ವರದಕ್ಷಿಣೆ, ಮೆಹರ್ ಮೊತ್ತಕ್ಕಾಗಿ ಜಗಳ; ಹೃದಯಾಘಾತದಿಂದ ವಧುವಿನ ತಂದೆ ಸಾವು, ಸೂತಕವಾಗಿ ಬದಲಾದ ಮದುವೆ ಸಂಭ್ರಮ
ಅವರೆಲ್ಲರೂ ವಿವಾಹದ ಸಂಭ್ರಮದಲ್ಲಿದ್ದರು. ಇನ್ನು ಕ್ಷಣ ಮಾತ್ರದಲ್ಲಿ ಎಲ್ಲಾ ವಿಧಿ ವಿಧಾನಗಳು ನಡೆದು ಹೋಗಬೇಕಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ವರದಕ್ಷಿಣೆ, ಮೆಹೆರ್ ಮೊತ್ತಕ್ಕಾಗಿ ನಡೆದ ಜಗಳದಿಂದ ಮದುವೆಯೇ ನಿಂತು ಹೋಯಿತು. ವಧುವಿನ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದು ವಿವಾಹದ ಸಂಭ್ರಮಕ್ಕೆ ಕ್ಷಣ ಮಾತ್ರದಲ್ಲಿ ಸೂತಕದ ಛಾಯೆ ಆವರಿಸಿತ್ತು. ಈ ಘಟನೆ ಉತ್ತರಾಖಂಡದ ಖತಿಮಾ ಪಟ್ಟಣದ ಇಸ್ಲಾಂನಗರದಲ್ಲಿ ನಡೆದಿದೆ.
ಸಂಗ್ರಹ ಚಿತ್ರ -
ಉತ್ತರಾಖಂಡ: ವಿವಾಹದ ಸಂಭ್ರಮದ (wedding celebration) ಮನೆಯಲ್ಲಿ ಕ್ಷಣ ಮಾತ್ರದಲ್ಲಿ ಸೂತಕದ ಛಾಯೆ ಆವರಿಸಿರುವ ಘಟನೆ ಉತ್ತರಾಖಂಡದ (Uttarakhand) ಖತಿಮಾ ಪಟ್ಟಣದ ಇಸ್ಲಾಂನಗರದಲ್ಲಿ ನಡೆದಿದೆ. ಅಲ್ಲಿದ್ದವರೆಲ್ಲ ವಿವಾಹದ ಸಂಭ್ರಮದಲ್ಲಿದ್ದರು. ಇನ್ನು ಕ್ಷಣ ಮಾತ್ರದಲ್ಲಿ ಎಲ್ಲಾ ವಿಧಿ ವಿಧಾನಗಳು ನಡೆದು ಹೋಗಬೇಕಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ವರದಕ್ಷಿಣೆ, ಮೆಹೆರ್ ಮೊತ್ತಕ್ಕಾಗಿ ಜಗಳ ನಡೆದಿದ್ದು, ವಧುವಿನ ತಂದೆ ಹೃದಯಾಘಾತದಿಂದ (heart attack) ಸಾವನ್ನಪ್ಪಿದ್ದಾರೆ. ಇದರಿಂದ ಮದುವೆ ಮನೆ ಸೂತಕದ ಮನೆಯಾಗಿಯೇ ಕ್ಷಣ ಮಾತ್ರದಲ್ಲಿ ಬದಲಾಯಿತು.
ಖತಿಮಾ ಪಟ್ಟಣದ ಇಸ್ಲಾಂನಗರ ಪ್ರದೇಶದಲ್ಲಿ ಭಾನುವಾರ ಆಯೋಜಿಸಿದ್ದ ವಿವಾಹ ಸಮಾರಂಭದಲ್ಲಿ ವರದಕ್ಷಿಣೆ ಮತ್ತು ಮೆಹರ್ ಮೊತ್ತಕ್ಕೆ ಸಂಬಂಧಿಸಿ ವಿವಾದ ಉಂಟಾಗಿತ್ತು. ಇದರಿಂದ ವಧುವಿನ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದರು. ಸ್ಥಳದಲ್ಲಿ ಹೆಚ್ಚಿನ ಉದ್ವಿಗ್ನತೆ ಉಂಟಾಗದಂತೆ ತಡೆಯಲು ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಯಿತು.
ಮಮತಾ ಬ್ಯಾನರ್ಜಿಗೆ ಬೆನ್ನೆಲುಬಾಗಿದ್ದ ಕಾಕೋಲಿ ಘೋಷ್ ತಿರುಗಿ ನಿಂತಿದ್ದೇಕೆ? ವೈದ್ಯೆಯಿಂದ ರಾಜಕಾರಣಿಯಾಗಿದ್ದೇಗೆ?
