ್ಗಿಲ್ ಯೋಧ ಆತ್ಮಹತ್ಯೆಗೆ ಯತ್ನ
chikkaballapur crime: ಕಾರ್ಗಿಲ್ ಯೋಧನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಭೂ ಹಂಚಿಕೆಯಲ್ಲಿ ದೀರ್ಘಕಾಲದ ವಿಳಂಬದ ಕಾರಣದಿಂದ ನೊಂದಿದ್ದ ಅವರು ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಅವರು ಚೇತರಿಸಿಕೊಂಡ ಬಳಿಕ ಅವರ ಹೇಳಿಕೆಗಳನ್ನು ಪಡೆಯುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ಭೂ ಹಂಚಿಕೆ (land allotment) ವಿಳಂಬದಿಂದ ಬೇಸೆತ್ತ ಕಾರ್ಗಿಲ್ ಯೋಧನೊಬ್ಬ (Kargil soldier) ಆತ್ಮಹತ್ಯೆಗೆ ಯತ್ನಿಸಿದ (self harming) ಘಟನೆ ಚಿಕ್ಕಬಳ್ಳಾಪುರದಲ್ಲಿ (chikkaballapur crime) ಬುಧವಾರ ನಡೆದಿದೆ. 20 ವರ್ಷಗಳಿಗೂ ಹೆಚ್ಚು ಕಾಲ ಅವರು ಹಂಚಿಕೆಯಾಗಿರುವ ಭೂಮಿಗಾಗಿ ಕಚೇರಿಗಳನ್ನು ಸುತ್ತಾಡಿ ಸುಸ್ತಾಗಿ ಕೊನೆಗೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ, ಪ್ರಸ್ತುತ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಚೇತರಿಸಿಕೊಂಡ ಮೇಲೆ ಹೇಳಿಕೆಗಳನ್ನು ದಾಖಲಿಸಿ ಪ್ರಕರಣ ದಾಖಲಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧ ಶಿವಾನಂದ ರೆಡ್ಡಿ, ಭೂ ಹಂಚಿಕೆಯಲ್ಲಿ ದೀರ್ಘಕಾಲದ ವಿಳಂಬದಿಂದ ಮನನೊಂದು ಆಗಸ್ಟ್ 28 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿರುವ ಪ್ರವಾಸಿ ಮಂದಿರದ ಆವರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ಅಲ್ಲಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುರಿಯ ಜಗನ್ನಾಥ ದೇವಾಲಯದ ಹೆಸರಿನಲ್ಲಿರುವ ಆಸ್ತಿ ಎಷ್ಟು? ಸಾವಿರ ಕೋಟಿ ಒಡೆಯನ ಸಂಪತ್ತಿನ ವಿವರ ಬಹಿರಂಗ
ಕಾರ್ಗಿಲ್ ನಲ್ಲಿ 1999 ರ ಯುದ್ಧದ ಸಮಯದಲ್ಲಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದಕ್ಕಾಗಿ ಶಿವಾನಂದ ರೆಡ್ಡಿ ಅವರಿಗೆ ನೀಡಲಾದ ಭೂಮಿ ಹಂಚಿಕೆಯಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಅವರು ನೊಂದು ಕೀಟನಾಶಕ ಸೇವಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, 1987ರಲ್ಲಿ ಭಾರತೀಯ ಸೇನೆ ಸೇರಿದ್ದ ಚಿಕ್ಕಬಳ್ಳಾಪುರದ ಶಿವಾನಂದ ರೆಡ್ಡಿ 2004ರಲ್ಲಿ ಕಡ್ಡಾಯ ನಿವೃತ್ತಿಯಾಗಿದ್ದಾರೆ. 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಮರಾಠಾ ಲೈಟ್ ಇನ್ಫಾಂಟ್ರಿಯಲ್ಲಿ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ತೀವ್ರವಾಗಿ ಗಾಯಗೊಂಡಿದ್ದರು ಎಂದು ತಿಳಿಸಿದ್ದಾರೆ
ಈ ವರ್ಷದ ಆರಂಭದಲ್ಲಿ ಚಿಂತಾಮಣಿಯ ತಹಶೀಲ್ದಾರ್‌ಗೆ ಶಿವಾನಂದ ರೆಡ್ಡಿ ಎರಡು ಹೆಕ್ಟೇರ್ ಭೂಮಿಯನ್ನು ಮಂಜೂರು ಮಾಡುವಂತೆ ಪತ್ರ ಬರೆದಿದ್ದು, ಇದು 26 ವರ್ಷಗಳ ಹಿಂದಿನ ಪ್ರಕರಣ ಎಂಬುದಾಗಿ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಲಖನೌನಲ್ಲಿ ತುರ್ತು ಭೂಸ್ಪರ್ಶ
ಈ ಕುರಿತು ಶಿವಾನಂದ ರೆಡ್ಡಿ ಅವರು ಅಧಿಕಾರಿಗಳಿಗೆ ಪತ್ರ ಬರೆದಿದ್ದು, 26 ವರ್ಷಗಳಿಂದ ಅಂಗವಿಕಲ ಮಾಜಿ ಸೈನಿಕನಿಗೆ ಭೂಮಿಯನ್ನು ಗುರುತಿಸಲು ಸಾಧ್ಯವಾಗಲಿಲ್ಲವೇ ಎಂದು ಪ್ರಶ್ನಿಸಿದ್ದು, ಇದು ಭಾರತೀಯ ಸೇನೆಯಲ್ಲಿನ ತನ್ನ ಸೇವೆಯನ್ನು ಪ್ರಶ್ನಿಸುವಂತೆ ಮಾಡಿದೆ. ರಾಷ್ಟ್ರಕ್ಕೆ ಸೇವೆ ಸಲ್ಲಿಸಿ ನಾನು ತಪ್ಪು ಮಾಡಿದ್ದೇನೆಯೇ ಎಂದು ಪ್ರಶ್ನಿಸುವಂತೆ ಮಾಡಿದೆ. ಏನಾದರೂ ಅನಾಹುತ ಸಂಭವಿಸಿದರೆ ಇದಕ್ಕೆ ಅಧಿಕಾರಿಗಳೇ ಜವಾಬ್ದಾರರು ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.