ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಮಾಡಿದ್ದು ನಾವೇ ಎಂದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್; ಬಿಡುಗಡೆಯಾಗಿರುವ ಆಡಿಯೋದಲ್ಲಿ ಆತ ಹೇಳಿದ್ದೇನು ?

Hardeep Singh Nijjar Murder case: 2023ರಲ್ಲಿ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ನಡೆದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಯುವಕರ ಶೋಷಣೆ, ಮಾದಕ ದ್ರವ್ಯ ಮಾರಾಟ ಕಾರಣವೆಂದು ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಹೇಳಿದ್ದಾನೆ. ಹರ್ದೀಪ್ ಸಿಂಗ್ ನಿಜ್ಜರ್ ಉತ್ತರ ಅಮೆರಿಕಾದಾದ್ಯಂತ ಮಾದಕ ದ್ರವ್ಯಗಳನ್ನು ಮಾರಾಟ ಮಾಡಲು ಯುವಕರನ್ನು ಬಳಸುತ್ತಿದ್ದನು ಎಂದು ಹೇಳಿದ್ದಾನೆ.

ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಕಾರಣವೇನು?

ಸಂಗ್ರಹ ಚಿತ್ರ -

ಕೆನಡಾ: ಮಾದಕ ದ್ರವ್ಯ ಮಾರಾಟಕ್ಕಾಗಿ (Drug sales) ಯುವಕರ ಶೋಷಣೆ ಮಾಡುತ್ತಿದ್ದ ಕಾರಣ ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ (Hardeep Singh Nijjar Murder case) ಮಾಡಿರುವುದಾಗಿ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ (Gangster Goldy Brar) ಹೇಳಿಕೊಂಡಿದ್ದಾನೆ. ಈ ಕುರಿತು ಆಡಿಯೋ ಬಿಡುಗಡೆ ಮಾಡಿರುವ ಆತ 2023ರಲ್ಲಿ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ನಡೆದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಕಾರಣವಾದ ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ. ಭಾರತೀಯ ಮೂಲದ ಗ್ಯಾಂಗ್ ಸ್ಟರ್ ಆಗಿರುವ ಸತೀಂದರ್ಜೀತ್ ಸಿಂಗ್ ಕೆನಡಾದಲ್ಲಿದ್ದು (canada) ಗೋಲ್ಡಿ ಬ್ರಾರ್ ಎನ್ನುವ ಹೆಸರಿನಿಂದ ಕುಖ್ಯಾತಿ ಪಡೆದಿದ್ದಾನೆ.

ಸಾಮಾಜಿಕ ಮಾಧ್ಯಮದ ಮೂಲಕ ಬಿಡುಗಡೆ ಮಾಡಿರುವ ಅಡಿಯೊದಲ್ಲಿ ಬ್ರಾರ್ ಗ್ಯಾಂಗ್‌ ಉತ್ತರ ಅಮೆರಿಕಾದಾದ್ಯಂತ ಅಕ್ರಮ ಮಾದಕ ದ್ರವ್ಯಗಳನ್ನು ಮಾರಾಟ ಮಾಡಲು ಯುವಕರನ್ನು ಶೋಷಣೆ ಮಾಡುತ್ತಿದ್ದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿದೆ. ಇದೇ ಕಾರಣಕ್ಕೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕೂಡ ಮಾಡಲಾಗಿದೆ ಎಂದು ಹೇಳಿದೆ.

