ಹಿಂದೂ ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕಾಲುವೆಗೆ ಎಸೆದ ಮಟನ್ ಅಂಗಡಿ ಮಾಲಕ ಶಫಿ
Crime News: ಪತಿ ಮತ್ತು ಕುಟುಂಬದಿಂದ ದೂರವಾಗಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯ ಛಿದ್ರಗೊಂಡ ಮೃತದೇಹ ಆಂಧ್ರ ಪ್ರದೇಶದ ಎನ್‌ಟಿಆರ್ ಜಿಲ್ಲೆಯ ಕಾಲುವೆಯಲ್ಲಿ ಪತ್ತೆಯಾಗಿದೆ. ಸೆಪ್ಟೆಂಬರ್ 18ರಂದು ವಿಜಯವಾಡ ಉಷ್ಣ ವಿದ್ಯುತ್ ಸ್ಥಾವರ (ವಿಟಿಪಿಎಸ್) ಕಾಲುವೆಯಲ್ಲಿ ಕಲ್ಯಾಣಿಯ ಮೃತದೇಹ ಪತ್ತೆಯಾಗಿದ್ದು, ಇದೀಗ ಪೊಲೀಸರು ಆಕೆಯ ಗುರುತನ್ನು ದೃಢಪಡಿಸಿದ್ದಾರೆ.
ಕೊಲೆಯಾದ ಕಲ್ಯಾಣಿ (ಸಂಗ್ರಹ ಚಿತ್ರ) -
ಅಮರಾವತಿ, ಸೆ. 29: ಪತಿ ಮತ್ತು ಕುಟುಂಬದಿಂದ ದೂರವಾಗಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯ ಛಿದ್ರಗೊಂಡ ಮೃತದೇಹ ಪತ್ತೆಯಾದ ಘಟನೆ ಆಂಧ್ರ ಪ್ರದೇಶದ (Andhra Pradesh) ಎನ್‌ಟಿಆರ್ ಜಿಲ್ಲೆಯ ಕಾಲುವೆಯಲ್ಲಿ ನಡೆದಿದೆ (Crime News). ಮೃತ ಮಹಿಳೆಯನ್ನು ಕಲ್ಯಾಣಿ ಎಂದು ಉರುತಿಸಲಾಗಿದೆ. ಈಕೆಗೆ ಸಂಬಂಧವಿತ್ತು ಎನ್ನಲಾದ ಮಟನ್ ಅಂಗಡಿ ಮಾಲಕ ಶಫಿ ಎಂಬಾತನೇ ಕೊಲೆ ಮಾಡಿ ದೇಹವನ್ನು ತುಂಡು ತುಂಡು ಮಾಡಿ ಎಸೆದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ
ಸೆಪ್ಟೆಂಬರ್ 18ರಂದು ವಿಜಯವಾಡ ಉಷ್ಣ ವಿದ್ಯುತ್ ಸ್ಥಾವರ (ವಿಟಿಪಿಎಸ್) ಕಾಲುವೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಇದೀಗ ಪೊಲೀಸರು ಮೃತದೇಹ ಗುರುತು ಪತ್ತೆ ಹಚ್ಚಿದ್ದು, ಕಲ್ಯಾಣಿ ಎಂದು ದೃಢಪಡಿಸಿದ್ದಾರೆ. ಆಕೆ ಮೂಲತಃ ಗುಂಟೂರು ಜಿಲ್ಲೆಯವಳು. ಕಲ್ಯಾಣಿ ತನ್ನ ಪತಿ ಮತ್ತು ಕುಟುಂಬದಿಂದ ದೂರವಾದ ನಂತರ ಒಂಟಿಯಾಗಿ ವಾಸಿಸುತ್ತಿದ್ದಳು. ಆಂಧ್ರ ಪ್ರದೇಶ ಮತ್ತು ನೆರೆಯ ಪ್ರದೇಶಗಳಲ್ಲಿ ಮಹಿಳೆಯರು ನಾಪತ್ತೆಯಾಗುವ ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ಕಾಲುವೆಯಲ್ಲಿ ತುಂಡು ತುಂಡಾದ ಸ್ಥಿತಿಯಲ್ಲಿ ಕಲ್ಯಾಣಿಯ ಸವ ಪತ್ತೆಯಾಗಿತ್ತು.
ವಿಜಯವಾಡದ ಭವಾನಿಪುರಂನಲ್ಲಿ ಮಟನ್ ಅಂಗಡಿ ನಡೆಸುತ್ತಿರುವ ಶಫಿ ಜತೆ ಕಲ್ಯಾಣಿ ಸಂಬಂಧ ಹೊಂದಿದ್ದಳು. ಅವನ ಮನೆಯ ಬಳಿಯೇ ವಾಸಿಸುತ್ತಿದ್ದಳು ಎನ್ನಲಾಗಿದೆ. ಸೆಪ್ಟೆಂಬರ್ 17ರಂದು ಕಲ್ಯಾಣಿ ಶಫಿಯಿಂದ ಹಣಕ್ಕೆ ಬೇಡಿಕೆ ಇಟ್ಟ ನಂತರ ಇಬ್ಬರ ನಡುವೆ ಜಗಳವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವರದಿಯ ಪ್ರಕಾರ, ಕಲ್ಯಾಣಿ ಹಲವು ಸಂದರ್ಭಗಳಲ್ಲಿ ಅವನಿಂದ ಹಣ ಕೇಳಿದ್ದಳು. 5,000 ಮತ್ತು 10,000 ರೂ. ಸೇರಿ ಚಿನ್ನಕ್ಕೂ ಬೇಡಿಕೆ ಇಟ್ಟಿದ್ದಳು ಎನ್ನಲಾಗಿದೆ.
ನಾಯಿಂಧ್ರಹಳ್ಳಿ ಗೇಟ್ ಬಳಿ ಭೀಕರ ಅಪಘಾತ: ಆಟೋ ಪಲ್ಟಿ
ಕೊಲೆಗೆ ಕಾರಣ ಏನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ, ವಿವಾದದ ನಂತರ ಕಲ್ಯಾಣಿಯನ್ನು ಕೊಲೆ ಮಾಡಲಾಗಿದೆ. ನಂತರ ಸಾಕ್ಷ್ಯಗಳನ್ನು ನಾಶಮಾಡುವ ಪ್ರಯತ್ನದಲ್ಲಿ ಆಕೆಯ ದೇಹವನ್ನು ತುಂಡುಗಳಾಗಿ ಕತ್ತರಿಸಿ ಕಾಲುವೆಯಲ್ಲಿ ಎಸೆಯಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಕಲ್ಯಾಣಿಯನ್ನು ಕೊಲ್ಲಲು ಶಫಿ ಮಾಂಸ ಕತ್ತರಿಸಲು ಸಾಮಾನ್ಯವಾಗಿ ಬಳಸುವ ಚಾಕುವನ್ನೇ ಬಳಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ಭಾಗವಾಗಿ, ಪೊಲೀಸರು ಕಲ್ಯಾಣಿಯ ಮೊಬೈಲ್ ಫೋನ್‌ನ ಕರೆ ದತ್ತಾಂಶ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಆರಂಭದಲ್ಲಿ ಹಲವು ಜನರು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಿದ್ದರು.