ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿಗೆ ತೆರಳುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಲಖನೌನಲ್ಲಿ ತುರ್ತು ಭೂಸ್ಪರ್ಶ

ವಾರಣಾಸಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ. ಸಿಬ್ಬಂದಿ ಸೇರಿ ಒಟ್ಟು 155 ಮಂದಿ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನದ ಸರಕು ಹೋಲ್ಡ್‌ನಲ್ಲಿ ಹೊಗೆ ಕಾಣಿಸಿಕೊಂಡ ಕಾರಣ ವಿಮಾನವನ್ನು ಸುರಕ್ಷತೆಯ ಕಾರಣದಿಂದ ಲಖನೌನಲ್ಲಿ ಇಳಿಸಲಾಯಿತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಲಖನೌನಲ್ಲಿ ಏರ್‌ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ಸಂಗ್ರಹ ಚಿತ್ರ -

ನವದೆಹಲಿ: ಹಾರಾಟದ ವೇಳೆ ಎಂಜಿನ್ ವೈಫಲ್ಯಗೊಂಡು ಗೋವಾ- ದೆಹಲಿ ಇಂಡಿಗೊ ವಿಮಾನ (Goa- Delhi IndiGo flight) ತುರ್ತು ಭೂ ಸ್ಪರ್ಶ (emergency landing) ಮಾಡಿದ ಘಟನೆ ನಡೆದ ಎರಡು ದಿನಗಳ ಬಳಿಕ ಇದೀಗ ಏರ್ ಇಂಡಿಯಾ ವಿಮಾನವೊಂದು (air india Express flight) ಲಖನೌನಲ್ಲಿ (Lucknow) ತುರ್ತು ಭೂಸ್ಪರ್ಶ ಮಾಡಿದೆ. ವಾರಣಾಸಿಯಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಪರಿಣಾಮ ಗುರುವಾರ ಲಖನೌನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಸಿಬ್ಬಂದಿ ಸೇರಿದಂತೆ ಒಟ್ಟು 155 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಎಲ್ಲರನ್ನು ಲಖನೌನಲ್ಲಿ ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಿಳಿಸಿದೆ.

ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದು ಬಂದಿದ್ದರಿಂದ ಮಂಗಳವಾರ ವಿಮಾನವು ಗೋವಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ವಿಮಾನ ನಿಯಂತ್ರಣ (ಎಟಿಸಿ) ಪೂರ್ಣ ತುರ್ತು ಪರಿಸ್ಥಿತಿ ಘೋಷಿಸಿತು. ಇದರ ಬೆನ್ನಲ್ಲೇ ಇದೀಗ ಏರ್ ಇಂಡಿಯಾ ವಿಮಾನವೊಂದು ಲಖನೌನಲ್ಲಿ ಭೂಸ್ಪರ್ಶ ಮಾಡಿದೆ.

ಜನಾಕ್ರೋಶಕ್ಕೆ ಮಣಿದ ಸರ್ಕಾರ; ಪಾರ್ಕ್‌ನ ಶೇಕಡಾ 5ರಷ್ಟು ಜಾಗ ಬಳಸುವ ಬಿಲ್‌ ವಾಪಸ್‌

ವಾರಣಾಸಿಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ 1253 ವಿಮಾನವು ಲಖನೌ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ವಿಮಾನ ನಿಲ್ದಾಣದ ತುರ್ತು ಪ್ರತಿಕ್ರಿಯೆ ತಂಡ ಸಂಪೂರ್ಣ ಪರಿಶೀಲನೆ ನಡೆಸಿದ್ದು, ಯಾವುದೇ ರೀತಿಯ ಹೊಗೆ ಇಲ್ಲ ಎಂಬುದನ್ನು ದೃಢಪಡಿಸಿದೆ.



ಈ ಕುರಿತು ಹೇಳಿಕೆ ನೀಡಿರುವ ವಿಮಾನಯಾನ ಸಂಸ್ಥೆ, ವಿಮಾನದಲ್ಲಿ ಎಲ್ಲಾ 155 ಪ್ರಯಾಣಿಕರು ಲಖನೌನಲ್ಲಿ ಸುರಕ್ಷಿತವಾಗಿ ಇಳಿದರು. ಸುರಕ್ಷತೆಗೆ ಆದ್ಯತೆ ನೀಡಿ ವಿಮಾನವನ್ನು ಲಖನೌನಲ್ಲಿ ಇಳಿಸಿರುವುದಾಗಿ ತಿಳಿಸಿದೆ. ಅಲ್ಲದೇ ಪ್ರಯಾಣಿಕರನ್ನು ಗಮ್ಯಸ್ಥಾನಕ್ಕೆ ತಲುಪಿಸಲು ಪರ್ಯಾಯ ವಿಮಾನವನ್ನು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.

ಎರಡು ದಿನಗಳ ಹಿಂದೆ ನಡೆದ ಇಂಡಿಗೋ ವಿಮಾನ 6ಇ 2102 ಮಂಗಳವಾರ ಬೆಳಗ್ಗೆ 9.16 ಕ್ಕೆ ಗೋವಾದಿಂದ ಹೊರಟಿತ್ತು. ಅದರ ಎಂಜಿನ್‌ಗಳಲ್ಲಿ ಒಂದರಲ್ಲಿ ಸಮಸ್ಯೆ ಕಾಣಿಸಿಕೊಂಡ ಬಳಿಕ ಅದು ವಿಮಾನ ನಿಲ್ದಾಣಕ್ಕೆ ಮರಳಿ ಬೆಳಗ್ಗೆ 9.30 ರ ಸುಮಾರಿಗೆ ತುರ್ತು ಭೂಸ್ಪರ್ಶ ಮಾಡಿತ್ತು.

ಪಾಕಿಸ್ತಾನದ ಜತೆ ಸಿಜೆಪಿ ಸಂಬಂಧ; ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಬಿಚ್ಚಿಟ್ಟ ರಹಸ್ಯವೇನು?

ಕತಾರ್‌ನ ದೋಹಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನವನ್ನು ಗುರುವಾರ ಓಮನ್‌ನ ಮಸ್ಕತ್‌ಗೆ ಮಾರ್ಗ ಬದಲಿಸಲಾಯಿತು. ವಿಮಾನದಲ್ಲಿದ್ದ ಸಿಬ್ಬಂದಿಯೊಬ್ಬರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಬೇಕಾಗಿದ್ದರಿಂದ ವಿಮಾನವನ್ನು ಮಸ್ಕತ್‌ಗೆ ತಿರುಗಿಸಲಾಗಿದ್ದು, ಅಲ್ಲಿ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ತಿಳಿಸಿದೆ.