ಏನಾಯಿತು?
ಇಸ್ಲಾಂ ನಗರದ ಗುತ್ತಿಗೆದಾರ ಸಾದಿಕ್ ಅವರ ಮಗಳನ್ನು ವಿವಾಹವಾಗಲು ಉತ್ತರ ಪ್ರದೇಶದ ಬರೇಲಿಯ ಬಾರಾ ಫರೀದ್‌ಪುರದಿಂದ ಮೆರವಣಿಗೆ ಮದುವೆ ಮಂಟಪಕ್ಕೆ ಬಂದಿತ್ತು. ಆರತಕ್ಷತೆ ಸರಾಗವಾಗಿ ನಡೆದಿದ್ದು, ನಿಕಾಹ್ ವೇಳೆ ಮೆಹರ್ ಮೊತ್ತ ಮತ್ತು ವರದಕ್ಷಿಣೆ ವಿಚಾರವಾಗಿ ಎರಡು ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ವರನ ಕಡೆಯವರು ಹೆಚ್ಚುವರಿ ವರದಕ್ಷಿಣೆಗಾಗಿ ಬೇಡಿಕೆ ಇಡುತ್ತಿದ್ದಾರೆ ಎಂದು ವಧುವಿನ ಕುಟುಂಬ ಆರೋಪಿಸಿದೆ.
ಇನ್ನು ಮೆಹರ್ ಮೊತ್ತಕ್ಕಾಗಿ ವಧುವಿನ ಕುಟುಂಬ 5 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದು, ವರನ ಕಡೆಯವರು ಇದನ್ನು ನಿರಾಕರಿಸಿ 21,000 ರೂಪಾಯಿ ಮಾತ್ರ ನೀಡುವುದಾಗಿ ಹೇಳಿದರು. ಇದು ವಾದ ವಿವಾದಕ್ಕೆ ಕಾರಣವಾಗಿದ್ದು, ಈ ನಡುವೆ ಸಾದಿಕ್ ಅವರ ಆರೋಗ್ಯ ಹದಗೆಟ್ಟಿತು. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿದ್ದು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ತೀವ್ರ ಮಾನಸಿಕ ಒತ್ತಡದಿಂದ ಅವರಿಗೆ ಹೃದಯಾಘಾತವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಘಟನೆಯಿಂದ ಮದುವೆ ಮನೆಯಲ್ಲಿ ಉದ್ವಿಗ್ನತೆ ಭುಗಿಲೆದ್ದಿದೆ. ವರ ಮೊಹಮ್ಮದ್ ಆರಿಫ್, ಅವರ ಸಹೋದರ ಮೊಹಮ್ಮದ್ ಖಾಲಿದ್, ಅವರ ಸೋದರ ಮಾವ ಅತಾ ಹುಸೇನ್ ಮತ್ತು ಇತರ ಹಲವಾರು ಅತಿಥಿಗಳನ್ನು ಮದುವೆ ಮಂಟಪದೊಳಗೆ ಬಂಧಿಸಿದ ವಧುವಿನ ಕಡೆಯವರು ಕೆಲವರ ಮೇಲೆ ಹಲ್ಲೆ ನಡೆಸಿದ್ದಾರೆ.
ಇಂಗ್ಲೀಷ್ ವ್ಯಾಮೋಹಕ್ಕೆ ಬೈ ಬೈ: ಈ ಗ್ರಾಮದ ಮಕ್ಕಳು ಸರ್ಕಾರಿ ಶಾಲೆಗೆ ಹೋಗ್ಲೇ ಬೇಕು!
ಈ ಸಂದರ್ಭದಲ್ಲಿ ಕೆಲವರು ಓಡಿಹೋಗಲು ಪ್ರಯತ್ನಿಸಿದ್ದು, ಉಂಟಾದ ಘರ್ಷಣೆಯಿಂದ ಮದುವೆ ಮಂಟಪದ ಛಾವಣಿಯ ಒಂದು ಭಾಗ ಕುಸಿದು ಬಿದ್ದಿದೆ. ಇದರಿಂದ ಕೆಲವರಿಗೆ ಗಾಯಗಳಾಗಿವೆ. ಮಾಹಿತಿ ಪಡೆದ ತಕ್ಷಣ ಖತಿಮಾ ಕೊತ್ವಾಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಪ್ರದೇಶದಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಯಿತು. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದ್ದು, ಎರಡೂ ಪಕ್ಷದವರ ಹೇಳಿಕೆಗಳನ್ನು ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.