ಮಯನ್ಮಾರ್‌ನಲ್ಲಿ ಬೌದ್ಧ ಮಠದ ಮೇಲೆ ಭೀಕರ ಬಾಂಬ್‌ ದಾಳಿ; 14 ಜನರು ಸಾವು, 20 ಮಂದಿಗೆ ಗಾಯ

ಖಾಲಿಸ್ತಾನಿ ಉಗ್ರ ಪರಮ್‌ಜಿತ್ ಸಿಂಗ್ ಪಮ್ಮಾನ ಜೊತೆಗಿನ ಸಂಭಾಷಣೆಯಲ್ಲಿ ಹದಿನಾರು ಮತ್ತು ಹದಿನೇಳು ವರ್ಷದ ಮಕ್ಕಳನ್ನು ಮಾದಕ ದ್ರವ್ಯ ಮಾರಾಟಕ್ಕೆ ಬಳಸಿಕೊಲ್ಲಲಾಗುತ್ತಿದೆ. ನಿಜ್ಜರ್ ಕೂಡ ಇದರಲ್ಲಿ ತೊಡಗಿಸಿಕೊಂಡಿದ್ದನು. ಆತ ತನ್ನ ಪ್ರಭಾವವನ್ನು ಬಲಪಡಿಸಿಕೊಳ್ಳಲು ಮಾದಕವಸ್ತು ವ್ಯಾಪಾರಿಗಳಿಗೆ ಬೆಂಬಲ ಮತ್ತು ರಕ್ಷಣೆ ಒದಗಿಸುತ್ತಿದ್ದನು ಎಂದು ಗೋಲ್ಡಿ ಬ್ರಾರ್ ಹೇಳಿಕೊಂಡಿದ್ದಾನೆ.

ಗೋಲ್ಡಿ ಬ್ರಾರ್ ನ ಈ ಹೇಳಿಕೆಯು ಉತ್ತರ ಅಮೆರಿಕಾದಲ್ಲಿ ಇತ್ತೀಚಿನ ಕಾನೂನು ಬೆಳವಣಿಗೆಗೆ ಕಾರಣವಾದ ಅಂಶಗಳನ್ನು ಸ್ಪಷ್ಟಪಡಿಸಿದೆ. ಆಪರೇಷನ್ ಹಾರ್ಡ್ ಬಾಲ್ ಎಂದು ಕರೆಯಲ್ಪಡುವ ಪ್ರಮುಖ ಅಂತಾರಾಷ್ಟ್ರೀಯ ಕಾನೂನು ಜಾರಿ ಉಪಕ್ರಮದ ಅಡಿಯಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಫೆಡರಲ್ ಪ್ರಾಸಿಕ್ಯೂಟರ್‌ಗಳು ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಅವರ ಮೇಲೆ 2023ರ ಜೂನ್ ನಲ್ಲಿ ನಿಜ್ಜರ್ ಹತ್ಯೆಯ ಆರೋಪವನ್ನು ಮಾಡಿದ್ದರು. ಇವರ ಗ್ಯಾಂಗ್ ಜಾಗತಿಕವಾಗಿ ದರೋಡೆ, ಉನ್ನತ ಮಟ್ಟದ ಸುಲಿಗೆ, ಗುತ್ತಿಗೆ ಹತ್ಯೆ ಮತ್ತು ಯುಎಸ್ ಮತ್ತು ಕೆನಡಾದಾದ್ಯಂತ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಕಾರ್ಯಾಚರಣೆಗಳಲ್ಲಿ ತೊಡಗಿಕೊಂಡಿವೆ ಎಂದು ಆರೋಪಿಸಲಾಗಿತ್ತು.

ಈ ಬೆಳವಣಿಗೆಯನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂದು ಭಾರತದ ಉನ್ನತ ಗುಪ್ತಚರ ಮೂಲಗಳು ತಿಳಿಸಿವೆ. ನಿಜ್ಜರ್ ಹತ್ಯೆಯು ಪಿತೂರಿ ಅಲ್ಲ. ಅದು ಎರಡು ಅಂತಾರಾಷ್ಟ್ರೀಯ ಗ್ಯಾಂಗ್‌ಗಳ ಪೈಪೋಟಿಯಿಂದ ಆಗಿರುವುದು ಎಂದು ಭಾರತೀಯ ಏಜೆನ್ಸಿಗಳು ಹೇಳಿಕೊಂಡಿದ್ದವು. ಇದು ಈಗ ಗೋಲ್ಡಿ ಬ್ರಾರ್ ಆಡಿಯೋದಿಂದ ಸ್ಪಷ್ಟವಾಗಿದೆ.

