ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಂಗಾಳದ 11 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಎನ್‌ಕೌಂಟರ್‌ನಲ್ಲಿ ಆರೋಪಿ ಹತ್ಯೆ

ಕೊಲ್ಕತ್ತಾದ ಬರೂಯಿಪುರ ಉಪನಗರದಲ್ಲಿ ನಿನ್ನೆ (ಮಂಗಳವಾರ) ರಾತ್ರಿ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಶಂಕಿತರಲ್ಲಿ ಒಬ್ಬನನ್ನು ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ ಎಂದು ತಿಳಿದು ಬಂದಿದೆ. ಮಧ್ಯರಾತ್ರಿಯ ಸುಮಾರಿಗೆ, ಅಪರಾಧದ ಪುನರ್ನಿರ್ಮಾಣಕ್ಕಾಗಿ ಪ್ರವಾಶ್ ಮಂಡಲ್‌ನನ್ನು ಸ್ಥಳಕ್ಕೆ ಕರೆದೊಯ್ಯಲಾಯಿತು.

ಬಾಲಕಿ ಅತ್ಯಾಚಾರ ಪ್ರಕರಣ: ಎನ್‌ಕೌಂಟರ್‌ನಲ್ಲಿ ಆರೋಪಿ ಹತ್ಯೆ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jul 8, 2026 10:07 AM

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಬರೂಯಿಪುರ ಉಪನಗರದಲ್ಲಿ ನಿನ್ನೆ (ಮಂಗಳವಾರ) ರಾತ್ರಿ 11 ವರ್ಷದ (Physical Assault) ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಶಂಕಿತರಲ್ಲಿ ಒಬ್ಬನನ್ನು ಪೊಲೀಸ್ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗಿದೆ ಎಂದು ತಿಳಿದು ಬಂದಿದೆ. ಮಧ್ಯರಾತ್ರಿಯ ಸುಮಾರಿಗೆ, ಅಪರಾಧದ ಪುನರ್ನಿರ್ಮಾಣಕ್ಕಾಗಿ ಪ್ರವಾಶ್ ಮಂಡಲ್‌ನನ್ನು ಸ್ಥಳಕ್ಕೆ ಕರೆದೊಯ್ಯಲಾಯಿತು. ಈ ಸಮಯದಲ್ಲಿ, ಅವನು ಪೊಲೀಸರಿಂದ ಬಂದೂಕನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದನು ಎಂದು ಮೂಲಗಳು ತಿಳಿಸಿವೆ.

ಬರುಯಿಪುರದ ಕೊಳವೊಂದರಲ್ಲಿ ಹುಡುಗಿಯ ಶವ ಚೀಲದಲ್ಲಿ ತುಂಬಿ ಪತ್ತೆಯಾದ ನಂತರ ಬಂಧಿಸಲಾದ ಮೂವರು ಶಂಕಿತರಲ್ಲಿ ಮೊಂಡಲ್ ಕೂಡ ಸೇರಿದ್ದಾರೆ. ಇನ್ನಿಬ್ಬರನ್ನು ಆನಂದ ಸರ್ದಾರ್ ಮತ್ತು ದಿಬಾಕರ್ ಸರ್ದಾರ್ ಎಂದು ಗುರುತಿಸಲಾಗಿದೆ. ಅತ್ಯಾಚರ ಘಟನೆಯ ಬಳಿಕ ದಕ್ಷಿಣ ಉಪನಗರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಕೋಪಗೊಂಡ ಸ್ಥಳೀಯರು ರೈಲ್ವೆ ಹಳಿಗಳು ಮತ್ತು ಪೊಲೀಸ್ ವಾಹನಗಳಿಗೆ ಹಾನಿ ಮಾಡಿದರು. ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಕನಿಷ್ಠ 20 ಜನರನ್ನು ಬಂಧಿಸಲಾಗಿದೆ.

ಗೆಳತಿಯ ಜನ್ಮದಿನಕ್ಕೆ ಉಡುಗೊರೆ ತರಲು ಶನಿವಾರ ತೆರಳಿದ್ದ ಬಾಲಕಿಮನೆಗೆ ಮರಳದಿದ್ದಾಗ ಕುಟುಂಬ ದವರು ಪೊಲೀಸರಿಗೆ ದೂರು ನೀಡಿ ದ್ದರು. ಭಾನುವಾರ ಸುರ್ಜಯಪುರ ಹಾಟ್ ಪ್ರದೇಶದಲ್ಲಿ ಕಂಡಿದ್ದ ಚೀಲವೊಂದರಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಬಾಲಕಿಯ ಮೇಲೆ ಲೈಂಗಿಕ ಶೋಷಣೆ ನಡೆದಿದ್ದು, ಜೀವಂತವಾಗಿ ನೀರಿನಲ್ಲಿಎಸೆದಿದ್ದು, ತಲೆಗೆ ಗಾಯವಾಗಿದೆ' ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿತ್ತು.

ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಕೊಲೆ: 65 ವರ್ಷದ ಅಪರಾಧಿಗೆ ಮರಣದಂಡನೆ; ಪ್ರಕರಣ ನಡೆದ 2 ತಿಂಗಳಿಗೆ ತೀರ್ಪು ಪ್ರಕರಣ

ಬಾಲಕಿಯ ಗುಪ್ತಾಂಗದಲ್ಲಿ ಗಾಯದ ಗುರುತು ಪತ್ತೆಯಾಗಿದೆ. ದೇಹದ ಹಲವೆಡೆ ಕಚ್ಚಿದ ಗಾಯಗಳಾಗಿವೆ' ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯನ್ನು ನಾಲ್ವರು ಹೊತ್ತುಕೊಂಡು ಹೋಗುತ್ತಿದ್ದ ದೃಶ್ಯ ಸಿ.ಸಿ. ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.

ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. "ನಾವು ಸಂಪೂರ್ಣ ವಿಷಯದ ಪ್ರಾಥಮಿಕ ವಿಶ್ಲೇಷಣೆ ನಡೆಸಿದ್ದೇವೆ. ದೂರು ದಾಖಲಾದ ನಂತರ ಪೊಲೀಸರ ಕಡೆಯಿಂದ ಶೇಕಡಾ ಒಂದರಷ್ಟು ಪ್ರಾಥಮಿಕ ವಿಶ್ಲೇಷಣೆ ನಡೆಸಿದ್ದೇವೆ. ದೂರು ದಾಖಲಾದ ನಂತರ ಪೊಲೀಸರ ಕಡೆಯಿಂದ ಶೇಕಡಾ ಒಂದರಷ್ಟು ನಿರ್ಲಕ್ಷ್ಯ ನಡೆದಿದ್ದರೂ ಸಹ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.