ದೆಹಲಿಯಲ್ಲಿ ಪೊಲೀಸರೊಂದಿಗೆ ಗುಂಡಿನ ಚಕಮಕಿ: ರೌಡಿಶೀಟರ್‌ಗಳ ಬಂಧನ
Gunfight With Police: ದೆಹಲಿಯಲ್ಲಿ ಪೊಲೀಸರೊಂದಿಗೆ ಗುಂಡಿನ ಚಕಮಕಿ ನಡೆಸಿದ ಇಬ್ಬರನ್ನು ಬಂಧಿಸಲಾಗಿದ್ದು, ಅವರ ಬಳಿಯಿಂದ ಎರಡು ಅಕ್ರಮ ಬಂದೂಕುಗಳು, ಪಿಸ್ತೂಲ್, ಎರಡು ಜೀವಂತ ಕಾರ್ಟ್ರಿಡ್ಜ್‌ಗಳು ಮತ್ತು ಕದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಆಗಸ್ಟ್ 31ರಂದು ಸಬ್ಜಿ ಮಂಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಬೈಕ್ ಕಳವಾಗಿರುವ ವಗ್ಗೆ ದೂರು ದಾಖಲಾಗಿತ್ತು.
ಸಾಂದರ್ಭಿಕ ಚಿತ್ರ -
ನವದೆಹಲಿ, ಸೆ. 29: ನವದೆಹಲಿಯ ಪಹರ್‌ಗಂಜ್ ಪ್ರದೇಶದಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಏಳು ಸುತ್ತು ಗುಂಡು ಹಾರಿಸಲಾಗಿದ್ದು, ಶಂಕಿತರ ಕಾಲುಗಳಿಗೆ ಗುಂಡೇಟಿನಿಂದ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ (crime news). ಆಕಾಶ್ ಅಲಿಯಾಸ್ ಮತ್ತಿ ಮತ್ತು ಮುಖೇಶ್ ಅಲಿಯಾಸ್ ಚಿನ್ನು ಎಂದು ಗುರುತಿಸಲಾದ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಹರ್‌ಗಂಜ್‌ನ ಚೆಮ್ಸ್‌ಫೋರ್ಡ್ ರಸ್ತೆಯಿಂದ ರಿಸರ್ವೇಶನ್ ರಸ್ತೆಯ ಕಡೆಗೆ ಹೋಗುವ ಮಾರ್ಗದಲ್ಲಿ ಆರೋಪಿಗಳು ಪೊಲೀಸ್ ತಂಡದ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿದರು ಎಂದು ಮೂಲಗಳು ತಿಳಿಸಿವೆ. “ಪೊಲೀಸ್ ತಂಡವು ಪ್ರತೀಕಾರವಾಗಿ ಮೂರು ಸುತ್ತು ಗುಂಡು ಹಾರಿಸಿತು. ಒಂದು ಗುಂಡು ಹೆಡ್ ಕಾನ್‌ಸ್ಟೇಬಲ್ ಮೋಹಿತ್ ಅವರ ತಲೆಯ ಹತ್ತಿರ ಹಾದು ಹೋದರೆ, ಇನ್ನೊಂದು ಗುಂಡು ಹೆಡ್ ಕಾನ್‌ಸ್ಟೇಬಲ್ ರಾಜ್‌ವೀರ್ ಅವರ ಗುಂಡು ನಿರೋಧಕ ಜಾಕೆಟ್‌ಗೆ ತಗುಲಿತು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತರಿಂದ ಎರಡು ಅಕ್ರಮ ಬಂದೂಕುಗಳು, ಒಂದು ಪಿಸ್ತೂಲ್ ಮತ್ತು ಒಂದು ದೇಸಿ ಪಿಸ್ತೂಲ್, ಎರಡು ಜೀವಂತ ಕಾರ್ಟ್ರಿಡ್ಜ್‌ಗಳು ಮತ್ತು ಕದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಆಗಸ್ಟ್ 31ರಂದು ಸಬ್ಜಿ ಮಂಡಿ ಪೊಲೀಸ್ ಠಾಣೆಯಲ್ಲಿ ಬೈಕ್ ಕಳವಾಗಿರುವ ಬಗ್ಗೆ ದೂರು ದಾಖಲಾಗಿತ್ತು.