ಪಂಜಾಬ್ ಗಾಯಕ, ಗೀತರಚನೆಕಾರ ಸಿಧು ಮೂಸೆವಾಲಾ ಸೇರಿದಂತೆ ಹಲವಾರು ಕೊಲೆಗಳಿಗೆ ಸಂಬಂಧಿಸಿ ಭಾರತಕ್ಕೆ ಬೇಕಾಗಿದ್ದ ಗೋಲ್ಡಿ ಬ್ರಾರ್ ಖಲಿಸ್ತಾನಿ ಭಯೋತ್ಪಾದಕ ಪರಮಜಿತ್ ಸಿಂಗ್ ಪಮ್ಮಾ ಜೊತೆಗಿನ ಸಂಭಾಷಣೆಯ ಸಂದರ್ಭದಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾನೆ ಎನ್ನಲಾಗಿದೆ.

ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ನಿಜ್ಜರ್ ನನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದು ಬಳಿಕ ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಇದರಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದರು. ಇದು ಎರಡು ದೇಶಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರಿತ್ತು. ಈ ಆರೋಪವನ್ನು ತಿರಸ್ಕರಿಸಿದ್ದ ಭಾರತವು, ಖಲಿಸ್ತಾನಿ ಪರ ಶಕ್ತಿಗಳು ಕೆನಡಾ ನೆಲದಿಂದ ಕಾರ್ಯನಿರ್ವಹಿಸಲು ಒಟ್ಟಾವಾ ಅವಕಾಶ ನೀಡುತ್ತಿದೆ ಎಂದು ಆರೋಪಿಸಿತು. ಅಲ್ಲದೇ ನಿಜ್ಜರ್ ಹತ್ಯೆಯಲ್ಲಿ ಭಾರತದ ಹೈಕಮಿಷನರ್ ಮತ್ತು ಇತರ ಅನೇಕ ರಾಜತಾಂತ್ರಿಕರನ್ನು ಒಟ್ಟಾವಾ ಗುರಿಯಾಗಿಸಿಕೊಂಡಿದ್ದರಿಂದ ನವದೆಹಲಿಯು ಅವರನ್ನು ವಾಪಸ್ ಕರೆಸಿಕೊಂಡಿತು.

ಲಿಬರಲ್ ಪಕ್ಷದ ನಾಯಕ ಮಾರ್ಕ್ ಕಾರ್ನಿ ಅವರು ಕೆನಡಾದ ಸಂಸತ್ ಚುನಾವಣೆಯಲ್ಲಿ ಗೆದ್ದ ಬಳಿಕ ಮತ್ತೆ ಎರಡು ದೇಶಗಳ ನಡುವೆ ಸಂಬಂಧಗಳು ಸುಧಾರಣೆಯಾಗುತ್ತಿದೆ. ಕೆನಡಾದ ತನಿಖಾಧಿಕಾರಿಗಳು ಇತ್ತೀಚೆಗೆ ನಿಜ್ಜರ್ ಅವರ ಹತ್ಯೆಯನ್ನು ಭಾರತದ ಸಂಬಂಧವಿಲ್ಲ. ಇದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿದ್ದರು.

ಸಾಲದಲ್ಲೂ ಅಮರಿಕ ದೊಡ್ಡಣ್ಣ

2015ರಿಂದ ಜೈಲಿನಲ್ಲಿರುವ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್ ಭಾರತ ಮತ್ತು ವಿದೇಶಗಳಲ್ಲಿ ಅನೇಕ ಅಪರಾಧಗಳಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಕಳೆದ ವರ್ಷ ಅವರಿಬ್ಬರೂ ಬೇರ್ಪಟ್ಟಿದ್ದಾರೆ ಎನ್ನಲಾಗುತ್ತಿದೆ. ದಕ್ಷಿಣ ಕ್ಯಾಲಿಫೋರ್ನಿಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಾದ್ಯಂತ ವಿವಿಧ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಗೋಲ್ಡಿ ಬ್ರಾರ್‌ ಬಂಧನಕ್ಕೆ ಮುಂದಾಗಿರುವ ಯುಎಸ್ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಕಳೆದ ತಿಂಗಳು ಗೋಲ್ಡಿ ಬ್ರಾರ್ ಬಗ್ಗೆ ಸುಳಿವು ನೀಡಿದವರಿಗೆ 50,000 ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದೆ.