ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶಾಲಾ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್‌ ಪೌಡರ್‌ ಬಳಕೆ; ಅಡುಗೆ ಸಿಬ್ಬಂದಿ ಯಡವಟ್ಟಿನಿಂದ 36 ವಿದ್ಯಾರ್ಥಿಗಳು ಅಸ್ವಸ್ಥ

ಮಧ್ಯಾಹ್ನದ ಊಟದಲ್ಲಿ ಉಪ್ಪು ಬದಲಿಗೆ ಡಿಟರ್ಜೆಂಟ್ ಪುಡಿ ಹಾಕಿದ್ದು, ಇದನ್ನು ಸೇವಿಸಿದ ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಬಿಹಾರದಲ್ಲಿ ನಡೆದಿದೆ. ಅಡುಗೆಮನೆಯಲ್ಲಿ ಉಪ್ಪು ಮತ್ತು ಡಿಟರ್ಜೆಂಟ್ ಪುಡಿ ತುಂಬಿದ ಪಾತ್ರೆಗಳನ್ನು ಒಂದೇ ಸ್ಥಳದಲ್ಲಿ ಇಟ್ಟಿದ್ದು ಈ ಘಟನೆಗೆ ಕಾರಣ ಎನ್ನಲಾಗಿದೆ. ಅಸ್ವಸ್ಥರಾದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿಟರ್ಜೆಂಟ್ ಬೆರೆಸಿದ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

ಸಂಗ್ರಹ ಚಿತ್ರ -

ಬಿಹಾರ: ಉಪ್ಪಿನ (salt) ಬದಲು ಡಿಟರ್ಜೆಂಟ್ (detergent) ಸೇರಿಸಿ ತಯಾರಿಸಿದ ಊಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಬಿಹಾರದಲ್ಲಿ (bihar) ಮಂಗಳವಾರ ನಡೆದಿದೆ. ಬಿಹಾರದ ನಳಂದ ಜಿಲ್ಲೆಯ (Nalanda district) ಸರ್ಕಾರಿ ಶಾಲೆಯಲ್ಲಿ (Bihar government school) ಈ ಘಟನೆ ನಡೆದಿದೆ. ಮಧ್ಯಾಹ್ನದ ಊಟದಲ್ಲಿ ಅಡುಗೆಯವರು ಉಪ್ಪಿನ ಬದಲು ತಪ್ಪಾಗಿ ಡಿಟರ್ಜೆಂಟ್ ಬಳಸಿದ್ದಾರೆ ಎನ್ನಲಾಗಿದೆ. ಅಡುಗೆ ಮನೆಯಲ್ಲಿ ಉಪ್ಪು ಮತ್ತು ಡಿಟರ್ಜೆಂಟ್ ಪುಡಿ ತುಂಬಿದ ಪಾತ್ರೆಗಳನ್ನು ಒಂದೇ ಸ್ಥಳದಲ್ಲಿ ಇರಿಸಿದ್ದು ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಬಿಹಾರದ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನ ಎಂದಿನಂತೆ ಮಕ್ಕಳು ಮಧ್ಯಾಹ್ನ ಊಟ ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದಾರೆ. ಹಲವು ಮಕ್ಕಳು ತಲೆ ತಿರುಗುವಿಕೆ ಮತ್ತು ವಾಂತಿ ಮಾಡಲು ಪ್ರಾರಂಭಿಸಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸುಮಾರು 36 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ.

5.54 ಕೋಟಿ ರುಪಾಯಿ ಟೆಂಡರ್‌ನಲ್ಲಿ ಅಕ್ರಮ: ವಿಜಯ್ ಸರ್ಕಾರದ ವಿರುದ್ಧ ಮೊದಲ ಆರೋಪ; ಏನಿದು ಪ್ರಕರಣ?

ಬಿಹಾರದ ನಳಂದ ಜಿಲ್ಲೆಯ ನೂರ್ಸರೈ ಪೊಲೀಸ್ ಠಾಣೆ ವ್ಯಾಪ್ತಿಯ ಪರಾಸಿಯ ಮಿಡಲ್ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಬಿಹಾರ್‌ಶರೀಫ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಡುಗೆಯವರು ಮಧ್ಯಾಹ್ನದ ಊಟಕ್ಕೆ ಉಪ್ಪಿನ ಬದಲು ಡಿಟರ್ಜೆಂಟ್ ಪುಡಿಯನ್ನು ತಪ್ಪಾಗಿ ಹಾಕಿದ್ದರು. ಸೋಯಾಬೀನ್ ಮತ್ತು ಅಕ್ಕಿ ಸೇರಿಸಿ ತಯಾರಿಸಿದ ಮಧ್ಯಾಹ್ನದ ಊಟದಲ್ಲಿ ಉಪ್ಪು ಕಡಿಮೆ ಇದೆ ಎಂದು ಮೊದಲು ಊಟ ಮಾಡಿದ್ದ ಕೆಲವು ವಿದ್ಯಾರ್ಥಿಗಳು ದೂರಿದ್ದರು. ಹೀಗಾಗಿ ಅಡುಗೆಯವರು ಮತ್ತೆ ಉಪ್ಪು ಸೇರಿಸಲು ಹೋದಾಗ ತಪ್ಪಿ ಡಿಟರ್ಜೆಂಟ್ ಪುಡಿಯನ್ನು ಹಾಕಿದ್ದಾರೆ ಎಂದು ಪ್ರಾಂಶುಪಾಲ ಶೈಲೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಊಟ ಸೇವಿಸಿದ ತಕ್ಷಣವೇ ಹಲವು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಅವರಿಗೆ ಆರಂಭದಲ್ಲಿ ಶಾಲೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಜಯ್ ಪ್ರಕಾಶ್ ಸಿಂಗ್ ಅವರು ವಿದ್ಯಾರ್ಥಿಗಳ ಸ್ಥಿತಿಯನ್ನು ಪರಿಶೀಲಿಸಿ, ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

5.54 ಕೋಟಿ ರುಪಾಯಿ ಟೆಂಡರ್‌ನಲ್ಲಿ ಅಕ್ರಮ: ವಿಜಯ್ ಸರ್ಕಾರದ ವಿರುದ್ಧ ಮೊದಲ ಆರೋಪ; ಏನಿದು ಪ್ರಕರಣ?

ಮಾಹಿತಿ ತಿಳಿದ ತಕ್ಷಣವೇ ಬಿಹಾರ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕ್ಷೇಮ ವಿಚಾರಿಸಿದರು. ವೈದ್ಯರೊಂದಿಗೆ ಮಾತುಕತೆ ಕೂಡ ನಡೆಸಿದರು. ಘಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.