ಗಡಿಯಾಚೆಗಿನ ಭಯೋತ್ಪಾದನೆ ಸಂಚು: ಅಸ್ಸಾಂನಲ್ಲಿ ಇಬ್ಬರ ಬಂಧನ
ಸೆಪ್ಟೆಂಬರ್ 13ರಂದು ನಬಿ ಕರೀಂ–ಸದರ್ ಬಜಾರ್ ಪ್ರದೇಶದಲ್ಲಿ ನಡೆದ ಬಾಬಾ ರಾಮದೇವ್ ಅವರ ಮೆರವಣಿಗೆಯ ವೇಳೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಭಾಗಿಯಾದವರನ್ನು ಪತ್ತೆಹಚ್ಚಲು ವಿಶೇಷ ಸಿಬ್ಬಂದಿ ಮತ್ತು ಸೆಂಟ್ರಲ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಈ ಘಟನೆಯ ವೇಳೆ, ಆರೋಪಿ ವಿಕಾಸ್ ಕಾಲಿಯಾ ಗುಂಪಿನ ಸದಸ್ಯರು ರಾಮ್ ಕುಮಾರ್ ಮಾರ್ಗ್ ಬಳಿ ಗುಂಡಿನ ದಾಳಿ ನಡೆಸಿದ್ದರು. ಗುಂಡು ವ್ಯಕ್ತಿಯೊಬ್ಬರ ಎಡಗೈಗೆ ತಗುಲಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ಸೆಪ್ಟೆಂಬರ್ 15ರಂದು ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ತನಿಖೆಯ ವೇಳೆ ತಾಂತ್ರಿಕ ನಿಗಾ ಮತ್ತು ಸ್ಥಳಮಟ್ಟದ ತನಿಖೆಯ ಮೂಲಕ ವಿಕಾಸ್ ಕಾಲಿಯಾ ಗುಂಪಿನ ಸದಸ್ಯರಾದ ಆಕಾಶ್ ಮತ್ತು ಮುಖೇಶ್ ಈ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂತು ಎಂದು ಪೊಲೀಸರು ತಿಳಿಸಿದ್ದಾರೆ.
ಸೆಪ್ಟೆಂಬರ್ 28ರಂದು ಈ ಇಬ್ಬರು ಆರೋಪಿಗಳು ಆಯುಧಗಳನ್ನು ಹೊತ್ತೊಯ್ದ ಕದ್ದ ಬೈಕ್‌ನಲ್ಲಿ ಪಹಾರ್‌ಗಂಜ್‌ಗೆ ಬರಲಿದ್ದು, ತಮ್ಮ ಪ್ರತಿಸ್ಪರ್ಧಿಗಳನ್ನು ಕೊಲ್ಲುವ ಉದ್ದೇಶ ಹೊಂದಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಪೊಲೀಸರ ಪ್ರಕಾರ, ನಬಿ ಕರೀಂ ಪ್ರದೇಶದ ರೌಡಿಶೀಟರ್ ಆಗಿರುವ ಆಕಾಶ್ ವಿರುದ್ಧ ಈ ಹಿಂದೆ 13 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ದರೋಡೆ, ಸರಗಳ್ಳತನ, ಕಳವು ಮತ್ತು ಶಸ್ತ್ರಾಸ್ತ್ರ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳೂ ಸೇರಿವೆ.
ಮುಖೇಶ್ ವಿರುದ್ಧ ಕೊಲೆ ಯತ್ನ, ನರಹತ್ಯೆ, ದರೋಡೆ, ಕಳ್ಳತನ ಸೇರಿ ಏಳು ಪ್ರಕರಣಗಳಿವೆ. ಈ ಬಂಧನಗಳು ನಾಲ್ಕು ಪ್ರಕರಣಗಳನ್ನು ಪತ್ತೆಹಚ್ಚಲು ಸಹಾಯ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ಗುಂಡು ಹಾರಿಸುವ ಪ್ರಕರಣ, ಎರಡು ಮನೆ ಕಳ್ಳತನ ಮತ್ತು ಒಂದು ಬೈಕ್ ಕಳ್ಳತನ ಪ್ರಕರಣವಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.